ಕಾರ್ತಿಕ ಕೃಷ್ಣ ದ್ವಾದಶಿಯಂದು ಧನ್ವಂತರಿ ಜಯಂತೀ . ತೌಳವರಲ್ಲಿ ತುಲಾ ಮಾಸದ ಕೃಷ್ಣ ದ್ವಾದಶಿಯಂದು ಆಚರಿಸಲಾಗುತ್ತದೆ.
ಕ್ಷೀರಸಾಗರ ಮಥನ ಕಾಲದಲ್ಲಿ ಜ್ಞಾನ ಮುದ್ರೆಯೊಂದಿಗೆ ಅಮೃತ ಕಲಶವನ್ನು ಹಿಡಿದು ಧನ್ವಂತರಿ ದೇವ ಆವಿರ್ಭವಿಸಿದ. ಆಯುರ್ವೇದವನ್ನು ಪ್ರಸಾರಗೊಳಿಸಿದ.
ಆಚಾರ್ಯ ಮಧ್ವರು ತಂತ್ರಸಾರ ಸಂಗ್ರಹದಲ್ಲಿ ಹೇಳಿದ ಧನ್ವಂತರಿ ಮಂತ್ರದ ಜಪ, ತರ್ಪಣ, ಹೋಮಗಳು ಪ್ರಶಸ್ತ. ದ್ವಾದಶಿಯಾದ್ದರಿಂದ ಹೋಮವು ಕ್ಲೇಶ ಸಾಧ್ಯ.
ಧನ್ವಂತರಿಯಾಗಿ ಅವತರಿಸಿದ ಭಗವಂತನನ್ನು ಚಂದ್ರಮಂಡಲದಲ್ಲಿ ಧ್ಯಾನಿಸೋಣ. ಹಲವು ಚಂದ್ರರ ತಂಪುಕಾಂತಿ ಈತನದು. ಅಮೃತಮಯವಾದ ತಂಪು ಕಿರಣದಿಂದ ಲೋಕವನ್ನು ಸಂಜೀವನಗೊಳಿಸುತ್ತಿರುವ ಧನ್ವಂತರಿಯ ಚೆಲುಮುಖ ಅಮಿತಾನಂದವನ್ನು ಹೊರಸೂಸುತ್ತಿದೆ. ಬಲಗೈಯಲ್ಲಿ ಜ್ಞಾನಮುದ್ರೆ. ಎಡಗೈಯಲ್ಲಿ ಅಮೃತ ಕಲಶ. (ಉಳಿದೆರಡು ಕೈಗಳಲ್ಲಿ ಶಂಖಚಕ್ರಗಳೊಂದಿಗೆ ತುಲಸೀ ಅಮೃತವಲ್ಲಿ ಮೂಲಿಕೆಗಳು)
ಚಂದ್ರೌಘಕಾಂತಿಮಮೃತೋರುಕರೈರ್ಜಗಂತಿ
ಸಂಜೀವಯಂತಮಮಿತಾತ್ಮಸುಖಂ ಪರೇಶಮ್|
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ
ಶೀತಾಂಶುಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||
ಹೀಗೆ ಧ್ಯಾನಿಸಿ ಪ್ರಾರ್ಥನೆ ಸಲ್ಲಿಸಿ ನಮಸ್ಕರಿಸಿ.
ಧನ್ವಂತರೇಂ~ಗರುಚಿ ಧನ್ವಂತರೇರಿತರು ಧನ್ವನ್ತಸ್ತ ರೀಭವ ಸುಧಾ
ಭಾನ್ವಂತರಾವಸಥ ಮನ್ವಂತರಾಧಿಕೃತ ತನ್ವಂತ ರೌಷಧನಿಧೇ |
ದನ್ವಂತರಂಗಶುಗುದನ್ವಂತ ಮಾಜಿಷು ವಿತನ್ವನ್ ಮಮಾಭ್ದಿತನಯಾ
ಸೂನ್ವಂತಕಾತ್ಮಹೃದ ತನ್ವಂತರಾವಯವ ತನ್ವಂತರಾರ್ತಿಜಲಧೌ ||
ನಮೋ ಧನ್ವಂತರೇ ತುಭ್ಯಂ ಸಂಸ್ಕೃತಿವ್ಯಾಧಿನಾಶನ |
ಪದ್ಮಪತ್ರವಿಶಾಲಾಕ್ಷ ದೇವವೈದ್ಯ ನಮೋ~ಸ್ತು ತೇ ||
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ