ಗಜಮುಖನೆ ಗಣಪತಿಯೇ

ಗಜಮುಖನೆ ಗಣಪತಿಯೇ – Lyrics in Kannada

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು

ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ

ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ

Gajamukhane Ganapathiye – Lyrics in English

Gajamukhane Ganapathiye Ninage Vandane
Nambidavara Paalina Kalpataru Neene

Bhadrapada Shuklada Chauthiandu
Nee Mane Manegu Dayamadi Harasu Yendu
Ninna Sannidhanake Talebagi Kaiya Mugidu
Beduva Bhaktarige Ni Daya Sindhu

E Yelu Lokada Anu Anuvina
Ehaparada Sadhanake Nee Karana
Ninolume Notada Ondu Honna Kirana
Nididare Sakayya Janma Pavana

Parvathi Parashivana Prema Puthrane
Palisuva Paradaiva Bere Kane
Paapada Pankadali Paduma Enisu Enna
Pada Seva Onde Dharama Sadhana

 

4 thoughts on “ಗಜಮುಖನೆ ಗಣಪತಿಯೇ

  1. Saralavagi yellara bayallu gunuguva sahithya vannu Kannada janakka kottiddakke koti pranamagalu
    Nimmava

  2. ಪಾಪದ ಎಂದಾಗಿದೆ

    ಪಾದದ ಎಂದಾಗಬೇಕು

Leave a Reply

Your email address will not be published.