ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ)

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ)
ಉಜಿರೆ, ೫೭೪೨೪೦, ದೂರವಾಣೀ ೨೩೭೧೧೧ (೦೮೨೫೧)

ಬ್ರಾಹ್ಮಣ ಸಮಾಜದ ಆರ್ಥಿಕ, ಕೌಟುಂಬಿಕ, ಧಾರ್ಮಿಕ, ಪಾರಮಾರ್ಥಿಕ ಶ್ರೇಯೋಭಿವೃದ್ಧಿ ಹಾಗೂ ಸಮಾಜದ ಸಂಘಟನೆ ಮುಂತಾದ ಘನ ಉದ್ದೇಶಗಳನ್ನಿಟ್ಟುಕೊಂಡ ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ (೧೯೬೦ ನೆಯ ೧೭ ನೆಯ ಕ್ರಮಾಂಕದ ಕರ್ನಾಟಕ ಅಧಿನಿಯಮ) ಮೆರೆಗೆ ಬೆಳ್ತಂಗಡಿ ತಾಲೂಕು ತುಳು ತುಳು ಶಿವಳ್ಳಿ ಬ್ರಾಹ್ಮಣ ಸಂಘ ಎಂಬ ಹೆಸರಿನಿಂದ ತಾರೀಕು ೨೦-೧೦-೧೯೯೪ ರಂದು ನೋಂದಾಯಿತವಾಗಿ ಅಸ್ತಿತ್ವಕ್ಕೆ ಬಂತು. ೧೪/೦೧/೧೯೯೫ ರಂದು ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಪ್ರಥಮ ಅಧಿವೇಶನವು ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆರಂಭದ ಪದಾಧಿಕಾರಿಗಳು –
ಅಧ್ಯಕ್ಷರು        –   ಶ್ರೀ ಕೆ.ವಿ. ಮುಚ್ಚಿನ್ನಾಯ
ಕಾರ್ಯದರ್ಶಿ    –   ಶ್ರೀ ಎ. ಬಾಲಕೃಷ್ಣ ಅರಿಪಾಡಿತ್ತಾಯ
ಖಜಾಂಜಿ       –    ಶ್ರೀ ಶ್ರೀಕರ ರಾವ್

ಸ್ವಲ್ಪ ಮಂದಗತಿಯಿಂದ ಸಾಗಿದ ಈ ಸಂಘಟನೆಯು ೨೦೦೪ ರ ಹೊತ್ತಿಗೆ ಸಮರ್ಥ ಕಾರ್ಯಕಾರಿ ಸಮಿತಿಯನ್ನು ಹೊಂದಿ ತನ್ನ ಸಂಘಟನಾ ಕಾರ್ಯವನ್ನು ಹೆಚ್ಚಿಸಿಕೊಂಡಿತು. ಪ್ರಸ್ತುತ ೨೦೦೫ ರಿಂದ ಸಂಘವು ನೂತನವಾದ ಕಾರ್ಯಕಾರಿ ಸಮಿತಿಯನ್ನು ಹೊಂದಿದೆ.

ಅಧ್ಯಕ್ಷರು               –    ಶ್ರೀ ವಿಜಯರಾಘವ ಪಡ್ವೆಟ್ನಾಯ ಪಡುಬೆಟ್ಟು ಮನೆ, ಉಜಿರೆ, ಫೋನ್: ೨೩೬೨೧೬ (೦೮೨೫೬)
ಉಪಾಧ್ಯಕ್ಷರು          –    ಶ್ರೀ ಡಾ| ಸುಬ್ರಹ್ಮಣ್ಯ ಬಲ್ಲಾಳ್ ಬಲ್ಲಾಳ್ ಎಸ್ಟೇಟ್, ಮಡಂತ್ಯಾರು ಫೋನ್: ೯೪೪೯೨೦೭೮೫೧
ಕಾರ್ಯದರ್ಶಿ           –    ಶ್ರೀ ರಾಜಾರಾಮ ಶರ್ಮ ಶಿವಾಜಿ ನಗರ, ಉಜಿರೆ, ಫೋನ್: ೨೩೬೭೨೯ (೦೮೨೫೬)
ಜೊತೆ ಕಾರ್ಯದರ್ಶಿ   –    ಶ್ರೀ ರಾಧಾಕೃಷ್ಣ ಕಲ್ಲೂರಾಯ “ರಾಜಶಿಲಾ” ವಿದ್ಯಾನಗರ, ಉಜಿರೆ, ಫೋನ್: ೨೩೬೦೨೨ (೦೮೨೫೬)
ಖಜಾಂಜಿ               –    ಶ್ರೀ ಜಯರಾಮ ಪಡ್ಡಿಲ್ಲಾಯ ಕಂದ್ರಾಜೆ, ಉಜಿರೆ, ಫೋನ್: ೨೩೬೩೨೯ (೦೮೨೫೬)

ತಾಲೂಕಿನಲ್ಲಿ ೮ ವಲಯಗಳಿದ್ದು ಅದರ ಅಧ್ಯಕ್ಷರು ಕೇಂದ್ರ ಸಮಿತಿಯ ಸದಸ್ಯರಾಗಿರುತ್ತಾರೆ.

ಉಜಿರೆ ಶ್ರೀ ಸತ್ಯನಾರಯಣ ರಾವ್ ಸದಸ್ಯರು
ಬಂದಾರು ಶ್ರೀ ಸುಂದರ ರಾವ್ ಸದಸ್ಯರು
ಕರಾಯ ಶ್ರೀ ಗೋಪಾಲಕೃಷ್ಣ ಕುದ್ದಣ್ಣಾಯ ಸದಸ್ಯರು
ಮಚ್ಚಿನ ಎ ಶ್ರೀ ಹರ್ಷ ಸಂಪಿಗೆತ್ತಾಯ ಸದಸ್ಯರು
ಮಚ್ಚಿನ ಬಿ ಶ್ರೀ ನಾರಾಯಣ ಭಟ್ ಸದಸ್ಯರು
ವೇಣೂರು ಶ್ರೀ ಪೂಂಜ ರಾಮಚಂದ್ರಾಚಾರ್ಯ ಸದಸ್ಯರು
ನಿಡ್ಲೆ ಶ್ರೀ ಸಂಪಿಗೆ ವೆಂಕಟರತ್ನರಾವ್ ಸದಸ್ಯರು
ಚಾರ್ಮಾಡಿ ಶ್ರೀ ಗೋಪಾಲಕೃಷ್ಣ ಇರ್ವತ್ರಾಯ ಸದಸ್ಯರು

ಪ್ರತೀ ವಲಯಕ್ಕೂ ಪ್ರತ್ಯೇಕ ಸಮಿತಿಗಳಿದ್ದು ಅದರ ಅಧ್ಯಕ್ಷರು ಕೇಂದ್ರದ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.

ಸಂಘದ ಉದ್ದೇಶ –
೧.  ಬ್ರಾಹ್ಮಣ ಸಮಜದ ಶ್ರೇಯೋಭಿವೃದ್ಧಿಗಾಗಿ ದುಡಿಯುವುದು ಮತ್ತು ಸಮಾಜವನ್ನು ಸಂಘಟಿಸುವುದು.
೨.  ಪೌರೋಹಿತ್ಯ, ಜ್ಯೋತಿಷ್ಯ, ವೇದಶಾಸ್ತ್ರ, ಮೊದಲಾದ ಬ್ರಾಹ್ಮಣ ಸಮಾಜಕ್ಕೆ ಅಗತ್ಯವುಳ್ಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದು ಮತ್ತು ಆ ಬಗ್ಗೆ ಆರ್ಥಿಕವಾಗಿ ಅವಶ್ಯವಿದ್ದಲ್ಲಿ ಧನ ಸಹಾಯ ಮಾಡುವುದು.
೩.  ವಾಚನ ಪ್ರವಚನ ಮೊದಲಾದುವುಗಳನ್ನು ಏರ್ಪಡಿಸುವುದು.
೪.  ಬ್ರಾಹ್ಮಣ ಸಮಾಜದ ಪದ್ಧತಿಗಳ ಉದ್ದೇಶಗಳು ಮತ್ತು ಆಚರಣೆಯ ಬಗ್ಗೆ ಉಪದೇಶವೀಯುವುದು ಮತ್ತು ಆ ಕುರಿತು ಅಗತ್ಯವುಳ್ಳ ವ್ಯವಸ್ಥೆಯನ್ನು ಮಾಡಿಸುವುದು.
೫.  ಸಂಘದ ಉದ್ದೇಶಗಳ ಬಗ್ಗೆ ಅಗತ್ಯವುಳ್ಳ ನಿಧಿಗಳನ್ನು ಸಂಗ್ರಹಿಸುವುದು. ಆಸ್ತಿ ವ ಸೊತ್ತುಗಳನ್ನು ಖರೀದಿಸುವುದು ಮತ್ತು ವಿಕ್ರಯಿಸುವುದು.
೬.  ಬ್ರಾಹ್ಮಣರ ಸಮಾಜಿಕ , ಧಾರ್ಮಿಕ, ತರಬೇತಿ ನೀಡಲು ಬೇಕಾಗಿರುವ ಕರಪತ್ರ, ಪತ್ರಿಕೆ, ಪುಸ್ತಕ ವಗೈರೆ, ಅಚ್ಚು ಹಾಕಿಸಿ ಸಮಾಜ ಬಾಂಧವರಿಗೆ ಒದಗಿಸುವುದು.
೭. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಇತರ ವಿದ್ಯಾಭ್ಯಾಸದ ಬಗ್ಗೆ, ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವುದು.
೮. ಬ್ರಾಹ್ಮಣ ಸಮಾಜದಲ್ಲಿ ಜರಗುವ ಶುಭ ಹಾಗೂ ಅಶುಭ (ಉತ್ತರಕ್ರಿಯೆ ಮೊದಲಾದ) ಸಾಮಾಜಿಕ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡುವುದು.
೯. ಸರಕಾರದಿಂದ ಬ್ರಾಹ್ಮಣ ಸಮಾಜಕ್ಕೆ ಬೇಕಾಗುವ ಸಹಾಯ ಸಿಗುವಂತೆ ಪ್ರಯತ್ನಿಸುವುದು, ಕೋರ್ಟು, ಕಛೇರಿಯ ವ್ಯವಹಾರಗಳಿಗೆ ಸೂಕ್ತ ರೀತಿಯ ಮಾರ್ಗದರ್ಶನ ಮತ್ತು ಸಹಾಯವನ್ನೀಯುವುದು.
೧೦. ಶಿವಳ್ಳಿ ಬ್ರಾಹ್ಮಣ ಯುವಕರ ವ್ಯಕ್ತಿತ್ವ ವಿಕಸನಕ್ಕಾಗಿ ಹಾಗೂ ಉನ್ನತ ಸ್ಥಾನಮಾನಕ್ಕಾಗಿ ಸೂಕ್ತ ತರಬೇತಿಗಳನ್ನು ನೀಡುವುದು.
೧೧. ಸಮಾನ ಮನಸ್ಕ ಶಿವಳ್ಳಿಯೇತರ ಬ್ರಾಹ್ಮಣ ಸಂಘಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಮಗ್ರ ಬ್ರಾಹ್ಮಣರ ಸಂಘಟನೆಗೆ ಪ್ರಯತ್ನಿಸುವುದು.
೧೨. ಮಹಿಳಾ ಘಟಕ ಪ್ರಾಯೋಜನೆ ಮತ್ತು ಮಹಿಳಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಶಸ್ತ್ಯ.
೧೩. ಶಿವಳ್ಳಿ ಬ್ರಾಹ್ಮಣ ಯುವಸಂಘಟನೆಗೆ ಒತ್ತು ನೀಡುವುದು ಹಾಗೂ ಯುವ ಘಟಕ ಸ್ಥಾಪನೆ.

ಹಮ್ಮಿಕೊಂಡ ಕಾರ್ಯಕ್ರಮಗಳು –

೧. ವಸಂತ ಪಾಠ ಶಿಬಿರ :-ಪ್ರತಿ ಮೇಷ ಮಾಸ ೨ ರಿಂದ ೧೬ ರವರೆಗೆ ೧೫ ದಿನಗಳು
೧ ನೇ ವರ್ಷದವರಿಗೆ – ಸಂಧ್ಯಾವಂದನೆ ಮತ್ತು ಸ್ತೋತ್ರ ಪಾಠ
೨ ನೇ ವರ್ಷದವರಿಗೆ – ಪೂಜೆಗೆ ಅಗತ್ಯವಿರುವ ಸೂಕ್ತಪಾಠಗಳು
೩ ನೇ ವರ್ಷದವರಿಗೆ – ದೇವ ಪೂಜಾಪದ್ಧತಿ
೨. ಪ್ರತಿಭಾ ಪುರಸ್ಕಾರ :-ಆಗಸ್ಟ್ ಯಾ ಸೆಪ್ಟೆಂಬರ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಡಿಗ್ರಿ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದವರನ್ನು ಗುರುತಿಸಿ ಪ್ರೋತ್ಸಾಹಿಸುವುದು. ಇತರ ರಾಜ್ಯ ವ ಅದಕ್ಕಿಂತ ಮೇಲ್ಪಟ್ಟ ಸಾಧನೆ ಮಾಡಿದವರಿಗೆ ಪ್ರೋತ್ಸಾಹ.
೩. ಶಿವಳ್ಳಿ ಸಮಾಜದಲ್ಲಿ ವಿಶಿಷ್ಟ ಸೇವೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು.
ಸನ್ಮಾನಿಸಲ್ಪಟ್ಟವರು ಕಾರಣವಾದ ಸಾಧನೆ
ಶ್ರೀ ಕೇಶವ ಜೋಗಿತ್ತಾಯ ರಾಜ್ಯಪ್ರಶಸ್ತಿ ಪುರಸ್ಕೃತರು, ಪ್ರಧಾನ ಅರ್ಚಕರು, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ.
ಶ್ರೀ ಸುಬ್ರಾಯ ಪೆಜತ್ತಾಯ ಹೆಸರಾಂತ ಪುರೋಹಿತರು
ಶ್ರೀ ರಾಮ ಕೆರ್ಮುಣ್ಣಾಯರು ಹೆಸರಾಂತ ಪುರೋಹಿತರು
ಶ್ರೀ ಡಾ| ವಿ.ಎಸ್. ಆಚಾರ್ಯ ಶಿವಳ್ಳಿ ಸಮಾಜದ ಮೊತ್ತ ಮೊದಲ ಮಂತ್ರಿಗಳು
ಶ್ರೀ ರಘುಪತಿ ಭಟ್ ಜನಪ್ರಿಯ ಶಾಸಕರು
ಶ್ರೀ ಮೋಹನ ಕಲ್ಲೂರಾಯ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸ್ವರ್ಣ ಕುಮಾರಿ ಗಮಕಕಲಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ

೪. ಇತರ ಕಾರ್ಯಕ್ರಮಗಳು :-
೧. ಪ್ರತೀ ಏಕಾದಶಿಯಂದು ಶ್ರೀ ಜನಾರ್ದನ ದೇವಸ್ಥಾನ, ಉಜಿರೆ ಇಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ

೨. ತಾಲೂಕಿನ ಯಾವುದೇ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳಿರುವಾಗ ಅಲ್ಲಿ ಸಕ್ರಿಯವಾಗಿ ಭಾಗವಹಿಸಲಾಗಿದೆ.

೩. ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಸಹಕಾರವನ್ನು ನೀಡಲಾಗುತ್ತಿದೆ.

ಮುಂದಿನ ಯೋಜನೆ :
ಸಂಘದ ಕೇಂದ್ರ ಸಮಿತಿಗೆ ನಿಕಟ ಸಂಪರ್ಕ ದೊರಕಲು ವಿಪ್ರವಾರ್ತೆ ಎಂಬ ತ್ರೈಮಾಸಿಕವನ್ನು ಸಧ್ಯದಲ್ಲೇ ಅರಂಭಿಸುವುದು. ಇದರ ಪ್ರಾಯೋಗಿಕ ಪ್ರತಿ ಕಳೆದ ವರ್ಷ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದಿದೆ.
೧. ಆಸಕ್ತರಿಗೆ ಪವಮಾನ ಹಾಗೂ ರುದ್ರ ಪಾಠಗಳನ್ನು ಸಂಯೋಜಿಸುವುದು.
೨. ವಿದ್ಯಾರ್ಥಿಗಳಿಗೆ ಬೇಕಾದ ಹಾಸ್ಟೆಲ್ ವ್ಯವಸ್ಥೆಯನ್ನು ರೂಪಿಸುವುದು.
೩. ಸಂಘವು ಸ್ವತಂತ್ರವಾದ ಕಟ್ಟಡವನ್ನು ಹೊಂದುವುದು.
೪. ಹೆಚ್ಚಿನ ಕಾರ್ಯ ಚಟುವಟಿಕೆಗಳಿಗಾಗಿ ಆರ್ಥಿಕ ಸಾಮರ್ಥ್ಯವನ್ನು ವರ್ಧಿಸಿಕೊಳ್ಳುವುದು.
೫. ಮಹಿಳಾ ಸಂಘಟನೆ ಹಾಗೂ ಯುವ ಸಂಘಟನೆಗಳನ್ನು ಆರಂಭಿಸುವುದು.
ಬೆಳ್ತಂಗಡಿ ತಾಲೂಕಿನ ಈ ಸಂಘಟನೆಯು ಉಜಿರೆಯನ್ನು ಕೆಂದ್ರವಾಗಿಟ್ಟುಕೊಂಡು ಕಾರ್ಯವನ್ನು ನಿರ್ವಹಿಸುತ್ತಿದೆ. ೨೦೦೫ ನೇ ಇಸವಿಯ ಬಳಿಕ ಸಕ್ರಿಯವಾದ ಈ ಶಿವಳ್ಳಿ ಸಂಘಟನೆಯು ಇಂದು ಇಡೀ ತಾಲೂಕಿನಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಈ ತಾಲೂಕಿನಲ್ಲಿ ಸುಮಾರು ೪೫೦ ಶಿವಳ್ಳಿ ಬ್ರಾಹ್ಮಣರ ಮನೆಗಳಿವೆ. ಇಲ್ಲಿಯ ಗ್ರಾಮಗಳನ್ನು ವ್ಯವಸ್ಥೆಗಳಿಗನುಗುಣವಾಗಿ ೮ ವಲಯಗಳಾಗಿ ವಿಂಗಡಿಸಲಾಗಿದೆ.

3 thoughts on “ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ)

Leave a Reply

Your email address will not be published.