An appeal to readers

An appeal to readers:

We expect and anticipate a very valuable information from you in the following various sections :

  1. Informative articles on our culture and tradition (You may provide soft-copies.)
  2. You can give information on any or all the sections referred to in the website. Information are given both in Kannada and English. Hence we expect translated forms from one another.
  3. Please provide your surname, Gotra, Matta etc. to put under Surname section.
  4. You may provide information about Shivalli Brahmins along with their/your presently residing country, region, area, profession, address (Present and permanent) with E-mail or any other data, if any.
  5. Information regarding the organization of Shivalli Brahmins along with their place of existence/working etc. to include in the section of Organizations.
  6. Invitation/Reports of different programmed/functions arranged in organizational level as a public function, to incorporate in the section of News & Reports.
  7. A brief information/data of the children, 10th standard, with extra-ordinary intellectual level, excellence and distinctive IQ in any single or multifarious field, to include in the section of “District young Intellectuals/young geniuses.”

Financial Assistance :

We need not call your attention, as you may know the hardships and difficulties behind executing, maintaining and summing the website. For collecting information, data, informative articles and conducting seminars for discussing some important and burning issues we have to contact and invite scholars and experts in the respective subjects, we have a very great responsibility in these matters. where as effort is kept open for universal usage and information, such a kind of responsibility is very common and natural. Along with, it is the duty of all of us to provide genuine data to requisites & needs of the inquisitive web-visitors.

To executive all these responsibilities needless to say that a great deal of financial assistance is certainly necessary. Our website does not have any kind of monetary base. we have started the site merely by individual interest for the help of our community, without having any capital background or a fund of any type. This is one of the reasons why the effort has not gained a momentum and an expected progress. To accelerate this, the site need to have a found of its own to run smoothly so that the possibility of expanding and accelerating the process would be supported.

This website is a FORUM of Shivalli Brahmins, for Shivalli Brahmins and by Shivalli Brahmins, mainly. We have to build the forum so that we can understand each other more well, correct our drawbacks, check and try to overcome our limitations, and limitations, and overall we can overview ourselves, periodically to improve & upgrade ourselves. It is the need of the hour to grow ourselves and let others to grow. In this regard all of us have to join our hands with each other. Thinking or discussing in group is far better than individual thoughts and efforts, for the progress of an endeavor.

During the time of working for the wholeness of the website your heartily co-operation is exclusively necessary. We expect your great cooperation in mobilizing capital. Your liberal financial assistance would be entertained whole-heartedly. At this juncture it is our duty and responsibility to assure you of the due and suitable utilization of the fund. You may make your payments through Credit Card/Debit card/ Cheque / D.D. or direct payment to our account.

Account name: Tulu Shivalli Prathisthana

Account No: 1302000100049301

Bank: Karnataka Bank

Branch: Marathahalli, Bangalore

IFSC code: KARB0000130

For more info contact : donation@shivallibrahmins.com

Welcome to your valuable suggestions, doubts, questions etc. We respond in due respect.

Please bring to our notice any drawback, our limitations, suggestions for improvements and so on just to improvise our website.

Please do keep in mind to publicize our effort and inform others also to visit the site if you find some goodness which are worth-going through.

Let us build a bridge between our positive thinking minds. Let us put all our efforts to perpetuate our age old greatest Tradition.

‘LET NOBLE THOUGHTS COME TO US FROM ALL DIRECTIONS’

ಶಿವಳ್ಳಿ ಬ್ರಾಹ್ಮಣರ ಸಮಗ್ರ ಮಾಹಿತಿಯನ್ನು ಒಳಗೊಳ್ಳಲಿರುವ ಈ ವೆಬ್‌ಸೈಟ್ ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಹಾಗೂ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಅನುಗ್ರಹ ಹಾಗೂ ಮಾರ್ಗದರ್ಶನದಲ್ಲಿ ದಿನಾಂಕ 05/08/2007 ರಂದು ಆರಂಭಗೊಂಡಿತ್ತು ಎಂಬುದು ನಿಮಗೆಲ್ಲರಿಗೂ ವೇದ್ಯ.

ಈಗಾಗಲೇ ನಮ್ಮ ಈ ವೆಬ್‌ಸೈಟ್‌ನ ವೀಕ್ಷಣೆಯನ್ನು ಮಾಡಿದ ನೂರಾರು ಮಂದಿ ಒಳ್ಳೆಯ ಅಭಿಪ್ರಾಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಸಲಹೆ ಸೂಚನೆಗಳನ್ನಿತ್ತಿದ್ದಾರೆ. ಸಂತೋಷ. ಆದರೂ ಇದು ಒಬ್ಬಿಬ್ಬರಿಂದ ಆಗುವ ಕಾರ್ಯವಲ್ಲ. ಸಮಗ್ರ ಮಾಹಿತಿಯ ಅಗತ್ಯವಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ.

ಈ ನಿಟ್ಟಿನಲ್ಲಿ ತಮ್ಮಿಂದ ಅಮೂಲ್ಯ ಮಾಹಿತಿಗಳನ್ನು, ಸಹಕಾರವನ್ನು ನಿರೀಕ್ಷಿಸುತ್ತೇವೆ.

1. ನಮ್ಮ ಪರಂಪರೆ, ಸಂಸ್ಕೃತಿಗೆ ಪೂರಕವಾದ ಲೇಖನಗಳು. (ಲೇಖನಗಳನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡುವುದು)
2. ವೆಬ್‌ಸೈಟ್‌ನ ಶೀರ್ಷಿಕೆಯಲ್ಲಿ ಉಲ್ಲೇಖವಾದ ಎಲ್ಲಾ ವಿಭಾಗಕ್ಕೂ ಮಾಹಿತಿಗಳನ್ನೂ ಸಂಗ್ರಹಿಸಿ ಕೊಡಬಹುದು. ಮಾಹಿತಿಗಳು ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಅಪೇಕ್ಷಿತವಾದ ಕಾರಣ ಭಾಷಾಂತರಗಳು ಇದ್ದಲ್ಲಿ ಒಳಿತು.
3. ಮಾಹಿತಿಗಳಿದ್ದರೆ ತಮ್ಮ ಕುಲ, ಗೋತ್ರ, ಮಠ . . . . ಇತ್ಯಾದಿ (ಕುಲ ಮಾಹಿತಿಗಾಗಿ)
4. ತಾವಿರುವ ದೇಶ/ಪ್ರದೇಶಗಳ ನಮ್ಮವರ ಮಾಹಿತಿಗಳು, ವಿಳಾಸ, ಇ-ಮೈಲ್ ಇತ್ಯಾದಿ
5. ನಾವಿರುವ ಪ್ರದೇಶದಲ್ಲಿರುವ ನಮ್ಮವರ ಸಂಘಟನೆಗಳ ಮಾಹಿತಿಗಳು (ಸಂಘಟನೆ ವಿಭಾಗಕ್ಕೆ)
6. ಸಂಘಟನೆಗಳ ಮೂಲಕ ಅಥವಾ ಸಾರ್ವಜನಿಕವಾಗಿ ನಡೆಯುವ ನಮ್ಮ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು, ಕಾರ್ಯಕ್ರಮದ ಬಳಿಕ ವರದಿಗಳು (ಸುದ್ಧಿ ಸಮಾಚಾರ ವಿಭಾಗಕ್ಕೆ)
7. ಪ್ರತಿಭಾನ್ವಿತರಾದ ೧೦ ನೇ ತರಗತಿ ಒಳಗಿನ ಮಕ್ಕಳ ಪರಿಚಯ (ಬಾಲ ಪ್ರತಿಭೆ ವಿಭಾಗಕ್ಕೆ)

ಆರ್ಥಿಕ ಸಹಕಾರ – ವೆಬ್‌ಸೈಟ್ ನಿರ್ವಹಣೆಯ ಹಿಂದಿನ ಇಷ್ಟ-ಕಷ್ಟಗಳು ನಿಮಗೆ ತಿಳಿದೇ ಇದೆ. ಲೇಖನಗಳಿಗಾಗಿ ಹಲವರನ್ನು ಸಂಪರ್ಕಿಸಬೇಕಾಗುತ್ತದೆ. ವಿಚಾರ ವಿನಿಮಯಕ್ಕಾಗಿ ಹಿರಿಯರ ಸಂಪರ್ಕ ಸದಾ ಅವಶ್ಯಕವಾಗಿರುತ್ತದೆ… ಹೀಗೆ, ವೆಬ್‌ಸೈಟ್ ಒಳ್ಳೆಯ ರೀತಿ ಮುನ್ನಡೆಯಲು, ಮೇಲೇರಲು ಅದಕ್ಕೆ ಸಂಬಂಧಿಸಿದ ಹಲವಾರು ಜವಾಬ್ದಾರಿಗಳಿರುತ್ತವೆ. ಯಾವುದೇ ಒಂದು ವಿಷಯ ಲೋಕವ್ಯಾಪ್ತಿಗಾಗಿ ತನ್ನನ್ನು ತಾನು ವಿಸ್ತರಿಸಿಕೊಂಡಾಗ ಇದು ಸಹಜ! ಜೊತೆಗೆ ಅವುಗಳ ಅವಶ್ಯಕತೆಗಳನ್ನು ಒದಗಿಸಿಕೊಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ.

ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಬಲಗೊಳ್ಳಬೇಕಿದೆ. ನಮ್ಮ ಈ ವೆಬ್‌ಸೈಟ್‌ಗೆ ಯಾವುದೇ ರೀತಿಯ ಮೂಲಧನ ಇರುವುದಿಲ್ಲ ಎಂಬುದು ನಿಮಗೆ ತಿಳಿದ ವಿಚಾರ. ಆರ್ಥಿಕ ಸಹಕಾರವಿದ್ದರೆ, ನಮ್ಮ ಈ ಕಾರ್ಯಗಳಿಗೆ ಸ್ವಲ್ಪ ಹೆಚ್ಚಿನ ವೇಗ ಸಿಗಬಹುದು. ವೆಬ್‌ಸೈಟ್‌ನ ಸಾಧ್ಯತೆಗಳನ್ನು ಮತ್ತಷ್ಟು ವಿಸ್ತರಿಸಬಹುದು. ಅಲ್ಲವೇ?

ಇದು ನಮ್ಮೆಲ್ಲರ ವೇದಿಕೆ. ವೇದಿಕೆಯನ್ನು ಕಟ್ಟಬೇಕಾದದ್ದೂ, ಇದರ ಮೂಲಕ ನಮ್ಮನ್ನು ನಾವು ಅರಿತುಕೊಳ್ಳುವ, ತಿದ್ದಿತೀಡಿಕೊಳ್ಳುವ, ಸಿಂಹಾವಲೋಕನ ಮಾಡುವ, ಬೆಳೆಯುವ, ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಕೈಗಳೂ ಒಂದುಗೂಡಬೇಕು. ಒಬ್ಬನ ಯೋಚನೆ, ಸಾಧನೆಗಳಿಗಿಂತ ಹಲವರ ಚಿಂತನೆ, ಸಮಾಲೋಚನೆ ಪ್ರಗತಿಗೆ, ಪರಿಪೂರ್ಣತೆಗೆ ಹಾದಿ.

ವೆಬ್‌ಸೈಟ್‌ನ ಪರಿಪೂರ್ಣತೆಗಾಗಿ ದುಡಿಯುವ ಹೊತ್ತಿನಲ್ಲಿ ತಮ್ಮ ಸಹಕಾರ ಅವಶ್ಯ. ಹಾಗಾಗಿ ವೆಬ್‌ಸೈಟ್ ಉತ್ತಮ ಗತಿಯಲ್ಲಿ ಸಾಗಲು ತಮ್ಮಿಂದ ಆರ್ಥಿಕ ಸಹಕಾರವನ್ನು ಅಪೇಕ್ಷಿಸುತ್ತೇವೆ. ನಿಮ್ಮ ಸಹೃದಯ ಕೊಡುಗೆಯನ್ನು ಮನದುಂಬಿ ಸ್ಮರಿಸುತ್ತೇವೆ. ಈ ನಿಟ್ಟಿನಲ್ಲಿ ಯಾವುದೇ ಸಂಶಯ ಬೇಡ. ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್, ಚೆಕ್/ಡಿಡಿಯ ಮೂಲಕ ನಮಗೆ ಆರ್ಥಿಕವಾಗಿ ನೆರವಾಗಬಹುದು.

ಖಾತೆ ಮಾಹಿತಿಗಳು : ಖಾತೆ ಸಂಖ್ಯೆ – 30331598125
Bank Name – SBI, Puttur, D.K.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
donation@shivallibrahmins.com

ಪ್ರಯೋಜಕರಿಗಾಗಿ ಯೋಜನೆಗಳು:

3 ತಿಂಗಳಿಗೆ 5,000
6 ತಿಂಗಳಿಗೆ 10,000/-
1 ವರ್ಷಕ್ಕೆ 20,000/-

ಕನಿಷ್ಟ ದೇಣಿಗೆ ರೂ.500 ಕುಟ್ಟು ಸಹಕರಿಸಬೇಕಾಗಿ ವಿನಂತಿಸುತ್ತೇವೆ.

ಅಂದಹಾಗೆ ನಿಮ್ಮ ಪ್ರಶ್ನೆ, ಅಭಿಪ್ರಾಯ ಭೇದ, ಸಂದೇಹಗಳಿದ್ದರೆ ನಮಗೆ ತಿಳಿಸಲು ಮರೆಯಬೇಡಿ. ನಾವು ಸರಿಪಡಿಸಿಕೊಳ್ಳುತ್ತೇವೆ. ಅಂತೆಯೇ ಒಳ್ಳೆಯ ಅಂಶಗಳು ಕಂಡರೆ ಇತರರಿಗೂ ತಿಳಿಸಿ. ನಮ್ಮ ನಮ್ಮ ಮನಸ್ಸಿನ ಕಡಲಿಗೆ ಸೇತುವೆ ಬೆಸೆಯುವ…

’ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’