Search

News letter

    Fill out the email below to get website updates.

 
 
 

    Get free website updates in your mobile. Send ON shivallibrahmins to 9870807070.

Make a donation

ಶ್ರೀಕೃಷ್ಣ ಜನ್ಮಾಷ್ಟಮಿ

ದ್ವಾಪರದ ಕೊನೆಯಲ್ಲಿ ಭಗವಂತ ಅವತರಿಸುವುದಕ್ಕೆ ಆರಿಸಿಕೊಂಡ ಕಾಲ ಸಿಂಹ ಮಾಸ. ಬೆಳೆದ ಪೈರು ಫಸಲು ಬಿಡುವ ಸಮಯವದು. ಗರ್ಭಿಣಿ ಔಷಧಿಗಳು ಧಾನ್ಯಗಳನ್ನು ಹೆರುವ ಕಾಲ.

ಕೃಷ್ಣಪಕ್ಷದ ಅಷ್ಟಮಿಯ ಮಧ್ಯರಾತ್ರಿ ಭಗವಂತ ಅವತರಿಸಿದ. ರೋಹಿಣಿ ನಕ್ಷತ್ರ ನಡೆದಿತ್ತು. ಅಷ್ಟಮಿಯ ಅರ್ಧ-ಚಂದಿರನು ಮೂಡ ದಿಸೆಯಲ್ಲಿ ರೋಹಿಣಿಯೊಡಗೂಡಿ ಆಗಸವೇರುತ್ತಿದ್ದಂತೆ ಮಧುರೆಯ ಕಾರಾಗಾರದಲ್ಲಿ ಲೋಕ ಚಂದಿರನ ಅವಿರ್ಭಾವವಾಗಿತ್ತು. ವಸುದೇವ-ದೇವಕಿಯರು ಉಕ್ಕಿದ ಆನಂದದಿಂದ ಬೆರಗುಗಣ್ಣಿನಿಂದ ಅದ್ಭುತ ಬಾಲ ರೂಪವನ್ನು ಕಾಣುತ್ತಿದ್ದಾರೆ.

ತಮದ್ಭುತಮ್ ಬಾಲಕಮಂಬುಜೇಕ್ಷಣಂ

ಚತುರ್ಭುಜಂ ಶಂಖಗದ್ಯುದಾಯುಧಮ್ |

ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ

ಪೀತಾಂಬರಂ ಸಾಂದ್ರಪಯೋದಕೌಸ್ತುಭಮ್ || ೧ ||

ಮಹಾರ್ಹ ವೈಢೂರ್ಯ ಕಿರೀಟ ಕುಂಡಲ

ತ್ವಿಷಾ ಪರಿಷ್ವಕ್ತ ಸಹಸ್ರ ಕುಂತಳಂ

ಉದ್ಧಾಮ ಕಾಚ್ಯಂಗದ ಕಂಕಣಾದಿಭಿ-

ರ್ವ್ರೋಚಮಾನಂ ವಸುದೇವ ಐಕ್ಯತ || ೨ ||

ಸ ವಿಸ್ಮಯೋತ್ಫುಲ್ಲವಿಲೋಚನೋ ಹರಿಂ

ಸುತಂ ವಿಲೋಕ್ಯಾನಕದುಂದುಭಿಸ್ತದಾ |

ಕೃಷ್ಣಾವತಾರ ಸಂಭ್ರಮೋಸ್ಪೃಶನ್

ಮುದಾ ದ್ವಿಜೇಭ್ಯೋಯುತಮಾಪ್ಲುತೋಗವಾಮ್ || ೩ ||

ಶ್ರೀಮದ್ಭಾಗವತದಲ್ಲಿ ಕೃಷ್ಣ ಜನನದ ವರ್ಣನೆಯಿದು. ಪ್ರತಿನಿತ್ಯವೂ ಬೆಳಿಗ್ಗೆ ಎದ್ದು ಹೇಳಬೇಕು, ಕೃಷ್ಣಾಷ್ಟಮಿಯ ದಿನವಂತೂ ಬೆಳಿಗ್ಗೆ ಎದ್ದೊಡನೆ ಶೌಚಾದಿಗಳನ್ನು ಮುಗಿಸಿ ಈ ಮೂರು ಶ್ಲೋಕಗಳನ್ನು ಹೇಳಿಕೊಳ್ಳಬೇಕು. ಈ ದಿನ ಶ್ರೀ ಕೃಷ್ಣ ಅವಿರ್ಭವಿಸಲಿರುವನೆಂಬ ಆನಂದ ಬೇಕು. ಅದರೊಂದಿಗೆ ಕೃಷ್ಣಾಷ್ಟಮಿಯ ವೃತವೆಂಬುದನ್ನು ಮರೆಯಕೂಡದು. ಏಕಾದಶಿಯಂತೆ ಕೃಷ್ಣಾಷ್ಟಮಿಯೂ ಒಂದು ಹರಿದಿನ. ಈ ವೃತಾನುಷ್ಟಾನಕ್ಕೆ ಅದರೆದ್ದೇ ಆದ ಕಟ್ಟುಪಾಡುಗಳಿದೆ. ಉಪವಾಸ, ಗೀತ ಪಾರಾಯಣ, ಸ-ಪರಿವಾರ ಕೃಷ್ಣ ಪೂಜೆ ಹಾಗೂ ಅರ್ಘ್ಯಪ್ರದಾನ ಎ೦ಬ ನಾಲ್ಕು ಅಂಶಗಳು ಮುಖ್ಯವಾದುವು. ಶ್ರೀ ಮಧ್ವಾಚಾರ್ಯ ತಮ್ಮ ಜಯಂತಿ ನಿರ್ಣಯ ಗ್ರಂಥದಲ್ಲಿ ಕೃಷ್ಣಾಷ್ಟಮಿ ಹಾಗೂ ಜಯಂತಿಗಳ ಮಹತ್ವವನ್ನು ತಿಳಿಸಿ ನಮಗೆಲ್ಲರಿಗೆ ಇತ್ತ ಆದೇಶ -

“ತಸ್ಮಾತ್ ಸರ್ವೈರುಪೋಷ್ಯಾಸಾ ಜಯಂತೀ ಮಾನವೈಃ ಸದಾ ||”

ಕೃಷ್ಣಜಯಂತಿಯಂದು ಸಕಲ ಮಾನವರೂ ಉಪವಾಸ ಮಾಡಬೇಕು.

ಆಚರಣೆ:

ಪ್ರಾತಃಕಾಲದ ದೇವರಪೂಜೆಯನ್ನು ಏಕಾದಶಿ ಪೂಜೆಯಂತೆ ನೆರವೇರಿಸಿ ಈ ಶ್ಲೋಕ ಹೇಳಬೇಕು:

ಅದ್ಯಸ್ಥಿತ್ವಾ ನಿರಾಹಾರಃ ಶ್ವೋಭೂತೇ ಪರಮೇಶ್ವರ |

ಭೋಕ್ಶ್ಯಾಮಿ ಪುಂಡರೀಕಾಕ್ಷ ಅಸ್ಮಿನ್ ಜನ್ಮಾಷ್ಟಮೀವ್ರತೇ ||

ಇಂದು ಉಪವಾಸವಿದ್ದು ನಾಳೆ ಉಣ್ಣುತ್ತೇನೆ – ಎ೦ದು ಅರ್ಥ.

ಸಾಯಂ ಸಂಧ್ಯಾದಿಗಳನ್ನು ಮುಗಿಸಿ ಗೀತ ಪಾರಾಯಣವನ್ನು ಮಾಡಿ ಕೃಷ್ಣನಿಗಾಗಿ ಹಲವು ಬಗೆಯ ಲಡ್ಡುಗಳು, ಚಕ್ಕುಲಿ ಇತ್ಯಾದಿ ಭಕ್ಷ್ಯಗಳನ್ನು ಸಿದ್ಧಪಡಿಸಬೇಕು. ಚಂದ್ರೋದಯ ಕಾಲವು ಸನ್ನಿಹಿತವಾದಾಗ ಶ್ರೀ ಕೃಷ್ಣ ನಿಗೆ ಬೆಣ್ಣೆ- ಭಕ್ಷ್ಯಗಳನ್ನು ನೈವೇದಿಸಿ ವಿಜೃಂಭಣೆಯ ಪೂಜೆಮಾಡಿ ಅರ್ಘ್ಯಪ್ರದಾನ ಮಾಡಬೇಕು. ಶಾಲಿಗ್ರಾಮ ಅಥವಾ ಕೃಷ್ಣಪ್ರತಿಮೆಯನ್ನು ಹರಿವಾಣದಲ್ಲಿಟ್ಟು ಬಿಲ್ವಪತ್ರೆಯಿಂದ ಅರ್ಚಿಸಿ, ಶಂಖದ ನೀರಿನಿಂದ ಅರ್ಘ್ಯ ಪ್ರದಾನ ಮಾಡಬೇಕು.

ಬಿಲ್ವಪತ್ರಾರ್ಚನೆಗೆ ಮಂತ್ರ:

ಕೃಷ್ಣಂಚ ಬಲಭದ್ರಂಚ ವಾಸುದೇವಂಚ ದೇವಕೀಮ್ |

ಯಶೋದಾಂ ನಂದಗೋಪಂ ಚ ಸುಭದ್ರಾಂ ಪತ್ರಪೂಜಯೇತ್ ||

ಅರ್ಘ್ಯಕ್ಕೆ ಮಂತ್ರ:

ಜಾತಃ ಕಂಸ ವಧಾರ್ಥಾಯ ಭೂಭಾರ ಹರಣಾಯ ಚ |

ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ||

ಪಾಂಡವಾನಾಂ ಹಿತಾರ್ಥಾಯ ಧರ್ಮ ಸಂಸ್ಥಾಪನಾಯಚ |

ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ ||

ಎ೦ದು ಮೂರುಬಾರಿ ಕೃಷ್ಣಪ್ರತಿಮೆಯ ಮುಂದೆ ಅರ್ಘ್ಯವನ್ನು ನೀಡಬೇಕು.

ಪುನಃ ಕೃಷ್ಣಂಚ ಬಲಭದ್ರಂಚ.. ಎ೦ಬ ಶ್ಲೋಕದಿಂದ ಬಿಲ್ವಪತ್ರೆಯಿಂದ ಅರ್ಚಿಸಬೇಕು.

“ಮನೆಯ ಹೊರಗೆ ತುಳಸೀಕಟ್ಟೆಯ ಬುಡದಲ್ಲಿ ಚಂದ್ರನನ್ನು ಹೋಲುವಂತೆ ತೆಂಗಿನಕಾಯಿಯ ಅರ್ಧಗಡಿಯನ್ನಿಟ್ಟು (ಕಣ್ಣು ಇಲ್ಲದ ಗಂಡು ಗಡಿಯಾಗಬೇಕು) ಅದರಲ್ಲಿ ಚಂದ್ರನನ್ನು ಅರ್ಚಿಸಿ ಶಂಖದಲ್ಲಿ ಹಾಲಿನಿಂದ ಅರ್ಘ್ಯ ಬಿಡಬೇಕು.

ಬಿಲ್ವಪತ್ರಾರ್ಚನೆಗೆ ಮಂತ್ರ:

ಶಶಿನೇ ಚಂದ್ರದೇವಾಯ ಸೋಮದೇವಾಯ ಚೇಂದ್ರವೇ

ಮೃಗಿಣೇ ಸಿತಬಿಂಬಾಯ ಲೋಕದೀಪಾಯ ದೀಪಿನೇ ||

ರೋಹಿಣೀಸಕ್ತಚಿತ್ತಾಯ ಕನ್ಯಾದಾನ ಪ್ರದಾಯಿನೇ |

ಶೀತದೀಧಿತಿಬಿಂಬಾಯ ತಾರಕಾಪತಯೇ ನಮಃ ||

ಅರ್ಘ್ಯ ಮಂತ್ರ:

ಕ್ಷೀರೋದಾರ್‍ಣವಸಂಭೂತ ಅತ್ರಿನೇತ್ರ ಸಮುದ್ಭವ |

ಗೃಹಾಣಾರ್ಘ್ಯ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್ |

ರೋಹಿಣೀ ಸಹಿತಾಯ ಚಂದ್ರಮಸ ಇದಮರ್ಘ್ಯಂ |ಇದಮರ್ಘ್ಯಂ |ಇದಮರ್ಘ್ಯಂ || ಹೀಗೆ ಮೂರು ಸಲ ಅರ್ಘ್ಯ.

ಮನೆಯ ಸರ್ವ ಸದಸ್ಯರೂ ಪ್ರತ್ಯೇಕ ಪ್ರತ್ಯೇಕವಾಗಿ ಅರ್ಘ್ಯ ಪ್ರದಾನ ಮಾಡಬೇಕು. ರಜಸ್ವಲೆಯರು, ಸೂತಕಿಗಳು ಅರ್ಘ್ಯಪ್ರದಾನ ಮಾಡುವಂತಿಲ್ಲ.

ಅನೇನ ಆಚರಿತ ಕೃಷ್ಣಾಷ್ಣಮಿ ವೃತಾಂಗ ಅರ್ಘ್ಯಪ್ರದಾನ ಕರ್ಮಣಾ ಭಗವಾನ್ ಮಧ್ವಾಂತರ್ಗತ ಗೋಪಾಲಕೃಷ್ಣ ಪ್ರೀಯತಾಂ ||

ರಾತ್ರಿಯಲ್ಲಿ ಮೂರುಬಾರಿ ತೀರ್ಥಪ್ರಾಶನ ಮಾಡಿಕೊಂಡು ಗಂಧಾಕ್ಷತೆ ಹಚ್ಚಿಕೊಳ್ಳಬೇಕು. ಇಷ್ಟು ಮಾತ್ರ ಏಕಾದಶಿಗಿಂತ ವಿಶೇಷ. ಮರುದಿನ ಪ್ರಾತಃಕಾಲ ಉತ್ಸವದ ಪೂಜೆಯನ್ನು ಮಾಡಿ ಹಿಂದಿನ ರಾತ್ರಿ ನಿವೇದಿಸಿದ್ದ ನವನೀತ-ಲಡ್ಡುಗಳನ್ನು ಮುಖ್ಯಪ್ರಾಣನಿಗೆ ನಿವೇದಿಸಿ ಪಾರಣೆಯನ್ನು ಮಾಡಬೇಕು.

ಸಾಧ್ಯವಿದ್ದರೆ ಸರ್ವರೊಡಗೂಡಿ ಶಿಕ್ಯೋತ್ಸವ – ಅಂದರೆ ಗಡಿಗೆಯೊಡೆಯುವುದು ಮುಂತಾದ ಲೀಲೋತ್ಸವವನ್ನಾಚರಿಸಬಹುದು.

11 Responses to ಶ್ರೀಕೃಷ್ಣ ಜನ್ಮಾಷ್ಟಮಿ

  1. adigakn

    janmastamiya shubhashayagalu

    Mahithi chennagide

    entha kelasagalu agutirali and haraisuva

    K. N. ADIGA ADOOR

  2. ravichandra

    hi this is ravi here thanks for the mail this is really a good service of feedback if you join this site.i am really very happy to receieve this mail as i got the knowledge of several mantras and their specified meanings thanks again to all the team of shivalli bramhins.com aslo thanks to ranjith wh mailed me this issue.bye

  3. Subramanyam

    hi am Subramanyam y.h.Am very happy by receiving this message alert in my mail.Thanks for valuable information.I will co-operative to develop this website & our community.

  4. Subramanyam

    I WISH U HAPPY KRISHNA JAYANTI

  5. Ravi Raj Rao Nagri

    Dear Mr. Ranjith,

    Thank you for the Janmashtami Greetings.
    I wish You and your Team, and all the Shivalli Brahmin community, a VERY HAPPY SHRI KRISHNA JANMASHTAMI.

  6. Prakash Rao

    Dear Ranjith,

    Thanks for the wishes and email notification. This site is very informative and will enable all of us to remember and renew our culture and values. Keep up the good work. Well Done.

  7. Ashwin Bhat

    Great Article. HAPPY KRISHNA JAYANTI. Wonderful work done here at the website.

    Thanks.
    Ashwin Bhat

  8. Srinivas N.

    Thanks a lot for the information. It gave me immense satisfaction to find that we, at home followed almost 99% of the procedure posted by you with Lord Krishna’s grace. It gave me an opportunity to double check the formalities attributed to this festival. Pl. continue this good work for the other festivals as well, for the welfare of all jeevas devoted to HIM. May be, you can add the specific neivedya to be offered for each of the festival.

    Regards,

    N. Srinivas

  9. Prashanth Rao

    Sri Krishna manteregala manta -visheyadla edde ampadoo. Sarve Jana sukino bavantu!! Jai Shivalli, Jai Brahmin, -Sare Jana Sukino Bavantu.

  10. lakshmi

    Vasudeva sutham devam
    kamsachanura mardanam
    Devaki paramanandam
    Krishnam vande jagadgurum.
    Wish you all a
    “Happy KRISHNA JANMASHTAMI”

  11. guru bhat

    krishnam vanda jagad gurum

Leave a Reply