Highslide for Wordpress Plugin

Search

News letter

    Fill out the email below to get website updates.

 
 
 

Make a donation

ನಮ್ಮ ಬಗ್ಗೆ

ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ. ಹಾಗೂ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಸ್ವಾಮೀ ಶ್ರೀ ಸುಬ್ರಹ್ಮಣ್ಯ ಮಠ, ಇವರ ಅನುಗ್ರಹ ಹಾಗೂ ಮಾರ್ಗದರ್ಶನದೊಂದಿಗೆ ಈ ವೆಬ್‌ಸೈಟ್ನ್ ದಿನಾಂಕ ೦೫/೦೮/೨೦೦೭ ರಂದು ಆರಂಭಗೊಂಡಿದೆ.

ಇಂದು ನಮ್ಮ ಯುವಜನತೆ ಉದ್ಯೋಗದ ನಿಮಿತ್ತ ವಿಶ್ವದಾದ್ಯಂತ ಹಬ್ಬಿರುತ್ತಾರೆ. ತುಳುನಾಡಿನಿಂದ ದೂರವಾದ ನಮ್ಮ ಯುವಜನರಲ್ಲಿ ಹಲವರಿಗೆ ನಮ್ಮ ಪರಂಪರೆ, ಜೀವನಪದ್ಧತಿ, ಮೌಲ್ಯಗಳು ಇತ್ಯಾದಿ ಮಾಹಿತಿಗಳ ಕೊರತೆ ಇದೆ. ಹಾಗೆಯೇ ಇವೆಲ್ಲವನ್ನೂ ತಿಳಿದುಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗಾದರೂ ಅನುಸರಿಸಬೇಕು ಎನ್ನುವ ಅಪೇಕ್ಷೆಯೂ ವ್ಯಕ್ತವಾಗಿದೆ.

ನಮ್ಮ ತುಳು ಶಿವಳ್ಳಿ ಬ್ರಾಹ್ಮಣರ ಭಾಷೆ, ಸಂಸ್ಕೃತಿ, ಸಾಧನೆ, ಇತಿಹಾಸ ಮುಂತಾದುವುಗಳ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ. ಆದರೆ ಅದು ಎಲ್ಲರನ್ನೂ ತಲುಪುತ್ತಿಲ್ಲ. ಇಂದು ಎಲ್ಲರನ್ನೂ ಸುಲಭವಾಗಿ ತಲುಪಬಲ್ಲ ಮಾಧ್ಯಮ ಅಂತರ್ಜಾಲ ಮಾಧ್ಯಮ. ಇಲ್ಲಿಯ ವರೆಗೆ ನಾವು ಈ ಮಾಧ್ಯಮವನ್ನು ಬಳಸಿಕೊಂಡಿಲ್ಲ. ಪ್ರಸ್ತುತ ಈ ಮಾಧ್ಯಮವನ್ನು ಬಳಸಿಕೊಂಡು ಗುರುಹಿರಿಯರ ಅನುಗ್ರಹದೊಂದಿಗೆ ನಮ್ಮ ಸಮಗ್ರ ಮಾಹಿತಿಗಳನ್ನು ವಿಶ್ವದಾದ್ಯಂತ ಇರುವ ನಮ್ಮೆಲ್ಲ ಬಂಧುಗಳಿಗೆ ತಲುಪುವಂತೆ ಮಾಡಬೇಕು ಎಂದು ಈ ವೆಬ್‌ಸೈಟ್‌ನ್ನು ಆರಂಭಿಸಿರುತ್ತೇವೆ.

ವೆಬ್‌ಸೈಟ್‌ನ ಮೂಲಕ ನಮ್ಮ ಸಮಾಜದ ಸಮಗ್ರ ಮಾಹಿತಿಯನ್ನು ನೀಡಬೇಕು, ಧಾರ್ಮಿಕ ಆಚರಣೆಗಳ ಬಗ್ಗೆ ಪ್ರಾಮುಖ್ಯತೆಯನ್ನು ನೀಡಬೇಕು. ಅಪೇಕ್ಷಿಸಿದವರಿಗೆ ಬೇಕಾದ ವಿಚಾರಗಳನ್ನು ತಿಳಿಸಿಕೊಡಬೇಕು ಎನ್ನುವ ಉದ್ದೇಶದೊಂದಿಗೆ ವೆಬ್‌ಸೈಟ್ನ್ನು ಆರಂಭಿಸಲಾಗಿದೆ. ಜೊತೆಗೆ ಎಲ್ಲೇ ಇರಲಿ, ಈ ವೆಬ್‌ಸೈಟ್‌ನ ಮೂಲಕ ಪರಸ್ಪರ ವಿಚಾರ ವಿನಿಮಯ ನಡೆಸಿಕೊಂಡು ನಾವೆಲ್ಲರೂ ಹತ್ತಿರವಾಗಬೇಕು, ಸಂಘಟಿತರಾಗಬೇಕು, ಈ ವೆಬ್‌ಸೈಟ್ ನಮ್ಮೆಲ್ಲ ಬಂಧುಗಳಿಗೆ ಸಂಪರ್ಕ ಸೇತುವಾಗಬೇಕು ಎಂದು ಬಯಸುತ್ತೇವೆ.

ವೆಬ್‌ಸೈಟ್ ಈಗ ಆರಂಭದ ಹಂತದಲ್ಲೇ ಇದೆ. ಇದು ಉನ್ನತವಾಗಿ ಬೆಳೆಯಬೇಕಾಗಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ.

ಈ ವೆಬ್‌ಸೈಟ್‌ನ ನಿರ್ಮಾಣಕ್ಕೆ ಎಲೆಮರೆಯ ಕಾಯಿಗಳಂತೆ ಪ್ರೋತ್ಸಾಹಿಸಿದವರು, ಸಹಕರಿಸಿದವರು ಹಲವು ಮಂದಿ. ಅವರೆಲ್ಲರನ್ನೂ ಉಲ್ಲೇಖಮಾಡಲಾಗದಿದ್ದರೂ ಕೆಲವರನ್ನಾದರೂ ಉಲ್ಲೇಖಮಾಡುವುದು ನಮ್ಮ ಕರ್ತವ್ಯವೇ ಆಗಿದೆ.

ಸಂದರ್ಭೋಚಿತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ ಎರ್ಕಿ ಮಠದ ವೇದಮೂರ್ತಿ ಶ್ರೀ ವೆಂಕಟ್ರಮಣ ಉಪಾಧ್ಯಾಯರು, ಕಾರಿಂಜದ ವೇದಮೂರ್ತಿ ಶ್ರೀ ಲಕ್ಷ್ಮೀ ನಾರಾಯಣ ಆಚಾರ್ಯರು, ಪುತ್ತೂರಿನ ಶ್ರೀ ರಂಗನಾಥ ಉಂಗ್ರುಪುಳಿತ್ತಾಯ, ಇವರುಗಳಿಗೆ ನಾವು ಆಭಾರಿಗಳಾಗಿದ್ದೇವೆ.

ನಮ್ಮ ಈ ಕಾರ್ಯದಲ್ಲಿ ಸಕ್ರಿಯವಾಗಿ ನಮ್ಮ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಮಹೇಶ ಎಲ್ಯಡ್ಕ, ಬೆಂಗಳೂರು, ರಾಮಕುಂಜದ ಎರಟಾಡಿ ಶ್ರೀ ಹರಿನಾರಾಯಣ ಆಚಾರ್ಯ, ರಾಮಕುಂಜದ ಕೋಡಿಲ ಶ್ರೀ ಹರಿಶಂಕರ ಮುಚ್ಚಿಂತಾಯ, ಧರ್ಮಸ್ಥಳದ ಬಾಲಚಂದ್ರ ಕುದ್ರೆತ್ತಾಯ ಇವರಿಗೆ ಕೃತಜ್ಞತೆಗಳು.

ನಮ್ಮ ಈ ಕಾರ್ಯಕ್ಕೆ ಇನ್ನೊಂದು ಆಧಾರ ಸ್ತಂಭ ಎರ್ಕಿ ಮಠದ ಶ್ರೀ ನರಹರಿ ಉಪಾಧ್ಯಾಯರು. ಇವರು ತಮ್ಮ ಹೆಚ್ಚಿನ ಸಮಯವನ್ನು ಈ ಕಾರ್ಯಕ್ಕೆ ನೀಡಿ ವೆಬ್‌ಸೈಟ್‌ನ ಪ್ರಗತಿಗೆ ಕಾರಣರಾಗಿದ್ದಾರೆ. ಇವರನ್ನು ವಿಶೇಷವಾಗಿ ಅಭಿನಂದಿಸುತ್ತೇವೆ.

ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿರುವ ಆನಂದ ಬಳಗ ಬೆಂಗಳೂರು, ಸಲಹೆ ಸೂಚನೆಗಳನ್ನು ನೀಡುತ್ತಾ ಹಿತಾಕಾಂಕ್ಷಿಗಳಾಗಿ ಇರುವ ಹಿರಿಯರು, ಹೀಗೆ ನಮಗೆ ಬೆನ್ನೆಲುಬಾಗಿ ನಿಂತ ಎಲ್ಲರನ್ನೂ ಮನಸಾರೆ ನೆನೆಯುತ್ತಾ ತಮಗೆಲ್ಲರಿಗೂ ನಮಿಸುತ್ತೇವೆ. ಈ ವೆಬ್‌ಸೈಟ್‌ನ ಪ್ರಗತಿಗಾಗಿ ತಮ್ಮೆಲ್ಲರಿಂದ ಇನ್ನೂ ಹೆಚ್ಚಿನ ಸಹಕಾರವನ್ನೂ ಬಯಸುತ್ತೇವೆ.

ಶಿವಳ್ಳಿ ಬ್ರಾಹ್ಮಣರ ಈ ವೆಬ್‌ಸೈಟ್ ನಮ್ಮೆಲ್ಲರ ವೆಬ್‌ಸೈಟ್. ಇದರಲ್ಲಿ ಸಂಯೋಜಕರು, ಸಲಹಾ ಮಂಡಲಿಯವರು ನಿಮಿತ್ತ ಮಾತ್ರ. ಯಾಕೆಂದರೆ ಇದು ಸಮಗ್ರ ಮಾಹಿತಿಯನ್ನೊಳಗೊಳ್ಳುವ ವೆಬ್‌ಸೈಟ್. ಸಮಗ್ರವಾದ ನಮ್ಮ ಮಾಹಿತಿಗಳು ನಮಗೆ ಸರಿಯಾಗಿ ಲಭ್ಯವಿಲ್ಲ. ಲಭ್ಯವಾದ ಮಾಹಿತಿಗಳನ್ನು ಪ್ರಕಟಿಸುತ್ತಿದ್ದೇವೆ. ಪ್ರಕಟಿಸಿದ ಮಾಹಿತಿಗಳೂ ಪರಿಪೂರ್ಣವೆಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ವಿಚಾರಗಳಲ್ಲಿ ಅಭಿಪ್ರಾಯ ಭೇದಗಳೂ ಇವೆ. ಈ ನೆಲೆಯಲ್ಲಿ ತಾವುಗಳು ನಮಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಬೇಕು.

ಲಭ್ಯವಿರುವ ಕುಲಗಳ ಪಟ್ಟಿಯನ್ನು ನೀಡಿದ್ದೇವೆ. ಇನ್ನು ಅವುಗಳಲ್ಲಿ ಬಿಟ್ಟು ಹೋಗಿದ್ದರೆ ನಮಗೆ ತಿಳಿಸಿ. ಕುಲಗಳ ಗೋತ್ರಗಳ, ಕುಲದೇವರುಗಳ ಬಗ್ಗೆ, ಗುರು ಮಠಗಳ ಬಗ್ಗೆ ಸರಿಯಾದ ಮಾಹಿತಿಗಳು ಲಭ್ಯವಿಲ್ಲ. ತಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯಿರುವುದಾದರೆ ದಯವಿಟ್ಟು ನಮಗೆ ಮಾಹಿತಿಗಳನ್ನು ನೀಡಿ. ವಿಭಿನ್ನ ಅಭಿಪ್ರಾಯವಿರುವುದಾದರೆ ಹಿರಿಯರ ಜೊತೆಗೆ, ವಿದ್ವಾಂಸರ ಜೊತೆಗೆ ಕುಳಿತು ಚರ್ಚಿಸಲು ಅವಕಾಶಗಳನ್ನು ಕಲ್ಪಿಸಬಹುದು.

ಈ ವೆಬ್‌ಸೈಟ್ ಒಳ್ಳೆಯ ರೀತಿಯಲ್ಲಿ ಮುನ್ನಡೆಯಬೇಕು, ಎಲ್ಲರಿಗೂ ಅನುಕೂಲವಾಗಬೇಕು, ಎನ್ನುವ ನೆಲೆಯಲ್ಲಿ ಗುರುಹಿರಿಯರ, ವಿದ್ವಾಂಸರ ಮಾರ್ಗದರ್ಶನ ನಮಗೆ ಅಗತ್ಯವಿದೆ. ತಾವುಗಳು ತಮ್ಮ ಅಭಿಪ್ರಾಯಗಳನ್ನು, ಸಲಹೆ ಸೂಚನೆಗಳನ್ನು ಸಂಯೋಜಕರಿಗೆ ಮುಕ್ತವಾಗಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ. ಈ ವೆಬ್‌ಸೈಟ್‌ಗೆ ತಮ್ಮೆಲ್ಲರ ಪ್ರೋತ್ಸಾಹ, ಸಹಕಾರಗಳನ್ನು ಸದಾ ಬಯಸುತ್ತೇವೆ.

ಬಿಡುವಿನ ವೇಳೆಯಲ್ಲಿ ಈ ವೆಬ್‌ಸೈಟ್‌ನ್ನು ನೋಡುತ್ತಿರಬಹುದು. ಜೀವನ ಪದ್ಧತಿಗಳ ಬಗ್ಗೆ, ನಮ್ಮ ಪರಂಪರೆಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗೂ ಸಾಧ್ಯವಾದಷ್ಟು ಮಟ್ಟಿಗಾದರೂ ನಮ್ಮಲ್ಲಿ ಉಲ್ಲೇಖಿತ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಹಾಗಾದರೆ ನಮ್ಮೆಲ್ಲರ ಶ್ರಮವು ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ. ಇನ್ನೊಂದು ಅಂಶವೇನೆಂದರೆ, ನಮ್ಮ ಹಿರಿಯರಿಂದ ಬಂದ ಪರಂಪರೆಗಳು ನಮ್ಮಲ್ಲೇ ಕೊನೆಗೊಳ್ಳಬಾರದು. ನಮ್ಮ ಮುಂದಿನ ಜನಾಂಗಕ್ಕೂ ತಲುಪಿಸುವ ಜವಾಬ್ದಾರಿ ನಮಗಿದೆ. ಕನಿಷ್ಟ ಆಚರಣೆಗಳನ್ನಾದರೂ ಅನುಸರಿಸೋಣ. ತಮ್ಮ ಅಭಿಪ್ರಾಯಗಳನ್ನು ನಮಗೂ ತಿಳಿಸಿ, ಮುಕ್ತವಾಗಿ ಚರ್ಚಿಸೋಣ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದವರೆಲ್ಲರನ್ನೂ ಮತ್ತೊಮ್ಮೆ ಸ್ಮರಿಸುತ್ತಾ,

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ |

ದೇಶೋಯಂ ಕ್ಷೋಭರಹಿತಾ ಬ್ರಾಹ್ಮಣಾಃ ಸಂತು ನಿರ್ಭಯಾಃ ||

ಲೋಕಾಃ ಸಮಸ್ತಾ ಸುಖಿನೋ ಭವಂತು ||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಅನುಗ್ರಹ ಹಾಗೂ ಮಾರ್ಗದರ್ಶನ:

ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಸ್ವಾಮೀ ಶ್ರೀ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ.

ಸಲಹಾ ಮಂಡಲಿ:

ಡಾ| ಸತ್ಯನಾರಾಯಣ ಆಚಾರ್ಯ, ತರ್ಕಪ್ರಾಧ್ಯಾಪಕರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು.

ಡಾ| ಪದ್ಮನಾಭ ಕೇಕುಣ್ಣಾಯ, ನವದುರ್ಗಾ ಉಡುಪಿ.

ಶ್ರೀ ಕೆ.ವಿ. ಮೂರ್ತಿ ಎರ್ಕಾಡಿತ್ತಾಯ, ಅಧ್ಯಕ್ಷರು, ಅಖಿಲ ಭಾರತ ಮಾಧ್ವ ಮಹಾಮಂಡಲ, ಬೆಂಗಳೂರು.

ಡಾ| ಕಬ್ಬಿನಾಲೆ ವಸನ್ತ ಭಾರದ್ವಾಜ್, ಅಷ್ಟಾವಧಾನಿಗಳು, Hon.Director,Prasaranga, Karnataka State Music and Performing Arts University, Mysore.

ಶ್ರೀ ಬಾಲಚಂದ್ರ ಆಚಾರ್ ಹೆಜಮಾಡಿ, ಉಪನ್ಯಾಸಕರ, Electronics and Communication Dept, MIT Udupi

ಸಂಯೋಜಕರು:

1. ಎಮ್. ಸೂರ್ಯ ಪ್ರಕಾಶ ಉಡುಪ,

‘Pranamya’, Kaje house,
Alangar Village and Post, Puttur Taluk, D.K.
Phone : 263188 [08251]
Mobile : 9449529215
Email : suryaudupa@shivallibrahmins.com

2. ಕೆ. ರಂಜಿತ್ ಯಡಪಾಡಿತ್ತಾಯ,

#96/11, I floor, II house, Minivilla
Borevell road, Whitefield, Bangalore – 66
Mobile : 9591994646
Email : ranjith@shivallibrahmins.com

  1. subramanyam

    how to identify which is saligrama & which is black stone(soft stone) pls help me

  2. Abhilash

    On 23rd May of 2010 at Bhavnagar, Gujarat, Brahmasena is arranging various programs which include Brahma Chauryasi, 1008 Mass Janoi as well as Bhoomipujan (Land worshiping) of Parshuramdham. For world peace there will be chanting of 1 crore and 8 lakh Gayatri Mantras. On this grand occasion 3 lakh Brahmins will get together for the first time in the history of the world on one platform.

    Brahmsena has been established with the aim to bind the Brahmins as bead of one string. From all over Gujarat this Brahmin Organization is gathered without any political intentions and agendas.

    In order to make Brahmins live with respect and dignity Brahmsena is and will be regularly arranging such activities. On this occasion Brahmins from various part of the world will be enlisted and amongst 108 Brahmins will be dignified by “BRAHMRATNA” award. The shubhmuhrat of this program has been announced with the support of well renowned Karmakandi Brahmins.

    Furthermore, the responsibility of the entire occasion is given to well renowned Brahmins and government employees. For this program efforts are made to invite all the dignified Brahmins from all over India.

    Even the invitation is carried out to the well known film stars for this occasion. In addition there will be grand organization of well renowned Karmakandi Brahmins and list of all children will be created from entire Gujarat. More than three lakh Brahmins present on one stage
    It self will be a matter of valor. There is nowhere till now 1008 Mass Janoi together on one platform which again is a matter of pride in itself. In order to make the occasion unforgettable on the ground of Bhavnagar Brahmsena will work with full enthusiasm and commitment.

    Offices are established all over Gujarat regarding this occasion. Bhavnagar will be decorated as a bride as well as for guest transportation facility provided along with helicopter.

    Founder and President of Brahmsena Shri Bhavesh Rajyaguru appeals that, “this occasion is for all Brahmins of India. Brahmsena and I are just in charge of it but this is for all Brahmins, therefore instead of any criticism, dispute and jealousy lets work together for the Success of the occasion”. He also confirms that to make this occasion and its organizational effort a grand victory Brahmsena also have decided that no one from political field will be included in any of the committee.

    More than 2000 volunteers have started to contribute their time & energy for this occasion. If there is any query regarding this then kindly contact to our office at 5th Floor, President House, Ambavadi, Ahmedabad.

    Please pass on this message to all Brahmin in world wide and co-operate to brahmin samej

  3. nagaraj.paduthonse

    Fine

  4. Dr.Guruprasad

    Dear sir,

    Thia is the nice work you are doing.Please continue that .You can add some of the books of Acharya madhwa & other authors.

    In the profile of Great Acharyas why Dhri Vadiraja Swamy of Sode matha is not added…..?????

  5. K V RAO

    I want to know about performing POOJA in a simple way. Is thee any book available? Or what about the procedure?

  6. Manmohan Katapadi rao

    I really liked the website. Inchi edde karya soothu bhari santhosha anu. Keep adding more details to the site. You probably should also give appropriate links to buy, books, pictures and audio’s. Also may link to other similar shivalli associations.
    Manmohan Katapadi
    Columbus, USA

  7. Hariprasad

    Please Update this Site.

  8. Raghavendra Madhur Ramachandra

    Dear Sir,

    I got lots of information about the shivalli brahmins, please keep the momentum and continue the same. If you need any help from my side please write a mail to me i provide any help you required, though i am software engineer.

    Thanking you,
    Raghavendra M.R

  9. Keshav Bhatt

    Dear Sir,

    I got lots of information from this website. Most of thime i spent out of India (Working in ship as a Subsea Engineer).

    Please keep this website updated

    Thanking you,

    Keshav Bhatt

  10. Harish Bairy

    Sir,
    Its a very good work. I got so many information.
    Jai Sri Ram.

    thank u,
    Harish Bairy.

  11. Nagaraja R Upadyaya

    hi,

    I want Ganesh chouthi festivals information.
    (ganesh chouthido mahatva)

    thanks,
    Nagaraja R Upadyaya

  12. amitha

    iam amitha ..my date of birth is 22-03-1978… when is my marriage plz tell me my

  13. amitha

    iam amitha ..my date of birth is 22-03-1978… when is my marriage plz tell me my

  14. Malathi

    mAY OFFER YOU A LINK IN OUR WEBSITE http://www.parivarthan.com which is fast upcoming ?

  15. Arun.D

    Respected Sir

    Please help me regarding , raw materials used in manufacturing Dhoop. from ancient
    literatures .

    regards

    Arun.D

  16. Veena

    Is there any auspicious day in January 2011 for New Office.
    Pls reply.

    Thanks
    Veena

  17. Balachandra

    @ Ms. Veena

    You should consult an astrologer / purohit with your janma nakshatra and other details.
    Regards

  18. Rob Rasner Comic

    Hello! I’ve been reading the web site About Us | Shivalli Brahmins for a long time now and finally have the courage to go forward and give you a hello out from New Caney Tx I would like to tell you carry on your good job? BTW my best prayers to the people at atomic plant we hope your are ok along with safe 🙂 All the best Rob Rasner Comic

  19. Hariprasad BP

    Respected Sir
    Please help me of my job .

  20. Seetharama Varamballi

    We are blaming Westerners ( eg. recent case of Lisa Blue of Australia misusing picture of Lakshmi – of course she has apologized) of misusing our Divine Pictures but sadly I am seeing many devout Brahmins wearing Shalyas with Holy Pictures & Writings like Bath Towel & using like bath towel. This is very much prevalent in Udupi dist. & there was no positive response by such people to my pointing-out this. Keeping Philosophy aside this is unacceptable from a Common Man’s point of view. I hope this matter will be taken up in appropriate forum to put an immediate halt to this bad practice.