ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ |
ಅನುದಿನವು ಭಕ್ತರು ನಿನ್ನ ನಂಬಿ ಇರುವರು ||
ಗಜಮುಖದ ದೇವನೆ ನಿನಗೆ ವಂದನೆ |
ಭಕ್ತಿಯ ಸೇವೆಯಲಿ ಆರಾಧನೆ |
ಕಷ್ಟ ಪರಿಹಾರಕೆ ಮಾರ್ಗದರ್ಶಕ |
ಕಾಪಾಡು ಕರುಣಾಳು ವಿಘ್ನನಾಶಕ ||ಶರವು ಮಹಾ ಗಣಪತಿ||
ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ |
ದಿವ್ಯ ಮಹಾ ಗಣೇಶ ಅವತರಿಸಿದನಿಲ್ಲಿ |
ನಿತ್ಯವೂ ಎಡೆಬಿಡದೆ ನಾವು ವಂದಿಸೆ |
ಸಕಲ ಇಷ್ಟಾರ್ಥವ ಪರಿ ಪಾಲಿಸೋ ||ಶರವು ಮಹಾ ಗಣಪತಿ||
ಪುಣ್ಯ ಪ್ರಸಾದವೇ ಪಂಚಕಜ್ಜಾಯ
ಮುಕ್ತಿಯನ್ನು ನೀಡುವ ಭಕ್ತ ಜನಪ್ರಿಯ |
ಸತ್ಯ ಧರ್ಮದಿ ತೋರೋ …. ನಿನ್ನ ಮಾಯೆಯ |
ಶಾಸ್ತ್ರ ಸಂಪೂಜಿತ ಸಿದ್ಧಿ ವಿನಾಯಕ ||ಶರವು ಮಹಾ ಗಣಪತಿ ||
Lyrics in English
Sharavu mahaa ganapati namage ninnade stuti |
anudinavu bhaktaru ninna nambi eruvaru||
gajamukhada devane ninage vandane |
bhaktiya seveyali araadhane |
kashta parihaarake maargadarshaka |
kaapadu karunaalu vighnanaashaka ||sharavu mahaa ganapati||
Sharavu shivaalayada tenku dikkinalli|
divya naha ganesha avatarisidanilli |
nityavu edebidade naavu vandise |
sakala eshtaarthava paripaaliso ||sharavu maha ganapati ||
Punya prasadave panchakajjaaya|
muktiyannu needuva bhakta janapriya |
satya dharmadi toro … Ninna maayeya |
shaastra sumpoojita siddhi vinayaka ||sharavu maha ganapati ||