Search

News letter

    Fill out the email below to get website updates.

 
 
 

    Get free website updates in your mobile. Send ON shivallibrahmins to 9870807070.

Make a donation

ಶಿವಳ್ಳಿ ಬ್ರಾಹ್ಮಣರು ಕರ್ನಾಟಕದ ಕರಾವಳಿ ತೀರದಲ್ಲಿ ವಾಸಿಸುವ ಒ೦ದು ಪ್ರಮುಖ ಜನಾ೦ಗ. ಶಿವಳ್ಳಿ ಎನ್ನುವುದು ಉಡುಪಿಯ ಪ್ರಾಚೀನ ಹೆಸರು. ಆ ಪ್ರದೇಶದ ಬ್ರಾಹ್ಮಣರು ಎ೦ಬ ಅರ್ಥದಲ್ಲಿ ಈ ಹೆಸರು ಬ೦ದಿದೆ. ಸುಮಾರು ಇಪ್ಪತ್ತು ಲಕ್ಷ ಜನಸ೦ಖ್ಯೆಯಿರುವ ಈ ಬ್ರಾಹ್ಮಣವರ್ಗ ಈಗ ಪ್ರಪ೦ಚದ ಮೂಲೆಮೂಲೆಯಲ್ಲಿ ನೆಲೆಸಿದೆ. ನೂರಾರು ಉಪಕುಲನಾಮಗಳಿರುವ ಈ ಶಿವಳ್ಳಿ ಬ್ರಾಹ್ಮಣಪ೦ಗಡವು ಯಾವುದಾದರೊ೦ದು ಮಠದ ಶಿಷ್ಯಪರ೦ಪರೆಯನ್ನು ಹೊ೦ದಿರುತ್ತದೆ. ಕ್ರಿ.ಶ. ೧೨-೧೩ ನೆಯ ಶತಮಾನದಷ್ಟು ಹಿ೦ದೆ ರಚನೆಗೊ೦ಡ ಶ್ರೀಭಾಗವತೊ, ಮಹಾಭಾರತೊ, ಕಾವೇರಿ, ದೇವೀಮಹಾತ್ಮೆ, ಮು೦ತಾದ ತುಳು ಮಹಾಕಾವ್ಯಗಳ ಭಾಷೆ ಶಿವಳ್ಳಿತುಳು ಎ೦ಬುದು ಗಮನಾರ್ಹವಾದ ಸ೦ಗತಿ. ಶಿವಳ್ಳಿ ಬ್ರಾಹ್ಮಣರ ಭಾಷೆ, ಸ೦ಸ್ಕೃತಿ, ಸಾಧನೆ, ಇತಿಹಾಸ ಮು೦ತಾದವುಗಳ ಕುರಿತು ಅನೇಕ ಗ್ರ೦ಥಗಳು ಪ್ರಕಟವಾಗಿದ್ದರೂ, ಆಧುನಿಕ ವಿದ್ಯುನ್ಮಾನ ಮಾಧ್ಯಮದಲ್ಲಿ ಅದಿನ್ನೂ ಸ್ಥಾನಪಡೆದಿಲ್ಲ.

ಈ ಹಿನ್ನೆಲೆಯಲ್ಲಿ ಶಿವಳ್ಳಿ ಬ್ರಾಹ್ಮಣರ ಕುರಿತಾದ ಈ ಜಾಲತಾಣವು ಹೊಸಕನಸುಗಳನ್ನು ಕಟ್ಟಿಕೊ೦ಡಿದೆ. ಶಿವಳ್ಳಿ ತುಳುಭಾಷೆ, ಇತಿಹಾಸ, ಸಾಹಿತ್ಯ ಸ೦ಶೋಧನೆಗಳು, ಧಾರ್ಮಿಕ-ಸಾ೦ಸ್ಕೃತಿಕ ವಿಚಾರಗಳು, ವಿವಾಹ ವಿಚಾರ ವಿನಿಮಯ ಇತ್ಯಾದಿ ಸಾಮಾಜಿಕ ಸ೦ವಹನಗಳು ಇಲ್ಲಿ ಸಾಧ್ಯವಾಗಬೇಕೆ೦ದು ನಾವು ಆಶಿಸುತ್ತೇವೆ. ಈ ತಾಣದ ಮೂಲಕ ವಿಶ್ವಾದ್ಯ೦ತ ನೆಲೆನಿ೦ತ ಶಿವಳ್ಳಿ ಬ್ರಾಹ್ಮಣ ಬ೦ಧುಗಳು ಪರಸ್ಪರ ಸ೦ಪರ್ಕ ಸಾಧಿಸಿಕೊಳ್ಳಬೇಕೆ೦ದೂ, ತಮ್ಮ ಪರ೦ಪರೆಯ ಕುರಿತಾಗಿ ಅರ್ಥಪೂರ್ಣ ಸ೦ವಾದವನ್ನು ನಡೆಸಬೇಕೆ೦ದೂ ನಾವು ಹಾರೈಸುತ್ತೇವೆ.

Featured Article

ಶ್ರೀಕೃಷ್ಣ ಜನ್ಮಾಷ್ಟಮಿ

ದ್ವಾಪರದ ಕೊನೆಯಲ್ಲಿ ಭಗವಂತ ಅವತರಿಸುವುದಕ್ಕೆ ಆರಿಸಿಕೊಂಡ ಕಾಲ ಸಿಂಹ ಮಾಸ. ಬೆಳೆದ ಪೈರು ಫಸಲು ಬಿಡುವ ಸಮಯವದು. ಗರ್ಭಿಣಿ ಔಷಧಿಗಳು ಧಾನ್ಯಗಳನ್ನು ಹೆರುವ ಕಾಲ. ಕೃಷ್ಣಪಕ್ಷದ ಅಷ್ಟಮಿಯ ಮಧ್ಯರಾತ್ರಿ ಭಗವಂತ ಅವತರಿಸಿದ. ರೋಹಿಣಿ ನಕ್ಷತ್ರ ನಡೆದಿತ್ತು. ಅಷ್ಟಮಿಯ ಅರ್ಧ-ಚಂದಿರನು ಮೂಡ ದಿಸೆಯಲ್ಲಿ ರೋಹಿಣಿಯೊಡಗೂಡಿ ಆಗಸವೇರುತ್ತಿದ್ದಂತೆ ಮಧುರೆಯ ಕಾರಾಗಾರದಲ್ಲಿ ಲೋಕ ಚಂದಿರನ ಅವಿರ್ಭಾವವಾಗಿತ್ತು. ವಸುದೇವ-ದೇವಕಿಯರು ಉಕ್ಕಿದ ಆನಂದದಿಂದ ಬೆರಗುಗಣ್ಣಿನಿಂದ ಅದ್ಭುತ ಬಾಲ ರೂಪವನ್ನು ಕಾಣುತ್ತಿದ್ದಾರೆ. ತಮದ್ಭುತಮ್ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಗದ್ಯುದಾಯುಧಮ್ | ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಕೌಸ್ತುಭಮ್ || [...]

 

Panchanga

Date:2010-09-09
Samvathsara:Vikrita
Ruthu:VARSHA
Arka:SIMHA
Masa:BADRAPADA
Paksha:SUKLA
Tithi:PADYA
Vaara:THURSDAY
Nakshathra:UTTARA
Yoga:SANDHYA
Karana:BAVA
Vishesha: