ವಿವಿಧೆಡೆ ತಪ್ತಮುದ್ರಾಧಾರಣೆ

ಪ್ರಥಮನ ಏಕಾದಶಿಯಂದು ವಿವಿಧೆಡೆ ತಪ್ತಮುದ್ರಾಧಾರಣೆ ಕಾರ್ಯಕ್ರಮ ನಡೆಯಲಿದೆ. ಸುದರ್ಶನ ಹೋಮ ನಡೆಸಿದ ಬಳಿಕ ಹೋಮಾಗ್ನಿಯಲ್ಲಿ ಶ್ರೀಮನ್ನಾರಾಯಣನ ಆಯುಧಗಳಾದ ಶಂಖ ಚಕ್ರದ ಪ್ರತೀಕವನ್ನು ಬಿಸಿ ಮಾಡಿ ರಟ್ಟೆ, ಎದೆ ಭಾಗದಲ್ಲಿ ಧರಿಸುವುದೇ ತಪ್ತಮುದ್ರಾಧಾರಣೆಯಾಗಿದೆ. ಶ್ರೀಕೃಷ್ಣಮಠದಲ್ಲಿ ಜು.22 ರಂದು ಪರ್ಯಾಯ ಶ್ರೀಶೀರೂರು ಸ್ವಾಮೀಜಿ ಯವರು, ಶ್ರೀಕೃಷ್ಣಾಪುರ ಸ್ವಾಮೀಜಿಯವರು ಕೃಷ್ಣಾಪುರ ಮಠದಲ್ಲಿ, ಬಳಿಕ ಕುಂಭಾಸಿ ಸೋದೆ ಮಠ, ಕೋಟೇಶ್ವರ ರಾಮಮಂದಿರದಲ್ಲಿ, ಶ್ರೀಅದಮಾರು ಸ್ವಾಮೀಜಿಯವರು ಜು.21ರ ಬೆಳಗ್ಗೆ 7.30ಕ್ಕೆ ಪೆರ್ಡೂರು ದೇವಸ್ಥಾನದಲ್ಲಿ, 9ಕ್ಕೆ ಉಡುಪಿಯ ಅದಮಾರು ಮಠದಲ್ಲಿ, 10.30ಕ್ಕೆ ಪಲಿಮಾರು ಮೂಲಮಠದಲ್ಲಿ, 12ಕ್ಕೆ ಅದಮಾರು ಮೂಲಮಠದಲ್ಲಿ, ಶ್ರೀಬಾಳೆಗಾರು ಮಠಾಶರು ಬೆಳಗ್ಗೆ 7ಕ್ಕೆ ಪಾವಂಜೆ ದೇವಸ್ಥಾನದಲ್ಲಿ, 9.30ಕ್ಕೆ ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠದಲ್ಲಿ, ಶ್ರೀಸುಬ್ರಹ್ಮಣ್ಯ ಮಠಾಶರು ಬೆಳಗ್ಗೆ 7ಕ್ಕೆ ಉಜಿರೆ ದೇವಸ್ಥಾನದಲ್ಲಿ, 9.30ಕ್ಕೆ ಪುತ್ತೂರು ಕೆಮ್ಮಾಯಿ ದೇವಸ್ಥಾನದಲ್ಲಿ, 10.30ಕ್ಕೆ ಪುತ್ತೂರು ಕೆಮ್ಮಿಂಜೆ ದೇವಸ್ಥಾನದಲ್ಲಿ, 12.30ಕ್ಕೆ ಸುಬ್ರಹ್ಮಣ್ಯ ಮಠದಲ್ಲಿ, ಉಪ್ಪಿನಂಗಡಿ ಸಮೀಪದ ಎರ್ಕಿಮಠದಲ್ಲಿ ಅರ್ಚಕ ವೆಂಕಟರಮಣ ಉಪಾಧ್ಯಾಯರು ಮುದ್ರಾಧಾರಣೆ ಮಾಡಲಿದ್ದಾರೆ.

ಪೇಜಾವರ ಹಿರಿಯ ಶ್ರೀಗಳು ಜು.21 ಮತ್ತು 22ರಂದು ಬೆಂಗಳೂರಿನ ವಿದ್ಯಾಪೀಠದಲ್ಲಿ, ಕಿರಿಯ ಶ್ರೀಗಳು ಜು.21ರಂದು ಚೆನ್ನೈ ಟಿ.ನಗರ ರಾಘವೇಂದ್ರ ಮಠದಲ್ಲಿ, ಶ್ರೀಪುತ್ತಿಗೆ ಶ್ರೀಗಳು ಬೆಂಗಳೂರಿನ ಬಸವನಗುಡಿ ಪುತ್ತಿಗೆ ಮಠದಲ್ಲಿ, ಶ್ರೀಪಲಿಮಾರು ಸ್ವಾಮೀಜಿ ಮೈಸೂರು ಸರಸ್ವತಿಪುರಂ ಕೃಷ್ಣಧಾಮದಲ್ಲಿ, ಶ್ರೀಭಂಡಾರಕೇರಿ ಮಠಾಶರು ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀಕೃಷ್ಣಮಂದಿರದಲ್ಲಿ, ಶ್ರೀಭೀಮನಕಟ್ಟೆ ಸ್ವಾಮೀಜಿಯವರು ತುಮಕೂರಿನಲ್ಲಿ, ಜು.22ರಂದು ಶ್ರೀಕಾಣಿಯೂರು ಸ್ವಾಮೀಜಿಯವರು ಬೆಂಗಳೂರಿನ ತ್ಯಾಗರಾಜನಗರದಲ್ಲಿ, ಶ್ರೀಸೋದೆ ಮಠಾಶರು ಬೆಂಗಳೂರಿನ ಚಾಮರಾಜಪೇಟೆ ಶ್ರೀಕೃಷ್ಣವಾದಿರಾಜ ಸಭಾಂಗಣ, ಎನ್.ಆರ್.ಕಾಲನಿ ವಾದಿರಾಜ ಕಲ್ಯಾಣಮಂಟಪದಲ್ಲಿ ತಪ್ತಮುದ್ರಾಧಾರಣೆ ನಡೆಸುವರು. ಇದಲ್ಲದೆ ಉತ್ತರಾದಿ ಶ್ರೀಗಳು, ಮಂತ್ರಾಲಯ ಮೊದಲಾದ ಸ್ವಾಮೀಜಿಯವರು ವಿವಿಧೆಡೆ ಮುದ್ರಾಧಾರಣೆ ನಡೆಸುವರು.

2 thoughts on “ವಿವಿಧೆಡೆ ತಪ್ತಮುದ್ರಾಧಾರಣೆ

Leave a Reply

Your email address will not be published.