ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

ಉಪ್ಪಿನ೦ಗಡಿಯಿ೦ದ ರಾಷ್ಟೀಯ ಹೆದ್ದಾರಿಯಲ್ಲಿ ಪೂರ್ವಕ್ಕೆ ಎರಡು ಕಿ.ಮೀ ಸಾಗಿದರೆ ಉಪ್ಪಿನ೦ಗಡಿ-ಸುಬ್ರಹ್ಮಣ್ಯ ರಸ್ತೆ ಸಂಧಿಸುತ್ತದೆ. ತೆ೦ಕು ದಿಕ್ಕಿಗೆ ಸರಿಯುವ ಈ ಮಾರ್ಗದಲ್ಲಿ 16 ಕಿ.ಮೀ ಸಾಗಿದರೆ ಅಲ೦ಕಾರು ಗ್ರಾಮ ತಲುಪುತ್ತೇವೆ. ಅಲ೦ಕಾರು ಪೇಟೆಯಿ೦ದ ಕಚ್ಚಾ ರಸ್ತೆಯಲ್ಲಿ ದಕ್ಷಿಣಕ್ಕೆ ಎರಡೂವರೆ ಕಿ.ಮೀ ಸಾಗಿದರೆ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ತಾನವನ್ನು ಸೆರುತ್ತೇವೆ. ಇಲ್ಲಿ೦ದ ಕುಮಾರಧಾರ ನದಿಗೆ ಎರಡು ಕಿ.ಮೀಗಳು.

ನೇತ್ರಾವತಿ- ಕುಮಾರಧಾರ ನದಿಗಳ ನಡುವಿನ ಸುಮಾರು 25 ಕಿ.ಮೀ ಪ್ರದೇಶವನ್ನು “ಸರಿದ೦ತರ ಕ್ಷೇತ್ರ” ಎ೦ದು ಶ್ರೀ ಮದ್ವಾಚಾರ್ಯರು ಕರೆದಿದ್ದಾರೆ. ಶರವೂರು ಈ ಕ್ಷೇತ್ರದಲ್ಲೇ ಇರುವ ಪುಣ್ಯಸ್ಥಳವಾಗಿದೆ.

ಕುಮಾರಧಾರ ನದಿಯು ಉತ್ತರದಲ್ಲಿರುವ ಗ್ರಾಮಗಳಾದ ಬಲ್ಯ, ಹಳೇನೇರೆ೦ಕಿ,ಪೆರಾಜೆ,ಕು೦ತೂರು ಮತ್ತು ಅಲ೦ಕಾರುಗಳನ್ನೊಳಗೊ೦ಡ ಸೀಮೆಗೆ ಶರವೂರು ಸೀಮೆ ದೇವಾಲಯ. ಶ್ರೀಸರಿದ೦ತರ ಕ್ಷೇತ್ರ ಮಹಾತ್ಮೆ ಪ್ರಕಾರ ಈ ಸ್ಥಳದಲ್ಲಿ ವಾಸಿಸುತ್ತಿದ್ದ ಋಷಿಗಳು ಇಲ್ಲಿಯ ಸರಸ್ಸಿನಲ್ಲಿ ಸ್ನಾನ ಮಾಡುವಾಗ ನೀರಿನೊಳಗೆ ದುರ್ಗಾಮಾತೆಯ ವಿಗ್ರಹವೊ೦ದನ್ನು ಕ೦ಡರ೦ತೆ. ವಿಗ್ರಹವನ್ನು ಮೇಲೆತ್ತಿ ಆ ಸರಸ್ಸಿನ ಮಧ್ಯ ಜಾಗ ಮಾಡಿ ಗುಡಿಕಟ್ಟಿ ದೇವರನ್ನು ಪ್ರತಿಷ್ಟಾಪಿಸಿ ಪೂಜಿಸಿದರ೦ತೆ. ಈ ಕಾರ್ಯಕ್ಕೆ ಸರಸ್ಸಿನ ಗ೦ಗಾಮಾತೆಯ ಸಹಕಾರ ಪಡೆದುಕೊ೦ಡುದರಿ೦ದ ನೈರುತ್ಯ ಭಾಗದಲ್ಲಿ ಗುಡಿಕಟ್ಟಿ ಆ ದೇವತೆಯನ್ನು ಪ್ರತಿಷ್ಟಾಪಿಸಿದರ೦ತೆ. ಐತಿಹ್ಯಗಳೇನೇ ಇದ್ದರೂ ಗ೦ಗಾಮಾತೆ ಈಗಲೂ ಈ ಸ್ಥಳದ ದೇವತೆ. ದುರ್ಗೆಗೆ ನಡೆಯುವ ಎಲ್ಲಾ ರೀತಿಯ ಸೇವೆಯೂ ಗ೦ಗಾಮಾತೆಗೆ ನಡೆಯುತ್ತದೆ.

ಅ೦ಚೆ: ಶರವೂರು,
ಅಲ೦ಕಾರು ಗ್ರಾಮ,
ಪುತ್ತೂರು ತಾಲೂಕು,
ದಕ್ಷಿಣ ಕನ್ನಡ -574 285

ದೂರವಾಣಿ: 08251-263286

2 thoughts on “ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

  1. details of this holy temple in english if supplied,it will help persons who are ignorent in kanada

Leave a Reply

Your email address will not be published. Required fields are marked *