ಕಾರ್ತಿಕ ಮಾಸದ ಆರಂಭ (ಪಾಡ್ಯ) ದಿಂದ ಸುರುಮಾಡಿ ಪ್ರತಿದಿನವೂ ತುಳಸೀಪೂಜೆ. ತುಳಸೀ ಸಂಕೀರ್ತನೆಗಳು ನಡೆಯುತ್ತವೆ. ಉತ್ಥಾನ ದ್ವಾದಶಿಯಂದು ತುಳಸೀಪೂಜೆಯೊಂದಿಗೆ ಅದರ ಸಮಾರೋಪ. ಪಶ್ಚಿಮಜಾಗರ ಪೂಜೆಯೂ ಇಂದಿಗೆ ಮುಗಿದಿದೆ.
ತುಳಸಿಯ ಜೊತೆಗೆ ನೆಲ್ಲಿಯ ಶಾಖೆಯನ್ನು ನೆಟ್ಟು ಮಂಟಪ ರಂಗವಲ್ಯಾದಿಗಳಿಂದ ಅಲಂಕರಿಸಬೇಕು. ಬಾಳೆದಿಂಡು ಮಣ್ಣಿನ ಹಣತೆ ನೆಲ್ಲಿದೀಪಗಳಿಂದ ಶೋಭಿತವಾದ ತುಳಸಿಯ ಸನ್ನಿಧಿಗೆ ಪೂಜಾದ್ರವ್ಯಗಳೊಡನೆ ಬಂದು ತುಳಸೀಪೂಜೆಯನ್ನು ಮಾಡಬೇಕು.
ಶ್ರೀತುಲಸೀದಾಮೋದರ ಪ್ರೇರಣಯಾ ತುಲಸೀದಾಮೋದರಪ್ರೀತ್ಯರ್ಥಂ
ತುಲಸೀ ಧಾತ್ರೀಸನ್ನಿಧೌ ವಿಷ್ಣುಪೂಜಾಖ್ಯಂ ಕರ್ಮ ಕರಿಷ್ಯೇ |
ಘಂಟಾನಾದ,ಶಂಖಪೂಜೆ ಪೀಠಪೂಜೆಗಳನ್ನು ಮಾಡಿ, ತುಲಸೀ ಹಾಗೂ ನೆಲ್ಲಿ(ಧಾತ್ರೀ)ಯ ನೆರಳಲ್ಲಿ ದಾಮೋದರನನ್ನು ಆವಾಹಿಸಿ ಪೂಜಿಸಬೇಕು.
ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ|
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು||
ಇದಂ ವಿಷ್ಣುರ್ಮೇಧಾ ತಿಥಿರ್ವಿಷ್ಣುರ್ಗಾಯತ್ರೀ |
ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿಧದೇ ಪದಮ್ |
ಸಮೂಹ್ಳಮಸ್ಯ ಪಾಂಸುರೇ |
ದಾಮೋದರಾಯ ನಮ: ತುಲಸೀಧಾತ್ರೀಸನ್ನಿಧೌ ದಾಮೋದರಮಾವಾಹಯಾಮಿ |
ಭೂ : ದಾಮೋದರಮಾವಾಹಯಾಮಿ |
ಭುವ : ದಾಮೋದರಮಾವಾಹಯಾಮಿ |
ಸ್ವ: ದಾಮೋದರಮಾವಾಹಯಾಮಿ |
ಭೂರ್ಭುವ: ಸ್ವ: ದಾಮೋದರಮಾವಾಹಯಾಮಿ | ಸ್ಥಾಪಯಾಮಿ | ಪೂಜಯಾಮಿ|
ಆವಾಹಿತದಾಮೋದರಾಯ ನಮ: | ಧ್ಯಾಯಾಮಿ |
ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ದಾಮೋದರ ನಮಸ್ತೆ~ಸ್ತು ನರಕಾರ್ಣವತಾರಕ |
ಸಂಸಾರದಾಮಬದ್ಧಂ ಮಾಂ ಮೋಚಯಸ್ವ ದಯಾನಿಧೇ |
ಗತಾ ಮೇಘಾ ವಿಯಚ್ಚೈವ ನಿರ್ಮಲಂ ನಿರ್ಮಲಾ ದಿಶ: |
ಶಾರದಾನಿ ಚ ಪುಷ್ಪಾಣಿ ಗೃಹಾಣ ಮಮ ಕೇಶವ ||
ದಾಮೋದರಾಯ ನಮ: | ಪುಷ್ಷಾಂಜಲಿಂ ಸಮರ್ಪಯಾಮಿ |
ಧೂಪ -ದೀಪ ನೈವೇದ್ಯಗಳನ್ನಿತ್ತು ವಂದಿಸಬೇಕು.
ಪ್ರಸೀದ ತುಲಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||
ತುಲಸ್ಯೈ ನಮ: | ಸ್ನಾನ -ವಸ್ತ್ರಗಂಧಾದೀನಿ ಸಮರ್ಪಯಾಮಿ |
ಕುಂಕುಮಂ ತಿರಕಂ ಚಾರು ರಕ್ತವರ್ಣಂ ಸುಶೋಭನಮ್ |
ಮಂಗಲಂ ಮಂಗಲೇ ದೇವಿ ಫಾಲಧಾರ್ಯಂ ದದಾಮಿ ತೇ ||
ತುಲಸ್ಯೈ ನಮ: | ಹರಿದ್ರಾ -ಕುಂಕುಮಂ ಸಮರ್ಪಯಾಮಿ |
ಭ್ರೂ ಮಧ್ಯಶೋಭಿಸಿಂಧೂರಂ ತಪ್ತಹೇಮಸಮಪ್ರಭಮ್ |
ತುಭ್ಯಂ ದಾಸ್ಯಾಮಿ ತುಲಸಿ ಮಮ ದೋಷಂ ವ್ಯಪೋಹಯ ||
ಸಿಂಧೂರಂ ಸಮರ್ಪಯಾಮಿ |
ಅಕ್ಷತಾನ್ ಶುಭದಾನ್ ದೇವಿ ಹರಿದ್ರಾಚೂರ್ಣ ಮಿಶ್ರಿತಾನ್ |
ಪ್ರತಿಗೃಹ್ಣೀಷ್ವ ಶ್ರೀದೇವಿ ತುಲಸ್ಯೈ ತೇ ನಮೋ ನಮ: ||
ಅಕ್ಷತಾನ್ ಸಮರ್ಪಯಾಮಿ |
ಮಾಲತೀ ಬಿಲ್ವಮಂದಾರಕುಂದಾದಿ ಸುಮನೋಹರಮ್ |
ಪುಷ್ಪಂ ಗೃಹಾಣ ದೇವೇಶಿ ಸರ್ವಮಂಗಲದಾ ಭವ ||
ನಾನಾವಿಧ ಪುಷ್ಪಾಣಿ ಸಮರ್ಪಯಾಮಿ |
ಧೂಪ -ದೀಪಗಳೊಂದಿಗೆ ದೇವನಿವೇದಿತವಾದ ಉದ್ದಿನ ದೋಸೆ. ಪಂಚಕಜ್ಜಾಯ, ಭಕ್ಷ್ಯಾದಿಗಳನ್ನು
ನಿವೇದಿಸಿ ಮಂಗಳಾರತಿ ಮಾಡಬೇಕು.
ನಮಸ್ತೇ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನ: ಪ್ರಿಯೇ ||
ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪು: ಪಾವನೀ
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಛರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ:||
ತುಲಸೀ ದಾಮೋದರಾಭ್ಯಾಂ ನಮ: | ಪ್ರದಕ್ಷಿಣನಮಸ್ಕಾರಾನ್ ಸಮರ್ಪಯಾಮಿ |
ತುಲಸೀ ದಾಮೋದರಾಭ್ಯಾಂ ನಮ: | ಇದಂ ವಾಂ ಅರ್ಘ್ಯಮ್ | ಎನ್ನುತ್ತಾ ಹಾಲುತುಂಬಿದ ಶಂಖದಿಂದ ಅರ್ಘ್ಯವನ್ನು ಕೊಟ್ಟು ಯೋಗನಿದ್ರೆಯಲ್ಲಿದ್ದು
ಇಂದು ಎದ್ದಿರುವ ದೇವನನ್ನು ಪ್ರಾರ್ಥಿಸಬೇಕು.
ಬ್ರಹ್ಮೇಂದ್ರ ರುದ್ರೇಂದ್ರಕುಬೇರಸೂರ್ಯ –
ಸೋಮಾದಿಭಿರ್ವಂದಿತ ವಂದನೀಯ |
ಬುಧ್ಯಸ್ವ ದೇವೇಶ ಜಗನ್ನಿವಾಸ
ಮಂತ್ರಪ್ರಭಾವೇನ ಸುಖೇನ ದೇವ ||
ಇಯಂ ತು ದ್ವಾದಶೀ ದೇವ ಪ್ರಬೋಧಾರ್ಥಂ ವಿನಿರ್ಮಿತಾ |
ತ್ವಯೈವ ಸರ್ವಲೋಕನಾಂ ಹಿತಾರ್ಥಂ ಶೇಷಶಾಯಿನಾ ||
ಉತ್ತಿಷ್ಠೋತಿಷ್ಠ ಗೋವಿಂದ ತ್ಯಜ ನಿದ್ರಾಂ ಜಗತ್ಪ್ರಭೋ |
ತ್ವಯಿ ಸುಪ್ತೇ ಜಗನ್ನಾಥ ಜಗತ್ಸುಪ್ತಂ ಭವೇದಿದಮ್ |
ಉತ್ಥಿತೇ ಚೇಷ್ಟತೇ ಸರ್ವಂ ಉತ್ತಿಷ್ಠೋತ್ತಿಷ್ಠ ಮಾಧವ|
ಅನಯಾ ಪೂಜಯಾ ಭಾರತೀರಮಣಮುಖ್ಯಪ್ರಾಣಾಂತರ್ಗತ: ತುಲಸೀದಾಮೋದರಾತ್ಮಕ: ಗೋಪಾಲಕೃಷ್ಣ: ಪ್ರೀಯತಾಮ್ |
ಹೀಗೆ ಪೂಜೆ ಮುಗಿಸಿ ಸಂಕೀರ್ತನೆಯನ್ನು ಮಾಡಿ ನಮಸ್ಕರಿಸಬೇಕು. ಸಂಕೀರ್ತನೆಗೆ ಸಂಬಂಧಿಸಿದ ಪದ್ಯ ಹಾಗೂ ಶ್ಲೋಕಗಳು ‘ತುಳಸೀಸಂಕೀರ್ತನೆ ಹಾಡುಗಳು’ ಎಂಬ ಪುಸ್ತಕದಲ್ಲಿ ಪ್ರಕಟವಾಗಿವೆ.
ಚಾತುರ್ಮಾಸ್ಯ ವ್ರತ ಮಾಪನ
ಇಂದಿಗೆ ಚಾತುರ್ಮಾಸ್ಯವ್ರತ ಮುಗಿದಿದೆ. ಈಗ ವ್ರತದ ಕೃಷ್ಣಾರ್ಪಣ ಬಿಡಬೇಕು. ವಿಪ್ರರಿಗೆ ಬೇಳೆ-ಬೆಲ್ಲ ದಾನವಿತ್ತು-
ಇದಂ ವ್ರತಂ ಮಯಾ ದೇವ ಕೃತಂ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾಜ್ಜನಾರ್ದನ ||
ಅನೇನ ಮಯಾ ಸಪತ್ನಿಕೇನ ಆಚರಿತೇನ ಶಾಕವ್ರತ -ದಧಿವ್ರತ -ಕ್ಷೀರವ್ರತ-ದ್ವಿದಲವ್ರತಾಖ್ಯ
ಚಾತುರ್ಮಾಸ್ಯ ವ್ರತಕರಣೇನ ವಾಸುದೇವಸಂಕರ್ಷಣ ಪ್ರದ್ಯುಮ್ನ ಅನಿರುದ್ಧಾತ್ಮಕ:
ಮಧ್ವಪತಿ: ಗೋಪಾಲಕೃಷ್ಣ: ಪ್ರೀಯತಾಮ್ ||
ಶ್ರೀಕೃಷ್ಣಾರ್ಪಣ ಮಸ್ತು |
ಕ್ಷೀರಾಬ್ಧಿ ಪೂಜಾ
ಪ್ರಾತಃ:ಕಾಲದ ತುಲಸೀದಾಮೋದರಪೂಜೆಯಂತೆಯೇ ಸಾಯಂಕಾಲವೂ ತುಲಸೀಸನ್ನಿಧಿಯಲ್ಲಿ ಪೂಜೆ ಮಾಡಿ ಅರ್ಘ್ಯವನ್ನಿಟ್ಟು ಎದ್ದಿರುವ ಭಗವಂತನನ್ನು ಪ್ರಾರ್ಥಿಸುವ ಪೂಜೆಗೆ ಕ್ಷೀರಾಬ್ಧಿ ಪೂಜೆಯೆಂದು ಹೆಸರು. ಹೆಚ್ಚು ಪ್ರದೇಶಗಳಲ್ಲಿ ಬೆಳಗ್ಗೆಯೇ ಈ ಪೂಜೆ ಮುಗಿಸಿರುವುದರಿಂದ ಮತ್ತೆ ಸಾಯಂ ಕ್ಷೀರಾಬ್ಧಿಪೂಜೆಯನ್ನು ಮಾಡುವುದಿಲ್ಲ.
ತುಲಸೀ ವಿವಾಹ
ಇಂದು ತುಲಸೀವಿವಾಹವನ್ನು ಕೆಲವರು ಮಾಡುವುದಿದೆ, ತುಳಸಿಯೆಂಬ ಲಕ್ಷ್ಮೀರೂಪವನ್ನು ದೇವದೇವನಿಗಿತ್ತು ವಿವಾಹಮಾಡುವ ಕಲ್ಯಾಣಕಾರ್ಯಕ್ಕೆ ಮೊದಲು ತುಳಸೀ ದಾಮೋದರನನ್ನು ಹಿಂದೆ ತೋರಿಸಿದಂತೆ ಪೂಜಿಸಲಾಗುತ್ತದೆ.
ಇಲ್ಲಿ ತುಲಸೀವೃಂದಾವನಕ್ಕೆ ಬೆಳ್ಳಿಯ ತುಲಸೀಮುಖವಾಡವನ್ನು ಹಾಕಲಾಗಿರುತ್ತದೆ. ನಾರಾಯಣ ದಾಮೋದರನ ಪ್ರತಿಮೆಯನ್ನು ತುಲಸಿಗೆ ಅಭಿಮುಖವಾಗಿಸಿ ಮಧ್ಯೆ ಅಂತ:ಪಟ ಹಿಡಿದು ಶೋಭಾನೆ, ಮಂಗಳಾಷ್ಟಕಗಳನ್ನು ಹೇಳಿ –
ದೇವೀಂ ಕನಕಸಂಪನ್ನಾಂ ಕನಕಾಭರಣೈರ್ಯುತಾಮ್ |
ದಾಸ್ಯಾಮಿ ವಿಷ್ಣವೇ ತುಭ್ಯಂ ವಿಷ್ಣು ಲೋಕಜೀಗೀಷಯಾ |
ಮಯಾ ಸಂಪ್ರಾರ್ಥಿತಾಂ ಯಥಾಶಕ್ತ್ಯಲಂಕೃತಾಂ ಇಮಾಂ ತುಲಸೀಂ ದಾಮೋದರಾಯ ಶ್ರೀಧರಾಯ ವರಾಯ ತುಭ್ಯಮಹಂ ಸಂಪ್ರದದೇ |
ಹೀಗೆ ಹೇಳಿ ಸಾಕ್ಷತೋದಕವನ್ನು ದೇವನ ಸನ್ನಿಧಿಯಲ್ಲಿ ಬಿಟ್ಟು ತುಲಸೀ ದೇವಿಯನ್ನು ಸ್ವೀಕರಿಸುವಂತೆ ಪ್ರಾರ್ಥಿಸಬೇಕು.
ತ್ವಂ ದೇವಿ ಮೇ ~ಗ್ರತೋ ಭೂಯಾ: ತುಲಸೀ ದೇವಿ ಪಾರ್ಶ್ವಯೋ: |
ತ್ವಂ ದೇವಿ ಪೃಷ್ಠತೋ ಭೂಯಾ: ತ್ವದ್ದಾನಾತ್ ಮೋಕ್ಷ ಮಾಪ್ನುಯಾಮ್ ||
ಎನ್ನುತ್ತಾ. ದೇವನು ಮಾಂಗಲ್ಯ ಬಂಧನವನ್ನು ಮಾಡಿದನೆಂದು ಭಾವಿಸಿ ವಾದ್ಯ ಘೋಷಗಳನ್ನು ನಡೆಸಬೇಕು. ಧ್ರುವಾದ್ಯೌಮಂತ್ರಗಳನ್ನು ಪಠಿಸಬೇಕು. ಮಂಗಳಾರತಿ ಮಾಡಿ ವಂದಿಸಬೇಕು.
ಲಕ್ಷ ದೀಪೋತ್ಸವ
ಕಾರ್ತಿಕಮಾಸಪೂರ್ತಿ ದೀಪೋತ್ಸವಕ್ಕೆ ಮಹತ್ಫಲವಿದೆ. ಅದರಲ್ಲೂ ಕಾರ್ತಿಕಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ದೀಪೋತ್ಸವವು ಸರ್ವಾಭೀಷ್ಟದಾಯಕ. ಜ್ಞಾನಾರೋಗ್ಯವರ್ಧಕ.
ದೀಪೋತ್ಸವನ್ನು ಮಾಡುವವನನ್ನು ಯಮನೂ ಒಯ್ಯಲು ಬರುವುದಿಲ್ಲವಂತೆ. ಅವನನ್ನು ಅಧಿವ್ಯಾಧಿಗಳು ಮುಟ್ಟಲಾರವಂತೆ.
ದೀಪೋತ್ಸವ : ಕೃತೋ ಯೇನ ಸರ್ವಾಭೀಷ್ಟಪ್ರದಾಯಕ: |
ವರ್ಧಂತೇ ತಸ್ಯ ಸತತಂ ಜ್ಞಾನಸೌಭಾಗ್ಯಸಂಪದ: ||
ದೀಪೋತ್ಸವಂ ಯಃ ಕುರುತೇ ತಂ ಯಮೋ~ಪಿ ನ ಪಶ್ಯತಿ |
ಅಧಯೋ ವ್ಯಾಧಯೋ ಬ್ರಹ್ಮ್ಮನ್ ನ ಸ್ಪೃಶಂತಿ ಕದಾಚನ ||
(ಸ್ಮೃತಿಮುಕ್ತಾವಲೀ )
ಈ ಸಮಯದಲ್ಲಿ ಸರ್ವದೇವಾಲಯಗಳಲ್ಲೂ ದೀಪಾರಾಧನೆಯು ವಿಶೇಷವಾಗಿ ನಡೆಯುತ್ತದೆ. ದೀಪೋತ್ಸವನ್ನು ಮನೆಯಲ್ಲೂ ನಡೆಸಬಹುದು.
ಸಂಕಲ್ಪ – ಕಾರ್ತಿಕಪೂರ್ಣಿಮಾಯಾಂ ಕಾರ್ತಿಕದಾಮೋದರಪ್ರೇರಣಾಯಾ ಕಾ ರ್ತಿಕದಾಮೋದರಪ್ರೀತ್ಯರ್ಥಂ ದೀಪೋತ್ಸವಂ ಕರಿಷ್ಯೇ |
ಅದ್ಯ ದೀಪೋತ್ಸವಂ ದೇವ ಕರಿಷ್ಯೇ ತ್ವತ್ಪ್ರಸಾದತಃ: |
ನಿರ್ವಿಘ್ನಂ ಸಿದ್ಧಿಮಾಯಾತು ಯಥೋಕ್ತಫಲದೋ ಭವ ||
* ಚಿನ್ನ , ಬೆಳ್ಳಿ , ಕಂಚು , ತಾಮ್ರ ಮಣ್ಣಿನ ಹಣತೆಗಳನ್ನು ದೀಪಕ್ಕಾಗಿ ಬಳಸಬಹುದು. ಕಬ್ಬಿಣವೂ ದೀಪದ ವಿಷಯದಲ್ಲಿ ನಿಷಿದ್ಧವಲ್ಲ
* ಆಕಳ ತುಪ್ಪ, ಎಳ್ಳೆಣ್ಣೆ , ತೆಂಗಿನೆಣ್ಣೆಗಳು ಶುಭಪ್ರದಗಳು . ಎಮ್ಮೆಯ ತುಪ್ಪ, ಹರಳೆಣ್ಣೆಗಳು ನಿಷಿದ್ಧ.
* ಬತ್ತಿ ಇಷ್ಟೇ ಇರಬೇಕೆಂಬ ನಿಯಮವಿಲ್ಲ, ಒಂದು , ಎರಡು , ಮೂರು ಎಷ್ಟಾದರೂ ಸರಿ .
* ದೀಪವು ದೇವರಿಗಭಿಮುಖವಾಗಿರಬೇಕು. ದಕ್ಷಿಣಾಭಿಮುಖದೀಪ ಕೂಡದು. ನಾಲ್ಕು ದಿಕ್ಕುಗಳಲ್ಲೂ ದೀಪ ಹಚ್ಚುವುದಾದರೆ ದಕ್ಷಿಣಮುಖವಾಗಿರಬಹುದು.
ಸ್ನೇಹೋ ದೀಪಂ ಯಥಾ ಧೃತ್ವಾ ಸರ್ವಲೋಕೋಪಕಾರಕ: |
ತಥಾ ಭವಾನ್ ಮಮ ಜ್ಞಾನಂ ಹೃದಿ ಧಾರಯ ಸಂತತಮ್ ||
ತ್ವದ್ದೂಮಗಂಧಮಾಘ್ರಾಯ ಯಥಾ ಪೂತಾಶ್ಚ ಖೇಚರಾ: |
ತಥಾ ಪ್ರಜ್ವಲ ದೀಪ ತ್ವಂ ಸಪ್ತಲೋಕಸಮಾಶ್ರಯಾ : ||
ದೇವರ ಗರ್ಭಗುಡಿಯ (ಸ್ವಗೃಹದ ) ಭದ್ರದೀಪದಿಂದ ಏಕಾರತಿಯನ್ನು ಹಚ್ಚಿ ಆ ದೀಪದಿಂದ ದೇವಳದ ಪ್ರಾಕಾರಾದಿ ಸ್ಥಲದಲ್ಲೆಲ್ಲಾ (ಸ್ವಗೃಹದ ಪ್ರದೇಶಗಳಲ್ಲೆಲ್ಲಾ ) ದೀಪ ಹಚ್ಚಿ ಪ್ರಾರ್ಥಿಸಬೇಕು.
ಪ್ರಾರ್ಥನಾಮಂತ್ರ –
ಕೌಸ್ತುಭೋರಸ್ಕ ಲಕ್ಷ್ಮೀಶ ವಸ್ತ್ರಮಾಲಾದ್ಯಲಂಕೃತ |
ತ್ವತ್ಪ್ರೀಯೇ ಮಯಾ ದತ್ತಾಮ್ ದೀಪಮಾಲಾಂ ಗೃಹಾಣ ತಾಮ್ ||
ನ ಜಾನೇ ಕರ್ಮ ಯತ್ಕಿಂಚಿತನ್ನಾಪಿ ಲೌಕಿಕವೈದಿಕೇ |
ತಥಾ~ಪಿ ಮತೃತಾಂ ಪೂಜಾಂ ಸ್ವೀಕುರುಷ್ವ ಜನಾರ್ದನ ||
ಕಾಮತೋ ~ಕಾಮತೋ ವಾಪಿ ನ ಕೃತಂ ನಿಯಮಾರ್ಚನಮ್ |
ಕೇನಚಿದ್ವಿಘ್ನದೋಷೇಣ ಪರಿಪೂರ್ಣಂ ತದಸ್ತು ಮೇ ||
ಅನೇನ ದೀಪೋತ್ಸವಕರಣೇನ ಕಾರ್ತಿಕದಾಮೋದರಾತ್ಮಕ : ಪರಂಜ್ಯೋತಿ: ಪರಮಾತ್ಮಾ ಪ್ರೀಯತಾಮ್ |
ಧರ್ಮಶಾಸ್ತ್ರಗಳಲ್ಲಿ ಈ ದೀಪೋತ್ಸವದ ಬಗ್ಗೆ ಒಂದು ಮಾತಿದೆ –
ಊರ್ಜೇ ಶ್ರೇಷ್ಠೇ ನರೋ ಯಸ್ತು ನ ಕುರ್ಯಾದ್ದೀಪಕೋತ್ಸವಮ್ |
ತಸ್ಯ ಸಾವಂತ್ಸರೀ ಪೂಜಾ ನಿಷ್ಪಲಾ ಭವತಿ ಧ್ರುವಮ್ ||
ಕಾರ್ತಿಕದ ಹುಣ್ಣಿಮೆಯಂದು ದೀಪೋತ್ಸವನ್ನು ಆಚರಿಸದಿದ್ದರೆ ಒಂದು ವರ್ಷಪೂರ್ತಿ ಮಾಡಿದ ಪೂಜೆ ವ್ಯರ್ಥವಾಗುವುದೆಂದೂ ದೀಪೋತ್ಸವವನ್ನು ಆಚರಿಸದಿದ್ದರೆ ಸರ್ವಾಭೀಷ್ಟ ಸಿಧ್ಧಿಯೆಂದೂ ಹೇಳುವ ಈ ಸ್ಮೃತಿಗಳ ಆಂತರ್ಯ ದೀಪೋತ್ಸವವು ಅವಶ್ಯಕರ್ತವ್ಯ ವೆಂಬುದು. ಕನಿಷ್ಠ ನಾಲ್ಕು ದೀಪವನ್ನಾದರೂ ಇಂದು ಹಚ್ಚಿಟ್ಟು ಕೀರ್ತನೆ ಸಂಕೀರ್ತನೆಗಳನ್ನು ನಡೆಸಬೇಕು.
ಧಾತ್ರೀಹವನ – ವನಭೋಜನ
ತ್ರಯೋದಶ್ಯಾಂ ಚತುರ್ದಶ್ಯಾಂ ಪೌರ್ಣ ಮಾಸ್ಯಾಮಥಾಪಿ ವಾ |
ಪಂಚಮ್ಯಾಂ ವಾ ಮಹಾಪ್ರಾಜ್ಞ ವನಭೋಜನಮಾಚರೇತ್ ||
ಸರ್ವೋಪಸ್ಕರ ಸಂಯುಕ್ತೋ ವೃದ್ಧ ಬಾಲೈಶ್ಚ ಸಂವೃತ: |
ವನಂ ಪ್ರವೇಶಯೇದ್ಧಿಮಾನ್ ಧಾತ್ರೀ ವೃಕ್ಷೈ ಶ್ಚ ಶೋಭಿತಮ್ ||
(ಸ್ಮೃತಿ ಮುಕ್ತಾವಲೀ )
ಇತ್ಯಾದಿ ಸ್ಮೃತಿಭಣಿತಿಗಳಿಂದ ಉತ್ಥಾನ ದ್ವಾದಶೀ ನಂತರದಲ್ಲಿ ತ್ರಯೋದಶೀ, ಚತುರ್ದಶೀ , ಪೂರ್ಣಿಮೆಗಳಲ್ಲಿ ಅಥವಾ ಪಂಚಮಿಯಂದು ನೆಲ್ಲಿ ಮರವಿರುವ ಸ್ಥಳಕ್ಕೆ ಹೋಗಿ ಅಡುಗೆ ವ್ಯವಸ್ಥೆ ಹಾಗೂ ಹವನದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ‘ಧಾತ್ರೀಹವನ ‘ ಎಂಬ ಶೌನಕೋಕ್ತವಿಧಿಯನ್ನು ಆಚರಿಸಿ ಬ್ರಾಹ್ಮಣ ಭೋಜನಪೂರ್ವಕ ಬಂಧುಮಿತ್ರರೊಡನೆ ಭೋಜನ ಮಾಡಿ ಆ ರಾತ್ರಿ ಬ್ರಹ್ಮಚರ್ಯದಿಂದ ಇರಬೇಕು.
* ಧಾತ್ರೀಹವನವನ್ನು ಭಾನುವಾರ ಅಥವಾ ಸಪ್ತಮೀ ತಿಥಿಯಂದು ನಡೆಸುವಂತಿಲ್ಲ.
* ಇಂದಿನ ಅಡುಗೆಯಲ್ಲಿ ನೆಲ್ಲಿಕಾಯಿ ಮತ್ತು ಹೊಸ ಹುಣಿಸೇ ಕಾಯಿಯನ್ನು ಉಪಯೋಗಿಸಬೇಕು.
* ಧಾತ್ರೀಹವನವಾಗುವ ತನಕ ಹೊಸನೆಲ್ಲಿ ಹಾಗೂ ಹೊಸ ಹುಣಿಸೆಯನ್ನು ಉಪಯೋಗಿಸುವಂತಿಲ್ಲ. ಒಂದು ರೀತಿಯ ಅಗ್ರಯಣೇಷ್ಟಿಯಿದು.
* ಧಾತ್ರೀಹವನದ ಬಲಿ ದಾನ ಕಾಲದಲ್ಲಿ ನೆಲ್ಲಿಗಿಡಕ್ಕೆ ಪ್ರದಕ್ಷಿಣೆ ಬರುವುದಕ್ಕೆ ಮಹತ್ಫಲವನ್ನು ಹೇಳಿದ್ದಾರೆ.
* ಈ ವನಭೋಜನವನ್ನು ಪಟ್ಟಣಿಗರು ಒಟ್ಟಾಗಿ ಸೇರಿ ಆಚರಿಸುವುದರಿಂದ ಅಶ್ವಮೇಧದ
ಫಲವಿದೆ.
* ನೆಲ್ಲಿಕಾಯಿದೀಪ, ನೆಲ್ಲೆಕಾಯಿ ಹಾರಾರ್ಪಣೆ ಇವೂ ವಿಶೇಷ ಫಲದಾಯಕಗಳು.
* ಉಡುಪಿ -ಧರ್ಮಸ್ಥಳ ಮುಂತಾದ ಕಡೆ ತುಳುನಾಡಿನಲ್ಲಿ ಧಾತ್ರೀಹವನದ ಅನುಷ್ಠಾನ ಅತಿವಿರಲ. ಉತ್ಥಾನದ್ವಾದಶಿಯಂದೇ ತುಳಸಿಗೆ ನೆಲ್ಲಿ ಕೊಂಬೆಯನ್ನು ನೆಟ್ಟು ನೆಲ್ಲಿಯ ಅಡುಗೆಯನ್ನು ಮಾಡಿ ನಿವೇದಿಸಿ ನೂತನಫಲಗಳನ್ನು ಸ್ವೀಕರಿಸಲಾಗುತ್ತದೆ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ
ಸಂಗ್ರಹಯೋಗ್ಯವಾದ ವಿಚಾರ. ಧನ್ಯವಾದಗಳು.