ಮಹಾನವಮಿಯಂದು ತಪ್ಪಿದರೆ ವಿಜಯದಶಮಿಯಂದು ಆಯುಧಪೂಜೆಯನ್ನು ಮಾಡಬೇಕು. ಕಾರು, ಸ್ಕೂಟರ್ ,ಬಂಡಿ, ಮುಂತಾದ ವಾಹನಗಳು , ಬೃಹತ್ ಯಂತ್ರಗಳು ಮತ್ತು ಕೋವಿ, ಖಡ್ಗ ಮುಂತಾದವುಗಳೆಲ್ಲಾ ಆಯುಧ ಪೂಜೆಯ ಪ್ರತೀಕಗಳು. ಇವುಗಳನ್ನೆಲ್ಲಾ ತೊಳೆದು ಶುದ್ಧಗೊಳಿಸಿ ಹೂವು ,ಬಾಳೆಕಂಬ, ಗಂಧಗಳಿಂದ ಅಲಂಕರಿಸಿ ಊದುಬತ್ತಿ ಆರತಿ ಹಚ್ಚಿ ಪೂಜಿಸುವುದು. ಯಂತ್ರದೇವತೆಗಳಾದ ದುರ್ಗೆ-ನರಸಿಂಹರನ್ನು ಇಲ್ಲಿ ಪೂಜಿಸುವುದು.
ದುರ್ಗಾಂತರ್ಗತ ಶ್ರೀ ಲಕ್ಷ್ಮೀನರಸಿಂಹಪ್ರೀತ್ಯರ್ಥಂ ಯಂತ್ರಪೂಜಾಂ ಕರಿಷ್ಯೇ |
ಯಂತ್ರದೇವತಾಯೈ ದುರ್ಗಾಯೈ ನಮ: |
ದುರ್ಗೇ ದೇವಿ ಸಮಾಗಚ್ಛ ಸಾನ್ನಿಧ್ಯಮಿಹ ಕಲ್ಪಯ |
ಪೂಜಾಮಿಮಾಂ ಗೃಹಾಣ ತ್ವಂ ಅಷ್ಟಭಿ: ಶಕ್ತಿಭಿ: ಸಹ |
ಯಂತ್ರದೇವತಾಂ ದುರ್ಗಾಮಾವಾಹಯಾಮಿ |
ಯಂತ್ರದೇವಾತೈ ನಮ: | ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾ : ಸಮರ್ಪಯಾಮಿ |
ನೈವೇದ್ಯ ಮಂಗಳಾರತಿಯಾದ ಮೇಲೆ ದೃಷ್ಟಿ ತೆಗೆಯಬೇಕು. ಬೂದುಕುಂಬಳ ಅಥವಾ ತೆಂಗಿನಕಾಯಿಯಲ್ಲಿ ಕರ್ಪುರದೀಪವನ್ನು ಹಚ್ಚಿ ವಾಹನಾದಿಗಳಿಗೆ ಒಂದು ಸುತ್ತು ತಂದು ನೆಲಕ್ಕೆ ಹೊಡೆದು ಒಡೆಯಬೇಕು. ಈ ಸಮಯದಲ್ಲಿ ಸುದರ್ಶನ ಮಂತ್ರವನ್ನು ಅಥವಾ ‘ಚಕ್ರರಾಜಾಯ ನಮ: ಅಘೋರಾಯ ‘ ಎಂದು ಪಠಿಸಬೇಕು.
ಶೂಲೇನ ಪಾಹಿ ನೋ ದೇವಿ ಷಾಹಿ ಖಡ್ಗೇನ ಚಾಂಬಿಕೇ
ಘಂಟಾಸ್ವನೇನ ನ: ಪಾಹಿ ಚಾಪೆಜ್ಯಾನಿ:ಸ್ವನೇನ ಚ ||
ಯಂತ್ರದೇವತಾಯೈ ನಮ: | ಪ್ರಾರ್ಥನಾಂ ಸಮರ್ಪಯಾಮಿ |
ಅನೇನ ಯಂತ್ರಪೂಜಾ (ಆಯುಧಪೂಜಾ) ಕರಣೇನ
ಯಂತ್ರದೇವತಾಂತರ್ಗತ ಲಕ್ಷ್ಮೀನರಸಿಂಹಾತ್ಮಕ :
ಮಧ್ವಪತಿಗೋಪಾಲಕೃಷ್ಣ: ಪ್ರೀಯತಾಂ |
ವಾಹನಪೂಜೆಯಾದ ಮೇಲೆ ವಿಪ್ರರಿಗೆ ದಕ್ಷಿಣೆಯಿತ್ತು ವಾಹನಗಳ ಚಕ್ರಗಳಿಗೆ ನಿಂಬೆಹಣ್ಣನ್ನು ಇಟ್ಟು ವಾಹನಗಳನ್ನು ಚಾಲಿಸಬೇಕು.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ