ವೇದಗಳಲ್ಲಿ ಗೋ ಪ್ರಶಂಸೆ

– ಡಿ ಸುಗುಣಾ ಬಿ. ತಂತ್ರೀ,
ತಾಂತ್ರಿಕ ಸದನ, ಉಬ್ರಂಗಳ,
ಅಂಚೆ : ಕುಂಬಡಾಜೆ – ೬೭೧೫೫೧
ದೂರವಾಣೀ (08998) 284301

ಗೋವುಗಳು ಸಂಪೂರ್ಣ ವಿಷ್ಣುಮಯವಾಗಿದೆ. ವಿಷ್ಣು’ಎ೦ಬ ಶಬ್ದವು ಭಗವಂತನ ವಿರಾಡ್ರೂಪೀ ವಾಚಕವಾಗಿದೆ. ಭಗವತ್ಸ್ವರೂಪರಾದ ಶ್ರೀ ವೇದವ್ಯಾಸರು ಮಹಾಭಾರತದಲ್ಲಿ ಯುಧಿಷ್ಟಿರ ಮಹಾರಜನಿಗೆ ಗೋವಿನ ಮಹಿಮೆಯನ್ನು ’ಗೋಸಾವಿತ್ರೀ ಸ್ತೋತ್ರ’ದಲ್ಲಿ ಬಣ್ಣಿಸುತ್ತಾ ಗೋವು ವಿರಾಡ್ರೂಪೀ ಭಗವಂತನ ಸ್ವರೂಪವಾಗಿದ್ದು, ಎಲ್ಲಾ ಪಾಪಗಳಿಂದ ಮುಕ್ತನಾಗಲು ಹಾಗೂ ಭಗವಂತನ ಅನುಗ್ರಹವನ್ನು ಪಡೆಯಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಿ ತುಷ್ಟಿಗೊಳಿಸಬಲ್ಲ ’ದೇವತೆ’ಯಾಗಿದೆ ಎ೦ದು ವಿವರಿಸುವರು. ’ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ’ (ಶಾಸ್ತ್ರವಚನ) ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನೂ ವ್ಯವಸ್ಥಿತವಾಗಿ ನಡೆಸತಕ್ಕ ಬೇರೆ ಬೇರೆ ಶಾಖೆಯ ಕರ್ತವ್ಯಗಳನ್ನು ಮಾಡತಕ್ಕ ’ಮೂವತ್ತಮೂರು ಕೋಟಿ’ ದೇವತೆಗಳೂ ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಆದ್ದರಿಂದಲೇ ಅಖಿಲ ಬ್ರಹ್ಮಾಂಡವನ್ನು ಒಳಗೊಂಡ ದೇವತೆಗಳ ಆವಾಸ ಸ್ಥಾನವು ಗೋವಿನ ಶರೀರವಾಗಿದ್ದು ಗೋವು ಚಲಿಸುವ ದೇವಾಲಯವಾಗಿದೆ, ಚಲಿಸುವ ತೀರ್ಥಾಲಯಗಳೂ, ಚಲಿಸುವ ಔಷಧಾಲಯವೂ ಆಗಿದ್ದು ಕರ್ಮವಿಪಾಕವನ್ನು ಹೋಗಲಾಡಿಸಿ ಆತನನ್ನು ಸುಖಿಯನ್ನ್ನಾಗಿಸಿಡುತ್ತದೆ.

ಭಾರತೀಯ ಗೋವಂಶ ಜಗತ್ತಿನ ಜೀವಸಂಕುಲದಲ್ಲಿ ಅತಿವಿಶಿಷ್ಟ. ಜನನದಿಂದ ಮರಣಪರ್ಯಂತ ಮಾನವ ಕುಲಕೋಟಿಗೆ ಅಮೃತದಂತಹಾ ಹಾಲುಣಿಸುವ ಮಾತೆ ಗೋವು. ಗೋಮೂತ್ರ-ತುಪ್ಪ-ಬೆಣ್ಣೆ-ಮೊಸರು-ಮಜ್ಜಿಗೆಗಳಿಂದ ಜೀವನ ಸ್ವಾಸ್ಥ್ಯವನ್ನು ನಿರ್ಮಿಸವ ಸಂಜೀವಿನಿ ಗೋವು. ಗೋಮೂತ್ರ-ಗೋಮಯಗಳಿಂದ ಜೀವನಾಧಾರವಾದ ಕೃಷಿಗೆ ಅಧಾರವಾಗಿರುವುದು ಗೋವು, ಗೋಮೂತ್ರ-ಗೋಮಯ-ಗೋಘೃತಗಳಿಂದ ದೇಹ-ದೇಶಗಳನ್ನು ಪವಿತ್ರಗೊಳಿಸುವ ದಿವ್ಯತೆಯುಳ್ಳದ್ದು ಗೋವು. ತನ್ನ ಉಸಿರಾಟ-ಸ್ಪರ್ಶ-ದರ್ಶನಗಳಿಂದ ಪ್ರಕೃತಿಮಂಡಲವನ್ನೇ ಪಾವನಗೊಳಿಸುವ ಜಗದುಪಕಾರಿ ಗೋವು.

ಭಾರತೀಯ ಸಂಸ್ಕೃತಿಯ ಮೂಲವಾದ ವೇದಗಳಲ್ಲಿ ಗೋವುಗಳ ವಿಷಯಕವಾದ ಪ್ರತ್ಯೇಕ ಸೂಕ್ತಗಳಿವೆ. ಈ ಸೂಕ್ತಗಳಲ್ಲಿ ಗೋವುಗಳೇ ಮಾನವಜೀವಿತದ ಆಧಾರ ತಂತುಗಳು ಎ೦ದು ಪ್ರಶಂಸಿದ್ದಾರೆ.

೧. ಆ ಗಾವೋ ಅಗ್ಮನುತ ಭದ್ರಮಕ್ರಂತ್ಸೀದಂತು ಗೋಷ್ಠೇ ರಣಯಂತ್ವಸ್ಮೇ |
ಪ್ರಜಾವತೀಃ ಪುರುರೂಪಾ ಇಹಸ್ಯುರಿಂದ್ರಾಯ ಪೂರ್ವಿರುಷಸೋ ದುಹಾನಾಃ ||

ಹಸುಗಳು ಬರಲಿ. ಅವು ಮಂಗಳವನ್ನುಂಟುಮಾಡಲಿ. ಕೊಟ್ಟಿಗೆಯಲ್ಲಿ ಇವು ಕಲೆಯಲಿ. ನಮ್ಮ ಜತೆಗೆ ಉದ್ಗರಿಸಲಿ. ಇಲ್ಲಿ ಕರುಗಳನ್ನೀಯುತ್ತ ಸುಂದರವಾದ ರೂಪವುಳ್ಳವುಗಳಾಗಲಿ. ಜೀವನದ ಸಲುವಾಗಿ ನಸುಕಿನಲ್ಲೇ ಹಾಲುಗರೆಯಲಿ.

೨. ಇಂದ್ರೋಯಜ್ವನೇ ಗೃಣತೇಚ ಶಿಕ್ಷತ ಉಪೇದ್ಧದಾತಿ ನಸ್ವಂ ಮುಷಾಯತಿ |
ಭೂಯೋ ಭೂಯೋರಯಿವಿಂದಸ್ಯ ವರ್ಧಯನ್ನಭಿನ್ನೇ ಖಲ್ಯೇನಿ ದಧಾತಿ ದೇವಯುರ್ವ ||

ಭಗವಚಿತನು ಯಜಮಾನನಿಗೆ ಹಾಗೂ ಆಚಾರ್ಯನಿಗೆ ಜ್ಞಾನವನ್ನು ನೀಡುತ್ತಾನೆ. ಖಂಡಿತವಾಗಿ ಫಲವನ್ನು ಕೊಡುತ್ತಾನೆ. ಭಗಂತನು ಪೂರ್ಣಕಾಮನಾದುದರಿಂದ ತನಗಾಗಿ ಏನನ್ನೂ ಬಯಸುವುದಿಲ್ಲ. ಅವನ ಸಂಪತ್ತನ್ನು ಮತ್ತೆ ಮತ್ತೆ ವರ್ಧಿಸುತ್ತಾನೆ. ದ್ಯೇವೀಸಾಧಕನಿಗೆ ಭದ್ರ ಆಶ್ರಯವನ್ನು ಬೇರೆಲ್ಲೂ ಅಲದೆ ಇಲ್ಲಿಯೆ ನೀಡುತ್ತಾನೆ.

೩. ನ ತಾ ನಶಂತಿ ನ ದಭಾತಿ ತಸ್ಕರೋ ನಾಸಾಮಾಮಿ ತೋ ಪೃಥಿರಾ ದದರ್ಷತಿ |
ದೇವಾಂಶ್ಚ ಯಾಭಿರ್ಯಜತೇ ದದಾತಿ ಚ ಜ್ಯೋಗಿತ್ತಾಭಿಃ ಸಚತೇ ಗೋಪತಿಃ ಸಹ ||

ಯಾವ ಮಾತುಗಳಿಂದ ದೇವಯಜ್ಞಗಳು ಆಚರಿಸಲ್ಪಡುತ್ತವೋ ಆ ಗೋವುಗಳೊಂದಿಗೆ (ಯಜ್ಞಾಚರಣೆ ಹಾಗೂ ದನಗಳಿಗೆ ಕಾರಣನಾದುವು ಗೋವುಗಳು) ಆ ವಾಗ್ಮಿಯು ಚಿರಕಾಲದ ವರೆಗೆ ಬಾಳುತ್ತಾ ಕೂಡಿರುತ್ತಾನೆ. ಈ ಗೋವುಗಳು ನಾಶವಾಗುವುದಿಲ್ಲ. ಕಳ್ಳನು ಅವುಗಳನ್ನು ಅದುಮಿಡಲಾರನು. ಇವುಗಳನ್ನು ಯಾವ ವಿರುದ್ಧ ಶಕ್ತಿಯೂ ತಡೆಯಲಾರದು.

೪. ನ ತಾ ಅರ್ವಾ ರೇಣುಕಾಟೋಶ್ನುತೇ ನ ಸಂಸ್ಕೃತತ್ರಮುಪಯಂತಿ ತಾ ಅಭಿ |
ಉರೂಗಯಮಭಯಂ ತಸ್ಯತಾ ಅನುಗಾವೋ ಮರ್ತ್ಯಸ್ಯ ವಿ ಚರಂತಿ ಯಜ್ವನಃ ||

ಪದಗಳ ಅರ್ಥವನ್ನು ಕೆಡಿಸುವ ಜೀವಾತ್ಮನಿಗೆ ಅವುಗಳು ದೊರೆಯುವುದಿಲ್ಲ. ಇವುಗಳು ಸೂಕ್ಷ್ಮ ಅರ್ಥಗಳನ್ಹ್ನು ಎಳೆದಾಡುವವನ ಕೈಗೆ ಬೀಳಲಾರವು. ಆ ಆಕಳುಗಳು ಆ ಯಜಮಾನ ವ್ಯಕ್ತಿಯ ಅಭಯದ ಆಸರೆಯಲ್ಲಿ ಆರಾಮವಾಗಿ ಸಂಚರಿಸುತ್ತವೆ. ಅವು ಕಟುಕರ ಕೈಗೆ ಸಿಗದಿರಲಿ.

೫. ಗಾವೋ ಭಗೋ ಗಾವ ಇಂದ್ರೋ ಮ ಇಚ್ಛಾದ್ಗಾವಃ ಸೋಮಸ್ಯ ಪ್ರಥಮಸ್ಯ ಭಕ್ಷ್ಯಃ |
ಇಮಾ ಯಾಗಾವಃ ಸ ಜನಾಸ ಇಂದ್ರ ಇಚ್ಛಾಮಿ ಹೃದಾ ಮನಸಾ ಚದಿಂದ್ರಮ್ ||

ಭಾವಾರ್ಥ :- ಗೋವು ಸರ್ವರಿಗೂ ಸಂಪತ್ತಾಗಿದೆ. ಅದನ್ನು ರಕ್ಷಿಸುವವರು ಬಾಗ್ಯಶಾಲಿಗಳೇ ಸರಿ.

೬. ಯೂಯಂ ಗಾವೋ ಮೇದಯಥಾ ಕೃಶಃ ಚಿದಶ್ರೀರಮ್ ಚಿತ್ ಕೃಣುಥಾ ಸುಪ್ರತೀಕಂ |
ಭದ್ರಮ್ ಗೃಹಂ ಕೃಣುಥ ಭದ್ರವಾಚೋ ಬೃಹದ್ವೋ ವಯ ಉಚ್ಯತೇ ಸಭಾಸು ||

ಭಾವಾರ್ಥ :- ಈ ಗೋವುಗಳ ಹಾಲು ಎ೦ಥಾ ದುರ್ಬಲರನ್ನೂ ಸುಪುಷ್ಟಗೊಳಿಸುತ್ತದೆ. ಕುರೂಪಿಯನ್ನೂ ಸುಂದರಗೊಸುತ್ತದೆ. ಮನೆಗೆ ಶೋಭೆ ತರುತ್ತದೆ. ಅಂತೆಯೇ ಸಭೆಗಲಲ್ಲಿ ಇವುಗಳ ಮಹಿಮೆಯನ್ನು ಕೊಂಡಾಡುತ್ತಾರೆ.

೭. ಪ್ರಜಾವತೀಃ ಸೂಯವಸೇ ಕುಶಂತೀಃ ಶುದ್ಧಾ ಆಪಃಸುಪ್ರಪಾಣೇ ಪಿಬಂತೀಃ |
ಮಾವಸ್ತೇನ ಈ ಶತ ಮಾಘಶಂಸಃ ಪರಿವೋ ರುದ್ರಸ್ಯ ಹೇತಿರ್ವಣಕ್ತು |

ಭಾವಾರ್ಥ : ಉತ್ತಮವಾದ ಕರುಗಳಿಗೆ ಜನ್ಮವೀಯುತ್ತಾ ಹಸಿರು ಹುಲ್ಲಿಗಾಗಿ ಅಲೆದಾಡುತ್ತ ಕೆರೆದಂಡೆಯಲ್ಲಿ ಶುದ್ಧವಾದ ನೀರನ್ನು ಕುಡಿಯುತ್ತ ಇರುವ ಈ ಗೋವುಗಳಿಗೆ ದುಷ್ಟರ ಬಾಧೆ ತಗುಲದಿರಲಿ. ಚಿಕಿತ್ಸಕನು ಇವುಗಳನ್ನು ಸಂರಕ್ಷಿಸಲಿ.

ಪಶುಸಂವರ್ಧನ ಸೂಕ್ತ

೧. ಏಹ ಯಂತು ಪಶವೋ ಯೇ ಪರೇಯುರ್ವಾಯುಃಯೆಷಾಮ್ ಸಹಚಾರಂ ಜುಜೋಷ |
ತ್ವಷ್ಟಾ ಯೇಷಾಂ ರೂಪಧೀಯಾನಿ ವೇದಾಸ್ಮಿನ್‌ತಾನ್ ಗೋಷ್ಟೇ ಸವಿತಾ ನಿ ಯಚ್ಛತು ||

ಭಾವಾರ್ಥ : ಮೇಯಲು ಹೊರಗೆ ಹೊರಟಿರುವ ಈ ಎಲ್ಲ ಪಶುಗಳ ರೂಪ, ಗುಣ ಹಾಗೂ ಲಕ್ಷಣಗಳ ಬಗೆಗೆ, ಅವುಗಳನ್ನು ಸೃಷ್ಟಿಸಿದ ಪರಮಾತ್ಮನೇ ಬಲ್ಲನು. ತಂಗಾಳಿಯಲ್ಲಿ ಸಂಚರಿಸುವ ಆ ಎಲ್ಲಾ ಪಶುಗಳು ಕೊಟ್ಟಿಗೆಗೆ ಬರಲಿ. ಭಗವಂತ ಅವುಗಳನ್ನು ಕಾಪಾಡಲಿ.

೨. ಇಮಂ ಗೋಷ್ಟಂ ಪಶವಃ ಸಂ ಸ್ರವಂತು ಬೃಹಸ್ಪತಿರಾ ನಯತು ಪ್ರಜಾನಾನ್ |
ಸಿನಿವಾಲೀ ನಯತ್ವಾಗ್ರಮೇಷಾಂಆಜಗ್ಮುಶೋ ಅನುಮತೇ ನಿಯಚ್ಛ ||

ಭಾವಾರ್ಥ : ಪಶುಗಳೆಲ್ಲಾ ಈ ಗೋಶಾಲೆಗೆ ಒಟ್ಟಿಗೆ ಧಾವಿಸಿ ಬರಲಿ. ಎಲ್ಲವನ್ನೂ ಭಗವಂತನು ಇಲ್ಲಿಗೆ ತಿಳಿಯುವಂತೆ ಬರಮಾಡಲಿ. ಸುಂದರವಾದ ಸ್ತ್ರೀಯು ಮುಂದೆ ನಿಂತು ಇವುಗಳನ್ನು ಕರೆತರಲಿ, (ಹೇ ಅನುಮತೇ) ಎಲೋ! ಅನುಸರಿಸಿ ಬಂದ ಸ್ತ್ರೀಯೇ! ಈ ಬಂದ ಪಶುಗಳನ್ನೆಲ್ಲಾ ಶಿಸ್ತಿನಿಂದ ಒಳಗೂಡಿಸು. ಈ ವೇದಮಂತ್ರದಿಂದ ಪಶುಸಂಗೋಪನೆಗೆ ರಮಣೀಯರೇ ಅರ್ಹರಾದವರು ಎ೦ದು ಭಾಸವಾಗುತ್ತಿದೆ.

೩. ಸಂ ಸಂ ಸ್ರಂತು ಪಶವಃ ಸಮಶ್ವಾಃಸಮು ಪೂರುಷಾಃ |
ಸಂ ಧಾನ್ಯಸ್ಯ ಯಾ ಸ್ಥಾತಿಃ ಸಂ ಸ್ರಾವ್ಯೇಣ ಹವಿಷಾ ಜುಹೋಮಿ ||

ಭಾವಾರ್ಥ : ಪಶುಗಳು ಅಶ್ವಗಳು ಹಾಗೂ ಪರಿಚಾರಕರಾದ ಪುರುಷರು ಎಲ್ಲರೂ ಒಟ್ಟಿಗೆ ಧಾವಿಸಿ ಬರಲಿ. ಕಣಜದಲ್ಲಿ ಸಮೃದ್ಧವಾಗಿ ಕಾಳುಕಡ್ಡಿಗಳು ತುಂಬಿರಲಿ.

೪. ಸಂ ಸಿಂಚಾಮಿ ಗವಾಂ ಕ್ಷೀರಂ ಸಮಾಜ್ಯೇನ ಬಲಂ ರಸರ್ವ |
ಸಂ ಸ್ಕ್ತಾ ಅಸ್ಮಾಕಂ ವೀರಾ ಧ್ರುವಾ ಗಾವೋಮಯಿ ಗೋಪಕೌ ||

ಭಾವಾರ್ಥ : ಹಸುವಿನ ಹಾಲನ್ನೂ ತುಪ್ಪವನ್ನೂ ಉಣ್ಣಲು ನಾನು ಸಮೃದ್ಧವಾಗಿ ನೀಡುತ್ತೇನೆ. ನಮ್ಮ ಈ ವೀರರು ಹಾಲು ತುಪ್ಪವನ್ನುಂಡು ಸಂತೃಪ್ತರಾಗಲಿ. ಗೋಪತಿಯಾದ ನನ್ನ ಕೊಟ್ಟಿಗೆಯಲ್ಲಿ ಹೀಗೆಯೇ ಹಸುಗಳು ಹಿಂಡು ಹಿಂಡಾಗಿ ದೃಢವಾಗಿ ಇರಲಿ.

೫. ಆ ಹರಾಮಿ ಗವಾಂ ಕ್ಷೀರಮಾಹಾರ್ಷಂ ಧಾನ್ಯಂ ರಸಮ್ |
ಆಹೃತಾ ಅಸ್ಮಾಕಂ ವೀರಾಃ ಆ ಪತ್ನೀರಿದ ಮಸ್ತಕಮ್ ||

ಭಾವಾರ್ಥ : ನಾನು ಹಸುವಿನ ಹಾಲನ್ನು ತರುತ್ತೇನೆ. ಧಾನ್ಯಗಳನ್ನು ಹಾಗೂ ರುಚಿಯಾದ ಖಾದ್ಯ ಪದಾರ್ಥಗಳನ್ನೂ ತರುತ್ತೇನೆ. ನಮ್ಮ ವೀರರು ಹಾಗೂ ಅವರ ಪತ್ನಿಯಂದಿರೂ (ಅಂದರೆ ಕುಟುಂಬದ ಸದಸ್ಯರೆಲ್ಲರೂ) ಇಲ್ಲಿ ಕರೆಯಲ್ಪಟ್ಟಿದ್ದಾರೆ. ಎಲ್ಲರೂ ಈ ಪಶುಸಮೃದ್ಧಿಯನ್ನು ಅನುಭವಿಸೋಣ.

ವೇದದಲ್ಲಿ ಪಶುಸಂವರ್ಧನೆ ಮತ್ತು ಗೋವಿನ ಉಪಯೋಗಗಳಿಲ್ಲದೆ ಗೋವನ್ನು ಕೂಡಿಸಿ ಅವುಗಳಿಗೆ ವಾಸಾರ್ಹವಾದ ಗೋಷ್ಠದ ವಿಷಯಕವಾಗಿಯೂ ಗೋಷ್ಠ ಸೂಕ್ತದಲ್ಲಿ ವಿವರಣೆ ಇದೆ.

ಗೋಷ್ಠ ಸೂಕ್ತ

೧. ಸಂ ವೋ ಗೋಷ್ಠೇನ ಸುಷದಾ ಸಂ ರಯ್ಯಾ ಸಂ ಸಂಭೂತ್ಯಾ |
ಅಹರ್ಜಾತಸ್ಯ ಯಂ ನಾಮ ತೇನಾ ವಃ ಸಂ ಸೃಜಾಮಸಿ ||

ಭಾವಾರ್ಥ : ದನಕರುಗಳಿಗಾಗಿ ಉತ್ತಮವಾದ ಗೋಶಾಲೆಯೊಂದನ್ನು ನಿರ್ಮಿಸಿ ಅದರಲ್ಲಿ ನೀರಿನ ವ್ಯವಸ್ಥೆ ಮಾಡುತ್ತೇವೆ. ಹಸುಗಳಿಗೆ ಹಗಲಲ್ಲಿಯೂ ಸಂತೋಷಕರವಾದ ಸುಸಜ್ಜಿತವಾದ ಗೋಶಾಲೆಯೊಂದನ್ನು ಅಣಿಮಾಡುತ್ತೇವೆ.

೨. ಸಂ ವಃ ಸೃಜತ್ವರ್ಯಮಾ ಸಂ ಪೂಷಾ ಬೃಹಸ್ಪತಿಃ |
ಸಮಿಂದ್ರೋ ಯೋ ಧನಂಜಯೋ ಮಯಿ ಪುಷ್ಯತ ಯದ್ವಸು ||

ಭಾವಾರ್ಥ : ಆರ್ಯಮಾ ನಿಷ್ಪಕ್ಷಪಾತನಾದ ಮನೆಯ ಹಿರಿಯನು ನಿಮ್ಮನ್ನು ಚೆನ್ನಾಗಿ ಸಂರಕ್ಷಿಸಲಿ. ಪೂಷಾ ಪೋಷಣೆ ಮಾಡುವ ಗೋಪಾಲಕನು ನಿಮ್ಮನ್ನು ಚೆನ್ನಾಗಿ ಸಲಹಲಿ. ಜ್ಞಾನಿಯು ನಿಮ್ಮನ್ನು ಹರಸಲಿ. ಶ್ರೀಮಂತನಾದ ಮನೆಯೊಡೆಯನು ನಿಮ್ಮನ್ನು ಚೆನ್ನಾಗಿ ಸಾಕಲಿ. ನಿಮ್ಮಲ್ಲಿರುವ ಕ್ಷೀರ ಸಂಪತ್ತಿನಿಂದ ನಮ್ಮನ್ನು ಪೋಷಣೆ ಮಾಡಿರಿ.

೩. ಸಂಜಗ್ಮಾನಾ ಅಬಿಭ್ಯುಷೀರಸ್ಮಿನ್ ಗೋಷ್ಠೇ ಕರೀಷಿಣೀಃ |
ಬಿಭ್ರತೀಃ ಸೋಮ್ಯಂ ಮಧ್ವನಮೀವಾ ಉಪೇತನ ||

ಭಾವಾರ್ಥ : ಈ ಗೋಶಾಲೆಯಲ್ಲಿ ಸೇರಿಕೊಂಡು ನಿರ್ಭಯವಾಗಿ ಸಂಚರಿಸುವ ಹಸುಗಳು ಉತ್ತಮವಾದ ಗೋಮ೦iiವನ್ನು ಉಂಟುಮಾಡುತ್ತವೆ. ಮತ್ತು ಅಮೃತಸಮಾನವಾದ ಹಾಲನ್ನು ನೀಡುತ್ತಾ ನೀರೋಗಾವಸ್ಥೆಯಲ್ಲೇ ನಮ್ಮೊಡನೆ ಸೇರಿಕೊಳ್ಳಲಿ.

೪. ಇಹೈವ ಗಾವ ಏತನೆಹೋ ಶಕೇವ ಪುಷ್ಯತ |
ಇಹೈವೋತ ಪ್ರಜಾಯಧ್ವಂ ಮಯಿ ಸಂಜ್ಞಾನಮಸ್ತುನ ||

ಭಾವಾರ್ಥ : ಹೇ ಗೋವುಗಳೇ ಇಲ್ಲಿಯೇ ಬನ್ನಿರಿ ಇಲ್ಲಿಯೇ ಪುಷ್ಟಿ ಹೊಂದಿರಿ. ಇಲ್ಲಿಯೆ ನಿಮ್ಮ ಸಂತತಿಯನ್ನು ವರ್ಧಿಸಿರಿ. ನನ್ನ ಬಗ್ಗೆ ಅಮಿತ ಪ್ರೀತಿಯು ನಿಮ್ಮಲ್ಲಿರಲಿ.

೫. ಶಿವೋ ವೋ ಗೋಷ್ಟೋ ಭವತು ಶಾರಿಶಾಕೇವ ಪುಷ್ಯತ |
ಇಹ್ಯವೋತ ಪ್ರಜಾಯಧ್ವಂ ಮಯಾ ವಃ ಸೃಜಾಮಸಿ ||

ಭಾವಾರ್ಥ : ನಿಮ್ಮ ಕೊಟ್ಟಿಗೆಯು ಮಂಗಲಕರವಾಗಿರಲಿ. ನಿಮಗೆ ಹಿತಕರವಾಗಿರಲಿ. ಜೇನ್ನೊಣಗಳಂತೆ ಅಭಿವೃದ್ಧಿ ಹೊಂದಿರಿ. ಇಲ್ಲಿಯೆ ನಿಮ್ಮ ಸಂತತಿಯನ್ನು ಉತ್ಪಾದಿಸಿರಿ. ನನ್ನೊಡನೆ ನಿಮ್ಮನ್ನು ಹುಲ್ಲುಗಾವಲಿಗೆ ಕೊಂಡೊಯ್ಯುತ್ತೇನೆ.

೬. ಮಯಾ ಗಾವೋ ಗೋಪತಿನಾ ಸಚಧ್ವಮಯಂ ವೋ ಗೋಷ್ಠ ಇಹ ಪೋಷಯಿಷ್ಣು|
ರಾಯ ಸ್ಪೋಷೇಣ ಬಹುಲಾ ಭವಂತೀರ್ಜೀವಾ ಜೀವಂತೀರುಪ ವಃ ಸದೇಮ ||

ಭಾವಾರ್ಥ : ಎಲೋ ಗೋವುಗಳೇ ! ಗೋಪತಿಯಾದ ನನೊಡನೆಯೆ ಕೂಡಿರಿ. ನಿಮ್ಮನ್ನು ಪೋಷಣೆ ಮಾಡುವ ಗೋಶಾಲೆಯು ಇಲ್ಲಿಯೇ ಇದೆ. ಉತ್ತಮವಾದ ಪಾಲನೆ ಪೋಷಣೆಗಳಿಂದ ಅಭಿವೃದ್ಧಿ ಹೊಂದುತ್ತಾ ಜೀವಿಸುವ ನಿಮ್ಮನ್ನು ಜೀವರಾದ ನಾವು ಪಡೆದುಕೊಳ್ಳುತ್ತೇವೆ.

ವೇದದಲ್ಲಿ ಪಶುಪೋಷಣಮ್ ಎ೦ಬ ಸೂಕ್ತವು ಅವಲಕ್ಷಣವಾದ ಗೋಫುಗಳು ಹಾಗೂ ಅಶುಭಕರಕ ಸಮಯದಲ್ಲಿ ಕರುಹಾಕಿದರೆ ಬರುವ ದೋಷಗಳಿಗೂ ಪ್ರಾಯಶ್ಚಿತ್ತವನ್ನು ತಿಳಿಸಿ ಲೋಕಕಲ್ಯಾಣಕರವಾದ ಹೋಮಹವನಾದಿಗಳಿಗೆ ಹಸುಗಳ ತುಫ್ಫ, ಹಾಲುಗಳನ್ನು ವಿನಿಯೋಗಿಸುತ್ತಾ ಹಸುಗಳೀಂದಲೇ ಜಗದ್ರಕ್ಷೆ ಮತ್ತು ಸುಭಿಕ್ಷೆಯನ್ನು ಸಾಧಿಸುವ ಪರಿಯನ್ನು ತಿಳಿಸಿದ್ದಾರೆ.

ಪಶುಪೋಷಣ ಸೂಕ್ತ

೧. ಏಕೈಕಯೀಷಾಸೃಷ್ಟ್ಯಾ ಸಂಬಭಾವ ಯತ್ರ ಗಾ ಅಸೃಜಯಂತ ಭೂತಕೃತೋ ವಿಶ್ವರೂಪಾಃ |
ಯತ್ರ ವಿಜಾಯತೇ ಯಮಿನ್ಯಪರ್ತುಃ ಸಾ ಪಶೂನ್ ಕ್ಷಿಣಾತಿ ರಿಪತೀ ರುಶತೀ ||

ಭಾವಾರ್ಥ : ಸೃಷ್ಟಿನಿಯಮದಂತೆ ನಾನಾ ರೂಪ, ಬಣ್ಣಗಳುಳ್ಳ ಗೋವುಗಳು ಉತ್ಪನ್ನವಾಗಿವೆ. ಒಂದೊಂದು ಆಕಳು ಒಂದೊಂದು ರೀತಿ ಜನಿಸುವಂತೆ ಸೃಷ್ಟಿಯ ನಿಯಮವಿದೆ. ಇದಕ್ಕೆ ವ್ಯತಿರಿಕ್ತವಾಗಿ ಆ ಸಮಯದಲ್ಲಿ ವಿಚಿತ್ರ ರೀತಿಯಿಂದ ಕರು ಹುಟ್ಟಿದಾಗ ಅಲ್ಲಿನ ಗೋಸಂಪತ್ತು ಕಷ್ಟವೇದನೆಗಳನ್ನು ಅನುಭವಿಸುತ್ತಾ ನಾಶವಾಗುತ್ತದೆ.

ಉದಾಹರಣೆಗೆ :

ಅಮಾವಾಸ್ಯಾ ದಿನ ಗೋವು ಕರು ಹಾಕುವುದು.
ದನವು ಅವಳಿ ಕರುಗಳನ್ನು ಹಾಕುವುದು.
ಕರುವಿನ ಮುಖದಲ್ಲಿ ಮಾತ್ರ ದಾಸನಾಮವಿರುವುದು ಅಶುಭ. ಶರೀರದ ಬೇರೆ ಕಡೆಗಳಲ್ಲೂ ದಾಸನಾಮವಿದ್ದರೆ ದೋಷವಿಲ್ಲ.

ಈ ರೀತಿ ದನಗಳು ಅಸಮಯದಲ್ಲೂ ವಿಚಿತ್ರ ರೀತಿಯಲ್ಲೂ ಕರುಹಾಕಿದರೆ ಗೋವುಗಳಿಗೂ ಯಜಮನನ ಮನೆಗೂ ಅನಿಷ್ಟ ಸಂಭವಿಸುವುದು. ಅದಲ್ಲದೆ, ಇನ್ನೂ ಕೆಲವು ದುರ್ನಿಮಿತ್ತಗಳಿವೆ. ಇದಕ್ಕೆಲ್ಲಾ ಪರಿಹಾರವನ್ನು ಪಶುಪೋಷಣ ಸೂಕ್ತದಲ್ಲೇ ತಿಳಿಸಿದ್ದಾರೆ.

೨. ಏಷಾ ಪಶೂನ್ ಸಂ ಕ್ಷೀಣಾತಿ ಕ್ರವ್ಯಾದ್ ಭೂತ್ವಾ ವ್ಯದ್ವರೀ |
ಉತ್ಯೇನಾಂ ಬ್ರಹ್ಮಣೇ ದದ್ಯಾತ್ತಥಾ ಸ್ಯೋನಾ ಶಿವಾ ಸ್ಯಾತ್ |

ಭಾವಾರ್ಥ: ಈ ರೀತಿ ಅಶುಭಕರವಾದ ಗೋವು ಮಾಂಸಭಕ್ಷಕ ಪ್ರಾಣಿಯಂತೆ ಅಶುಭವೂ, ಅನಿಷ್ಟಕರವೂ ಆಗಿರುವುದರಿಂದ ಅಂತಹ ಗೋವನ್ನು ತಪಸ್ವಿಯಾದ ಬ್ರಾಹ್ಮಣನಿಗೆ ಒಪ್ಪಿಸಿದಾಗ ಎಲ ದೋಷಗಳೂ ನಿವಾರಣೆಯಾಗುತ್ತದೆ.

೩. ಶಿವಾ ಭವ ಪುರುಷೇಭ್ಯೋ ಗೋಭ್ಯೋ ಅಶ್ವೇಭ್ಯಃ ಶಿವಾ |
ಶಿವಾಸ್ಮ್ಯೆ ಸರ್ವಸ್ಮ್ಯೆ ಕ್ಷೇತ್ರಾಯ ಶಿವಾ ನ ಇಹೈಧಿ ||

ಭಾವಾರ್ಥ: ಈ ರೀತಿ ಬ್ರಹ್ಮಜ್ಞನಿಗೆ ಒಪ್ಪಿಸಿದ ಮೇಲೆ ಗೋವು ಪವಿತ್ರೀಕೃತವಾಗಿ ಮನುಷ್ಯರಿಗೆ, ಪಶುಗಳಿಗೆ, ಭೂಮಿಗೆ ಮತ್ತು ನಮಗೆಲ್ಲರಿಗೊ ಕಲ್ಯಾಣಕರವಾಗುತ್ತದೆ.

೪. ಇಹ ಪುಷ್ಟಿರಿಹ ರಸ ಇಹ ಸಹಸ್ರಸಾತಮಾ ಭವ | ಪಶೂನ್ಯಮಿನಿ ಪೋಷಯ ||

ಭಾವಾರ್ಥ: ಇಲ್ಲಿ ಪುಷ್ಟಿ ಇದೆ, ರಸವಿದೆ, ಸಾವಿರ ರೀತಿಯಲ್ಲಿ ಲಾಭಕಾರಿಣಯಾಗುತ್ತಾಳೆ. ಪಶುಗಳಿಗೆ ಪೋಷಣೆ ಇದೆ.

೫. ಯತ್ರಾ ಸುಹಾರ್ಧಃ ಸುಕೃತೋ ಮದಂತಿ ವಿಹಾಯ ರೋಗಂ ತನ್ವಃ೧ ಸ್ವಾಯಾಃ |
ತಂ ಲೋಕಂ ಯಮಿನ್ಯಭಿ ಸಂಬಭೂವ ಸಾ ನೋ ಮಾ ಹಿಂಸೀತ್ಪುರುಷಾನ್ ಪಶೂಂಶ್ಚ ||

ಭಾವಾರ್ಥ: ಸಜ್ಜನರು ಸ್ವಸ್ಥವಿಚಾರವುಳ್ಳವರು ಎಲ್ಲಿ ನಿರೋಗಿಗಳಾಗಿ ನಿಶ್ಚಿತರಾಗಿ ಅನಂದಪಡುತ್ತಾ ಬದುಕುತ್ತಾರೋ ಆ ಪ್ರದೇಶದಲ್ಲಿ ಹಸುವು ಆಶ್ರಯ ಪಡೆಯಲಿ. ನಮಗೆ ಮತ್ತು ಪಶುಗಳಿಗೆ ಆ ಆಕಳಿನಿಂದ ಎ೦ದಿಗೂ ಅಶುಭವುಂಟಾಗದಿರಲಿ.

೬. ಯತ್ರಾ ಸುಹಾರ್ದಾಂ ಸುಕೃತಾಗ್ನಿ ಹೋತ್ರಹುತಾಂ ಯತ್ರ ಲೋಕಃ |
ತಂ ಲೋಕಂ ಯಮಿನ್ಯಭಿಸಂಬಭೂವ ಸ ನೋ ಮಾ ಹೋಸೀತ್ಪುರುಷಾನ್ ಚ ||

ಭಾವಾರ್ಥ: ಯಾವ ದೇಶದಲ್ಲಿ ಸಜ್ಜನರು ಸದಾಚಾರ ಹಾಗೂ ಸುವಿಚಾರ ಗಳಿಂದೊಡಗೂಡಿ ನಿರಂತರ ಹೋಮ ಹವನಾದಿಗಳನ್ನು ನಡೆಸುತ್ತಿರುವರೋ, ಅಲ್ಲಿ ಈ ಹಸುವು ಎಲ್ಲರೊಡಗೂಡಿ ಸಂಚರಿಸುತ್ತಿರಲಿ. ಋಷಿಮುನಿಗಳ ತಪಃ ಸಾಧನೆಗೂ ಗೋವೇ ಸಾಧನವಾಗಿದೆ. ನಮಗಾಗಲಿ, ಪಶುಗಳಿಗಾಗಲಿ ಅಶುಭವಾಗದ ಹಾಗೆ ಗೋಮಾತೆಯು ರಕ್ಷಿಸಲಿ.

ಇನ್ನೊಂದು ಗೋಕರ್ಣ ಸೂಕ್ತದಲ್ಲಿ ಗೋವುಗಳಿಗೂ ಮಾನವರಂತೆಯೇ ಕರ್ಣವೇಧ (ಕಿವಿಚುಚ್ಚಿ) ಮಾಡಿ ಗೋಸಂತತಿಯ ಸಮೃದ್ಧಿಗಾಗಿ ರಕ್ಷಣೆ ಮಾಡುವ ಕ್ರಮವನ್ನು ತಿಳಿಸಿದ್ದಾರೆ.

ಗೋಕರ್ಣ ಸೂಕ್ತ

೧. ವಾಯುರೇನಾ ಸಮಾಕರತ್ ತ್ವಷ್ಟಾ ಪೋಷಾಯ ಧ್ರಿಯಮ್ |
ಇಂದ್ರ ಅಭ್ಯೋ ಅಧಿ ಬ್ರವತ್ ರುದ್ರೋ ಭೂಮ್ನೇ ಚಿಕಿತ್ಸತು ||

ಭಾವಾರ್ಥ : ವಾಯುವು ಈ ಗೋವುಗಳನ್ನು ಒಂದೇ ಸ್ಥಳದಲ್ಲಿ ಸಮಾವೇಶಗೊಳಿಸಲಿ. ತ್ವಷ್ಟಾನು ಇವರಿಗೆ ವಿಪುಲವಾದ ಅನ್ನವನ್ನು ಉತ್ಪಾದಿಸಲಿ. ಭಗವಂತನು ಇವರಿಗೆ ಜ್ಞಾನವನ್ನು ಉಪದೇಶಿಸಲಿ. ರುದ್ರನು ಇವರ ಸಮೃದ್ಧಿಗಾಗಿ ಚಿಕಿತ್ಸೆ ನೀಡಲಿ.

೨. ಲೋಹಿತೇನ ಸೃಧಿತಿನಾ ಮಿಥುನಂ ಕರ್ಣಯೋಃ ಕೃಧಿ |
ಅಕರ್ತಾಮಶ್ವಿನಾ ಲಕ್ಷ್ಯ ತದಸ್ತು ಪ್ರಜಯಾ ಬಹು ||

ಭಾವಾರ್ಥ : ಕೆಂಪಾಗಿ ಕಾಯಿಸಿದ ಶಲಾಕೆಯಿಂದ ಅಶ್ವಿನೀದೇವತೆಗಳು ಕಿವಿಗಳನ್ನು ಚುಚ್ಚಿ ಗೋವುಗಳಿಗೆ ಗುರುತು ಹಾಕಲಿ. ಈ ಉತ್ತಮ ಔಷಧೀಯು ಗೋಸಂತತಿಗೆ ಹಿತಕರವಾಗಲಿ.

ಇದಲ್ಲದೆ ಕಾಮಾತ್ಮಾ ಸೂಕ್ತದಲ್ಲಿ ದಂಪತಿಗಳ ಮಧುರಮಿಲನವನ್ನು ಸುಂದರವಾದ ಗೋಮಾತೆಯರು ಪ್ರೀತ್ಯನುರಾಗದ ಹೊನಲನ್ನು ಹರಿಸುವಂತೆ ಬೇಡಿಕೊಳ್ಳಲಾಗಿದೆ.

ಕಾಮಾತ್ಮಾ ಸೂಕ್ತ

ಯಾಸಾಂ ನಾಭಿರಾರೇಹಣಂ ಹೃದಿ ಸಂವನನಂ ಕೃತಮ್ |
ಗಾವೋ ಗೃತಸ್ಯ ಮಾತರೋಮಾಂ ಸಂ ವಾನಯಂತು ಮೇ ||

ಭಾವಾರ್ಥ : ಈ ಸುಂದರ ಗೋವುಗಳು ನನ್ನ ಪ್ರಿಯಪತ್ನಿಯಲ್ಲಿ ಅನುರಾಗದ ತರಂಗಗಳನ್ನುಂಟುಮಾಡಲಿ. ದಾಂಪತ್ಯದ ಸೌಖ್ಯಕ್ಕೂ, ಏಕಾತ್ಮತೆಗೂ ಗೋವಿನ ಅನುಗ್ರಹವು ಅಗತ್ಯವಾಗಿದೆ.

ಈ ರೀತಿ ಋಗ್ವೇದದಲ್ಲಿ ಗೋವುಗಲ ಬಗೆಗೆ ಹಲವಾರು ಸೂಕ್ತಗಳನ್ನು ಮಾನವ ಜೀವನದ ಪಾಂಚಭೌತಿಕ ಶಕ್ತಿಯ ಧಾರಣೆಗೆ ಸುಭಿಕ್ಷೆಗೆ ಹಾಗೂ ರಕ್ಷೆಗೆ ಗವ್ಯ್ಪದಾರ್ಥಗಳೂ (ಹಾಲು, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ, ಗೋಮೂತ್ರ, ಗೋಮಯ) ಗೋವೂ ಮೂಲಾಧಾರವಾಗಿದೀಂದು ಬಣ್ಣಿಸಿರುತ್ತಾರೆ. ಘ್ರುಹವನ್ನು ಮಂಗಲಮಯವನ್ನಾಗಿ ಮಾಡುವ ಮಂಗಲ ದೇವತೆ ಗೋವನ್ನು ಬೇಡಿಕೊಳ್ಳುತ್ತಾರೆ.

ಗೋಸ್ವನವೂ ಅತ್ಯಂತ ಕಲ್ಯಾಣಪ್ರದವಾಗಿದ್ದು ಗೋವುಗಳನ್ನು ಭದ್ರವಾಚಃ (ಮಂಗಲ ಮಾತುಗಳುಳ್ಳವುಗಳೂ) ಎ೦ದು ಬಣ್ಣಿಸಿರುತ್ತಾರೆ. ಇದರಿಂದಾಗಿ ಮನೆಯಲ್ಲಿ ಸರಸ ವಿನೋದಗಳೇ ತುಂಬಿದ್ದು ಹಗರಣ, ಮನಸ್ತಾಪಗಳಾಗದಂತೆ ಹರಸುತ್ತವೆ. ಭಗವದ್ಗೀತೆಯಲ್ಲಿ ’ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞಭಾವಿತಾಃ’ ಎ೦ದು ಹೇಳಿದ್ದಾರೆ.

ಬೇರೆ ಬೇರೆ ಇಷ್ಟಸಿದ್ಧಿಗಾಗಿ ಬೇರೆ ಬೇರೆ ಯಾಗಗಳಿಂದ ಆಯಾಯ ಕಾಂಕ್ಷಿತಗಳಿಗೆ ಅಧಿಪತಿಯಾದ ದೇವತೆಗಳನ್ನು ಹವಿಸ್ಸನ್ನರ್ಪಿಸಿ ತುಷ್ಟಿಗೊಳಿಸುತ್ತಾರೆ.

ಮಳೆಗೆ ಇಂದ್ರದೇವರು, ತೇಜಸ್ಸಿಗೆ ಅಗ್ನಿದೇವರು, ನೀರಿಗೆ ವರುಣದೇವರು ಇತ್ಯಾದಿ ದೇವತೆಗಳನ್ನು ಆಯಾಯ ದೇವತೆಗಳಿಗೆ ಹವಿಸ್ಸನ್ನರ್ಪಿಸಿ ಪಂಚಭೂತಗಳನ್ನುಸಮತೋಲನದಲ್ಲಿ ಇರುವಂತೆ ಪ್ರಾರ್ಥಿಸಿಕೊಂಡು ಸುಭಿಕ್ಷೆ ಹಾಗೂ ರಕ್ಷೆಯನ್ನು ಸಾಧಿಸಬಹುದು. ಈ ರೀತಿ ಅತಿವೃಷ್ಟಿ, ಚಂಡಮಾರುತ, ಮಹಾಮಾರಿ ಇತ್ಯಾದಿ ಪ್ರಾಕೃತಿಕ ಬಾಧೆಗಳನ್ನು ತಡೆಗಟ್ಟಬಹುದು.

ಅಲ್ಲದೆ ಗಣಪತಿಹೋಮ, ಚಂಡಿಕಾಹೋಮ, ಸುದರ್ಶನಹೋಮ, ಸ್ವಯಂವರ ಪಾರ್ವತೀಹೋಮ, ಪುತ್ರಕಾಮೇಷ್ಟಿ, ಮೃಟ್ಯುಂಜಯಹೋಮ, ನವಗ್ರಹಹೋಮ, ಮೇಧಾಹೋಮವೇ ಮೊದಲದ ಮನವಜೀವಿತಕ್ಕೆ ಬೇಕಾದ ಭೋಗಭಾಗ್ಯಗಳನ್ನು ಅನುಗ್ರಹಿಸತಕ್ಕ ಮತ್ತು ಯಾವುದೇ ರೀತಿಯ ಪಾಪಗಳಿಗೂ ಪ್ರಾಯಶ್ಚಿತ್ತರೂಪವಾಗಿ ಮಾಡತಕ್ಕ ಸಾವಿರಾರು ಹೋಮಗಳನ್ನು ವೇದದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಯಾವುದೇ ಹೋಮಗಳಲ್ಲೂ ದನದ ಆಜ್ಯದ ಮೂಲಕವೇ ಆಯಾಯ ದೇವತೆಗಳಿಗೆ ಹವಿಸ್ಸನ್ನು ಸಲ್ಲಿಸಲಾಗುತ್ತದೆಯಾದ್ದರಿಂದ ಯಾವುದೇ ಹೋಮಗಳ ಮೂಲವು ದನದ ಆಜ್ಯವಾಗಿದ್ದು ಗೋವಿನ ಆಧಾರದಲ್ಲೇ ಲೋಕದಲ್ಲಿ ಸುಖಕಾಂತಿ ಹಾಗೊ ಪಾಪಪರಿಹಾರಗಳನ್ನು ಸಾಧಿಸಲು ಸಾಧ್ಯ. ಆಜ್ಯಂ ಸುರಾಣಾಂ ಆಹಾರಃ ಆಜ್ಯವೇ ದೇವತೆಗಳ ಮುಖ್ಯ ಆಹಾರವಾಗಿದೆ. ಕೆಲವೊಂದು ಕಾರ್ಯಸಿದ್ಧಿಗೆ ತುಪ್ಪದ ದೀಪವನ್ನು ಹೊತ್ತಿಸಿ ಜಾಪಾವೃತ್ತಿ ಮಾಡುವ ವಿಧಿಯಿದೆ.

ಈ ರೀತಿ ಮಾನವ ಜೀವನದ ಪುರುಷಾರ್ಥಗಳ ಸಾಧನೆಗೆ ಗೋವಿನ ಗವ್ಯಪದಾರ್ಥಗಳೇ ಸಾಧನವಗಿದ್ದು ಗೋವೇ ಜೀವಿತದ ಮೂಲವಾಗಿದೆ. ಈ ಗೋಮಾತೆಗಳಿಗೆ ಸ್ವರ್ಗತುಲ್ಯವಾದ ಗೋಲೋಕವೆಂಬ ಭವ್ಯಲೋಕವಿದೆ. ಅದರ ಅಭಿಮಾನೆ ದೇವತೆಗಳು ಗೋಮಾತೆಯರು.

ಭಗವತ ದಶಮಸ್ಕಂದದಲ್ಲಿ ಅಕ್ರೂರರು ಕಾಲಿಂದೀನದಿಯಲ್ಲಿ ಮುಳುಗಿದಾಗ ಗೋಲೋಕದರ್ಶನವಾದ ಉಲ್ಲೇಖವಿದೆ. ಗೋಲೋಕದಲ್ಲಿ ವಿರಾಡ್ರೂಪೀ ವಿಷ್ಣುವನ್ನೇ ಕಂಡು ವಿಸ್ಮಯಭರಿತನಾದುದರಿಂದ ಗೋವು ವಿಷ್ಣುಮಯವಾಗಿದೆ ಎ೦ಬ ಮತು ಇಲ್ಲಿಯೂ ಭಾಸವಾಗುತ್ತಿದೆ.

ಸಂ ತೇ ಗಾವಃ ತಮ ಆವರ್ತಯಂತಿ | ಜ್ಯೋತಿಃ ಯಚ್ಛಂತಿ || (ಋಗ್ವೇದ)

ಗೋಕುಲವು (ಗೋಸಮೂಹವು) ತಮಸ್ಸನ್ನು ಹೋಗಲಾಡಿಸಿ ಜ್ಯೋತಿಯನ್ನು ಕೊಡುತ್ತದೆ.

Leave a Reply

Your email address will not be published.