ತುಳುನಾಡಿನ ಶಿವಳ್ಳಿ ಗ್ರಾಮದಲ್ಲಿ ಪ್ರಥಮವಾಗಿ ಬಂದು ನೆಲೆಸಿದ ಶಿವಳ್ಳಿಯೂ ಸೇರಿದಂತೆ ಒಟ್ಟು ೩೨ ಗ್ರಾಮಗಳಲ್ಲಿ ನೆಲೆಯೂರಿದರು. ಅವರು ಯಾವ್ಯಾವ ಗ್ರಾಮದಲ್ಲಿ ಯಾವ್ಯಾವ ವೈದಿಕ ವೃತ್ತಿಯಲ್ಲಿ ನಿರತರಾಗಿದ್ದರು ಎ೦ಬುದನ್ನು ನಿರೂಪಿಸುವ ಗ್ರಂಥಕ್ಕೆ “ಗ್ರಾಮ ಪದ್ಧತಿ” ಎ೦ದು ಹೆಸರಾಯಿತು. ಈ ಗ್ರಾಮಗಳನ್ನು ಪೂರ್ವ ಷೋಡಶ ಮತ್ತು ಪಶ್ಚಿಮ ಷೋಡಶ ಎ೦ದು ಎರಡಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಒಂದು ನಿಶ್ಚಿತ ಸಂಖ್ಯೆಯಲ್ಲ್ಲಿ ಬ್ರಾಹ್ಮಣ ಮನೆತನಗಳನ್ನು ನೆಲೆಗೊಳಿಸಿ ಪರ್ಯಾಪ್ತವಾದ ಕೃಷಿಭೂಮಿಯನ್ನು ಉಂಬಳಿಯಾಗಿ ಕೊಟ್ಟು ಅನುಕೂಲವನ್ನು ಕಲ್ಪಿಸಿಕೊಡಲಾಗಿತ್ತು. ಈ ೩೨ ಗ್ರಾಮಗಳ ಮತ್ತು ಅವುಗಳಲ್ಲಿ ನೆಲೆನಿಂತ ಬ್ರಾಹ್ಮಣ ಕುಟುಂಬಗಳ ನಿರ್ದೇಶವು ಈ ಕೆಳಗಿನಂತಿದೆ.
ಪಶ್ಚಿಮ ಷೋಡಶ ಗ್ರಾಮಗಳು:
ಕಾರೆವೂರುಶ್ಚ ವೊರ್ಕಾಡಿ ಮರಣಿ ಕೊಳನಾಡುತಾಃ |
ಪಾಡಿ ಕೂಡಲು ಗ್ರಾಮಶ್ಚ ಮೊಗೆಬೈಲಿತಿ ನಾಮಕಃ ||
ಮಿತ್ತನಾಡುಶ್ಚ ನಿರ್ಮಾರ್ಗಃ ಸಿಮಂತೂರು ಸತೋದಿಕಾ|
ತಥಾ ತೇನೆಕಳಾಖ್ಯಾಶ್ಚ ಶಿವಬೆಳ್ಳಿ ಗ್ರಾಮ ಏವಚ ||
ಬ್ರಹ್ಮಾವರಶ್ಚ ನಿರ್ವಾರ ಕೂಟಗ್ರಾಮಶ್ಚ ವಿಶ್ರುತಃ
ತಥಾಸ್ಕಂದ ಪುರಶ್ಚೇತೇ ಪಶ್ಚಿಮ ಗ್ರಾಮ ನಾಮಕಃ ||
ಗ್ರಾಮಗಳ ಹೆಸರು ನೆಲೆಸಿದ ಬ್ರಾಹ್ಮಣ ಗೃಹಗಳ ಸಂಖ್ಯೆ
- ಕಾರೆವೂರು – ೮
- ವೊರ್ಕಾಡಿ – ೮
- ಮರಣಿ – ೨
- ಕೊಳನಾಡು – ೪
- ಪಾಡಿ – ೪
- ಕೂಡಲು – ೪
- ಮೊಗೆಬೈಲು [ಮೊಗರಾಲು] – ೪
- ಮಿತ್ತನಾಡು – ೪
- ನಿರ್ಮಾರ್ಗ – ೬
- ಸಿಮಂತೂರು – ೯
- ತೆನೆಕಳ – ೮
- ಬ್ರಹ್ಮಾವರ – ೮
- ನೀಲಾವರ – ೮
- ಕೂಟಕ [ಕೋಟ] – ೮
- ಕಂದಾವರ – ೨
- ಶಿವಬೆಳ್ಳಿ [ರಜತಪೀಠ] – ೧೨೫
- ಟ್ಟು – ೨೦೬
ಪೂರ್ವಷೋಡಶ ಗ್ರಾಮಗಳು :
ಶ್ರೀಪಾಡಿರ್ವೊಡಿಯಿರ್ನಾಳಕಾರಂ ದೂರಶ್ಚ ಉಜ್ಜರಿ |
ಕುನ್ನಿಮಾರ್ಗೊ ಕೊಕ್ಕಡಶ್ಚ ರಾಮಂಜಾ ಪುದೆ ಬೆಲ್ಪಡಿಃ ||
ಐರ್ನಾಡುರಿಡೆಕೆದುಶ್ಚ ಕೆಮ್ಮಿಂಜಶ್ಚ ತತಃ ಪರಃ |
ಪಾಡಿಂಜ ಸಿರಿಯಾಡಿಶ್ಚ ಕೊಡಿಪಾಡಿಶ್ಚ ಷೋಡಶಃ ||
ಗ್ರಾಮಗಳ ಹೆಸರು ನೆಲೆಸಿದ ಬ್ರಾಹ್ಮಣ ಗೃಹಗಳ ಸಂಖ್ಯೆ
- ಶ್ರೀಪಾಡಿ – ೫
- ಓಡಿಲ – ೨
- ನಾಳ – ೨
- ಕಾರಂದೂರು – ೨
- ಉಜಿರೆ – ೮
- ಕುನ್ಯಮಾರ್ಗ – ೯
- ಕೊಕ್ಕಡ – ೪
- ರಾಮಿಂಜ [ರಾಮಕುಂಜ] – ೩
- ಪುದೆ – ೧
- ಬೆಳಪಾಡಿ [ಬಳ್ಪ] – ೩
- ಇರ್ನಾಡು [ಐವರ್ನಾಡು] – ೪
- ಇಡಕೆದು [ಇಡ್ಕಿದು] – ೨
- ಕೆಮ್ಮಿಂಜ – ೧
- ಪಾಡಿಂಜ – ೧
- ಸಿರಿಯಾಡಿ – ೧
- ಕೊಡಿಪಾಡಿ – ೨
- ಒಟ್ಟು – ೪೯
ಪಶ್ಚಿಮ = ೨೦೬ + ಪೂರ್ವ ೪೯ = ೨೫೫ ಬ್ರಾಹ್ಮಣ ಗೃಹಗಳು.
ಮೂಲವಾಗಿ ಈ ೨೫೫ ಬ್ರಾಹ್ಮಣ ಗೃಹಗಳೇ ಕುಲಗಳಾಗಿದ್ದು ಕಾಲಕ್ರಮೇಣ ಅವುಗಳು ಈಗ ಐನೂರನ್ನೂ ದಾಟಿವೆ. ಈ ಗ್ರಾಮಗಳಲ್ಲಿ ನೆಲೆಸಿರುವ ಕುಲಗಳ ಪಟ್ಟಿ ಇಲ್ಲಿದೆ.
ಶಿವಳ್ಳಿಯೆನ್ನುವುದು ಹಲವು ಉಪಗ್ರಾಮಗಳನ್ನು ಹೊಂದಿರುವಂತಹ ಬೃಹತ್ ಗ್ರಾಮ. ಮೂಡನಿಡಂಬೂರು, ಬನ್ನಂಜೆ, ಕೊಡವೂರು, ಬೈಲೂರು, ಸಗುರಿ ಇವಿಷ್ಟೇ ಅಲ್ಲದೆ ಈಗಿನ ಕಲ್ಸಂಕ, ಕಡಿಯಾಳಿ, ಕುಂಜಿಬೆಟ್ಟು, ಮಣಿಪಾಲ, ದೊಡ್ಡನಗುಡ್ಡೆ, ಪೆರಂಪಳ್ಳಿ, ಮಲ್ಲಂಪಳ್ಳಿ, ನಯಂಪಳ್ಳಿ, ಕರಂಬಳ್ಳಿ, ಗುಂಡಿಬೈಲು ಇತ್ಯಾದಿ ಎಲ್ಲವೂ ಶಿವಳ್ಳಿಯ ಭಾಗಗಳಾಗಿದ್ದುವು ಎನ್ನುವುದು ಅದರ ವಿಶಾಲತೆಯನ್ನು ತೋರಿಸುತ್ತದೆ. ಈ ವಿಸ್ತಾರವಾದ ಶಿವಳ್ಳಿಯಲ್ಲಿ ೧೨೦ ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳು ನೆಲೆನಿಂತವು. ಶಿವಳ್ಳಿ ಗ್ರಾಮವು ತೌಳವರ ೩೨ ಗ್ರಾಮಗಳಲ್ಲಿ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಬ್ರಾಹ್ಮಣರ ನಿವಾಸಸ್ಥಾನವಾಗಿತ್ತು. ಉಳಿದ ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟೇ ಬ್ರಾಹ್ಮಣ iನೆತನಗಳು ನೆಲೆಸಿತ್ತು. ಈ ಬ್ರಾಹ್ಮಣರಲ್ಲಿ ಶಿವಳ್ಳಿಯು ಪ್ರಧಾನ ಕೇಂದ್ರವಾದ ಕಾರಣ ಶಿವಳ್ಳಿ ಬ್ರಾಹ್ಮಣರು ಎ೦ದಾಯಿತು.
ಗ್ರಾಮಪದ್ಧತಿಯಲ್ಲಿ ವಿವಿಧ ಗ್ರಾಮಗಳಲ್ಲಿ ನೆಲೆಸಿದ ಕುಲಗಳ ವಿವರಗಳೂ ಇವೆ. ಭೂಮಿಯನ್ನು ದಾನ ಮಾಡಿದ ಬಳಿಕ ಲೋಕಾದಿತ್ಯನು ಈ ವಿಚಾರಗಳನ್ನು ದೇವಭಾಷೆಯಲ್ಲಿ ಬರೆಸುತ್ತಾನೆ. ದ್ವಾತ್ರಿಂಶತ್ ಗ್ರಾಮಗಳಲ್ಲಿ ಪೂರ್ವ ಷೋಡಶದ ಹದಿನೈದನೆಯ ಗ್ರಾಮವು ಮಾತ್ರ ಶಿವಳ್ಳಿಯವರಿಗೆ ಸಂಬಂಧಿಸಿದ್ದಲ್ಲ. ಈ ಗ್ರಾಮದ ಹೆಸರು ಕೂಟ ಎ೦ದಾಗಿದೆ. ಇಲ್ಲಿ ವಾಸಿಸುವವರೆಲ್ಲರೂ ಕೋಟ ಬ್ರಾಹ್ಮಣರೆಂದು ಪ್ರಸಿದ್ಧರಾಗಿದ್ದಾರೆ. ಇವರಲ್ಲಿ ಹಂದೆ, ಹೆಬ್ಬಾರ, ಹೇರಳ, ಹೊಳ್ಳ, ಕಾರಂತ, ನಾವಡ, ಬಾಸರಿ, ಮಯ್ಯ ಎ೦ಬ ಅಷ್ಟ ಕುಲದವರು ಪ್ರಸಿದ್ಧರಾಗಿದ್ದಾರೆ.
ಭಟ್ಟಾಚಾರ್ಯರು ಲೋಕಾದಿತ್ಯನಲ್ಲಿ ಶೂದ್ರರು ಹಾಗೂ ಹೊಲೆಯರನ್ನು ಬ್ರಾಹ್ಮಣರ ಅಧೀನಕ್ಕೆ ಒಳಪಡಿಸುವಂತೆ ಕೇಳಿಕೊಳ್ಳುತ್ತಾರೆ. ಎಲ್ಲ ಲೌಕಿಕ ಚಟುವಟಿಕೆಗಳು ನಾಯರರ ಮೂಲಕವೇ ಆಗಬೇಕು. ಅಗ್ನಿಹೋತ್ರ, ಪಂಚಮಹಾಯಜ್ಞ ಹಾಗೂ ವೇದಾಧ್ಯಯನ ಇವುಗಳು ಬ್ರಾಹ್ಮಣರ ಕರ್ತವ್ಯಗಳು. ಈ ರೀತಿಯ ಗ್ರಾಮಗಳ ವಿಂಗಡಣೆ ಹಾಗೂ ಕುಲಗಳ ವಿವರವಾದ ಮಾಹಿತಿಯ ನಿರೂಪಣೆಯನ್ನು ಸಂಕೇತಪದ್ಧತಿ ಎ೦ದು ಕರೆಯಲಾಯಿತು. ಗ್ರಾಮಪದ್ಧತಿಯ ಮೊದಲ ಪ್ರತಿಯ ಕೊನೆಯ ಭಾಗದಲ್ಲಿ ಬ್ರಾಹ್ಮಣರ ಕುಲಗಳ ಸ್ಥಾನಮಾನ, ಅವುಗಳ ಹಕ್ಕು-ಬಾಧ್ಯತೆಗಳನ್ನು ನಿರೂಪಿಸಲಾಗಿದೆ. ಇಲ್ಲಿ ಭಟ್ಟರು, ತಂತ್ರಿ, ಗ್ರಾಮಣಿ, ಅಧಿವಾಸಿ, ಪಕ್ಷನಾಥ ಮತ್ತು ಜನ್ನಿಗಳ ವಿವರಣೆಯನ್ನು ನೀಡಲಾಗಿದೆ. ಭಟ್ಟ ಸ್ಥಾನಗಳು ೪೦
- ಅಗ್ನಿಹೋತ್ರಿಗಳು – ೨೪
- ಸ್ಮಾರ್ಥರು – ೨೪
- ಸಭಾಪತಿಗಳು – ೨
- ಪಂಡಿತರು – ೨
- ಪ್ರಭುಗಳು – ೪
- ತಂತ್ರಿಗಳು – ೬
- ಅಗ್ರಾಮಣಿಗಳು – ೨೪
- ಮಂದಿಅಧಿವಾಸಿಗಳು – ೨೧
- ಮಂದಿ ಪಕ್ಷನಾಥರು – ೨
- ಜನ್ನಿಗಳು – ೨೮
ಒಟ್ಟಿನಲ್ಲಿ ಗ್ರಾಮಪದ್ಧತಿಯು ತುಳುನಾಡಿನ ಪ್ರಾಚೀನ ಇತಿಹಾಸವನ್ನು, ಮುಖ್ಯವಾಗಿ ಈ ಪ್ರದೇಶಕ್ಕೆ ಬ್ರಾಹ್ಮಣರ ಆಗಮನವನ್ನು, ಅವರ ನೆಲೆಗಳನ್ನು ತಿಳಿಸುವ ಒಂದು ಐತಿಹಾಸಿಕ ಮಹತ್ವವುಳ್ಳ ಚಿಕ್ಕ ಗ್ರಂಥ. ಈ ಗ್ರಂಥವು ಎಷ್ಟು ಜನಪ್ರಿಯವಾಗಿತ್ತೆಂಬುದಕ್ಕೆ, ಅದರ ಹತ್ತಾರು ವಿಧದ ಪಾಠಾಂತರಗಳೇ ಸಾಕ್ಷಿ. ತುಳುನಾಡಿನ ಬ್ರಾಹ್ಮಣರ ಮೂಲದ ಕುರಿತಾಗಿ ತಿಳಿಸುವ ಏಕೈಕ ಗ್ರಂಥ ಎನ್ನುವ ಕಾರಣಕ್ಕಾಗಿಯೂ ಗ್ರಾಮಪದ್ಧತಿಗೆ ಚಾರಿತ್ರಿಕ ಮಹತ್ವ ದೊರೆಯುತ್ತದೆ. ಹೊರಗಿನಿಂದ ಕರೆತರಲ್ಪಟ್ಟ ಬ್ರಾಹ್ಮಣರಿಗೆ ಯಾವ ರೀತಿ ಇಲ್ಲಿ ನೆಲೆಗಳನ್ನು ಕಲ್ಪಿಸಲಾಗಿತ್ತೆಂದು ಸವಿವರವಾಗಿ ತಿಳಿಸುವುದರಿಂದ ಇಲ್ಲಿ ನೆಲೆನಿಂತ ಬ್ರಾಹ್ಮಣರ ಅಧಿಕಾರವ್ಯಾಪ್ತಿಯನ್ನು ಸಹ ಈ ಗ್ರಂಥದಿಂದ ತಿಳಿಯಬಹುದು. ಇತರ ಕಡೆಗಳಲ್ಲಿರುವ ಬ್ರಾಹ್ಮಣರಿಗಿಂತ ವಿಭಿನ್ನವಾದ ಕುಲನಾಮಗಳು ತುಳುನಾಡಿನ ಬ್ರಾಹ್ಮಣರಿಗೆ ಹೇಗೆ ಲಭಿಸಿತೆಂಬುದನ್ನು ತಿಳಿಯಲು ಕೂಡ ಈ ಗ್ರಂಥ ಉಪಯುಕ್ತವಾಗಿದೆ. ಒಂದು ಸ್ಥಳದ ಹೆಸರಿನಿಂದಲೇ ಅಲ್ಲಿ ನೆಲೆನಿಂತ ಬ್ರಾಹ್ಮಣರಿಗೆ ಕುಲನಾಮ ಪ್ರಾಪ್ತವಾದುದು ಬಹುಶಃ ಬೇರೆಲ್ಲೂ ಸಿಕ್ಕದ ಒಂದು ವಿಶೇಷ ಸಂಗತಿ. ಈ ಎಲ್ಲ ಕಾರಣಗಳಿಂದಾಗಿ ತುಳುನಾಡಿನ ಬ್ರಾಹ್ಮಣರ ಕುರಿತಾಗಿ, ಅವರ ಕುಲನಾಮಗಳ ಕುರಿತಾಗಿ ಅತ್ಯುಪಯುಕ್ತವಾದ ಗ್ರಾಮಪದ್ಧತಿಯು ಒಂದು ಅಮೂಲ್ಯವಾದ ಕೃತಿ.
ಆಕರ ಗ್ರಂಥಗಳು :
೧. ಶಿವಳ್ಳಿಬ್ರಾಹ್ಮಣರು ಸಂಪುಟ ೧ ಹಾಗೂ ೨
೨. ಬ್ರಹ್ಮವಾಣೀ ವಿಶೇಷಾಂಕ ೧೯೯೯ [ಕಾಸರಗೋಡು ಶಿವಳ್ಳಿ ಬ್ರಾಹ್ಮಣ ಸಭಾ] ಇದರ ವೆಂಕಟರಾಜ ಪುಣ್ಚಿತ್ತಾಯರ ಲೇಖನ.
೩. ಶಿವಳ್ಳಿಯವರ ಕುಲನಾಮಗಳು : ಡಾ| ಕೆ. ಪದ್ಮನಾಭ ಕೇಕುಣ್ಣಾಯ, ಉಡುಪಿ.
ಶಿವಳ್ಳಿ ಬ್ರಾಹ್ಮಣರ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಕೇವಲ ಕನಿಷ್ಟ ಮಾಹಿತಿಯನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಇನ್ನೂ ಹೆಚ್ಚು ಅಧ್ಯಯನ ಮಾಡಲು ಬಯಸುವವರು ಶಿವಳ್ಳಿ ಬ್ರಾಹ್ಮಣರು ಸಂಪುಟ ೧ ಹಾಗೂ ೨ ಈ ಪುಸ್ತಕಗಳನ್ನು ಓದಬಹುದು.
Please put some light on the Aaryan Moola of Shivalli Brahmana and the Dravida Moola Brahmana….
mor ditils want
Sir, please enlighten as
How to know whether Shivalli Brahmins are Smartha or Madhwa ? Atleast by their last names.
Dear Sir,
I need to no history of the temple, today (on 26-07-2015 i saw the Ganapathi vigraha in my dreem, i did not herd the name of the tempel till today) As soon as possibel i will sure vist the place. pls mail as soon as possibel.
Regards,
Brahmananda.A
8904499925
Sir,
How to find out our Kula Devaru for Shivalli Brahmins?
ಕೇಕುಣ್ಣಾಯರ ಕುಲದೇವರು ಮತ್ತು ಕುಲದೇವಸ್ತಾನ ಯಾವುದು?