ಮಾರ್ಗಶೀರ್ಷ ಹುಣ್ಣಿಮೆಯಂದು ಅತ್ರಿಪುತ್ರದತ್ತನ ಅವತಾರ. ದತ್ತಾತ್ರೇಯನು ಭಗವಂತನ ಅವತಾರವಾಗಿದ್ದರೂ ಬುದ್ಧನಂತೆ ಋಷಭನಂತೆ ಮೋಹಾವತಾರ. ಜ್ಞಾನವನ್ನಿತ್ತ ರೂಪವಾಗಿದ್ದರೂ ಸುರಾಪಾನ -ವಿಚಿತ್ರಭಕ್ಷ್ಯಾದಿ ಆಚಾರಗಳಿಂದ ಮೋಹಗೊಳಿಸುವ ದತ್ತಾತ್ರೇಯನ ಜಯಂತಿಯನ್ನು ಆಚರಿಸುವ ಸಂಪ್ರದಾಯ ವೈಷ್ಣವಬ್ರಾಹ್ಮಣರಲ್ಲಿಲ್ಲ. ಅಲ್ಲದೆ ವೈವಸ್ವತ ಮನ್ವಂತರದ ಹತ್ತು ಅವತಾರಗಳಲ್ಲಿ ಸೇರದಿರುವುದರಿಂದ ಅರ್ಘ್ಯದಾನಾದಿ ಪ್ರಕ್ರಿಯೆಯೂ ಇರುವುದಿಲ್ಲ. ದತ್ತಜಯಂತಿಯನ್ನು ಆಚರಿಸಬಾರದೆಂದೇನೂ ಇಲ್ಲ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ