Highslide for Wordpress Plugin

Search

News letter

    Fill out the email below to get website updates.

 
 
 

Make a donation

ದೇವರನಾಮ

ಜೋ ಜೋ ಶ್ರೀಕೃಷ್ಣ ಪರಮಾನಂದ

ಮಂಗಳವಾರ, ಜನವರಿ 15th, 2013 - 6 Comments

ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ||

ಪಾಲಗಡಲೊಳು ಪವಡಿಸಿದವನೇ
ಆಲದೆಲೆಯ ಮೇಲೆ ಮಲಗಿದ ಶಿಶುವೇ
ಶ್ರೀಲತಾಂಗಿಯರ ಚಿತ್ತದೊಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||

ಗಜವದನ ಬೇಡುವೆ

ರವಿವಾರ, ಜುಲಾಯಿ 24th, 2011 - 0 Comment

ಗಜವದನ ಬೇಡುವೆ ಗೌರಿತನಯ || ಪ ||
ತ್ರಿಜಗವಂದಿತನೆ ಸುಜನರ ಪೊರೆವನೆ || ಅ ||

ಪಾಶಾಂಕುಶಧರ ಪರಮಪವಿತ್ರ |
ಮೂಷಿಕವಾಹನ ಮುನಿಜನ ಪ್ರೇಮ || ೧ ||

ದಯಮಾಡೋ ರಂಗಾ

ಶನಿವಾರ, ಜುಲಾಯಿ 23rd, 2011 - 0 Comment

ದಯಮಾಡೋ |
ರಂಗಾ |
ದಯಮಾಡೋ ದಯಮಾಡೋ ನಿನ್ನ ದಾಸನು ನಾನೆಂದು || ಪ ||

ಹಲವು ಕಾಲದಿಂದ ನಿನ್ನ ಹಂಬಲ ಎನಗೆ |
ಒಲಿದು ಪಾಲಿಸಬೇಕು ವಾರಿಜನಾಭ || ೧ ||

ಎಲ್ಲರು ಮಾಡುವುದು ಹೊಟ್ಟೆಗಾಗಿ

ಶನಿವಾರ, ಜುಲಾಯಿ 23rd, 2011 - 1 Comment

ಎಲ್ಲರು ಮಾಡುವುದು ಹೊಟ್ಟೆಗಾಗಿ |
ಗೇಣು ಬಟ್ಟೆಗಾಗಿ || ಪ ||
ಸಿರಿ | ವಲ್ಲಭನ ಭಜಿಸುವುದು ಮುಕ್ತಿಗಾಗಿ || ಅ ಪ ||

ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ |
ಮಲ್ಲರೊಡನಾಡುವುದು ಹೊಟ್ಟೆಗಾಗಿ ||

ಧರ್ಮಕ್ಕೆ ಕೈ ಬಾರದೀ ಕಾಲ

ಶನಿವಾರ, ಜುಲಾಯಿ 23rd, 2011 - 0 Comment

ಧರ್ಮಕ್ಕೆ ಕೈ ಬಾರದೀ ಕಾಲ |
ಪಾಪ ಕರ್ಮಕ್ಕೆ ಮನಸೋಲೋದೀ ಕಲಿ ಕಾಲ || ಪ ||

ದಂಡದ್ರೋಹಕೆ ಉಂಟು | ಪುಂಡು ಪೋಕರಿಗುಂಟು |
ಹೆಂಡತಿ ಮಕ್ಕಳಿಗಿಲ್ಲವೀ ಕಾಲ ||

ದೇವ ಬಂದ ನಮ್ಮ ಸ್ವಾಮಿ ಬಂದನೋ

ಶನಿವಾರ, ಜುಲಾಯಿ 23rd, 2011 - 4 Comments

ದೇವ ಬಂದ ನಮ್ಮ ಸ್ವಾಮಿ ಬಂದನೋ |
ದೇವರ ದೇವ ಶಿಖಾಮಣಿ ಬಂದನೋ || ಪ ||

ಉರಗಶಯನ ಬಂದ ಗರುಡಗಮನ ಬಂದ |
ನರನಿಗೊಲಿದವ ಬಂದ |
ನಾರಾಯಣ ಬಂದ || ೧ ||

ದಾಸರ ನಿಂದಿಸಬೇಡ ಮನುಜ

ಶನಿವಾರ, ಜುಲಾಯಿ 23rd, 2011 - 0 Comment

ದಾಸರ ನಿಂದಿಸಬೇಡ ಮನುಜ |
ಹರಿ | ದಾಸರ ನಿಂದಿಸಬೇಡ || ಪ ||

ರಾಮನ ನಿಂದಿಸಿ ರಾವಣ ಕೆಟ್ಟ |
ವಿಭೀಷಣಗಾಯಿತು ಪಟ್ಟ ||

ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ

ಶನಿವಾರ, ಜುಲಾಯಿ 23rd, 2011 - 0 Comment

ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ |
ಕಪಟನಾಟಕ ಸೂತ್ರಧಾರಿ ನೀನೆ || ಪ ||

ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ |
ಏನು ಮಾಡಲು ಬಲ್ಲುದು ತಾನೆ ಬೇರೆ ||

ಭಾಗ್ಯದ ಲಕ್ಷ್ಮೀ ಬಾರಮ್ಮಾ

ಸೋಮವಾರ, ಆಗಸ್ತು 30th, 2010 - 0 Comment

ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ
ಭಾಗ್ಯದ ಲಕ್ಷ್ಮೀ ಬಾರಮ್ಮಾ || ಪ ||

ಹೆಜ್ಜಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧ ||