ಭಾದ್ರಪದ ಶುದ್ಧ (ಶುಕ್ಲ ಪಕ್ಷ) ದ್ವಾದಶೀ ವಾಮನಜಯಂತೀ. ವಾಮನ ದೇವ ಅದಿತಿಯ ಗರ್ಭದಿಂದ ಶ್ರವಣ ನಕ್ಷತ್ರವುಳ್ಳ ದ್ವಾದಶಿಯಂದು ಮಧ್ಯಾಹ್ನ ಆವಿರ್ಭವಿಸಿದ. ಆ ದ್ವಾದಶಿಯಂದೇ ದಧಿವೃತ ಮುಗಿದಿರುತ್ತದೆ. ಭಗವಂತನಿಗೆ ದಧ್ಯನ್ನವನ್ನು (ಮೊಸರನ್ನ) ನಿವೇದಿಸಿ ವಾಮನನ್ನು ಪೂಜಿಸಬೇಕು.
ಅಜಿನದಂಡಕ ಮಂಡಲು ಮೇಖಲಾ ರುಚಿರಪಾವನವಾಮನಮೂರ್ತಯೇ |
ಮಿತ ಜಗತ್ತ್ರಿತಯಾಯ ಜಿತಾರಯೇ ನಿಗಮವಾಕ್ಪಟವೇ ವಟವೇ ನಮಃ ||
ದೇವೇಶ್ವರಾಯ ದೇವಾಯ ದೇವಸಂಭೂತಿ ಕಾರಿಣೇ ಪ್ರಭವೇ ಸರ್ವದೇವಾನಾಂ ವಾಮನಾಯ ನಮೋ ನಮಃ |
ಅದೇ ವೇಳೆ ವಾಮನನಿಗೆ ಅರ್ಘ್ಯ
ನಮಸ್ತೇ ಪದ್ಮನಾಭಾಯ ನಮಸ್ತೇ ಜಲಶಾಯಿನೇ|
ತುಭ್ಯಮರ್ಘ್ಯಂ ಪ್ರದಾಸ್ಯಾಮಿ ಬಾಲವಾಮನ ರೂಪಿಣೇ ||
ಇದೇ ದಿನ ಕ್ಷೀರ ವ್ರತಾರಂಭ. ಇಂದಿನಿಂದ ಒಂದು ತಿಂಗಳು ಕ್ಷೀರ ನಿವೇದನೆಯು ನಿಷಿದ್ಧವಾಗಿದೆ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ