Featured Article
ದ್ರಾವಿಡಭಾಷೆಗಳಲ್ಲಿ ಕೆಲವು ಸಂಬಂಧವಾಚಕ ಶಬ್ದಗಳು
Saturday, December 24th, 2011 - 5 Comments- ಡಾ| ಕೆ. ಪದ್ಮನಾಭ ಕೇಕುಣ್ಣಾಯ ಉಡುಪಿ-576102. ಕಾಲದ ಪರಿವರ್ತನೆಯೊಂದಿಗೆ ಕಾಲಗರ್ಭದಲ್ಲಿ ಲೀನವಾಗುವ ಅನೇಕ ಶಬ್ದಗಳಲ್ಲಿ ಸಂಬಂಧವಾಚಕಗಳೂ ಸೇರುತ್ತಿವೆ. ಆಧುನಿಕ ಜೀವನಶೈಲಿಯಲ್ಲಿ ಮೂಲೆಗುಂಪಾಗುತ್ತಿರುವ ಕೃಷಿಯೊಂದಿಗೆ ಅದಕ್ಕೆ ಸಂಬಂಧಪಟ್ಟ ನೂರಾರು ಶಬ್ದಗಳು ಮಣ್ಣಲ್ಲಿ ಮರೆಯಾಗುತ್ತಿವೆ. ಕೃಷಿಪ್ರಧಾನವಾಗಿದ್ದ ತುಳುನಾಡಿನಲ್ಲಿ ಪ್ರಚಲಿತವಿದ್ದ ಕೃಷಿಸಂಬಂಧವಾದ ಎಷ್ಟೋ ಶಬ್ದಗಳು ಬಳಕೆಯ ಆವಶ್ಯಕತೆಯಿಲ್ಲದೆ ಜನರ ಆಡುನುಡಿಯಿಂದ ಮರೆಯಾಗಿವೆ. ತುಳುವಿನಲ್ಲಿ ಬಳಕೆಯಲ್ಲಿದ್ದ ಗದ್ದೆಗೆ-ಪೈರಿಗೆ ಸಂಬಂಧಿಸಿದ ಶಬ್ದಗಳು, ತೋಟಕ್ಕೆ ಸಂಬಂಧಿಸಿದ ಶಬ್ದಗಳು, ತೆಂಗಿಗೆ-ತೆಂಗಿನ ಮರಕ್ಕೆ ಸಂಬಂಧಿಸಿದ ಶಬ್ದಗಳು, ಸಸ್ಯಸಂಪತ್ತಿಗೆ ಸಂಬಂಧಿಸಿದ ಶಬ್ದಗಳು ಇಂದು ಜನರ ಆಡುನುಡಿಯಿಂದ ಮರೆಯಾಗಿ ಕೇವಲ [...]