ದಧಿವಾಮನ ಜಯಂತೀ

ಭಾದ್ರಪದ ಶುದ್ಧ (ಶುಕ್ಲ ಪಕ್ಷ) ದ್ವಾದಶೀ  ವಾಮನಜಯಂತೀ.  ವಾಮನ ದೇವ  ಅದಿತಿಯ  ಗರ್ಭದಿಂದ ಶ್ರವಣ  ನಕ್ಷತ್ರವುಳ್ಳ  ದ್ವಾದಶಿಯಂದು  ಮಧ್ಯಾಹ್ನ  ಆವಿರ್ಭವಿಸಿದ. ಆ ದ್ವಾದಶಿಯಂದೇ  ದಧಿವೃತ ಮುಗಿದಿರುತ್ತದೆ.  ಭಗವಂತನಿಗೆ  ದಧ್ಯನ್ನವನ್ನು (ಮೊಸರನ್ನ) ನಿವೇದಿಸಿ  ವಾಮನನ್ನು  ಪೂಜಿಸಬೇಕು.

ಅಜಿನದಂಡಕ ಮಂಡಲು ಮೇಖಲಾ ರುಚಿರಪಾವನವಾಮನಮೂರ್ತಯೇ |           

 ಮಿತ ಜಗತ್ತ್ರಿತಯಾಯ ಜಿತಾರಯೇ ನಿಗಮವಾಕ್ಪಟವೇ  ವಟವೇ ನಮಃ ||

 ದೇವೇಶ್ವರಾಯ  ದೇವಾಯ  ದೇವಸಂಭೂತಿ ಕಾರಿಣೇ  ಪ್ರಭವೇ   ಸರ್ವದೇವಾನಾಂ  ವಾಮನಾಯ  ನಮೋ  ನಮಃ |

ಅದೇ  ವೇಳೆ  ವಾಮನನಿಗೆ  ಅರ್ಘ್ಯ

ನಮಸ್ತೇ   ಪದ್ಮನಾಭಾಯ  ನಮಸ್ತೇ  ಜಲಶಾಯಿನೇ|

ತುಭ್ಯಮರ್ಘ್ಯಂ ಪ್ರದಾಸ್ಯಾಮಿ  ಬಾಲವಾಮನ ರೂಪಿಣೇ ||

ಇದೇ   ದಿನ  ಕ್ಷೀರ ವ್ರತಾರಂಭ. ಇಂದಿನಿಂದ  ಒಂದು  ತಿಂಗಳು  ಕ್ಷೀರ ನಿವೇದನೆಯು   ನಿಷಿದ್ಧವಾಗಿದೆ.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.