ವಿಶ್ವಮಾನ್ಯರಾದ ಶ್ರೀ ಶ್ರೀ ವಿಶ್ವೇಶತೀರ್ಥರು

ಜೀವನ ಸಾಧನೆಗಳ ಕಿರುಪರಿಚಯ

ಶ್ರೀ ವಿಶ್ವೇಶತೀರ್ಥರು
ಶ್ರೀ ವಿಶ್ವೇಶತೀರ್ಥರು

ಭಾರತೀಯದರ್ಶನಗಳಲ್ಲಿ ಒಂದಾದ ದ್ವೈತದರ್ಶನದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರು (ಕ್ರಿ.ಶ. ೧೨೩೮-೧೩೧೭) ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸಿ ಶ್ರೀಕೃಷ್ಣಪೂಜೆ ಮತ್ತು ಜ್ಞಾನಪ್ರಚಾರಕ್ಕಾಗಿ ಎಂಟು ಬಾಲವಟುಗಳಿಗೆ ಸನ್ಯಾಸದೀಕ್ಷೆ ನೀಡಿದರು. ಅವುಗಳಲ್ಲಿ ಒಂದು ಉಡುಪಿಯ ಪೇಜಾವರಮಠ. ಆಚಾರ್ಯರ ಸಾಕ್ಷಾತ್ ಶಿಷ್ಯರಾದಂತಹ ಶ್ರೀ ಅಧೋಕ್ಷಜತೀರ್ಥರು ಈ ಮಠದ ಮೊದಲ ಯತಿಗಳು. ಶ್ರೀವಿಜಯಧ್ವಜತೀರ್ಥರು, ಶ್ರೀವಿಶ್ವೇಶತೀರ್ಥರು, ಶ್ರೀವಿಶ್ವಪತಿತೀರ್ಥರಂತಹಾ ನಿಷ್ಣಾತ ಯತಿಪರಂಪರೆಯನ್ನಿತ್ತ ಪೇಜಾವರಮಠದ ೩೨ನೆಯ ಯತಿಗಳಾಗಿ ಪೀಠವನ್ನು ಅಲಂಕರಿಸಿದವರು ಶ್ರೀವಿಶ್ವೇಶತೀರ್ಥಶ್ರೀಪಾದರು.

ಯತಿದೀಕ್ಷೆ ಮತ್ತು ವಿದ್ಯಾಭ್ಯಾಸ:
ಶ್ರೀವಿಶ್ವೇಶತೀರ್ಥಶ್ರೀಪಾದರು ಜನಿಸಿದ್ದು ಕ್ರಿ.ಶ. ೧೯೩೧ ಎಪ್ರಿಲ್ ೨೭ರಂದು. ರಾಮಕುಂಜದ ಸಾತ್ವಿಕ ದಂಪತಿಗಳಾದ ಶ್ರೀನಾರಾಯಣಾಚಾರ್ಯ ಮತ್ತು ಶ್ರೀಮತಿ ಕಮಲಮ್ಮ ಇವರ ಮಕ್ಕಳಲ್ಲಿ ಶ್ರೀಪಾದರು ಎರಡೆನೆಯವರು. ಮಗುವಿಗೆ ತಂದೆ ತಾಯಿ ಇಟ್ಟ ಹೆಸರು ವೆಂಕಟರಮಣ. ವೆಂಕಟರಮಣನಿಗೆ ೬ತುಂಬಿದಾಗ ಅವನ ಸಾತ್ವಿಕ ವ್ಯಕ್ತಿತ್ವವನ್ನು ಕಂಡು ಮೆಚ್ಚಿ ಆಗಿನ ಪೇಜಾವರಮಠಾಧೀಶರಾಗಿದ್ದ ಶ್ರೀವಿಶ್ವಮಾನ್ಯತೀರ್ಥರು ಹಂಪೆಯ ಚಕ್ರತೀರ್ಥದಲ್ಲಿ (ಕ್ರಿ.ಶ. ೩-೧೨-೧೯೩೮) ಸನ್ಯಾಸದೀಕ್ಷೆ ನೀಡಿದರು. ವೆಂಕಟರಮಣ ಆಗ ವಿಶ್ವೇಶತೀರ್ಥರಾದರು.
ಬಾಲಯತಿಗಳ ಮೊದಲ ವಿದ್ಯಾಭ್ಯಾಸ ಉಡುಪಿಯಲ್ಲೇ ನಡೆಯಿತು. ಭಂಡಾರಿಕೇರಿ ಮಠಾಧೀಶರಾದ ಶ್ರೀವಿದ್ಯಾಮಾನ್ಯತೀರ್ಥರು ಶಾಸ್ತ್ರದ ಉದ್ಗ್ರಂಥಗಳನ್ನು ಸತತ ಎಂಟು ವರ್ಷ ಪಾಠ ಹೇಳಿ ತರುಣ ಯತಿಗಳನ್ನು ಪ್ರಬುದ್ಧವಿದ್ವಾಂಸರನ್ನಾಗಿಸಿದರು. ಶ್ರೀಪಾದರು ನ್ಯಾಯವೇದಾಂತಗಳಲ್ಲಿ ಅಸಾಧಾರಣ ಪ್ರಭುತ್ವವನ್ನು ಸಂಪಾದಿಸಿದರು.

ಗುರುಗಳು ಮೆಚ್ಚಿದ ಪ್ರತಿಭೆ:
ಇದು ಸಾಮಾನ್ಯರಿಗೆ ತಿಳಿಯದ ವಿಷಯ- ಶ್ರೀಗಳವರಿಗೆ ಇರುವ ಶಾಸ್ತ್ರದ ಅರಿವಿನ ಆಳ, ವಿಸ್ತಾರಗಳು ವಿದ್ವಾಂಸರನ್ನೂ ನಿಬ್ಬೆರಗಾಗಿಸುತ್ತದೆ. ಅಧ್ಯಯನಕ್ಕೆ ಒಪ್ಪುವ ಸಮಯಸ್ಫೂರ್ತಿ, ಬೌದ್ಧಿಕ ತೀಕ್ಷ್ಣತೆಗಳು ದೈವದತ್ತ ಕೊಡುಗೆ. ನ್ಯಾಯ ವೇದಾಂತನಿಷ್ಣಾತರಾದ ಕೊಚ್ಚಿಯ ಮಹಾರಾಜರು, ಪೂನಾ ವಿಶ್ವವಿದ್ಯಾಲಯದ ಕುಲಪತಿ ಶ್ರೀದತ್ತೋವಾಮನಪೊದ್ದಾರ, ಕಾಶಿಯ ವಿದ್ವಾಂಸ ಮಹಾಮಹೋಪಾಧ್ಯಾಯ ರಾಜರಾಜೇಶ್ವರಶಾಸ್ತ್ರಿ, ರಾಮಚಂದ್ರಶಾಸ್ತ್ರಿ ಖಡಂಗ, ಶ್ರೀಶೃಂಗೇರಿ ಜಗದ್ಗುರುಗಳು ಇವರಷ್ಟೇ ಅಲ್ಲದೆ ಇನ್ನೂಅನೇಕ ಪಂಡಿತರು ಶ್ರೀಗಳವರ ಪಾಂಡಿತ್ಯಕ್ಕೆ ಸೋತುಹೋದವರು. ಇವರೊಂದಿಗೆ ಶ್ರೀಗಳವರು ನಡೆಸಿದ ವಾಕ್ಯಾರ್ಥಗೋಷ್ಠಿ ಒಂದು ಐತಿಹಾಸಿಕ ದಾಖಲೆ. ತಿರುವಾರಿ ವಿಜಯೀಂದ್ರಾಚಾರ್ಯ ಮತ್ತು ಮೈಸೂರು ರಾಮಚಂದ್ರಶಾಸ್ತ್ರಿಗಳ ಜೊತೆ ನಡೆದ ಚರ್ಚೆ ಶ್ರೀವಿಶ್ವೇಶತೀರ್ಥರ ಗುರುಗಳಾದ ಶ್ರೀವಿದ್ಯಾಮಾನ್ಯ ತೀರ್ಥರನ್ನು ಬೆರೆಗುಗೊಳಿಸಿತ್ತು. ವಿದ್ವತ್ತಿನ ಜೊತೆಗೆ ಸಂದರ್ಭೋಚಿತವಾಗಿ ಆಶುಕವಿತೆಯ ಸಾಮರ್ಥ್ಯ ಕೂಡಾ ಶ್ರೀಗಳವರ ವಿಶೇಷತೆ. “ಸಾಂಬವಿಜಯ” ಎಂಬ ಸಂಸ್ಕೃತಕಾವ್ಯವನ್ನು ಶ್ರೀಗಳವರು ರಚಿಸಿದ್ದರು. ಶ್ರೀಗಳವರಿಗೆ ೨೫ ವರ್ಷವಾಗಿದ್ದಾಗ ಮೈಸೂರಿನ ಮಹಾರಾಜರು ನಂಜನಗೂಡಿನಲ್ಲಿ ನಡೆಸಿದ ಆಗಮತ್ರಯ ಸಮ್ಮೇಳನದ ಅಧ್ಯಕ್ಷತೆ ಈ ತರುಣ ತೇಜಸ್ವೀ ಯತಿಗಳ ಪಾಲಿಗೆ ಬಂತು. ಆಗಲೇ ಶ್ರೀಗಳ್ವರು ನೀಡಿದ “ನಮ್ಮ ಹೃದಯದಲ್ಲಿ ದೇವರಿಲ್ಲದಿದ್ದರೆ ನಾವು ಹಂಪೆಯ ಶೂನ್ಯ ಗುಡಿಗಳಂತೆ ಆದೇವು” ಎಂಬ ಮಾತು ನೆರೆದ ಜನರನ್ನು ರೋಮಾಂಚನ ಗೊಳಿಸಿತ್ತು.

ಶ್ರೀಗಳವರ ದೈಹಿಕ ನಿಲುವೇ ಒಂದು ಆಕರ್ಷಣೆ. ತೆಳ್ಳಗೆ ಬೆಳ್ಳಗೆ, ಸಣ್ಣಗೆ, ಪಾದರಸದಂತಹಾ ಚುರುಕಿನ ತೇಜಸ್ವಿಯಾದ ಶರೀರ. ಮಠಾಧಿಪತಿ ಎಂಬ ಅಹಂ ಇಲ್ಲದ ಸರಳ, ನಿರಾಡಂಬರ ವ್ಯಕ್ತಿತ್ವ. ಎಳೆಯ ಮಗುವಿನ ಸುಂದರ ನಗು. ಹೊಳೆವ ಕಣ್ಣುಗಳು. ಪ್ರೀತಿ, ಸಹಾನುಭೂತಿ ತುಂಬಿದ ಹೃದಯ. ದೇಶದ ಪ್ರಧಾನಿಯಿಂದ ಹಿಡಿದು ಜೋಪಡಿಯ ದಲಿತರವರೆಗೂ ಪ್ರತಿಯೊಬ್ಬರಿಗೂ ಅವರು ಬೇಕು. ಯಾರಿಗೆ ಯಾವಾಗಬೇಕೆಂದರೂ ಅವರ ದರ್ಶನ ಲಭ್ಯ. ಕರೆದಲ್ಲಿಗೆ ಓಡಿ ಬರುತ್ತಾರೆ. ರಚನಾತ್ಮಕವಾಗಿ ಸಮಾಜಸೇವೆಗೆ ಶ್ರಮಿಸುತ್ತಾರೆ. “ಸಮಾಜವೆಂಬ ಸರೋವರದ ಮೀನುಗಳು ಮಠಾಧಿಪತಿಗಳು. ನೀರು ಬಿಟ್ಟು ಮೀನು ಬದುಕದು, ಮೀನಿಲ್ಲದೆ ನೀರು ಸ್ವಚ್ಚವಾಗದು” ಇದು ಶ್ರೀಗಳವರ ಧೋರಣೆ.

ಪೂರೈಸಿದ ಹೊಣೆಗಾರಿಕೆ:
ಮನೆಯಲ್ಲಿ ಗಾಳಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಗಾಳಿ ಬಿರುಗಾಳಿಯಾಗಿ ಸೂರನ್ನೇ ಹಾರಿಸಿಕೊಂಡು ಹೋದರೆ? ಇಂದು ವಿದೇಶೀಸಂಸ್ಕೃತಿಯ ಅನುಕರಣೆ ನಮ್ಮ ಸಂಸ್ಕೃತಿಯನ್ನೇ ಹಾರಿಸಿಕೊಂಡು ಹೋಗುವ ಬಿರುಗಾಳಿಯಾಗಿದೆ. ಈ ಸತ್ಯವನ್ನು ನಲ್ವತ್ತೈದುವರ್ಷಗಳ ಮೊದಲೇ ಕಂಡುಕೊಂಡ ದೂರದರ್ಶಿಗಳು ಶ್ರೀವಿಶ್ವೇಶತೀರ್ಥರು. ತಮ್ಮ ವಿದ್ಯಾಭ್ಯಾಸ ಪೂರ್ಣವಾದ ಕೂಡಲೇ ಅವರುಕಂಡ ಕನಸು ಗುರುಕುಲಸ್ಥಾಪನೆ. ಕ್ರಿ.ಶ. ೧೯೫೬ರಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಆರಂಭಗೊಂಡಾಗ ಅವರ ಕನಸು ಸಾಕಾರಗೊಂಡಿತ್ತು. ನಮ್ಮ ಪ್ರಾಚೀನಧರ್ಮ ಸಂಸ್ಕೃತಿಗಳ ರಕ್ಷಣೆ, ದೇಶದ ಹೆಮ್ಮೆಯ ಕೊಡುಗೆಯಾದ ತತ್ವಜ್ಞಾನದ ಪ್ರಸಾರ ಈ ಉದ್ದೇಶದಿಂದ ರೂಪುಗೊಂಡ ಈ ಸಂಸ್ಥೆ ಶ್ರೀಗಳವರ ಅವಿರತ ದುಡಿಮೆಯಿಂದ ದೇಶದಲ್ಲೇ ಆದರ್ಶ ಗುರುಕುಲವಾಗಿ ಬೆಳೆಯುತ್ತಿದೆ. ನೂರಾರು ವಿದ್ವಾಂಸರನ್ನು ಯಾಜ್ಞಿಕರನ್ನೂ ಸಿದ್ಧಗೊಳಿಸಿದ ಈ ಗುರುಕುಲ ನಶಿಸಿಹೋಗಬಹುದಾಗಿದ್ದ ವಿದ್ವಾಂಸರ ಪಡೆಯನ್ನು ಹತ್ತಾರು ವರ್ಷಗಳವರೆಗೆ ಮುಂಸುವರೆಯುವಂತೆ ಮಾಡಿದೆ. ಪ್ರಕೃತ ಸುಮಾರು ೩೦೦ವಿದ್ಯಾರ್ಥಿಗಳು ಉಚಿತವಾದ ಊಟ, ವಸತಿಗಳ ಸೌಲಭ್ಯಗಳನ್ನು ಪಡೆದು ವೇದ-ಶಾಸ್ತ್ರಾಭ್ಯಾಸಗಳನ್ನು ನಡೆಸುತ್ತಿದ್ದಾರೆ. ಸಂಸ್ಥೆಯಲ್ಲೇ ತರಬೇತಿ ಪಡೆದ ಮೂವತ್ತುಮಂದಿ ವಿದ್ವಾಂಸರು ಅಧ್ಯಾಪಕರಾಗಿದ್ದಾರೆ. ತತ್ವಶಾಸ್ತ್ರದ ಅನೇಕ ಗ್ರಂಥಗಳು ಭಾಷಾಂತರಗೊಂಡು ಈ ಸಂಸ್ಥೆಯಿಂದ ಜಿಜ್ಞಾಸುಗಳಿಗೆ ಮುಟ್ಟಿದೆ. ಶ್ರೀವಿಶ್ವೇಶತೀರ್ಥರು ಒಬ್ಬ ಪೀಠಾಧಿಪತಿಗಳಾಗಿ ಈ ಮೂಲಕ ತಮ್ಮ ಅವಶ್ಯಕರ್ತವ್ಯವನ್ನು ಪೂರೈಸಿದ್ದಾರೆ. ಅವರ ಈ ಮಹೋನ್ನತ ಪ್ರಯತ್ನಕ್ಕೆ ನಾವೆಷ್ಟು ಕೃತಜ್ಞರಾದರೂ ಅಲ್ಪವೆ.

ಇದೇ ಮಾದರಿಯ ಗುರುಕುಲವನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಕಟ್ಟುವ ಸಾಹಸಕ್ಕೆ ಶ್ರೀಗಳವರು ಇಳಿದಿದ್ದಾರೆ. ಇದಕ್ಕಾಗಿ ದೆಹಲಿಪ್ರಾಧಿಕಾರ ಈಗಾಗಲೇ ಒಂದು ಎಕರೆ ವಿಸ್ತೃತಪ್ರದೇಶವನ್ನು ನೀಡಿದೆ. ಉತ್ತರಭಾರತದಲ್ಲಿ ಧರ್ಮ ಮತ್ತು ತತ್ವಜ್ಞಾನಪ್ರಸಾರಕ್ಕೆ ಇದೊಂದು ದೊಡ್ಡ ಕೇಂದ್ರವಾಗಿ ರೂಪುಗೊಳ್ಳಬೇಕೆಂದು ಅವರ ಸಂಕಲ್ಪ. ಜನಮನ ಗೆದ್ದ ಉತ್ಸಾಹಿ ಯತಿಗಳಿಗೆ ಯಾವುದುತಾನೇ ಅಸಾಧ್ಯ?

ಸಾಟಿಯಿಲ್ಲದ ಪರ್ಯಾಯ:
ಉಡುಪಿಯ ಮಠಾಧೀಶರಿಗೆ ಶ್ರೀಕೃಷ್ಣಪೂಜಾ ಪರ್ಯಾಯ ಗೌರವದ ಕಿರೀಟ. ಶ್ರೀವಿಶ್ವೇಶತೀರ್ಥಶ್ರೀಪಾದರಿಗೆ ಅದೊಂದು ಸಾಧನೆಯ ಸುದಿನ. ಕ್ರಿ.ಶ. ೧೯೫೨ ಶ್ರೀಗಳವರ ಮೊದಲ ಶ್ರೀಕೃಷ್ಣಪೂಜಾ ಪರ್ಯಾಯ. ಅನ್ನ, ಜ್ಞಾನ, ದಾನಗಳಲ್ಲಿ ಅದು ಅದ್ವಿತೀಯವೆನಿಸಿತು. ಆಗಲೇ ಮಾಧ್ವಸಮಾಜದ ಹೆಮ್ಮೆಯ ಕುರುಹಾಗಿ ಬೆಳೆಯುತ್ತಿರುವ ಅಖಿಲಭಾರತಮಾಧ್ವಮಹಾಮಂಡಳಿಯ ಸ್ಥಾಪನೆಯಾಗಿ ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ಪ್ರಥಮ ಸಮ್ಮೇಳನ ನಡೆಯಿತು. ಕ್ರಿ.ಶ. ೧೯೬೮ರ ಎರಡನೆಯ ಪರ್ಯಾಯದಲ್ಲಿ ಉಡುಪಿಯ ನೆಲೆ ಹೊಸ ಚೈತನ್ಯ ಮತ್ತು ಸ್ಫೂರ್ತಿಯನ್ನು ಪಡೆಯಿತು. ಆ ಅವಧಿಯಲ್ಲಿ ನಡೆದ ವಿಶ್ವಹಿಂದೂ ಪರಿಷತ್ತಿನ ಪ್ರಾಂತೀಯ ಸಮ್ಮೇಳನದಲ್ಲಿ ಶ್ರೀಗಳವರು ನೀಡಿದ ಧ್ಯೇಯ ವಾಕ್ಯ “ಹಿಂದವಃ ಸೋದರಾಃ ಸರ್ವೇ ನ ಹಿಂದುಃ ಪತಿತೋ ಭವೇತ್”. ಪರಿಷತ್ತಿನ ಕಾರ್ಯಕರ್ತರಿಗೆ ಇದೇ ಮಂತ್ರವಾಯಿತು. ೧೯೮೪ ರಲ್ಲಿ ಮೂರನೆಯ ಪರ್ಯಾಯದಲ್ಲೂ ಉಡುಪಿಯ ಭಾಗ್ಯದ ಬಾಗಿಲು ತೆರೆದಿತ್ತು. ಈ ಮೂರು ಪರ್ಯಾಯದ ಅವಧಿಯಲ್ಲಿ ಉಡುಪಿಯ ಒಟ್ಟಂದವೇ ಬದಲಾಯಿತು.

ಕ್ರಾಂತಿಕಾರಕ ದಿಟ್ಟ ಹೆಜ್ಜೆ:
ದಲಿತವರ್ಗವನ್ನು ನಮ್ಮ ಹಿಂದೂ ಸಮಾಜದ ಬಾಂಧವರನ್ನಾಗಿ ಪರಿಗಣಿಸಿದ ಮೊದಲ ಪೀಠಾಧಿಪತಿ ಶ್ರೀವಿಶ್ವೇಶತೀರ್ಥರು. ಸಾಂಪ್ರದಾಯಿಕ ಅಸ್ಪೃಶ್ಯಧೋರಣೆಯ ಹಿನ್ನೆಲೆಯನ್ನು ಮಾನವೀಯತೆಯ ದೃಷ್ಟಿಯಲ್ಲಿ ಪರಿಶೀಲಿಸಿ ಅವರಿಟ್ಟ ದಿಟ್ಟ ಹೆಜ್ಜೆ ಒಂದು ಕ್ರಾಂತಿಯಾಯಿತು. “ನಮ್ಮ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕ್ರೈಸ್ತಮುಸಲ್ಮಾನರಿಗಿರುವ ಅವಕಾಶ ದಲಿತರಿಗಿದೆಯೇ? ಅವರು ಮತಾಂತರಗೊಂಡು ಬಂದಾಗ ನಾವು ಅವರನ್ನು ಅಸ್ಪೃಶ್ಯರೆಂದು ಪರಿಗಣಿಸುವುದಿಲ್ಲ. ಹಾಗಾದರೆ ಅವರನ್ನು ಆತ್ಮೀಯತೆಯಿಂದ ಕಾಣುವ ಗುಣ ಇತರ ಮತೀಯರಿಗಿದೆ. ನಮಗೆ ಮಾತ್ರ ಇಲ್ಲವೆಂದು ಒಪ್ಪಿಕೊಂಡಂತಾಗಲಿಲ್ಲವೇ? ನಮ್ಮ ಧರ್ಮಕ್ಕೆ, ಸಮಾಜಕ್ಕೆ ಇದಕ್ಕಿಂತ ಬೇರೆ ದೊಡ್ಡ ಅವಮಾನವಿದೆಯೇ?” ಶ್ರೀಗಳವರ ಈ ಯಥಾರ್ಥ ಧೋರಣೆ ಸಾಂಪ್ರದಾಯಿಕರ ಕಣ್ಣು ತೆರೆಸಿತು. ತಮಿಳುನಾಡಿನ ಮೀನಾಕ್ಷೀಪುರಂನಲ್ಲಿ ದಲಿತರ ಸಾಮೂಹಿಕ ಮತಾಂತರದ ಅವಾಂತರ ಶೀಗಳವರ ಭೇಟಿಯಿಂದ ಪರಿಣಾಮಕಾರಿಯಾಗಿ ತಡೆಯಲ್ಪಟ್ಟಿತು. ಕಟು ವಿರೋಧವನ್ನು ಶ್ರೀಗಳವರು ನಗುಮೊಗದಿಂದ ಗೆದ್ದರು. ಹಿಂದೂ ಸಮಾಜದ ಬಲವನ್ನು ಹೆಚ್ಚಿಸಿದರು.

ದೇವರಿಗೆ ನೀಡಿದ ಸುಂಕ:
“ನಾನಾಜನಸ್ಯ ಶುಶ್ರೂಶಾ ಕರ್ಮಾಖ್ಯಾ ಕರವನ್ಮಿತೇಃ”- ಎಂಬಮಾತಿನಂತೆ ನೊಂದ ಜನರ,ಸಮಾಜದ ಸೆವೆ ದೇವರಿಗೆ ನಾವು ಸಲ್ಲಿಸಬೇಕಾದ ಸುಂಕ ಇದು ನಮ್ಮ ಪ್ರಾಚೀನರು ನೀಡಿದ ಸಂದೇಶ. ಇದನ್ನು ಜೀವನದ ಉಸಿರಾಗಿ ಮಾಡಿಕೊಂಡ ಶ್ರಿವಿಶ್ವೇಶತೀರ್ಥರು ಪಾದಪೂಜೆ,ಭಿಕ್ಷೆ,ಮಡಿ,ಆಚಾರಗಳಿಗೆ ಮಾತ್ರ ಸೀಮಿತವಾದ ಮಠೀಯ ಕ್ಷೇತ್ರವನ್ನು ವಿಸ್ತರಿಸಿ ತಮನ್ನು ಅನೇಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕ್ರಿ.ಶ. ೧೯೭೫ರಲ್ಲಿ ಗುಲ್ಬರ್ಗದಲ್ಲಿ ಕ್ಷಾಮ ತಲೆ ದೋರಿದಾಗ ಸರಕಾರಕ್ಕಿಂತಲೂ ಮೊದಲು ಗಂಜಿಕೇಂದ್ರ ತೆರೆದು ಜನರನ್ನು ಸಾಂತ್ವನಗೊಳಿಸಿದರು. ಆಂಧ್ರದ ಹಂಸಲದಿವಿಯಲ್ಲಿ ಬಿರುಗಾಳಿ ಬೀಸಿದಾಗ ನಿರ್ವಸಿತರಾದ ಸಾವಿರಾರು ಜನರಿಗೆ ೧೫೦ ಮನೆಗಳನ್ನು ಕಟ್ಟಿಸಿಕೊಟ್ಟರು. ಲಾತೂರಿನಲ್ಲಿ ಭೂಕಂಪ ಸಂತ್ರಸ್ತರಿಗೆ ಪುನರ್ವಸತಿಯನ್ನು ನಿರ್ಮಿಸಿಕೊಟ್ಟರು. ಈ ಸಾಮಾಜಿಕ ಕಾರ್ಯಗಳಿಗೆ ಉರಿಬಿಸಿಲಿನಲ್ಲಿ ಬೀದಿಬೀದಿಗಳಲ್ಲಿ ಪಾದಯಾತ್ರೆಗೆ ಹೊರಟ ಶ್ರೀಗಳವರನ್ನು ಜನ ನಿಬ್ಬೆರಗಾಗಿ ನಿಂತು ಸ್ವಾಗತಿಸಿದರು. ಇವರಲ್ಲಿ ಕೊಟ್ಟ ದೇಣಿಗೆ ಸೋರಿ ಇಂಗದೆ ಸರಿಯಾದ ಗುರಿಮುಟ್ಟುವುದೆಂಬ ದೃಢವಿಶ್ವಾಸ. ಇಂತಹಾ ನೊಂದ ಜನರ ಸೇವೆಗಳಿಗಾಗಿಯೇ “ಜನತಾ ಕಲ್ಯಾಣ ನಿಧಿಯೊಂದನ್ನು” ಶ್ರೀಗಳವರು ಸ್ಥಾಪಿಸಿದ್ದಾರೆ.

ಬಡರೋಗಿಗಳ ಸೇವೆಯೂ ಭಗವಂತನ ಆರಾಧನೆ. ಬೆಂಗಳೂರಿನ ಶ್ರೀಕೃಷ್ಣ ಸೇವಾಶ್ರಮ ೫೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ.ಕಂಪ್ಯೂಟರ್ ವಿಭಾಗವನ್ನೊಳಗೊಂಡ ಈ ಸೇವಾಶ್ರಮ ಬಡವರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಉಡುಪಿಯ ಶ್ರೀಕೃಷ್ಣ ಚಿಕಿತ್ಸಾಲಯವೂ ಇದೇ ಕಾರ್ಯದಲ್ಲಿ ತೊಡಗಿದೆ. ಶ್ರೀಕೃಷ್ಣ ಸೇವಾಧಾಮ ಅನಾಥಮಕ್ಕಳನ್ನು ಪೋಷಿಸುವ ಕೇಂದ್ರ. ಇವು ಶ್ರೀವಿಶ್ವೇಶತೀರ್ಥರು ನಡೆಸುತ್ತಿರುವ ರೋಗಿಗಳ ಶುಶ್ರೂಷೆಗೆ ನಿದರ್ಶನಗಳು.

ವೈದಿಕ ಶಿಕ್ಷಣದ ಜೊತೆಗೆ ಲೌಕಿಕ ವಿದ್ಯಾಭ್ಯಾಸಕ್ಕೂ ಅನುವು ಮಾಡಿಕೊಟ್ಟಿರುವ ಶ್ರೀವಿಶ್ವೇಶತೀರ್ಥರು ಸಿದ್ಧಾಪುರದಲ್ಲಿ ಕಲೆ,ವಿಜ್ಞಾನ,ವಾಣಿಜ್ಯ ವಿಷಯಗಳ ಪದವಿ ವಿದ್ಯಾಲಯದ ಜೊತೆಗೆ ಆಯುರ್ವೇದ ವಿದ್ಯಾಲಯವನ್ನು ನಡೆಸುತ್ತಿದ್ದಾರೆ. ಹುಟ್ಟೂರು ರಾಮಕುಂಜದಲ್ಲಿ ಪ್ರಾಥಮಿಕ ಹಂತದಿಂದ ಪದವಿಪೂರ್ವ ತರಗತಿಗಳವರೆಗಿನ ವಿದ್ಯಾಸಂಸ್ಥೆ ಆದರ್ಷವಾಗಿ ಬೆಳೆದು ಬಂದಿದೆ. ಇದಲ್ಲದೆ ಇವರ ಮಾರ್ಗದರ್ಶನದಲ್ಲಿ ಹತ್ತಾರು ಇಂತಹಾ ಶಾಲಾಕಾಲೇಜುಗಳು ನಡೆಯುತ್ತಿವೆ.

ದೇವರೆಡೆಗೆ ಒಯ್ದವರು:
ತೀರ್ಥಯಾತ್ರೆಗೆ ಆಧ್ಯಾತ್ಮಿಕ ಸಾಧನೆಯ ರಂಗದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ಆದರೆ ವ್ಯಾಪಾರೀಕೇಂದ್ರಗಳಾಗಿರುವ ಇಂದಿನ ತೀರ್ಥಕ್ಷೇತ್ರಗಳಲ್ಲಿ ಭಕ್ತರ ಸುಲಿಗೆ ನಡೆಯುತ್ತಿದೆ. ಶುದ್ಧವಾದ ಆಹಾರದ ಸೌಲಭ್ಯವಿಲ್ಲ. ಇದನ್ನು ಮನಗಂಡ ಶ್ರೀಗಳವರು ತೀರ್ಥಕ್ಷೇತ್ರಗಳಲ್ಲಿ ಯಾತ್ರಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸಂಕಲ್ಪಿಸಿದರು. ಈ ಕೈಂಕರ್ಯ ಮೊದಲ್ಗೊಂಡಿದ್ದು ಹಿಮಾಲಯದ ಪವಿತ್ರಕ್ಷೇತ್ರ ಬದರಿಯಿಂದ. ೫೦ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಲ್ಲಿ ನಿರ್ಮಿಸಲ್ಪಟ್ಟ ಅನಂತಮಠ ದಕ್ಷಿಣ ಭಾರತದ ಯಾತ್ರಿಕರಿಗೆ ತವರು ಮನೆಯ ಸೌಲಭ್ಯ ನೀಡುತ್ತಿದೆ. ಕೋಟಿ ರುಪಾಯಿ ಬೆಲೆಬಾಳುವ ತಿರುಪತಿಯ ಉಡುಪಿಮಠ ತಿಮಪ್ಪನ ದರ್ಶನಾರ್ಥಿಗಳಿಗೆ ಆಸರೆ ನೀಡುತ್ತದೆ. ೧೯೯೬ರಲ್ಲಿ ಹರಿದ್ವಾರದಲ್ಲಿ ೪೦ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಧ್ವಾಶ್ರಮ ಬದರೀ ಯಾತ್ರಿಕರಿಗೆ ದಾರಿದೀಪವಾಗಿದೆ. ಇದೇ ಮಾದರಿಯಲ್ಲಿ ರಾಮೇಶ್ವರ, ವೃಂದಾವನ,ಜಗನ್ನಾಥಪುರಿ,ಕಾಶೀ ಕ್ಷೇತ್ರಗಳಲ್ಲೂ ಯಾತ್ರಿಕರ ವಸತಿ ಗೃಹಗಳು ನಿರ್ಮಾಣಗೊಳ್ಳಲಿದ್ದು ಅದಕ್ಕೆ ಬೇಕಾದ ನಿವೇಶನವನ್ನು ಈಗಾಗಲೇ ಖರೀದಿಸಲಾಗಿದೆ. ಇದಲ್ಲದೇ ಭುವನೇಶ್ವರ, ನಾಗಪುರ, ಚೆನ್ನೈ, ಬೆಂಗಳೂರು, ಮೈಸೂರು, ಹಾಸನ ಮೊದಲಾದ ನಗರಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿ ಆಸ್ತಿಕ ಜನತೆಗೆ ಧಾರ್ಮಿಕ ಕಾರ್ಯಗಳನ್ನು ನಡೆಸಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಸೆರೆಮನೆಗೂ ಸಿದ್ಧವಾದ ಗುರುಮನೆ:
“ಮಠಾಧಿಪತಿಗಳು ರಾಷ್ಟ್ರದ ನಾಗರಿಕರಾದುದರಿಂದ ಅವರಿಗೂ ಉಳಿದವರಿಗಿರುವ ರಾಜಕೀಯ ಹಕ್ಕುಗಳಿವೆ” ಎನ್ನುವ ಶ್ರೀಪಾದರು ೧೯೭೭ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಕ್ರಮವನ್ನು ವಿರೋಧಿಸಿ ಪತ್ರವನ್ನು ಬರೆದಿದ್ದರು. “ನನ್ನ ಧಾರ್ಮಿಕ ಅನುಷ್ಠಾನಗಳಿಗೆ ಅಡಚಣೆಯಾಗದಿದ್ದರೆ ಸೆರೆಮನೆ ಸೇರಲೂ ಸಿದ್ಧ” ಎಂಬ ಧೋರಣೆಯ ಶ್ರೀಪಾದರು ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಯಾವ ಸಂಘ ಸಂಸ್ಥೆಗಳ ಒತ್ತಾಯಕ್ಕೂ ಮಣಿಯದೇ ತಮ್ಮದೇ ಆದ ಸೌಹಾರ್ದ ಸೂತ್ರವೊಂದನ್ನು ಶ್ರಿಗಳವರು ಮುಂದಿಟ್ಟಿದ್ದಾರೆ. ಕಾರವಾರ, ನಂದಿಕೂರುಗಳಲ್ಲಿ ಕೈಗಾರಿಕಾ ಕ್ರಾಂತಿಯ ನೆಪದಿಂದ ಪರಿಸರನಾಶವಾಗುವ ಸಂದರ್ಭದಲ್ಲಿ ಸಾರ್ವಜನಿಕ ಪ್ರತಿಭಟನೆಯ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದಾರೆ.

ಸ್ವಾರ್ಥ ಬಿಟ್ಟ ಕರ್ಮಯೋಗಿ:
ಜಪ,ತಪಾನುಷ್ಠಾನಗಳಿಂದ ವೈಯಕ್ತಿಕ ಸಾಧನೆಗಳಿಗೆ ಹೆಚ್ಚು ಒತ್ತು ನೀಡಿರುವ ಮಠಮಾನ್ಯಗಳ ಬಿಗಿಪಟ್ಟನ್ನು ಸಡಿಲಿಸಿ ಸಮಾಜಕ್ಕೆ ಧುಮುಕಿದ ಧೀರ ಶ್ರೀವಿಶ್ವೇಶತೀರ್ಥರು. ಅಂದಮಾತ್ರಕ್ಕೆ ಯತಿಧರ್ಮಾನುಷ್ಠಾನವನ್ನು ಗೌಣವಾಗಿಸಿದರೆಂದಲ್ಲ. ಅದಕ್ಕೆ ಚ್ಯುತಿಬರದಂತೆ ನಿರಂತರ ಸಂಚಾರದಲ್ಲೂ ಪಾಠಪ್ರವಚನಗಳನ್ನು ಬಿಡದೆ ಸಾಧಿಸಿ ಭೂತವರ್ತಮಾನಗಳಿಗೆ ಆಧುನಿಕ ಸ್ವರ್ಣ ಸೆತುವೆಯಾಗಿ ನಿಂತ ಸುಧಾರಕರು ಅವರು. ಕುಂದಿಲ್ಲದ ಅಖಂಡ ಬ್ರಹ್ಮಚರ್ಯವೇ ಅವರ ಒಂದು ದೊಡ್ಡ ಸಾಧನೆ.

“ಮನೆಯ ತುಂಬ ಸಾಮಾನು. ಒಂದೊಂದು ಕೋಣೆ ಒಂದೊಂದಕ್ಕೆ ಮೀಸಲು. ಆದರೆ ದೀಪಕ್ಕೆ ಬೇರೆಯೇ ಕೋಣೆ ಇದೆಯೇ” ಎಂದು ಕೇಳುವ ಶ್ರೀಗಳು ತಮ್ಮೆಲ್ಲ ಕಾರ್ಯಗಳನ್ನು ಧಾರ್ಮಿಕ ಹಿನ್ನೆಲೆಯಲ್ಲಿಯೇ ಅರಗಿಸಿಕೊಂಡವರು. ದೇವರನ್ನು ಕಲ್ಲಿನ ಗುಡಿಗಷ್ಟೇ ಸೀಮಿತಗೊಳಿಸದೆ ಭಗವಂತನ ಸೃಷ್ಠಿಯ ಜಡ ಚೇತನಗಳನ್ನೇ ದೇಗುಲವನ್ನಾಗಿ ಕಂಡುಕೊಂಡ ಕರ್ಮಯೋಗಿ. ಅವರಿಟ್ಟ ಒಂದೊಂದು ಹೆಜ್ಜೆಯೂ ಭಗವಂತನ ಪೂಜೆ. ಏಕೆಂದರೆ ಅದರಲ್ಲಿ ಸ್ವಾರ್ಥದ ಸೋಂಕಿಲ್ಲ. ಅವರು ಒಬ್ಬ ವ್ಯಕ್ತಿಯಲ್ಲ, ಒಂದು ಸಮಾಜ. ಹೀಗೆ ಏಳುವರ್ಷದ ಹರೆಯದಿಂದ ೭೦ ವರ್ಷಗಳ ಇಳಿವಯಸ್ಸಿನವರೆಗೂ ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಶ್ರೀವಿಶ್ವೇಶತೀರ್ಥರನ್ನು ಸಮಾಜ ಎಂದೂ ಮರೆಯದು, ಮರೆಯಬಾರದು.

74 thoughts on “ವಿಶ್ವಮಾನ್ಯರಾದ ಶ್ರೀ ಶ್ರೀ ವಿಶ್ವೇಶತೀರ್ಥರು

  1. I used to be highly regardful of Sri Swamiji, just by knowing him as a senior pontiff and spiritual guru of Sri Krishnamatha paramparya. Now, after reading this, I am feeling so proud of having had his dharshan and his presence in my house and his blessings. He is more than a mere saint, he is the real human! Once again my namaskaras to him!

  2. I would like to mention the kindness of Sri Pejavara Sri and his mentor,another great Yogi,Sri Sri VidyamanyaTeertha displayed on 27th November,1964 the day of my father’s demise when I was just 13 year old.
    On the previous day Sri VidyamanyaTeertha at my critically ailing father’s desire to have Gurupadesha, came to our house and uttered the Upadesha mantra in the ears of my father. May be , my father had visualised that his end was imminent and too close and himself being an upright and devout Brahmin desired that the Pranavopadesha from a good soul should preceed his death. VidyamanyaTeertha left the town the same evening.
    The following day, on the 27th my father breathed his last at a moment I was entering the house with a pot of water from a well about a kilometer away as was the daily routine in the absence of tap water those days. It appeared as if he had held his last breath awaiting my return from the well. I could pour some water in his mouth and immediately at once he was no more. My elder aged then 15 was however dispatched by the early hour bus to a village 20 Kim’s away to bring my paternal aunt and her son as the death of my father was anticipated any moment.
    My father as said earlier was an upright teacher and was respected by all in the town.
    On hearing the news of my father’s death, the Pejavara Swamiji who had just arrived in the town sent his car to the village where my brother had gone to bring him back.

  3. I would like to mention the kindness of Sri Pejavara Sri and his mentor,another great Yogi,Sri Sri VidyamanyaTeertha displayed on 27th November,1964 the day of my father’s demise when I was just 13 year old.
    On the previous day Sri VidyamanyaTeertha at my critically ailing father’s desire to have Gurupadesha, came to our house and uttered the Upadesha mantra in the ears of my father. May be , my father had visualised that his end was imminent and too close and himself being an upright and devout Brahmin desired that the Pranavopadesha from a good soul should preceed his death. VidyamanyaTeertha left the town the same evening.
    The following day, on the 27th my father breathed his last at a moment I was entering
    the house with a pot of water from a well about a kilometer away as was the daily routine in the absence of tap water those days. It appeared as if he had held his last
    breath awaiting my return from the well. I could pour some water in his mouth and
    immediately at once he was no more. My elder aged then 15 was however dispatched by
    the early hour bus to a village 20 Kim’s away to bring my paternal aunt and her son as
    the death of my father was anticipated any moment.
    My father as said earlier was an upright teacher and was respected by all in the town.
    On hearing the news of my father’s death, the Pejavara Swamiji who had just arrived in
    the town sent his car to the village where my brother had gone to bring him back.
    Such was the kindness of the Swamijis which I hold with all the reverence in my memory all my life.

    Jayateerth

  4. Sri gurubhonamaha hari om,

    Great to see such old photos. Good collections.
    without his blessings madhwa would have not even got respect in this cosmopolitan world.
    I remember once when conducted chathurmasa in mysore he had visited bovi colony (socally backward people comunity colony) and had fruits as his food on that day with them and contributted money from mat tresury for drinking water arrangaements for those people.

    great contributor for society and people welfare.

    Sri krishnarpanamastu

  5. the revered is simply phenomenal.
    His grace, simplicity, higher intelligence, great wisdom creates a myriad of experience in one’s mid.
    the rare photos of the Shri is simply great.

  6. Great Yati !!! i am very lucky to still have his phala mantrakshate, as i stay close to vidyapeetha, i also treat as my spiritual guru his guru sri vidyamanya teertharu, who is a big tapasvi…… nice photos, please upload more, if you have…..sri krishnarpanamastu

  7. His Holiness, Swamji’s persona & aura is simply majestic. I have fond memories of having the privilege to receive his holiness blessings at Pejavar matha Santacruz; Mumbai as a youngster.The time spent in his blessings are still embedded in my eyes.
    Koti koti pranaam.

  8. Guruvina gulaamanaaguva tanaka doreyadanna mukuti ..
    Parara poojya Shreegalige anantaananta namaskaaragala..
    Just like Raghavendara swamiji, Shreegalu revived Madhva mata..
    Satyam param Dheemahi ..

  9. Biography covers the achievements and accolades till he was 80. Needs updation from them onwards.
    Anyway very great work and worth preserving.

  10. we don’t have children in this site I did not get ph no of Krishna seva dhama ashram for orphanage I am willing to do some thing for our children so please help me out for finding no. And I want to know that can I adopt a 10 yr child legally as my husband is a government servant and we are well of to take care of child.
    Your’s faithfully
    sridevi Srivatsa

  11. Let shri Vishvesha tirtha samiji live long blessing Madhva community.

  12. Sri Pejavara Shreegalu sakala brahmana samudayakka seridavaru hagoo avarige yella parampareya shishyandiriddare. Avaru sakalarigoo saha poojyaniyare. Srigalu yendigoo Sringeri Jagadgurugalondige vaada madilla hagoo ‘defeated’ yennuva padavannu blog nalli upayogisiddhu seriyilla. Avaru yava Sringeri Jagadgurugalondige vaada maadidaru, yelli hagoo yava vishayakke yendu yarigoo thiliyada vishaya. Ella salladdu prachara maadabaradu.

    Dhanyavadagalu.

    Ram Ram.

    ananda

  13. Excellent. In fact my father Late G.N. Doreseamy was Municipal Commissioner at Udipi Town Municipal Council during 1970’s Sri pejavar Swamiji was the paryayaswamiji. My father had a good contact with swamiji.we all had high regards’ to swamiji

  14. SRI GURUBHYO NAMAHA !!!!

    ONE OF GREAT SEER OF ALL TIME, HANDLING PARYAYA FOR 5TH TIME AFTER SODE VADIRAJA THEERTHARU.

    HARE SRINIVASA

  15. Utmost respects to Pejawara Shri. Swami u r well known for Caste less Society. Unfortunately I had a very bad experience at yr Udupi mutt by a food serving boy by name JOSHI aged around 20. When I entered BHOJANA SHALA by around 8 PM he harshly told me that this Bhojana Shala is meant for BRAHMINS ONLY. I revealed my identity ( ex JD GOK ). Inspite of it he has abused and man handled and pushed me out at this 70 age of mine. A security person by name ANIL a Christian helped me out. I am getting treated SDM AYUREDA HOSPITAL UDYAVARA. I am from Shivamogga and a Brahmin by my ways of living from childhood. This boy Joshi abused me that I am drunken. For yr kind information I have taken CHITRAKASHVA LIQUID MEDICINE for my KNEE AND BACK ACHE. Later I came to know that he is from Bihar. In fact he was waiting near Chappal stand to beat me. Security has rescued me. In a fit of rage I was forced to utter harsh words. With great pains I reached back hospita and could not come out of Auto as my knees were not co operating. Speeching great thing and does not practicing is not a good part on you. Hope u will correct and suitable immediate action and reply to this old man. My res address is Prabhudev M S HIG 52 PRAMODA NILAYA HUDCO 2ND STAGE SHIVAMOGGA 577204. My contact number is 8217448533 and 08182 266631. If I do not get reply in person by any of your confidant I have to take suitable action.

  16. ಶುಭ ಸುಪ್ರಭಾತ. ಗುರುಗಳೆ ಈ ವರಗೆ ನಿಮ್ಮ ಕಡೆಯಿಂದ ಉತ್ತರ ಬಂದಿಲ್ಲ.

  17. Arya! my Wife’s Brother.. Telidevarapalli Raghava, A vaidiki Brahmin and an employee in Electricity Department at Machilipatnam, Krishna District,. AP. . What happened We donot know, last 3 years he is not going to his office. If he is not joining to his job by November 2019, his job may go. He is quarrelling with all people. His DOB 21-02-1987, Saturday, Astami, Night 10:55, Anuradha Nakshatram, Harithasa Gothram. Place of Birth: Vijayawada, AP Please help us and save the life of a poor brahmin. plz do needful to us. thank u very much. sorry for my english. Cell: 9441752866

  18. Yesterday(29-12-2019) at arround 7pm, while driving back to Davangere suddenly it began to rain in Hosanagar…for a moment i didn’t get why it was raining..since there was no clue of raining or any petrichor… Then i got to know about *Shri Vishwesha Theertha Swamiji* has breathed his last….. See even Mother Nature was also overwhelmed with grief….

Leave a Reply

Your email address will not be published.