-ಶ್ರೀ ಪುರಂದರದಾಸರು
ಎಲ್ಲರು ಮಾಡುವುದು ಹೊಟ್ಟೆಗಾಗಿ |
ಗೇಣು ಬಟ್ಟೆಗಾಗಿ || ಪ ||
ಸಿರಿ | ವಲ್ಲಭನ ಭಜಿಸುವುದು ಮುಕ್ತಿಗಾಗಿ || ಅ ಪ ||
ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ |
ಮಲ್ಲರೊಡನಾಡುವುದು ಹೊಟ್ಟೆಗಾಗಿ ||
ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ |
ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ || ೧ ||
ದೊರೆತನ ಮಾಡುವುದು ಹೊಟ್ಟೆಗಾಗಿ |
ಕರಿ | ತುರಗವೇರುವುದು ಹೊಟ್ಟೆಗಾಗಿ ||
ದುರಿತವ ಮಾಡುವುದು ಹೊಟ್ಟೆಗಾಗಿ |
ಸಿರಿ | ಹರಿಯ ಭಜಿಸುವುದು ಮುಕ್ತಿಗಾಗಿ || ೨ ||
ಬೆಟ್ಟವ ಹೊರುವುದು ಹೊಟ್ಟೆಗಾಗಿ |
ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ ||
ದಿಟ್ಟವಾಗಿ ನಮ್ಮ ಶ್ರೀ ಪುರಂದರ |
ವಿಠಲನ ಧ್ಯಾನವು ಮುಕ್ತಿಗಾಗಿ || ೩ ||
Download – Kannada
i like this song