The idea of starting a website of Shivalli Brahmins, which was conceived in April 2007. When we discussed about this website with the Honorable Sri Sri Vishvesha Theertha Sripaadangala of Sri Pejavara Adhokshaja Matha, Udupi, he wholeheartedly blessed us. Sri Sri Vidyaprasanna Theertha Sripaadaangala of Sri Subramanya Matha has also agreed to provide us with his unprecedented guidance. With the blessings of all seers from all our Mathas, this website inagurated on 05/08/2007. We would like to express our heartfelt gratitude to all of them, without whom this website would never have been possible. We can now confidently say that we have the support and encouragement of all our Gurus and elders.
As we know, NRI Shivalli Brahmin friends, have no facilities to gain knowledge about our traditions. Even books that convey such information are not sufficiently available as a whole together. It is also tough for them to find time to read these books. They have nobody to clear their doubts regarding our traditions and religion. Thus, the serious lack of knowledge of our values, traditions, etc. among them has led to a feeling that they are moving away from our culture. At the same time, a lot of interest has been noticed, especially among the youngsters, to learn and follow our traditions.
A number of books on the Tulu Shivalli Brahmin language, traditions, achievements, history, etc. have been published, but are not reaching everyone. In today’s world, the only medium available to everybody is the Internet. We have established this website with the aim of spreading the knowledge about our culture, traditions, religious practices and their importance; providing people with the information they are looking for; bridging the gap between the people of our community through discussions and bringing everyone close together, irrespective of the place they reside in.
To enable good progress and usefulness of this website, it is very essential to have the guidance of our gurus, elders and scholars. So we request you to openly send your opinions, suggestions and advice to the organizers. We expect your continuous encouragement and cooperation.
We are indebted to Vedamurthy Sri Venkataramana Upadhyaya of Erki Matha, Vedamurthy Sri Lakshminarayana Acharya of Karinja and Sri Ranganatha Ungrupulithaya of Puttur for their suitable suggestions and directions.
shivallibrahmins.com is a website that belongs to all of us. The organizers and editorial board form only a small fraction of it. This website is meant to contain overall information about our community. But right now, we have presented only that information that is available to us. So we cannot claim that the information provided is complete. This is also because of difference of opinions regarding some details. Hence, we request you to provide us with as much information as possible.
You can browse through this website whenever you are free, and gain knowledge about our lifestyles and traditions. Also, it is important to practice all these aspects in our daily lives, as much as possible. If this happens, then there is no doubt that our hard work has been rewarded. One more significant thing to be noted here is that, our traditions should not end with us. It is our responsibility to transfer this knowledge to the next generation. So let us keep up our culture and traditions.
Kaale Varshathu Parjanyah
Prathivee Sasya shaalinee |
Deshoyam Kshobha Rahithaah
Sajjanah Santhu Nirbhayaah ||
Lokaah Samasthaah Sukhino Bhavanthu ||
Om Shanthi Shanthi Shanthi ||
ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ. ಹಾಗೂ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಸ್ವಾಮೀ ಶ್ರೀ ಸುಬ್ರಹ್ಮಣ್ಯ ಮಠ, ಇವರ ಅನುಗ್ರಹ ಹಾಗೂ ಮಾರ್ಗದರ್ಶನದೊಂದಿಗೆ ಈ ವೆಬ್‌ಸೈಟ್ನ್ ದಿನಾಂಕ ೦೫/೦೮/೨೦೦೭ ರಂದು ಆರಂಭಗೊಂಡಿದೆ.
ಇಂದು ನಮ್ಮ ಯುವಜನತೆ ಉದ್ಯೋಗದ ನಿಮಿತ್ತ ವಿಶ್ವದಾದ್ಯಂತ ಹಬ್ಬಿರುತ್ತಾರೆ. ತುಳುನಾಡಿನಿಂದ ದೂರವಾದ ನಮ್ಮ ಯುವಜನರಲ್ಲಿ ಹಲವರಿಗೆ ನಮ್ಮ ಪರಂಪರೆ, ಜೀವನಪದ್ಧತಿ, ಮೌಲ್ಯಗಳು ಇತ್ಯಾದಿ ಮಾಹಿತಿಗಳ ಕೊರತೆ ಇದೆ. ಹಾಗೆಯೇ ಇವೆಲ್ಲವನ್ನೂ ತಿಳಿದುಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗಾದರೂ ಅನುಸರಿಸಬೇಕು ಎನ್ನುವ ಅಪೇಕ್ಷೆಯೂ ವ್ಯಕ್ತವಾಗಿದೆ.
ನಮ್ಮ ತುಳು ಶಿವಳ್ಳಿ ಬ್ರಾಹ್ಮಣರ ಭಾಷೆ, ಸಂಸ್ಕೃತಿ, ಸಾಧನೆ, ಇತಿಹಾಸ ಮುಂತಾದುವುಗಳ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ. ಆದರೆ ಅದು ಎಲ್ಲರನ್ನೂ ತಲುಪುತ್ತಿಲ್ಲ. ಇಂದು ಎಲ್ಲರನ್ನೂ ಸುಲಭವಾಗಿ ತಲುಪಬಲ್ಲ ಮಾಧ್ಯಮ ಅಂತರ್ಜಾಲ ಮಾಧ್ಯಮ. ಇಲ್ಲಿಯ ವರೆಗೆ ನಾವು ಈ ಮಾಧ್ಯಮವನ್ನು ಬಳಸಿಕೊಂಡಿಲ್ಲ. ಪ್ರಸ್ತುತ ಈ ಮಾಧ್ಯಮವನ್ನು ಬಳಸಿಕೊಂಡು ಗುರುಹಿರಿಯರ ಅನುಗ್ರಹದೊಂದಿಗೆ ನಮ್ಮ ಸಮಗ್ರ ಮಾಹಿತಿಗಳನ್ನು ವಿಶ್ವದಾದ್ಯಂತ ಇರುವ ನಮ್ಮೆಲ್ಲ ಬಂಧುಗಳಿಗೆ ತಲುಪುವಂತೆ ಮಾಡಬೇಕು ಎಂದು ಈ ವೆಬ್‌ಸೈಟ್‌ನ್ನು ಆರಂಭಿಸಿರುತ್ತೇವೆ.
ವೆಬ್‌ಸೈಟ್‌ನ ಮೂಲಕ ನಮ್ಮ ಸಮಾಜದ ಸಮಗ್ರ ಮಾಹಿತಿಯನ್ನು ನೀಡಬೇಕು, ಧಾರ್ಮಿಕ ಆಚರಣೆಗಳ ಬಗ್ಗೆ ಪ್ರಾಮುಖ್ಯತೆಯನ್ನು ನೀಡಬೇಕು. ಅಪೇಕ್ಷಿಸಿದವರಿಗೆ ಬೇಕಾದ ವಿಚಾರಗಳನ್ನು ತಿಳಿಸಿಕೊಡಬೇಕು ಎನ್ನುವ ಉದ್ದೇಶದೊಂದಿಗೆ ವೆಬ್‌ಸೈಟ್ನ್ನು ಆರಂಭಿಸಲಾಗಿದೆ. ಜೊತೆಗೆ ಎಲ್ಲೇ ಇರಲಿ, ಈ ವೆಬ್‌ಸೈಟ್‌ನ ಮೂಲಕ ಪರಸ್ಪರ ವಿಚಾರ ವಿನಿಮಯ ನಡೆಸಿಕೊಂಡು ನಾವೆಲ್ಲರೂ ಹತ್ತಿರವಾಗಬೇಕು, ಸಂಘಟಿತರಾಗಬೇಕು, ಈ ವೆಬ್‌ಸೈಟ್ ನಮ್ಮೆಲ್ಲ ಬಂಧುಗಳಿಗೆ ಸಂಪರ್ಕ ಸೇತುವಾಗಬೇಕು ಎಂದು ಬಯಸುತ್ತೇವೆ.
ಸಂದರ್ಭೋಚಿತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ ಎರ್ಕಿ ಮಠದ ವೇದಮೂರ್ತಿ ಶ್ರೀ ವೆಂಕಟ್ರಮಣ ಉಪಾಧ್ಯಾಯರು, ಕಾರಿಂಜದ ವೇದಮೂರ್ತಿ ಶ್ರೀ ಲಕ್ಷ್ಮೀ ನಾರಾಯಣ ಆಚಾರ್ಯರು, ಪುತ್ತೂರಿನ ಶ್ರೀ ರಂಗನಾಥ ಉಂಗ್ರುಪುಳಿತ್ತಾಯ, ಇವರುಗಳಿಗೆ ನಾವು ಆಭಾರಿಗಳಾಗಿದ್ದೇವೆ.
ಶಿವಳ್ಳಿ ಬ್ರಾಹ್ಮಣರ ಈ ವೆಬ್‌ಸೈಟ್ ನಮ್ಮೆಲ್ಲರ ವೆಬ್‌ಸೈಟ್. ಇದರಲ್ಲಿ ಸಂಯೋಜಕರು, ಸಲಹಾ ಮಂಡಲಿಯವರು ನಿಮಿತ್ತ ಮಾತ್ರ. ಯಾಕೆಂದರೆ ಇದು ಸಮಗ್ರ ಮಾಹಿತಿಯನ್ನೊಳಗೊಳ್ಳುವ ವೆಬ್‌ಸೈಟ್. ಸಮಗ್ರವಾದ ನಮ್ಮ ಮಾಹಿತಿಗಳು ನಮಗೆ ಸರಿಯಾಗಿ ಲಭ್ಯವಿಲ್ಲ. ಲಭ್ಯವಾದ ಮಾಹಿತಿಗಳನ್ನು ಪ್ರಕಟಿಸುತ್ತಿದ್ದೇವೆ. ಪ್ರಕಟಿಸಿದ ಮಾಹಿತಿಗಳೂ ಪರಿಪೂರ್ಣವೆಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ವಿಚಾರಗಳಲ್ಲಿ ಅಭಿಪ್ರಾಯ ಭೇದಗಳೂ ಇವೆ. ಈ ನೆಲೆಯಲ್ಲಿ ತಾವುಗಳು ನಮಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಬೇಕು.
ಲಭ್ಯವಿರುವ ಕುಲಗಳ ಪಟ್ಟಿಯನ್ನು ನೀಡಿದ್ದೇವೆ. ಇನ್ನು ಅವುಗಳಲ್ಲಿ ಬಿಟ್ಟು ಹೋಗಿದ್ದರೆ ನಮಗೆ ತಿಳಿಸಿ. ಕುಲಗಳ ಗೋತ್ರಗಳ, ಕುಲದೇವರುಗಳ ಬಗ್ಗೆ, ಗುರು ಮಠಗಳ ಬಗ್ಗೆ ಸರಿಯಾದ ಮಾಹಿತಿಗಳು ಲಭ್ಯವಿಲ್ಲ. ತಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯಿರುವುದಾದರೆ ದಯವಿಟ್ಟು ನಮಗೆ ಮಾಹಿತಿಗಳನ್ನು ನೀಡಿ. ವಿಭಿನ್ನ ಅಭಿಪ್ರಾಯವಿರುವುದಾದರೆ ಹಿರಿಯರ ಜೊತೆಗೆ, ವಿದ್ವಾಂಸರ ಜೊತೆಗೆ ಕುಳಿತು ಚರ್ಚಿಸಲು ಅವಕಾಶಗಳನ್ನು ಕಲ್ಪಿಸಬಹುದು.
ಈ ವೆಬ್‌ಸೈಟ್ ಒಳ್ಳೆಯ ರೀತಿಯಲ್ಲಿ ಮುನ್ನಡೆಯಬೇಕು, ಎಲ್ಲರಿಗೂ ಅನುಕೂಲವಾಗಬೇಕು, ಎನ್ನುವ ನೆಲೆಯಲ್ಲಿ ಗುರುಹಿರಿಯರ, ವಿದ್ವಾಂಸರ ಮಾರ್ಗದರ್ಶನ ನಮಗೆ ಅಗತ್ಯವಿದೆ. ತಾವುಗಳು ತಮ್ಮ ಅಭಿಪ್ರಾಯಗಳನ್ನು, ಸಲಹೆ ಸೂಚನೆಗಳನ್ನು ಸಂಯೋಜಕರಿಗೆ ಮುಕ್ತವಾಗಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ. ಈ ವೆಬ್‌ಸೈಟ್‌ಗೆ ತಮ್ಮೆಲ್ಲರ ಪ್ರೋತ್ಸಾಹ, ಸಹಕಾರಗಳನ್ನು ಸದಾ ಬಯಸುತ್ತೇವೆ.
ಬಿಡುವಿನ ವೇಳೆಯಲ್ಲಿ ಈ ವೆಬ್‌ಸೈಟ್‌ನ್ನು ನೋಡುತ್ತಿರಬಹುದು. ಜೀವನ ಪದ್ಧತಿಗಳ ಬಗ್ಗೆ, ನಮ್ಮ ಪರಂಪರೆಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗೂ ಸಾಧ್ಯವಾದಷ್ಟು ಮಟ್ಟಿಗಾದರೂ ನಮ್ಮಲ್ಲಿ ಉಲ್ಲೇಖಿತ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಹಾಗಾದರೆ ನಮ್ಮೆಲ್ಲರ ಶ್ರಮವು ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ. ಇನ್ನೊಂದು ಅಂಶವೇನೆಂದರೆ, ನಮ್ಮ ಹಿರಿಯರಿಂದ ಬಂದ ಪರಂಪರೆಗಳು ನಮ್ಮಲ್ಲೇ ಕೊನೆಗೊಳ್ಳಬಾರದು. ನಮ್ಮ ಮುಂದಿನ ಜನಾಂಗಕ್ಕೂ ತಲುಪಿಸುವ ಜವಾಬ್ದಾರಿ ನಮಗಿದೆ. ಕನಿಷ್ಟ ಆಚರಣೆಗಳನ್ನಾದರೂ ಅನುಸರಿಸೋಣ. ತಮ್ಮ ಅಭಿಪ್ರಾಯಗಳನ್ನು ನಮಗೂ ತಿಳಿಸಿ, ಮುಕ್ತವಾಗಿ ಚರ್ಚಿಸೋಣ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದವರೆಲ್ಲರನ್ನೂ ಮತ್ತೊಮ್ಮೆ ಸ್ಮರಿಸುತ್ತಾ,
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ |
ದೇಶೋಯಂ ಕ್ಷೋಭರಹಿತಾ ಬ್ರಾಹ್ಮಣಾಃ ಸಂತು ನಿರ್ಭಯಾಃ ||
ಲೋಕಾಃ ಸಮಸ್ತಾ ಸುಖಿನೋ ಭವಂತು ||
ಓಂ ಶಾಂತಿಃ ಶಾಂತಿಃ ಶಾಂತಿಃ ||
Holy Blessings and Guidance
Sri Sri Vidya Prasanna theertha Swamiji,
Samputa Nrusimha Mutt,
Subrahmanya.
Conveners:
1.Surya Prakasha Udupa,
‘Pranamya’, Kaje house,
Alangar Village and Post, Puttur Taluk, D.K.
2. K. Ranjith Yadapadithaya
Battadka House, Sajipa Munnur post, Bantwal Taluk
Editorial Board:
1. Dr. Sathyanarayana Acharya,
Lecturer,
Poornaprajna VidyaPeet, Bangalore.
2. Dr. Padmanabha Kekunnaya
Navadurga,
Udupi.
3. Dr. Balachandra Achar Hejamadi
Professor & Head
Dept. of Electronics & Communication Engineering
Shri Madhwa Vadiraja Institute of Technology & Management
Vishwothama Nagar, Bantakal, UDUPI – 574115, Karnataka