ಪಿತೃ ಪಕ್ಷ – ಮಹಾಲಯ 

ಕಚ್ಚಾಡುವ  ಮನೆ, ಕಾದಾಡುವ  ಮಕ್ಕಳು ಅಶಾಂತಿ -ಅತೃಪ್ತಿಯ  ಗೃಹವಾಸ, ಇವೆಲ್ಲವುಗಳಿಗೆ  ಕಾರಣ  ಪಿತೃಶಾಪ ವೆನ್ನುತ್ತದೆ  ಜ್ಯೋತಿ: ಶಾಸ್ತ್ರ.  ಪಿತೃ ಕಾರ್ಯಗಳು  ಸರಿಯಾಗದಿದ್ದರೆ  ಮೇಲ್ಕಂಡ  ಸ್ಥಿತಿ  ಏರ್ಪಡುತ್ತದೆ  ಎಂದರ್ಥ.

ಸಂವತ್ಸರ  ಪೂರ್ತಿ  ಪಿತೃದೇವತೆಗಳು  ಸಂತುಷ್ಟರಾಗಿರಬೇಕಾದರೆ   ಭಾದ್ರಪದ  ಕೃಷ್ಣಪಕ್ಷದಲ್ಲಿ  ಒಂದು  ದಿನವಾದರೂ ಶ್ರಾದ್ಧ  ಹಾಕಬೇಕು. 

  ಯೋ  ವೈ  ಶ್ರಾದ್ಧಂ  ನರಃ  ಕುರ್ಯಾತ್  ಏಕಸ್ಮಿನ್ನಪಿ   ವಾಸರೇ |

  ತಸ್ಯ  ಸಂವತ್ಸರಂ  ಯಾವತ್  ಸಂತೃಪ್ತಾ: ಪಿತರೋ ಧ್ರುವಮ್ ||

      ಭಾದ್ರಪದ  ಮಾಸದ  ಕೃಷ್ಣ ಪಕ್ಷದ ಪ್ರತಿಪತ್ ನಿಂದ  ಅಶ್ವಯುಜ  ಪಾಡ್ಯದ  ತನಕದ  ೧೬   ದಿನಗಳು  ಮಹಾಲಯ  ತಿಥಿಗಳು ಎಂದು  ಕರೆಸಿಕೊಂಡಿವೆ.  ಈ ಪಕ್ಷದಲ್ಲಿ ಲಿಪಿತೃಗಳು  ಪಿಂಡವನ್ನು  ಬಯಸುತ್ತಾರೆ. 

        ಮಹಾಲಯೇ  ಗಯಾಶ್ರಾದ್ಧೇ  ಪ್ರತಿಸಾವಂತ್ಸರೇ  ತಥಾ |

         ಪಿಂಡಮಿಚ್ಛಂತಿ   ಪಿತರ: ತರ್ಪಣಂ  ತ್ವನ್ಯದಾ  ಸ್ಮೃತಮ್   ||

ಷಣ್ಣವತಿ   (೯೬ ) ಪಿತೃ ದಿನಗಳಲ್ಲಿ   ಮಹಾಲಯವೆನಿಸಿದ  ೧೬ ದಿನಗಳೂ  ಸೇರಿವೆ. ಇದರಲ್ಲಿ  ಸಂಕ್ರಾಂತಿ, ವೈಧೃತಿ , ದರ್ಶ  ಮೊದಲಾದ  ಇತರ  ಪಿತೃದಿನಗಳಲ್ಲಿ  ತಿಲತರ್ಪಣವೇ ಶ್ರಾದ್ಧ. ಆದರೆ  ಮಹಾಲಯದಲ್ಲಿ ಪಿಂಡ ಪ್ರಧಾನಪೂರ್ವಕ    ಶ್ರಾದ್ಧವು  ಅಪೇಕ್ಷಿತ.

ಈ ಹದಿನಾರು  ದಿನಗಳಲ್ಲಿ  ತಂದೆಯ ಮೃತತಿಥಿಯಂದು  ಅಥವಾ  ಪಂಚಮೀ,  ಷಷ್ಠೀ,  ಅಷ್ಟಮೀ,  ದಶಮೀ, ಪಿತೃಭರಣೀ,  ಅಮಾವಾಸ್ಯೆ ಈ ತಿಥಿಗಳಲ್ಲಿ ಯಾವುದಾದರೊಂದು  ದಿನ  ಸಕೃನ್ಮಹಾಲಯ  ಶ್ರಾದ್ಧವು   ಅವಶ್ಯಾನುಷ್ಠೇಯ. ಸಾಂವತ್ಸರಿಕ  ಶ್ರಾದ್ಧಕ್ಕಿಂತ  ಮಹಾಲಯ ಶ್ರಾದ್ಧದ  ವಿಧಿ-ವಿಧಾನಗಳು  ಸ್ವಲ್ಪ  ಮಾತ್ರ  ಬೇರೆಯಾಗಿವೆ. ‘ಮಹಾಲಯವಿಧಿ’:  ಎಂಬ  ಪುಸ್ತಕ  ಲಭ್ಯವಿದೆ.

             ಉಡುಪಿ  ಸಂಪ್ರದಾಯದಲ್ಲಿ  ಕುಟುಂಬದ  ಹಿರಿಯರೋರ್ವರು  ಮಾತ್ರ  ಮಹಾಲಯ  ಶ್ರಾದ್ಧವನ್ನು  ಆಚರಿಸುತ್ತಿದ್ದು  ಉಳಿದವರೆಲ್ಲರೂ  ಅಂದು  ಮಂತ್ರಾಕ್ಷತೆಯನ್ನು  ಸ್ವೀಕರಿಸುತ್ತಾರೆ. 

        ಮುತ್ತೈದೆಯಾಗಿ  ಮೃತರಾದವರಿಗೆ  ಅವಿಧವಾನವಮಿಯಂದು,  ವಂಶದಲ್ಲಿ  ಯತಿಯಾಗಿ  ಹೋದವರಿಗೆ ಯತಿದ್ವಾದಶಿಯಂದು, ಅಪಘಾತದ  ದುರಂತದಲ್ಲಿ  ಮೃತರಾದವರಿಗೆ  ಘಾತಚತುರ್ದಶಿಯಂದು  ಶ್ರಾದ್ಧವನ್ನು  ಮಾಡುವಂತೆ  ಶಾಸ್ತ್ರ  ಆದೇಶಿಸಿದೆ. 

       ಈ  ಸಮಯದಲ್ಲಿ  ಅಶೌಚಾದಿಗಳಿಂದ  ಶ್ರಾದ್ಧವನ್ನು  ಆಚರಿಸಲಾಗದಿದ್ದರೆ  ತುಲಾಮಾಸ  ಮುಗಿಯುವುದರೊಳಗಾಗಿ  ಆಚರಿಸಬೇಕು. 

      ಪಿತೃ ಪಕ್ಷದ  ಹದಿನಾರು  ದಿನಗಳಲ್ಲೂ  ದ್ವಾದಶ ಪಿತೃಗಳಿಗೆ  ಅಥವಾ  ಸರ್ವಪಿತೃಗಳಿಗೆ  ತರ್ಪಣವನ್ನು  ಕೊಡಬೇಕು. 

        ಈ  ದಿನ  ಮಹಾಲಯಶ್ರಾದ್ಧವನ್ನು  ಪಿಂಡದಾನದೊಂದಿಗೆ  ಮಾಡದಿರುವ  ಪಿತೃ ಯಜ್ಞಾಧಿಕಾರಿಗಳು  ಕೂಡ   ತಿಲತರ್ಪಣವನ್ನು  ಈ  ಹದಿನಾರೂ  ದಿನ  ಕೊಡಬೇಕು. ಅದರ  ಕ್ರಮ  ಹೀಗೆ – 

  ಸಂಕಲ್ಪ 

ಆಷಾಢ್ಯಾದಿ ಪಂಚಮಾ ಪರಪಕ್ಷೇ  ಭಾದ್ರಪದ ಕೃಷ್ಣಪಕ್ಷೇ  ಅಮಾವಾಸ್ಯಾಯಾಂ ( ಆ  ದಿನದ  ತಿಥಿಯ ಉಲ್ಲೇಖ ) ಪುಣ್ಯ ತಿಥೌ ಸರ್ವ ಪಿತ್ರಂತರ್ಗತ  ಲಕ್ಷ್ಮೀಜನಾರ್ದನ  ಪ್ರೇರಣಯಾ  ಲಕ್ಷ್ಮೀಜನಾರ್ದನ  ಪ್ರೀತ್ಯರ್ಥಂ  ಪಿತೃ -ಪಿತಾಮಹ -ಪ್ರಪಿತಾಮಹಾನಾಂ…ನಾಮ್ನಾ ಕಾಶ್ಯಪಗೋತ್ರಾಣಾಂ ವಸುರುದ್ರಾದಿತ್ಯ ಸ್ವರೂಪಾಣಾಂ ತದಂತರ್ಯಾಮಿ ಪ್ರದ್ಯುಮ್ನ-ಸಂಕರ್ಷಣ -ವಾಸುದೇವಾನಾಂ, ಮಾತೃ-ಪಿತಾಮಹೀ-ಪ್ರಪಿತಾಮಹೀನಾಂ…ದಾನಾಂ ಕಾಶ್ಯಪ ಗೋತ್ರೀಣಾಂ  ವಸುರುದ್ರಾದಿತ್ಯಸ್ವರೂಪಾಣಾಂ  ತದಂತರ್ಯಾಮಿ  ಪ್ರದ್ಯುಮ್ನ  ಸಂಕರ್ಷಣ ವಾಸುದೇವಾನಾಂ, ಮಾತಾಮಹಮಾತು:  ಪಿತಾಮಹ -ಮಾತು: ಪ್ರಪಿತಾಮಹಾನಾಂ ….ನಾಮ್ನಾಂ,  ಕಾಶ್ಯಪಗೋತ್ರಾಣಾಂ ವಸುರುದ್ರಾದಿತ್ಯಸ್ವರೂಪಾಣಾಂ  ತದಂತರ್ಯಾಮಿ  ಪ್ರದ್ಯುಮ್ನ -ಸಂಕರ್ಷಣ -ವಾಸುದೇವಾನಾಂ, ಮಾತಾಮಹೀ-ಮಾತು:ಪಿತಾಮಹೀ -ಮಾತು:ಪ್ರಪಿತಾಮಹೀನಾಂ….ದಾನಾಂ  ಕಾಶ್ಯಗೋತ್ರೀಣಾಂ  ವಸುರುದ್ರಾದಿತ್ಯ ಸ್ವರೂಪಾಣಾಮ್ ತದಂತರ್ಯಾಮಿ  ಪ್ರದ್ಯುಮ್ನ -ಸಂಕರ್ಷಣ -ವಾಸುದೇವಾನಾಂ, ತಥಾ  ಜ್ಯೇಷ್ಠಪಿತೃವ್ಯಾದಿ ಸಮಸ್ತಕಾರುಣ್ಯ ಪಿತೃಣಾಂ   ಅಕ್ಷಯ್ಯತೃಪ್ತ್ಯರ್ಥಂ  ಮಹಾಲಯ  ಶ್ರಾದ್ಧ ಪ್ರತಿನಿಧಿತ್ವೇನ  ತಿಲತರ್ಪಣಾಖ್ಯಂ  ಕರ್ಮ    ಕರಿಷ್ಯೇ |

ಪಿತೃ  ಪ್ರಾರ್ಥನೆ 

    ಅಮೂರ್ತಾನಾಮ್   ಸುಮೂರ್ತಾನಾಮ್  ಪಿತೃಣಾಂ  ದೀಪ್ತತೇಜಸಾಮ್ |

          ನಮಸ್ಯಾಮಿ  ಸದಾ  ತೇಷಾಂ   ಧ್ಯಾಯಿನಾಂ  ಯೋಗಚಕ್ಷುಷಾಮ್ ||

         ದೇವತಾಭ್ಯ:  ಪಿತೃಭ್ಯಶ್ಚ   ಮಹಾಯೋಗಿಭ್ಯ  ಏವ  ಚ |

          ನಮ:  ಸ್ವಧಾಯೈ  ಸ್ವಾಹಾಯೈ  ನಿತ್ಯಮೇವ  ನಮೋ  ನಮ: ||

 

ತರ್ಪಣ – 

ನೈರ್ಮಾಲ್ಯತುಳಸಿ ,ಎರಡು   ದರ್ಭೆ  ಮತ್ತು  ಎಳ್ಳು   ಹಿಡಿದುಕೊಂಡು  ದಕ್ಷಿಣಕ್ಕೆ  ಮುಖ ಮಾಡಿ  ತೋರುಬೆರಳು  ಮತ್ತು  ಅಂಗುಷ್ಠದ  ಮಧ್ಯದಿಂದ  ( ಪಿತೃತೀರ್ಥದಿಂದ ) ತರ್ಪಣ  ಕೊಡಬೇಕು. ಉಪವೀತ  ಎಡಕ್ಕಿರಬೇಕು. 

೧.  ಅಸ್ಮತ್  ಪಿತರಂ …ಶರ್ಮಾಣಂ …….ಗೋತ್ರಂ  ವಸುರೂಪಂ ತದಂತರ್ಯಾಮಿ  ಪ್ರದ್ಯುಮ್ನಂ ಸ್ವಧಾ  ನಮ:   ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೨.  ಅಸ್ಮತ್  ಪಿತಾಮಹಂ ….ಶರ್ಮಾಣಂ ….ಗೋತ್ರಂ  ರುದ್ರರೂಪಂ  ತದಂತರ್ಯಾಮಿ  ಸಂಕರ್ಷಣಂ  ಸ್ವಧಾ  ನಮ:   ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩.  ಅಸ್ಮತ್  ಪ್ರಪಿತಾಮಹಂ ….ಶರ್ಮಾಣಂ …ಗೋತ್ರಂ  ಆದಿತ್ಯರೂಪಂ  ತದಂತರ್ಯಾಮಿ                        ವಾಸುದೇವಂ  ಸ್ವಧಾ  ನಮ:   ತರ್ಪಯಾಮಿ   ತರ್ಪಯಾಮಿ  ತರ್ಪಯಾಮಿ |

೪.   ಅಸ್ಮನಾತರಂ (ತಾಯಿ) …ದಾಂ….ಗೋತ್ರಾಂ  ವಸುರೂಪಾಂ  ತದಂತರ್ಯಾಮಿ  ಪ್ರದ್ಯುಮ್ನಂ  ಸ್ವಧಾ   ನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೫. ಪಿತಾಮಹೀಂ (ತಂದೆಯ ತಾಯಿ )…..ದಾಂ ….ಗೋತ್ರಾಂ  ರುದ್ರರೂಪಾಂ  ತದಂತರ್ಯಾಮಿ  ಸಂಕರ್ಷಣಂ    ಸ್ವಧಾ  ನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೬.  ಪ್ರಪಿತಾಮಹೀಂ (ತಂದೆಯ ತಂದೆಯ  ತಾಯಿ )…..ದಾಂ ….ಗೋತ್ರಾಂ  ಆದಿತ್ಯರೂಪಾಂ  ತದಂತರ್ಯಾಮಿ    ವಾಸುದೇವಂ  ಸ್ವಧಾ  ನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೭.  ಸಾಪತ್ನಜನನೀಂ (ಸವತಿತಾಯಿ )…..ದಾಂ ….ಗೋತ್ರಾಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ   ಸ್ವಧಾನ ಸಮರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೮.  ಮಾತಾಮಹಂ (ತಾಯಿಯ  ತಂದೆ) ….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ        ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ    |       

೯.  ಮಾತು: ಪಿತಾಮಹಂ ( ತಾಯಿಯ  ತಂದೆಯ  ತಂದೆ  ) …..ಶರ್ಮಾಣಂ ….ಗೋತ್ರಂ  ರುದ್ರರೂಪಂ  ತದಂತರ್ಯಾಮಿ  ಸಂಕರ್ಷಣಂ  ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ           

೧೦. ಮಾತು: ಪ್ರಪಿತಾಮಹಂ ( ತಾಯಿಯ ತಂದೆಯ ತಂದೆಯ ತಂದೆ ) ….ಶರ್ಮಾಣಂ        ….ಗೋತ್ರಂ  ಆದಿತ್ಯರೂಪಂ  ತದಂತರ್ಯಾಮಿ  ವಾಸುದೇವಂ  ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೧೧. ಮಾತಾಮಹೀಂ (ತಾಯಿಯ ತಾಯಿ ) …..ದಾಂ ….ಗೋತ್ರಾಂ  ವಸು  ರೂಪಂ                ತದಂತರ್ಯಾಮಿ     ಪ್ರದ್ಯುಮ್ನಂ  ಸ್ವಧಾ  ನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೧೨.  ಮಾತು:  ಪಿತಾಮಹೀಂ   ( ತಾಯಿಯ  ತಂದೆಯ  ತಾಯಿ )….ದಾಂ ….ಗೋತ್ರಾಂ  ರುದ್ರರೂಪಾಂ  ತದಂತರ್ಯಾಮಿ  ಸಂಕರ್ಷಣಂ  ಸ್ವಧಾ ನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೧೩. ಮಾತು: ಪ್ರಪಿತಾಮಹೀಂ  (ತಾಯಿಯ  ತಂದೆಯ  ತಂದೆಯ  ತಾಯಿ )….ದಾಂ ….ಗೋತ್ರಾಂ ಆದಿತ್ಯರೂಪಾಂ   ತದಂತರ್ಯಾಮಿ  ವಾಸುದೇವಂ  ಸ್ವಧಾ  ನಮಸ್ತರ್ಪಯಾಮಿ  ತರ್ಪಯಾಮಿ             ತರ್ಪಯಾಮಿ |

೧೪.  ಆತ್ಮಪತ್ನೀಂ ( ಹೆಂಡತಿ )…..ನಾಮ್ನೀಂ ….ಗೋತ್ರಾಂ ವಸುರೂ ಪಾಂ  ತದಂತರ್ಯಾಮಿ  ಪ್ರದ್ಯುಮ್ನಂ    ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೧೫. ಅಸ್ಮತ್ಸುತಂ (ಮಗ -ಸೋದರನ ಮಗ )…..ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ     ಪ್ರದ್ಯುಮ್ನಂ  ಸ್ವಧಾ ನಮ: ತರ್ಪಯಾಮಿ ತರ್ಪಯಾಮಿ  ತರ್ಪಯಾಮಿ |

 ೧೬. ಭ್ರಾತರಂ (ಸಹೋದರ )….ಶರ್ಮಾಣಂ…ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ  ಸ್ವಧಾ   ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೧೭.  ಭ್ರಾತೃಪತ್ನೀಂ  (ಸೋದರನ  ಹೆಂಡತಿ )….ದಾಂ….ಗೋತ್ರಾಂ  ವಸುರೂಪಾಂ  ತದಂತರ್ಯಾಮಿ      ಪ್ರದ್ಯುಮ್ನಂ  ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ | 

೧೮.  ಭ್ರಾತೃಪುತ್ರಂ (ಸೋದರನ  ಮಗ )….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುನ್ಮಂ    ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೧೯. ಪಿತೃವ್ಯಂ (ತಂದೆಯ  ಸಹೋದರರು)….ಶರ್ಮಾಣಂ …ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ   ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ |

೨೦. ಪಿತೃವ್ಯಪತ್ನೀಂ (ಚಿಕ್ಕಪ್ಪ ದೊಡ್ಡಪ್ಪಂದಿರ ಪತ್ನಿ )….ದಾಂ ….ಗೋತ್ರಾಂ  ವಸುರೂಪಾಂ  ತದಂತರ್ಯಾಮಿ    ಪ್ರದ್ಯುಮ್ನಂ  ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ | 

೨೧.  ಪಿತೃವ್ಯಪುತ್ರಂ (ಅವರ ಮಗ) ….ಶರ್ಮಾಣಂ …ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ ಸ್ವಧಾ    ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  |

೨೨.   ಮಾತುಲಂ (ಸೋದರಮಾವ) ….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ     ಸ್ವಧಾ  ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  |

೨೩.  ತತ್ಪತ್ನೀಂ (ಸೋದರಮಾವನ  ಹೆಂಡತಿ )…..ದಾಂ…..ಗೋತ್ರಾಂ   ವಸುರೂಪಾಂ  ತದಂತರ್ಯಾಮಿ ಪ್ರದ್ಯುಮ್ನಂ  ಸ್ವಧಾನ ಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೨೪.   ತತ್  ಪುತ್ರಂ (ಸೋದರ ಮಾವಐನ  ಮಗ )….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ     ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೨೫.   ದುಹಿತರಂ (ಮಗಳು ) ….ದಾಂ ….ಗೋತ್ರಾಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ      ಸ್ವಧಾನ ಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೨೬.  ತದ್ಭರ್ತಾರಂ (ಅಳಿಯ)….ಶರ್ಮಾಣಂ …..ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ  ಸ್ವಧಾ       ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೨೭.   ಭಗಿನೀಂ (ಸೋದರಿ )….ದಾಂ ….ಗೋತ್ರಾಮ್  ವಸುರೂಪಾಂ   ತದಂತರ್ಯಾಮಿ      ಪ್ರದ್ಯುಮ್ನಂ      ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೨೮.    ದೌಹಿತ್ರಂ (ಮಗಳ  ಮಗ )….ಶರ್ಮಾಣಂ …..ಗೋತ್ರಂ  ವಸುರೂಪಂ  ತದಂತರ್ಯಾಮಿ   ಪ್ರದ್ಯುಮ್ನಂ  ಸ್ವಧಾ     ನಮ: ತರ್ಪಯಾಮಿ  ತರ್ಪಯಾಮಿ ತರ್ಪಯಾಮಿ |

೨೯.   ದೌಹಿತ್ರೀಂ (ಮಗಳ  ಮಗಳು )…..ದಾಂ ….ಗೋತ್ರಾಂ  ವಸುರೂಪಾಂ  ತದಂತರ್ಯಾಮಿ  ಪ್ರದ್ಯುಮ್ನಂ     ಸ್ವಧಾನಮಸ್ತರ್ಪಯಾಮಿ   ತರ್ಪಯಾಮಿ  ತರ್ಪಯಾಮಿ |

೩೦.  ಭಾಗಿನೇಯಕಂ (ಸೋದರಳಿಯ -ಸಹೋದರಿಯ ಮಗ )….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ  ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೧.   ಪಿತೃಷ್ವಸಾರಂ (ಸೋದರತ್ತೆ )….ದಾಂ …ಗೋತ್ರಾಂ  ವಸುರೂಪಾಂ  ತದಂತರ್ಯಾಮಿ  ಪ್ರದ್ಯುಮ್ನಂ   ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೨. ತದ್ಭರ್ತಾರಂ (ಸೋದರತ್ತೆಯ  ಗಂಡ )….ಶರ್ಮಾಣಂ ….ಗೋತ್ರಂ  ವಸುರೂಪಾಂ  ತದಂತರ್ಯಾಮಿ     ಪ್ರದ್ಯುಮ್ನಂ  ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೩. ತತ್ಪ್ರುತ್ರಂ (ಸೋದರತ್ತೆಯ ಮಗ )….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ  ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೪.   ಮಾತೃಷ್ವಸಾರಂ ( ತಾಯಿಯ  ಸೋದರಿ )….ದಾಂ….ಗೋತ್ರಾಮ್  ವಸುರೂಪಾಂ  ತದಂತರ್ಯಾಮಿ      ಪ್ರದ್ಯುಮ್ನಂ  ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೫.   ತದ್ಭರ್ತಾರಂ ( ಆಕೆಯ  ಪತಿ ) ….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ     ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೬.    ತತ್ಪುತ್ರಂ  ( ಆಕೆಯ  ಪುತ್ರ ) ….ಶರ್ಮಾಣಂ …..ಗೋತ್ರಂ  ವಸುರೂಪಂ  ತದಂತರ್ಯಾಮಿ  ಪ್ರದ್ಯುಮ್ನಂ    ಸ್ವಧಾ  ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೭.   ಶ್ವಶುರಂ  ( ಹೆಣ್ಣು ಕೊಟ್ಟ  ಮಾವ )….ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ  ತರ್ಪಯಾಮಿ     ತರ್ಪಯಾಮಿ  ತರ್ಪಯಾಮಿ |

೩೮.   ಶ್ವಶ್ರೂಂ ( ಹೆಣ್ಣು ಕೊಟ್ಟ ಅತ್ತೆ )….ದಾಂ …ಗೋತ್ರಾಂ  ವಸುರೂಪಾಂ  ತದಂತರ್ಯಾಮಿ  ಪ್ರದ್ಯುಮ್ನಂ      ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೩೯.   ಸ್ಯಾಲಕಂ  ( ಭಾವ ಮೈದುನ -ಹೆಂಡತಿಯ  ಅಣ್ಣ ತಮ್ಮ )….ಶರ್ಮಾಣಂ …ಗೋತ್ರಂ ವಸುರೂಪಂ  ತದಂತರ್ಯಾಮಿ       ಪ್ರದ್ಯುಮ್ನಂ  ಸ್ವಧಾ ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

೪೦.  ತತ್ಪತ್ನೀಂ (ಭಾವನ ಹೆಂಡತಿ )…ದಾಂ ….ಗೋತ್ರಾಂ  ವಸುರೂಪಾಂ  ತದಂತರ್ಯಾಮಿ ಪ್ರದ್ಯುಮ್ನಂ  ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |                 

೪೧.  ಭಾವುಕಂ (ಸೋದರಿಯ ಗಂಡ )….ಶರ್ಮಾಣಂ …..ಗೋತ್ರಂ  ವಸುರೂಪಂ ತದಂತರ್ಯಾಮಿ  ಪ್ರದ್ಯುಮ್ನಂ           ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

    ೪೨.  ಗುರುಂ (ಗುರುಕುಲದಲ್ಲಿ  ಪೋಷಿಸಿದವ ) …..ಶರ್ಮಾಣಂ ….ಗೋತ್ರಂ  ವಸುರೂಪಂ  ತದಂತರ್ಯಾಮಿ        ಪ್ರದ್ಯುಮ್ನಂ  ಸ್ವಧಾ  ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

    ೪೩.  ಗುರುಪತ್ನೀಂ (ಗುರುಕುಲದಲ್ಲಿ  ಅನ್ನ  ಹಾಕಿದವಳು )….ದಾಂ ….ಗೋತ್ರಾಂ  ವಸುರೂಪಾಂ     ತದಂತರ್ಯಾಮಿ  ಪ್ರದ್ಯುಮ್ನಂ   ಸ್ವಧಾನಮಸ್ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

    ೪೪.  ಆಚಾರ್ಯಾಂ  ( ವೇದಾಂತವನ್ನು ಪಾಠ ಮಾಡಿದವ )…..ಶರ್ಮಾಣಂ ….ಗೋತ್ರಂ  ವಸುರೂಪಂ     ತದಂತರ್ಯಾಮಿ  ಪ್ರದ್ಯುಮ್ನಂ  ಸ್ವಧಾ  ನಮ: ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

     ೪೫.  ಸಖಾಯಂ  (ಗೆಳೆಯ )….ಶರ್ಮಾಣಂ ….ಗೋತ್ರಂ  ವಸುರೂಪಂ ತದಂತರ್ಯಾಮಿ  ಪ್ರದ್ಯುಮ್ನಂ     ಸ್ವಧಾ  ನಮ:  ತರ್ಪಯಾಮಿ  ತರ್ಪಯಾಮಿ  ತರ್ಪಯಾಮಿ |

ಯಮತರ್ಪಣ 

          ಪ್ರಾಚೀನಾವೀತಿಯಾಗಿ   ಅಂಗುಲ್ಯಗ್ರದಿಂದ    ಪೂರ್ವಾಭಿಮುಖಿವಾಗಿ  ಯಮತರ್ಪಣ . 

      ಪಿತೃಪತಿಯಾದ್ದರಿಂದ   ಪ್ರಾಚೀನಾವೀ ತಿಯಾಗಿಯೂ  ದೇವತೆಯಾದ್ದರಿಂದ  ಪೂರ್ವಾಭಿಮುಖವಾಗಿ    ಅಂಗುಲ್ಯರದೇವತೀರ್ಥದಿಂದಲೂ  ಯಮತರ್ಪಣ  ಕೊಡಬೇಕು. 

ಯಮಂ  ತರ್ಪಯಾಮಿ | ಧರ್ಮರಾಜಂ  ತರ್ಪಯಾಮಿ | ಮೃತ್ಯುಮ್  ತರ್ಪಯಾಮಿ |ಅಂತಕಮ್  ತರ್ಪಯಾಮಿ | ವೈವಸ್ವತಮ್  ತರ್ಪಯಾಮಿ | ಕಾಲಂ  ತರ್ಪಯಾಮಿ | ಸರ್ವಭೂತಕ್ಷಯಂ  ತರ್ಪಯಾಮಿ | ಔದಂಬರಂ  ತರ್ಪಯಾಮಿ | ದಧ್ನಂ  ತರ್ಪಯಾಮಿ | ನೀಲಂ  ತರ್ಪಯಾಮಿ | ಪರಮೇಷ್ಟಿನಂ    ತರ್ಪಯಾಮಿ | ವೃಕೋದರಂ  ತರ್ಪಯಾಮಿ | ಚಿತ್ರಂ  ತರ್ಪಯಾಮಿ |  ಚಿತ್ರಗುಪ್ತಂ  ತರ್ಪಯಾಮಿ |

       ಯಮೋ  ನಿಹಂತಾ  ಪಿತೃಧರ್ಮರಾಜೋ 

       ವೈವಸ್ವತೋ  ದಂಡಧರಶ್ಚ  ಕಾಲ:|

        ಪ್ರೇತಾಧಿಪೋ  ದತ್ತಕೃತಾನುಸಾರೀ

       ಕೃತಾಂತ  ಏತದ್ದಶಕೃಜ್ಜಪಂತಿ|

 ಈ  ಶ್ಲೋಕವನ್ನು  ದಕ್ಷಿಣಾಭಿಮುಖವಾಗಿ  ಹತ್ತುಬಾರಿ  ಅಥವಾ  ಮೂರು  ಬಾರಿ  ಹೇಳಬೇಕು .

  ಸರ್ವಪಿತೃ ತರ್ಪಣ 

        ಕೈಯಲ್ಲಿ  ದರ್ಭೆ ಎಳ್ಳು  ನೀರು  ಹಿಡಿದುಕೊಂಡು  ಪ್ರಾಚೀನವೀತೀ   ಇರುವಂತೆ   ದಕ್ಷಿಣಾಭಿಮುಖವಾಗಿ     ಪಿತೃತೀರ್ಥದಿಂದ  ಒಂದು  ತರ್ಪಣ ಕೊಡಬೇಕು. 

             ಆಬ್ರಹ್ಮಸ್ತಂಭಪರ್ಯಂತಂ  ದೇವರ್ಷಿ ಪಿತೃಮಾನವಾ |

             ತೃಪ್ಯಂತು  ಪಿತರ:  ಸರ್ವೇ  ಮಾತೃಮಾತಾಮಹಾದಯ:||  

             ಅತೀತಕುಲ ಕೋಟಿನಾಮ್  ಸಪ್ತದ್ವೀಪನಿವಾಸಿನಾಮ್ |

            ಅಬ್ರಹ್ಮಭುವನಾಲ್ಲೋಕಾದಿದಮಸ್ತು  ತಿಲೋ (ಕುಶೋ )ದಕಮ್ ||

 

     ಅನೇನ  ಮಹಾಲಯಶ್ರಾದ್ಧ  ಪ್ರತಿನಿಧಿಭೂತತಿಲತರ್ಪಣಕರಣೇನ  ಸಮಸ್ತಪಿತ್ರಂತರ್ಗತ   ಶ್ರೀ ಲಕ್ಷ್ಮೀ ಜನಾರ್ದನ     ವಾಸುದೇವಾತ್ಮಕ  ಮಧ್ವಾಂ ತರ್ಗತ  ಗೋಪಾಲಕೃಷ್ಣ:  ಪ್ರೀಯತಾಮ್ |

ಎರಡು ಆಚಮನ  ಮಾಡಿ  ನಾಮತ್ರಯ  ಮಂತ್ರ  ಜಪಿಸಬೇಕು. ಓಂ  ಅಚ್ಯುತಾಯ  ನಮ: | ಅನಂತಾಯ  ನಮ:    ಗೋವಿಂದಾಯ  ನಮ:|

ಈ  ರೀತಿಯ  ತರ್ಪಣ ಶ್ರಾದ್ಧವನ್ನು  ಮಹಾಲಯದ  ಹದಿನಾರು  ದಿನಗಳಲ್ಲೂ  ಆಚರಿಸಬೇಕು . ಒಂದು  ದಿನವಂತೂ   ಪಿಂಡಪ್ರದಾನದೊಂದಿಗೆ  ಸಕೃನ್ಮಹಾಲಯಶ್ರಾದ್ಧ  ಮಾಡಿ  ವಿಪ್ರಭೋಜನ  ಮಾಡಿಸಬೇಕು. 

   ಇದು  ಬರ್ಹಿಷದ  ಮೊದಲಾದ  ಚಿರಪಿತೃಗಳ  ಪ್ರೀತಿಯನ್ನು  ಉಂಟು  ಮಾಡುತ್ತದೆ. ಪಿತ್ರನುಗ್ರಹದಿಂದಾಗಿ    ಸತ್ಸಂತತಿ ಪ್ರಾಪ್ತಿ , ಶಾಂತಿ  ನೆಮ್ಮದಿಗಳು  ನೆಲೆಸುತ್ತವೆ .

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

One thought on “ಪಿತೃ ಪಕ್ಷ – ಮಹಾಲಯ 

  1. ತುಂಬಾ ಉಪಯುಕ್ತವಾದ ಮಾಹಿತಿ. ಈ ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸಿ. ಹಾಗೆ ಪಿಂಡ ಪ್ರದಾನ ತರ್ಪನದ ವಿವರಣೆ ಕೊಟ್ಟರೆ ಉಪಯುಕ್ತ ವಾಗಿರುತ್ತದೆ,ಅದರ ಪುಸ್ತಕವೂ ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿ. ವಂದನೆಗಳು.

Leave a Reply

Your email address will not be published.