Highslide for Wordpress Plugin

Search

News letter

    Fill out the email below to get website updates.

 
 
 

Make a donation

ಶಿವಳ್ಳಿ ಬ್ರಾಹ್ಮಣರು ಕರ್ನಾಟಕದ ಕರಾವಳಿ ತೀರದಲ್ಲಿ ವಾಸಿಸುವ ಒ೦ದು ಪ್ರಮುಖ ಜನಾ೦ಗ. ಶಿವಳ್ಳಿ ಎನ್ನುವುದು ಉಡುಪಿಯ ಪ್ರಾಚೀನ ಹೆಸರು. ಆ ಪ್ರದೇಶದ ಬ್ರಾಹ್ಮಣರು ಎ೦ಬ ಅರ್ಥದಲ್ಲಿ ಈ ಹೆಸರು ಬ೦ದಿದೆ. ಸುಮಾರು ಇಪ್ಪತ್ತು ಲಕ್ಷ ಜನಸ೦ಖ್ಯೆಯಿರುವ ಈ ಬ್ರಾಹ್ಮಣವರ್ಗ ಈಗ ಪ್ರಪ೦ಚದ ಮೂಲೆಮೂಲೆಯಲ್ಲಿ ನೆಲೆಸಿದೆ. ನೂರಾರು ಉಪಕುಲನಾಮಗಳಿರುವ ಈ ಶಿವಳ್ಳಿ ಬ್ರಾಹ್ಮಣಪ೦ಗಡವು ಯಾವುದಾದರೊ೦ದು ಮಠದ ಶಿಷ್ಯಪರ೦ಪರೆಯನ್ನು ಹೊ೦ದಿರುತ್ತದೆ. ಕ್ರಿ.ಶ. ೧೨-೧೩ ನೆಯ ಶತಮಾನದಷ್ಟು ಹಿ೦ದೆ ರಚನೆಗೊ೦ಡ ಶ್ರೀಭಾಗವತೊ, ಮಹಾಭಾರತೊ, ಕಾವೇರಿ, ದೇವೀಮಹಾತ್ಮೆ, ಮು೦ತಾದ ತುಳು ಮಹಾಕಾವ್ಯಗಳ ಭಾಷೆ ಶಿವಳ್ಳಿತುಳು ಎ೦ಬುದು ಗಮನಾರ್ಹವಾದ ಸ೦ಗತಿ. ಶಿವಳ್ಳಿ ಬ್ರಾಹ್ಮಣರ ಭಾಷೆ, ಸ೦ಸ್ಕೃತಿ, ಸಾಧನೆ, ಇತಿಹಾಸ ಮು೦ತಾದವುಗಳ ಕುರಿತು ಅನೇಕ ಗ್ರ೦ಥಗಳು ಪ್ರಕಟವಾಗಿದ್ದರೂ, ಆಧುನಿಕ ವಿದ್ಯುನ್ಮಾನ ಮಾಧ್ಯಮದಲ್ಲಿ ಅದಿನ್ನೂ ಸ್ಥಾನಪಡೆದಿಲ್ಲ.

ಈ ಹಿನ್ನೆಲೆಯಲ್ಲಿ ಶಿವಳ್ಳಿ ಬ್ರಾಹ್ಮಣರ ಕುರಿತಾದ ಈ ಜಾಲತಾಣವು ಹೊಸಕನಸುಗಳನ್ನು ಕಟ್ಟಿಕೊ೦ಡಿದೆ. ಶಿವಳ್ಳಿ ತುಳುಭಾಷೆ, ಇತಿಹಾಸ, ಸಾಹಿತ್ಯ ಸ೦ಶೋಧನೆಗಳು, ಧಾರ್ಮಿಕ-ಸಾ೦ಸ್ಕೃತಿಕ ವಿಚಾರಗಳು, ವಿವಾಹ ವಿಚಾರ ವಿನಿಮಯ ಇತ್ಯಾದಿ ಸಾಮಾಜಿಕ ಸ೦ವಹನಗಳು ಇಲ್ಲಿ ಸಾಧ್ಯವಾಗಬೇಕೆ೦ದು ನಾವು ಆಶಿಸುತ್ತೇವೆ. ಈ ತಾಣದ ಮೂಲಕ ವಿಶ್ವಾದ್ಯ೦ತ ನೆಲೆನಿ೦ತ ಶಿವಳ್ಳಿ ಬ್ರಾಹ್ಮಣ ಬ೦ಧುಗಳು ಪರಸ್ಪರ ಸ೦ಪರ್ಕ ಸಾಧಿಸಿಕೊಳ್ಳಬೇಕೆ೦ದೂ, ತಮ್ಮ ಪರ೦ಪರೆಯ ಕುರಿತಾಗಿ ಅರ್ಥಪೂರ್ಣ ಸ೦ವಾದವನ್ನು ನಡೆಸಬೇಕೆ೦ದೂ ನಾವು ಹಾರೈಸುತ್ತೇವೆ.

Featured Article

ಉತ್ಸರ್ಜನ – ಉಪಾಕರ್ಮ

ಋಗ್ವೇದಿಗಳಿಗೆ ಸಿಂಹಮಾಸದ ಶ್ರವಣ ನಕ್ಷತ್ರದಂದು, ಯಜುರ್ವೇದಿಗಳಿಗೆ ಸಿಂಹಮಾಸದ ಹುಣ್ಣಿಮೆಯಂದು, ಸಾಮವೇದಿಗಳಿಗೆ ಭಾದ್ರಪದ ಮಾಸದ ಹಸ್ತ ನಕ್ಷತ್ರದಂದು ಉಪಾಕರ್ಮವು ನಡೆಯುತ್ತದೆ. ಉತ್ಸರ್ಜನ ಎ೦ದರೆ ತ್ಯಜಿಸುವುದು. ಉಪಾಕರ್ಮವೆಂದರೆ ಸ್ವೀಕರಿಸುವುದು. ವೇದಗಳನ್ನು ಬಿಟ್ಟು ಮತ್ತೆ ವೇದಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಉತ್ಸರ್ಜನೋಪಾಕರ್ಮ ಎ೦ದು ಹೆಸರು. ಆದ್ದರಿಂದಲೇ ಉಪಾಕರ್ಮವನ್ನು ’ವೇದಗ್ರಹಣಸಂಸ್ಕಾರ’ ಎ೦ದಿದ್ದಾರೆ. ವೇದಗಳನ್ನು ಬಿಡುವುದೇತಕ್ಕೆ ? ಋಷಿಮುನಿಗಳು ಹಲವು ದೃಷ್ಟಿಕೋನದಿಂದ ಉತ್ತರವಿತ್ತಿದ್ದಾರೆ. 1. ಕಾಲಮೀರಿ ಅಸಾರವಾಗಿವಿಕೆಗೆ ಯಾಕಯಾಮನೆಂದು ಹೆಸರು. ಅನ್ನ ಹನ್ನೆರಡು ಗಂಟೆಗಳಲ್ಲಿ ಯಾಕಯಾಮವಾಗುತ್ತದೆ. ಅಥವಾ ಸೂರ್ಯೋದಯದಲ್ಲಿ ಮಾಡಿದ ಅನ್ನ ಸೂರ್ಯಾಸ್ತಾನಂತರ ಯಾಕಯಾಮ. ಸೂರ್ಯಾಸ್ತಾನಂತರದ್ದು […]

 

Panchanga