ದೂರ್ವಾಷ್ಟಮೀ
ಭಾದ್ರಪದ ಶುಕ್ಲಪಕ್ಷ ಅಷ್ಟಮೀ ದೂರ್ವಾಷ್ಟಮೀ . ಸಿಂಹಮಾಸದಲ್ಲಿ ಭಾದ್ರಪದ ಶುಕ್ಲ ಪಕ್ಷದ ಅಷ್ಟಮೀ
ಬಂದಾಗ ಮಾತ್ರ ಇದು ಆಚರಣೀಯ. ಕನ್ಯಾಮಾಸದಲ್ಲಿ ಆಚರಣೆ ನಿಷಿದ್ಧ.
ಪರಿಶುದ್ಧ ಸ್ಥಳದಲ್ಲಿ ಬೆಳೆದಿರುವ ದೂರ್ವಾ ಮೂಲದಲ್ಲಿ ರುದ್ರನ್ನನ್ನು ಸ್ತ್ರೀಯರು ಆರಾಧಿಸುವ ವಿಧಿಯಿದೆ.
ಇದೇ ದಿನ ರಾತ್ರಿ ಜ್ಯೇಷ್ಟಾ ನಕ್ಷತ್ರವಿದ್ದಲ್ಲಿ ಜ್ಯೇಷ್ಟಾ ಲಕ್ಷ್ಮೀವೃತವನ್ನು ಆಚರಿಸುವುದಿದೆ. ಇದೂ ಸ್ತ್ರೀಯರ ವ್ರತ. ಇಲ್ಲಿ ಜ್ಯೇಷ್ಠಾಲಕ್ಷ್ಮೀ ಎಂದರೆ ಸಾಗರದಲ್ಲಿ ಲಕ್ಷ್ಮಿಗಿಂತ ಮೊದಲು ಆವಿರ್ಭವಿಸಿದ ಅಲಕ್ಷ್ಮಿಯಲ್ಲ. ಜ್ಯೇಷ್ಠಾ ನಕ್ಷತ್ರದಲ್ಲಿ ಅಷ್ಟಮಿಯಲ್ಲಿ ಆರಾಧಿಸಲ್ಪಡುವ ವಿಷ್ಣು ಪತ್ನಿ ಲಕ್ಷ್ಮೀದೇವಿ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ