ವಿಷ್ಣು ಪ್ರೀತಿಕರವಾದ ವಿಷ್ಣುಪಂಚಕ ವ್ರತವು ಒಂದು ವರ್ಷ ಪರ್ಯಂತವೂ ನಡೆಸುವಂಥದು. ತಿಂಗಳಿಗೆ ಐದು ಉಪವಾಸದ ಈ ವ್ರತವನ್ನು ಕರ್ಮನಿಷ್ಠ ಶ್ರದ್ದಾಳುಗಳು ಲೀಲಾಜಾಲದಿಂದ ಅನುಷ್ಠಾನ ಮಾಡುತ್ತಾರೆ.
ಈ ವ್ರತವನ್ನು ಆರಂಭಿಸುವವರು ಭಾದ್ರಪದ ಶುಕ್ಲ ಪಕ್ಷದ ಏಕಾದಶಿಯಂದು ಶ್ರವಣ ನಕ್ಷತ್ರವಿದ್ದಾಗ ಆರಂಭಿಸಬೇಕು.
ಮುಂದಿನ ಹುಣ್ಣಿಮೆ ,ಕ್ರೃಷ್ಣ ಪಕ್ಷದ ಏಕಾದಶಿ , ಶ್ರವಣ ನಕ್ಷತ್ರದ ದಿನ, ಅಮಾವಾಸ್ಯಾ ಇಷ್ಟು ದಿನ ಉಪವಾಸ. ಹೀಗೆ ಎರಡು ಏಕಾದಶೀ, ಅಮಾವಾಸ್ಯೆ, ಹುಣ್ಣಿಮೆ ಮತ್ತು ಶ್ರವಣ ನಕ್ಷತ್ರವೆಂಬ ಐದು ಉಪವಾಸಗಳನ್ನು ಪ್ರತಿಮಾಸವು
ಆಚರಿಸಿ ಮುಂದಿನ ಭಾದ್ರಪದದಲ್ಲಿ ಅಥವಾ ಅನುಕೂಲದಿನದಲ್ಲಿ ಉದ್ಯಾಪನೆಯನ್ನು ಮಾಡಿ ಕೃಷ್ಣಾರ್ಪಣವೆನ್ನಬೇಕು.
ವಿಷ್ಣುಪಂಚಕ ಉಪವಾಸಕ್ಕೆ ಅಮಾವಾಸ್ಯೆ ಉದಯ ಕಾಲದಲ್ಲಿರಬೇಕು. ಪೂರ್ಣಿಮಾ ತಿಥಿ ಕನಿಷ್ಠ ಒಂದು ಯಾಮದಷ್ಟಿರಬೇಕು. .ಶ್ರವಣನಕ್ಷತ್ರ ಮಧ್ಯಾಹ್ನವ್ಯಾಪ್ತಿಯಾಗಿರಬೇಕು .
ವಿಷ್ಣುಪಂಚಕದ ಬಗ್ಗೆ ಮಾಹಿತಿಗಳು
೧. ವ್ರತಾರಂಭಕ್ಕೆ ಯೋಗ್ಯಕಾಲ -ಭಾದ್ರಪದಶುಕ್ಲ ಏಕಾದಶಿಯಂದು ಶ್ರವಣನಕ್ಷತ್ರವಿದ್ದಲ್ಲಿ ವಿಷ್ಣುಪಂಚಕ ವ್ರತವನ್ನು ಹಿಡಿಯಬಹುದು. ಅಥವಾ ಮಾರ್ಗಶಿರ ಮಾಸದ ಏಕಾದಶಿಯಂದು ವಿಷ್ಣುನಕ್ಷತ್ರ (ಶ್ರವಣ)ವಿಲ್ಲದಿದ್ದರೂ ಆರಂಭಿಸಬಹುದು. ಅಥವಾ ಮಾರ್ಗಶಿರ ಶುಕ್ಲ ಪಂಚಮಿಯಂದು ಶ್ರವಣ ನಕ್ಷತ್ರವಿದ್ದಲ್ಲಿ ಪ್ರಾರಂಭಿಸಬಹುದು.
ಆದರೆ ಆರಂಭಿಸುವ ತಿಂಗಳಲ್ಲಿ (ಆರಂಭವಾಗಿ ೩೦ ದಿನಗಳಲ್ಲಿ ) ಉಪವಾಸಾರ್ಹಗಳಾದ ಐದು ದಿನಗಳು ಇರಲೇಬೇಕು. ಯಾವುದೇ ಉಪವಾಸ ಲೋಪವಾಗಿರಕೂಡದು. ಅಲ್ಲದೇ ಅಧಿಕಮಾಸದಲ್ಲಿ ಮತ್ತು ಗುರು-ಶುಕ್ರಾಸ್ತಗಳಿದ್ದಾಗ ಈ ವ್ರತವನ್ನು ಆರಂಭಿಸುವಂತಿಲ್ಲ.
೨. ಆರಂಭಿಸಿದ್ದ ವ್ರತವನ್ನು ಗುರು -ಶುಕ್ರಾಸ್ತಗಳಿದ್ದಾಗಲೂ, ಅಧಿಕಮಾಸದಲ್ಲೂ ಮುಂದುವರಿಸಬೇಕು.
೩. ಹುಣ್ಣಿಮೆಯಂದೇ ಶ್ರವಣವು ಬರುವುದೇ ಮೊದಲಾದ ಕ್ರಮದಿಂದ ಉಪವಾಸವು ತಪ್ಪಿಹೋದಲ್ಲಿ ಯಾವುದೇ ದೋಷವಿಲ್ಲ. ಆದರೆ ಶ್ರಮದಿಂದಲೋ ರೋಗಾದಿನಿಮಿತ್ತದಿಂದಲೋ ಉಪವಾಸ ತಪ್ಪಿದರೆ ವರ್ಷ ಮುಗಿದ ಮುಂದಿನ ತಿಂಗಳಿನಲ್ಲಿ ಆಯಾದಿನದಲ್ಲಿ ಉಪವಾಸ ಮಾಡಿ ಪೂರ್ತಿಗೊಳಿಸಿಕೊಳ್ಳಬೇಕು.
೪. ಸ್ವತಃ ತನಗೆ ಮಾಡುವುದಕ್ಕೆ ಅಸಾಮರ್ಥ್ಯವಿದ್ದಾಗ ತನ್ನ ಧರ್ಮಪತ್ನಿಯ ಮೂಲಕ ಅಥವಾ ಸುತನ ಮೂಲಕ ಮಾಡಿಸಿ ಫಲಪಡೆಯಬಹುದೆಂದಿದೆ ವಿಷ್ಣು ರಹಸ್ಯ.
೫. ತೀರ್ಥಪ್ರಾಶನ – ಏಕಾದಶಿದಿನವನ್ನು ಹೊರತುಪಡಿಸಿ ಉಳಿದ ಯಾವುದೇ ದಿನ ವಿಷ್ಣುಪಂಚಕದ ಉಪವಾಸವಿದ್ದಾಗಲೂ ಗಂಧೋದಕಮಿಶ್ರಿತವಾದ ಶಾಲಗ್ರಾಮತೀರ್ಥವನ್ನು ಮೂರು ಬಾರಿ ಪ್ರಾಶನ ಮಾಡಬೇಕು. ಗಂಧಾಕ್ಷತೆಗಳನ್ನು ಧರಿಸಿಕೊಳ್ಳಬೇಕು. ವಿಷ್ಣು ವ್ರತಾಭಿಮಾನದಿಂದ ತೀರ್ಥವನ್ನು ಮೂರು ಬಾರಿ
ಸ್ವೀಕರಿಸದೇ ಕುಳಿತಲ್ಲಿ ಬಲು ದೋಷವಿದೆಯೆಂದಿದೆ ವಿಷ್ಣು ರಹಸ್ಯ –
ಸ್ವಾದುದ ಮಿಶ್ರಿತಂ ತೀರ್ಥಂ ನ ಪಿಭೇದ್ಯದಿ ಮೋಹತಃ |
ಗಂಧಾಕ್ಷತಾನ್ ನ ಧಾರ್ಯೇತ ತಾಮಸೀಮ್ ಗತಿಮಾಪ್ನುಯಾತ್ ||
ವಿಷ್ಣುವ್ರತಾಭಿಮಾನಾದ್ ವಾ ವ್ರತಭಂಗಭಯಾನ್ಮುನೇ |
ತೀರ್ಥಂ ತ್ರಿರ್ನ ಪಿಬೇನ್ಮೋಹಾನ್ಮಮ ದ್ರೋಹೀ ನ ಸಂಶಯಃ |
೬. ಉದ್ಯಾಪನೆ – ವ್ರತದ ಉದ್ಯಾಪನೆಯನ್ನು ಆದಿ -ಮಧ್ಯ -ಅಂತ ಎಂದಾದರೂ ಅನುಕೂಲವಿದ್ದ ದಿನ ಮಾಡಬಹುದು.
ಸಾಮಾನ್ಯವಾಗಿ ಉಪವಾಸದ ಕೊನೆಯ ತಿಂಗಳಲ್ಲಿ ಉದ್ಯಾಪನೆ ಮಾಡುತ್ತಾರೆ.
೭. ಸಂತರ್ಪಣೆ – ಪ್ರತಿ ಪಾರಣೆಗೂ ಬ್ರಾಹ್ಮಣ ದಂಪತಿಗಳ ಸಂತರ್ಪಣೆ ಅತಿಶಯ ಫಲದಾಯಕ. ಅಥವಾ
ಉದ್ಯಾಪನೆಯಂದು ೫-೧೨ -೬೦ ಅರವತ್ತು ಬ್ರಾಹ್ಮಣ ದಂಪತಿಗಳಿಗೆ ಸಂತರ್ಪಣೆಯನ್ನು ನಡೆಸಬಹುದು.
೮. ಹುಣ್ಣಿಮೆ, ಅಮಾವಾಸ್ಯೆ, ಶ್ರವಣ ನಕ್ಷತ್ರವುಳ್ಳ ತಿಥಿಗಳಲ್ಲಿ ತಂದೆ ಅಥವಾ ತಾಯಿಯ ಶ್ರಾದ್ಧವು ಬಂದಲ್ಲಿ
(ಸ್ವಕತೃಕಪಾರ್ವಣವೂ ಬಂದಲ್ಲಿ) ಅಂದು ಶ್ರಾದ್ಧ, ವಿಪ್ರಭೋಜನ ಮುಗಿಸಿ ಭೋಜನ ಮಾಡಲೇಬೇಕು. ಇಂದು ಉಪವಾಸ ವಿಘ್ನವಾಯಿತೆಂಬ ದೋಷವಿಲ್ಲ.
೯. ಪಿತೃ ದಿನದಂದು ಮಾತ್ರವಲ್ಲದೇ ದಶಮಿಯಂದು, ಸಾಧನ ದ್ವಾದಶಿಯಂದು ಮತ್ತು ಶಿವರಾತ್ರಿಯ ದಿನದಂದು ಶ್ರವಣ ನಕ್ಷತ್ರವು ಬಂದರೆ ಅಂದು ಉಪವಾಸ ಮಾಡಕೂಡದು.
೧೦. ಪ್ರತಿ ಉಪವಾಸದಲ್ಲೂ ಹನ್ನೆರಡು ತರ್ಪಣವನ್ನು ಕೊಡಬೇಕು. ಉದ್ಯಾಪನ ಕಾಲದಲ್ಲಿ ಎಲ್ಲಾ ದೇವತೆಗಳಿಗೂ ಹನ್ನೆರಡು ಬಾರಿ ತರ್ಪಣ ಕೊಡುವ ಅನುಕೂಲ ಪದ್ಧತಿಯೂ ಇದೆ.
ವಿಷ್ಣುಪಂಚಕತರ್ಪಣ ದೇವತೆಗಳು.
ಶುಕ್ಲ ಏಕಾದಶಿ ದೇವತೆಗಳು –
(ದ್ವಾದಶಿಯಂದು ತರ್ಪಣ )
೧. ಕೇಶವಂ ತರ್ಪಯಾಮಿ
೨. ನಾರಾಯಣಂ ತರ್ಪಯಾಮಿ
೩. ಮಾಧವಂ ತರ್ಪಯಾಮಿ
೪. ಗೋವಿಂದಂ ತರ್ಪಯಾಮಿ
೫. ವಿಷ್ಣುಂ ತರ್ಪಯಾಮಿ
೬. ಮಧುಸೂದನಂ ತರ್ಪಯಾಮಿ
೭. ತ್ರಿವಿಕ್ರಮಂ ತರ್ಪಯಾಮಿ
೮. ವಾಮನಂ ತರ್ಪಯಾಮಿ
೯. ಶ್ರೀಧರಂ ತರ್ಪಯಾಮಿ
೧೦. ಹೃಷಿಕೇಶಂ ತರ್ಪಯಾಮಿ
೧೧. ಪದ್ಮನಾಭಂ ತರ್ಪಯಾಮಿ
೧೨. ದಾಮೋದರಂ ತರ್ಪಯಾಮಿ
ಕೃಷ್ಣ ಏಕಾದಶೀ ದೇವತೆ
(ದ್ವಾದಶೀ ತರ್ಪಣ)
ಸಂಕರ್ಷಣಂ ತರ್ಪಯಾಮಿ
ವಾಸುದೇವಂ ತರ್ಪಯಾಮಿ
ಪ್ರದ್ಯುಮ್ನಂ ತರ್ಪಯಾಮಿ
ಅನಿರುದ್ಧಂ ತರ್ಪಯಾಮಿ
ಪುರುಷೋತ್ತಂ ತರ್ಪಯಾಮಿ
ಅಧೋಕ್ಷಜಂ ತರ್ಪಯಾಮಿ
ನರಸಿಂಹಂ ತರ್ಪಯಾಮಿ
ಅಚ್ಯುತಂ ತರ್ಪಯಾಮಿ
ಜನಾರ್ದನಂ ತರ್ಪಯಾಮಿ
ಉಪೇಂದ್ರಂ ತರ್ಪಯಾಮಿ
ಹರಿಂ ತರ್ಪಯಾಮಿ
ಶ್ರೀ ಕೃಷ್ಣಂ ತರ್ಪಯಾಮಿ
ಪೂರ್ಣಿಮಾ ದೇವತೆಗಳು
೧. ವಿಧುಂ ತರ್ಪಯಾಮಿ
೨. ಶಶಿನಂ ತರ್ಪಯಾಮಿ
೩. ಶಶಾಂಕಂ ತರ್ಪಯಾಮಿ
೪. ಚಂದ್ರಂ ತರ್ಪಯಾಮಿ
೫. ಸೋಮಂ ತರ್ಪಯಾಮಿ
೬. ಉಡುಪಂ ತರ್ಪಯಾಮಿ
೭. ಅಮೃತಂ ತರ್ಪಯಾಮಿ
೮. ಮನೋಹರಂ ತರ್ಪಯಾಮಿ
೯. ರಾಮಂ ತರ್ಪಯಾಮಿ
೧೦. ಹಿಮಕೃತಂ ತರ್ಪಯಾಮಿ
೧೧. ನಿಶಾಕೃತಂ ತರ್ಪಯಾಮಿ
೧೨. ದೀಪ್ಯಮಾನಂ ತರ್ಪಯಾಮಿ
ಅಮಾವಾಸ್ಯಾ ದೇವತೆಗಳು
೧. ಮಹೀಧರಂ ತರ್ಪಯಾಮಿ
೨. ಜಗನ್ನಾಥಂ ತರ್ಪಯಾಮಿ
೩. ದೇವೇಂದ್ರಂ ತರ್ಪಯಾಮಿ
೪. ದೇವಕೀ ಸುತಂ ತರ್ಪಯಾಮಿ
೫. ಚತುರ್ಭಜಂ ತರ್ಪಯಾಮಿ
೬. ಗದಾಪಾಣಿಂ ತರ್ಪಯಾಮಿ
೭. ಸುರಮೀಢಮ್ ತರ್ಪಯಾಮಿ
೮. ಸುಲೋಚನಂ ತರ್ಪಯಾಮಿ
೯. ಚಾರ್ವಂ ಗಂ ತರ್ಪಯಾಮಿ
೧೦. ಚಕ್ರಪಾಣಿಂ ತರ್ಪಯಾಮಿ
೧೧. ಸುರಮಿತ್ರಂ ತರ್ಪಯಾಮಿ
೧೨. ಅಸುರಾಂತಕಂ ತರ್ಪಯಾಮಿ
ಶ್ರವಣ ನಕ್ಷತ್ರದ ದೇವತೆಗಳು
೧. ಪುರುಷೋತ್ತಮಂ ತರ್ಪಯಾಮಿ
೨. ಶಾಙ್ರ ಧನ್ವಿನಂ ತರ್ಪಯಾಮಿ
೩. ಗರುಡಧ್ವಜಂ ತರ್ಪಯಾಮಿ
೪. ಅನಂತಂ ತರ್ಪಯಾಮಿ
೫. ಗೋವರ್ಧನಂ ತರ್ಪಯಾಮಿ
೬. ಪುಂಡರೀಕಾಕ್ಷo ತರ್ಪಯಾಮಿ
೭. ನಿತ್ಯಂ ತರ್ಪಯಾಮಿ
೮. ವೇದಗರ್ಭಂ ತರ್ಪಯಾಮಿ
೯. ವೇದಪುರುಷಂ ತರ್ಪಯಾಮಿ
೧೦. ಸುಬ್ರಹ್ಮಣ್ಯಂ ತರ್ಪಯಾಮಿ
೧೧. ಜಯಂ ತರ್ಪಯಾಮಿ
೧೨. ಶೌರಿಂ ತರ್ಪಯಾಮಿ
ಉಪವಾಸದ ಮರುದಿನ ಪಾರಣೆಗೆ ಮೊದಲು ಈ ೧೨ ನಾಮಗಳಿಂದ ಶುದ್ಧೋದಕವನ್ನು ಕೈಯಲ್ಲಿ ಹಾಕಿ ಬೆರಳ ತುದಿಯಿಂದ ಕೆಳ ಬೀಳುವಂತೆ ತರ್ಪಣವನ್ನು ಕೊಡಬೇಕು.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ