ಅನಂತ ಚತುರ್ದಶೀ

।। श्रीकृष्ण उवाच ।। ।।
अनंतव्रतमस्त्यन्यत्सर्वपापहरं शिवम् ।।
सर्वकामप्रदं नृणां स्त्रीणां चैव युधिष्ठिर ।। १ ।।
शुक्लपक्षे चतुर्दश्यां मासि भाद्रपदे शुभे ।।
तस्यानुष्ठानमात्रेण सर्वपापैः प्रमुच्यते ।। २ ।।

ಅನಂತವ್ರತ ಸರ್ವಪಾಪಹರವಾದ್ದು ಶುಭಕರವಾದ್ದು ಪುರುಷರು ಸ್ತ್ರೀಯರು ಎಂಬ ಬೇಧವಿಲ್ಲದೆ ಎಲ್ಲಾ ಅಭೀಷ್ಟಗಳ ನೀಡುವಂತದ್ದು ಇದನ್ನು ಭಾದ್ರಪದ ಶುಕ್ಲ ಚತುರ್ದಶಿಯಂದು ಆಚರಿಸಬೇಕು ಎಂದು ಕೃಷ್ಣನಿಂದ ಧರ್ಮರಾಯನಿಗೆ ವ್ರತಮಹಿಮೆಯ ಬೋಧನೆ.

।। युधिष्ठिर उवाच ।। ।।
कृष्ण कोऽयं त्वयाख्यातो ह्यनंत इति विश्रुतः ।।
किं शेषनाग आहोस्विदनंतस्तक्षकः स्मृतः ।। ३ ।।
परमात्माथ वानंत उताहो ब्रह्म उच्यते ।।
क एषोऽनंतसंज्ञो वै तथ्यं ब्रूहि केशव ।। ४ ।।

ಕೃಷ್ಣನೇ ಅನಂತನೆಂದರೆ ಯಾರು !? ಶೇಷನಾಗನೇ ಅಥವಾ ತಕ್ಷಕಾದಿ ನಾಗರುಗಳೇ !? ಅಥವಾ ಪರಮಾತ್ಮ ನೀನೆ !? ಯಾರು ಈ ಅನಂತ ಎಂಬುದಾಗಿ ಧರ್ಮರಾಯನ ಪ್ರಶ್ನೆ.

।। श्रीकृष्ण उवाच ।। ।।
अनंत इत्यहं पार्थ ममरूपं निबोधय ।।
आदित्यादिषु वारेषु यः काल उपपद्यते ।। ५ ।।
कलाकाष्ठामुहूर्तादि दिनरात्रिशरीरवान् ।।
पक्षमासर्तुवर्षादि युगकल्पव्यवस्थया ।। ६ ।।
योऽयं कालो मयाख्यातः सोsनन्त इति कीर्थ्यते ॥

ಅನಂತವ್ರತದಲ್ಲಿ ಆರಾಧಿಸಲ್ಪುಡುವ ಅನಂತನೆಂಬುದು ನಾನೇ ಆಗಿದ್ದೇನೆ. ಈ ಅನಂತ ಎಂಬ ರೂಪವನ್ನು ಅರ್ಜುನನಿಗೆ ವಿಶೇಷವಾಗಿ ತೋರಿಸಿಕೊಟ್ಟಿದ್ದೇನೆ (ವಿಶ್ವರೂಪವಲ್ಲ ವನವಾಸಕಾಲದಲ್ಲಿ). ಆದಿತ್ಯಾದಿವಾರಗಳು ಕಲಾ ಕಾಷ್ಠಾ ಮುಹೂರ್ತ ದಿನ ರಾತ್ರಿ ಪಕ್ಷ ಮಾಸ ಋತು ವರ್ಷ ಯುಗ ಕಲ್ಪ ಹೀಗೆ ಸಮಸ್ತ ಕಾಲವ್ಯವಸ್ಥೆಯನ್ನು ನಿಯಮಿಸುತ್ತಾ ಕಾಲ ನೆನಿಸಿದ ನಾನೇ ಈ ವ್ರತದಲ್ಲಿ ಅನಂತನೆಂದು ಆರಾಧಿಸಲ್ಪಡುವವನು ಎಂಬುದಾಗಿ ಶ್ರೀಕೃಷ್ಣನಿಂದ ಬೋಧನೆ.

ಹೀಗೆ ಇಂದು ವಿಶೇಷವಾಗಿ ನಾವು ಚಿಂತಿಸಬೇಕಾದ್ದು ಕಾಲನಿಯಾಮಕನಾದ ಅನಂತನಾಮಕ ಪರಮಾತ್ಮನನ್ನು.

ಶ್ರೀಮನ್ಮಧ್ವಾಚಾರ್ಯರಿಂದ ಭಗವಂತನ ಆವರಣದಲ್ಲಿ ಅನಂತನಾಮಕ ರೂಪದ ಚಿಂತನೆ –

ಮತ್ಸ್ಯಕೂರ್ಮವಾರಾಂಶ್ಚ ನಾರಸಿಂಹಂ ಚ ವಾಮನಮ್ |
ಭಾರ್ಗವಂ ರಾಘವಂ ಕೃಷ್ಣಂ ಬುದ್ಧಂ ಕಲ್ಕಿನಮೇವ ಚ ||
ಅನಂತಂ ವಿಶ್ವರೂಪಂ ಚ ತದ್ಬಹಿಃ ಪೂಜಯೇತ್ ಕ್ರಮಾತ್ |

ಭಗವಂತನ ಆವರಣದಲ್ಲಿ ಕೇಶವಾದಿರೂಪಗಳು ೧೨ ರಾಶಿಚಕ್ರಗಳ ನಿಯಾಮಕರೂಪಗಳಾದರೆ ಮತ್ಸ್ಯಾದಿ ೧೦ ರೂಪಗಳು ಆದಿತ್ಯಾದಿಗ್ರಹರ ನಿಯಾಮಕ ರೂಪಗಳು. ಅನಂತ ಎಂಬುದು ಕಾಲನಿಯಾಮಕ ವಿಶ್ವರೂಪ ಅನ್ನುವುದು ಸಮಸ್ತ ವಿಶ್ವಕ್ಕೆ ಅಧಾರವಾದ ರೂಪ.

ಕಾಲನಿಯಾಮಕ ಪರಮಾತ್ಮನಿಗೆ ಸಂಬಂಧಿಸಿದ ವಿಶೇಷ ವ್ರತ ಅದು ಅನಂತವ್ರತ.

ಅನಂತಚತುರ್ದಶಿಯ_ಶುಭಾಶಯ

– ಬೆಳ್ಳೆ ಸುದರ್ಶನ ಆಚಾರ್ಯ

Leave a Reply

Your email address will not be published.