ಋಷಿ ಪಂಚಮೀ – ಭಾದ್ರಪದ ಶುಕ್ಲ ಪಂಚಮೀ 

ಋಷಿ ಪಂಚಮೀ            

         ಭಾದ್ರಪದ ಶುಕ್ಲ ಪಂಚಮೀ  ಋಷಿ ಪಂಚಮೀ.  ಸ್ತ್ರೀಯರು  ರಜಸ್ವಲೆಯರಾಗಿದ್ದಾಗ  ಸ್ಪರ್ಶನ-ದರ್ಶನ-ಸಂಭಾಷಣಾದಿಗಳಿಂದ  ಉಂಟಾಗಿರಬಹುದಾದ  ದೋಷಗಳನ್ನು  ಪರಿಹರಿಸಿಕೊಳ್ಳುವುದಕ್ಕಾಗಿ  ಮುಟ್ಟು  ನಿಂತ  ಸ್ತ್ರೀಯರು  ಇಂದು ಕಲಶಪ್ರತಿಷ್ಠೆ  ಮಾಡಿ  ಸಪ್ತರ್ಷಿಗಳನ್ನು  ಪೂಜಿಸುತ್ತಾರೆ.

      ಕಶ್ಯಪೋ~ ತ್ರಿರ್ಭರದ್ವಾಜೋ  ವಿಶ್ವಾಮಿತ್ರೋ~ಥ  ಗೌತಮಃ  |

       ಜಮದಗ್ನಿರ್ವಸಿಷ್ಠಶ್ಚ  ಋಷಯಃ  ಸ್ಮೃತಾ: ||

 ಈ  ಸಪ್ತರ್ಷಿಗಳೊಂದಿಗೆ  ವಸಿಷ್ಠ ಪತ್ನಿ  ಅರುಂಧತಿಗೂ  ಪೂಜೆಯಿದೆ . ದಿನದ  ಎಂಟು  

ಯಾಮಗಳಲ್ಲಿ  ಪ್ರತ್ಯೇಕ  ಯಾಮ ಪೂಜೆಯಿದೆ.  ಹೀಗೆ  ಎಂಟು ವರ್ಷ  ಪೂಜಿಸಿ  ಉದ್ಯಾಪನೆಯನ್ನು  ಮಾಡುವುದರಿಂದ   ರಜಸ್ವಲಾದೋಷವೆಲ್ಲವೂ  ನಿವೃತ್ತಿಯಾಗಿ  ಅಂತಃಕರಣಶುದ್ಧಿಯೊಡನೆ  ಶ್ರೇಯಪ್ರಾಪ್ತಿಯಿದೆ. 

ಋಷಿ ಪಂಚಮಿಯ  ಮಾರನೆಯ  ದಿನ  ಬೆಳಗ್ಗೆ  ಅನ್ನಸಂತರ್ಪಣೆ.  ನಂತರ  ತಾವು  ಆಹಾರವನ್ನು  ಸ್ವೀಕರಿಸಬಹುದು.

ಋಷಿ ಪಂಚಮಿಯಂದು  ವೃತವನ್ನು  ಸ್ವೀಕರಿಸಿದ  ಸ್ತ್ರೀಯರಿಗೆ  ಆಹಾರನಿಯಮವಿದೆ. ಉಪವಾಸವಿರಬಹುದು.ಅಥವಾ  ಭೂಮಿಯನ್ನು  ಉಳದೆ  ತಾನಾಗಿ  ಬೆಳೆದ  ಸಾಮೆ  ಅಕ್ಕಿ  ಮೊದಲಾದ  ಧಾನ್ಯವನ್ನು  ಸಂಗ್ರಹಿಸಿ  ಉಪ್ಪು-ಖಾರಗಳನ್ನು  ಬಳಸದೇ  ಬೇಯಿಸಿ  ಸಪ್ತಷ್ಯಂತರ್ಗತ  ವೇದವ್ಯಾಸನಿಗೆ  ನಿವೇದಿಸಿ  ಉಣ್ಣಬಹುದು.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.