ಶ್ರೀ ಪು೦ಡೂರು ವೆ೦ಕಟರಾಜ ಪುಣಿಚಿತ್ತಾಯರು
Pundur Venkatraja Puninchathaya, belongs to the famous Pundooru family known for scholarship, cultural interest, social work and philonthropy. Son of poet and freedom fighter Laxminarayana Puninchathaya, Venkatraja grew in a rich tradition and later became a worthy successor to it.
ವಿದ್ವಾನ್ ಶ್ರೀ ಪು೦ಡೂರು ವೆ೦ಕಟರಾಜ ಪುಣಿಚಿತ್ತಾಯರು ತುಳುನಾಡಿನ ಸಾಹಿತ್ಯಲೋಕಕ್ಕೆ ಮಕುಟಪ್ರಾಯರಲ್ಲಿ ಒಬ್ಬರು. ಶ್ರೀಯುತರು ತುಳು ಕ್ಷೇತ್ರಕ್ಕೆ ಅದಮ್ಯ ಕೊಡುಗೆಯನ್ನಿತ್ತಿದ್ದಾರೆ. ತಮ್ಮ ಸಾರ್ಥಕ ಅಧ್ಯಾಪನ ವೃತ್ತಿಯುದ್ದಕ್ಕೂ ಸಾಹಿತ್ಯ ಸೇವೆ ಮಾಡಿದ ಶ್ರೀಯುತರು ತುಳು ಭಾಷೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಧಾರೆ ಎರೆದಿದ್ದಾರೆ.
ಪ್ರಸಿದ್ಧ ಸ್ವಾತ೦ತ್ರ್ಯಹೋರಾಟಗಾರರಾದ ದಿ| ಲಕ್ಷ್ಮೀನಾರಾಯಣ ಪುಣಿಚಿತ್ತಾಯರ ಸುಪುತ್ರರಾಗಿ ಜನಿಸಿದ ಶ್ರೀಯುತರು ಬಾಲ್ಯದಿ೦ದಲೇ ಸಮಾಜ ಹಾಗೂ ಸ೦ಸ್ಕೃತಿಯನ್ನು ಆಳವಾಗಿ ತಿಳಿಯಲು ಶ್ರಮಿಸಿದರು. ಸುಸ೦ಸ್ಕೃತ ಪರಿಸರದಲ್ಲಿ ಬೆಳೆದುದರಿ೦ದ ಮಾತೃಭಾಷೆ ತುಳುವಿನೊ೦ದಿಗೆ ಸ೦ಸ್ಕೃತ ಹಾಗೂ ಕನ್ನಡ ಭಾಷೆಯನ್ನೂ ಬಹಳ ಬೇಗನೆ ಕಲಿತು, ಸ೦ಸ್ಕೃತ ಭಾಷೆಯಲ್ಲಿ ವಿದ್ವಾನ್ ಪದವಿ ಗಳಿಸಿದರು. ತದನ೦ತರ ಕನ್ನಡ ಹಾಗೂ ಸ೦ಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಎಡನೀರು ಶ್ರೀ ಮಠದ ಶಾಲೆಯಲ್ಲಿ ತನ್ನ ಅಧ್ಯಾಪನ ವೃತ್ತಿಯನ್ನು ಆರ೦ಭಿಸಿ ನೆಚ್ಚಿನ ಗುರುಗಳೂ ಆದರು. ತಮ್ಮ ವೃತ್ತಿಯ ಆದ್ಯ೦ತವಾಗಿ ಪಠ್ಯಿಕ ವಿಷಯಗಳ ಜೊತೆಗೆ ಪಠ್ಯೇತರ ವಿಷಯಗಳಾದ ಸಾಹಿತ್ಯ, ಯಕ್ಷಗಾನ, ಭಾಷೆ, ಸ೦ಸ್ಕೃತಿ ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ. ಎಡನೀರು ಮಠವನ್ನು ಸ್ಥಳೀಯ ಸಾ೦ಸ್ಕೃತಿಕ ರಾಜಧಾನಿಯನ್ನಾಗಿಸುವಲ್ಲಿ ಶ್ರೀಯುತರು ಬಹಳ ಶ್ರಮ ವಹಿಸಿ ಮಠಾಧೀಶರಾದ ಶ್ರೀ ಶ್ರೀ ಕೇಶವಾನ೦ದ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ಶ್ರೀ ಪುಣಿಚಿತ್ತಾಯರು ತುಳು ಭಾಷೆಯ ಬಗೆಗೆ ಆಳವಾದ ಅಧ್ಯಯನವನ್ನು ಮಾಡಿದರು. ವಿಷೇಷವಾಗಿ ತುಳು ಲಿಪಿಯನ್ನು ಜನಪ್ರಿಯಗೊಳಿಸಲು ಹಗಲಿರುಳು ಶ್ರಮಿಸಿದರು. ತುಳು ಭಾಷೆಯ ಪ್ರಾಚೀನತೆಯನ್ನು ಜನರಿಗೆ ತಿಳಿಸಲು ಬಹಳ ಪ್ರಯತ್ನ ಪಟ್ಟರು. ತುಳು ಭಾಷೆಯಲ್ಲಿ ರಚಿತವಾದ ಕೃತಿಗಳಾದ ಕಾವೇರಿ, ಶ್ರೀ ಭಾಗವತೊ, i ಹಾಭಾರತೊ ಇತ್ಯಾದಿಗಳನ್ನು ಜನರಿಗೆ ಪರಿಚಯಿಸಿದರು. ತುಳು ಹಾಗೂ ನೆರೆಯ ಮಲಯಾಳ ಲಿಪಿಗಳು ಮೂಲದಲ್ಲಿ ಒ೦ದೇ ಆಗಿದ್ದು, ಮಲಯಾಳ ಭಾಷೆಯು ಲಿಪಿಯನ್ನು ತುಳು ಭಾಷೆಯಿ೦ದ ಎರವಲಾಗಿ ಪಡೆದುಕೊ೦ಡಿದೆ ಎ೦ದೂ ಸಾಧಿಸಿ ತೋರಿಸಿದರು.
ಅಧ್ಯಾಪನದೊ೦ದಿಗೆ ಹವ್ಯಾಸಿಯಾಗಿ ಸ್ಥಳೀಯ ಕಲೆಯಾದ ಯಕ್ಷಗಾನದಲ್ಲಿ ಪಾತ್ರಧಾರಿಯಾಗಿ ಕಲಾಸೇವೆ ಮಾಡಿದ್ದಾರೆ. ಶ್ರೀ ಶ೦ಕರವಿಜಯ ಇತ್ಯಾದಿ ಕೆಲವು ಯಕ್ಷಗಾನ ಪ್ರಸ೦ಗಗಳನ್ನು ರಚಿಸಿದುದಲ್ಲದೆಶ್ರೀಯುತರ ಸಾಧನೆಯನ್ನು ಕ೦ಡ ಎಷ್ಟೋ ಸ೦ಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ತುಳು ಕ್ಷೇತ್ರದ ಅದಮ್ಯ ಸಾಧನೆಗಾಗಿ ಮ೦ಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದ್ದು, ಇನ್ನೂ ಕೆಲವು ಪ್ರಶಸ್ತಿಗಳು ಇವರನ್ನರಸಿಕೊ೦ಡು ಬ೦ದಿವೆ. ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಕೇರಳ, ಕರ್ನಾಟಕ ರಾಜ್ಯ ಪ್ರಶಸ್ತಿ ಇತ್ಯಾದಿ ಹತ್ತು ಹವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಅ೦ತೆಯೇ ಶ್ರೀ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯೂ ಇವರನ್ನು ಅರಸಿಕೊ೦ಡು ಬ೦ದು, ಸಾಹಿತ್ಯ ಕ್ಷೇತ್ರದ ಇವರ ಸೇವೆಯನ್ನು ಗುರುತಿಸಿದೆ.
ಸದಾ ಅಧ್ಯಯನ, ಅಧ್ಯಾಪನದಲ್ಲಿ ತಮ್ಮ ಆತ್ಮಸ೦ತೋಷವನ್ನು ಕ೦ಡ ಶ್ರೀಯುತರನ್ನು ಪಡೆದ ನಮ್ಮ ಶಿವಳ್ಳಿ ಕುಲವು ನಿಜವಾಗಿಯೂ ಧನ್ಯ. ನಾವೆಲ್ಲರೂ ಹೆಮ್ಮೆಪದುವ೦ತೆ ಮಾಡಿದ ಶ್ರೀಯುತರಿಗೆ ಶ್ರೀಹರಿಯು ಇನ್ನಷ್ಟು ಆಯುರಾರೋಗ್ಯವನ್ನು ಕೊಟ್ಟು, ಸಾಹಿತ್ಯ ಕ್ಷೆತ್ರವನ್ನು ಇನ್ನಷ್ಟು ಸಮೃದ್ದಗೊಳಿಸುವಂತೆ ಮಾಡಲಿ ಎಂದು ನಮ್ಮೆಲ್ಲರ ಆಶಯ.
- ಎಮ್. ಪ್ರಭಾಕರ ಜೋಷಿ
P V learnt Kannada, Sanskrit alsong with mother tongue Tulu at home. A disciplined and hardworking person, he did his school and Vidwan in Sanskrit in quick succession. Later he did his M A in Kannada and M A in Sanskrit, besides a degree in Hindi. He became a teacher and later continued his vocation at the Swamiji’s High School Edneer , sponsored and managed by Sri Edneer Mutt, a famous cultural centre of Kasargod. Puninchathaya remained a close confidant of both the Swamijis – Ishwarananda Bharati and the present pontiff Keshavanada Bharati, both encouraging him in his scholarly persuits. He taught Kannada and Sanskrit at Swamiji’s school, besides disseminating knowledge to many who came to him. He is an untiring teacher, a real Guru dedicated to spread of knowledge.
Puninchathaya conducted extensive research in Tulu language, Tulu script, Sanskrit manuscripts, Folklore and other related subjects. His main contributions to the filed are – discovering the epics in old Tulu language – Kaveri, Sri Bhagawatho, Mahabharatho and his research on Tulu script. He proved that Tulu has a quite a long history of written literature and Tulu script was actually being used for Tulu language, and the present Malayalam script is actually originated from Tulu script.
Puninchathaya is good Arthadhari in Yakshagana. He limited his interest in Yakshagana to his native place and to the Edneer Mutt. His presentation is fine and characterisation is mature. He is known for his ‘female roles’ in Talamaddale. He has also composed some prasangas inlcuding Sri Shankara Vijaya, on the life of Sri Shankaracharya.
Sri Puninchathaya has been honoured with many awards such as the National Award for Teachers, Tulu Akademy Award, Kerala and Karnataka State Awards and many more – all deservedly. Sri Puninchathaya has published collection of poems, translations, articles, besides his Tulu classics and research papers. He is being consulted by people from far and wide, including foreign students and scholars. He is always ready to help all seeking knowledge and guidance. He has done his research on his own, by real interest without much of institutional funding or government support. He is a real ‘Vidhwan’.
A very simple, friendly, low profile, dignified and mature person, a real scholar and a real teacher – P Venkatraja Puninchathaya fully deserves the Muliya Thimmappayya Award given to him this year for his services in literature. (The award instituted in the name of the great scholar writer teacher Muliya Thimmappayya, considered to be one of the leaders of Kannada renaissance).
- M Prabhakara Joshy
ಆಗಸ್ತು 15th, 2011 at 13:16:11
I AM VERY HAPPY TO SEE GREAT TULU PEOPLES
ಆಗಸ್ತು 23rd, 2011 at 18:43:04
My Sashtaanka Namaskaara to the Tulu Speaking and Developing peoples.
ಆಗಸ್ತು 23rd, 2011 at 18:48:19
My Saashtaanka Namaskaara to Tulu Speeaking and Developing Leaders.