ಗೀತಾಜಯಂತೀ -ಮುಕ್ಕೋಟಿ  ದ್ವಾದಶೀ 

ಗೀತಾಜಯಂತೀ 

    ಮಾರ್ಗಶಿರ  ಶುಕ್ಲಏಕಾದಶೀ  ಶ್ರೀಕೃಷ್ಣ ಅರ್ಜುನನಿಗೆ  ಗೀತೋಪದೇಶಗೈದ  ದಿನ. ಇಂದು  ಸಮಗ್ರಗೀತೆಯನ್ನು  ಪಾರಾಯಣ ಮಾಡಿದರೆ  ವೇದೋಪನ್ಯಾಸಗೈದ  ಫಲ. 

   ಗೀತಾಸಾರವೆನಿಸಿದ  ಹದಿನೈದನೆಯ ಅಧ್ಯಾವನ್ನಾದರೂ  ಪಾರಾಯಣ  ಮಾಡೋಣ. 

ಮುಕ್ಕೋಟಿ  ದ್ವಾದಶೀ 

     ಮಾರ್ಗಶೀರ್ಷ ಶುಕ್ಲದ್ವಾದಶಿಯು  ಮುಕ್ಕೋಟಿದ್ವಾದಶೀ. ಸೌರಪಕ್ಷದಲ್ಲಿ  ಧನುರ್ಮಾಸದಲ್ಲಿ  ಒದಗುವ  ಶುಕ್ಲದ್ವಾದಶಿಯು  ಮುಕ್ಕೋಟಿ ದ್ವಾದಶಿಯೆನಿಸಿದೆ. 

   ಮುಕ್ಕೋಟಿ ದೇವತೆಗಳೂ  ಇಂದು  ಭೂವೈಕುಂಠವೆನಿಸಿದ  ತಿರುಪತಿಗೆ  ಬಂದು  ಸ್ವಾಮಿಪುಷ್ಕರಿಣಿಯಲ್ಲಿ  ಮಿಂದು  ಶ್ರೀನಿವಾಸನ  ದರ್ಶನವನ್ನು  ಪಡೆಯುತ್ತಾರಂತೆ. 

    ಈ  ದಿನ  ತಿರುಪತಿಯ  ಸ್ವಾಮಿಪುಷ್ಕರಿಣೀ  ಸ್ನಾನ  ಮತ್ತು  ಶ್ರೀನಿವಾಸನ  ದರ್ಶನ  ವಿಶೇಷ  ಪುಣ್ಯಫಲಪ್ರದ. ಅಲ್ಲಿ  ಹೋಗಿ  ದರ್ಶನ  ಮಾಡಲು  ಅನುಕೂಲವಿಲ್ಲದಿದ್ದರೆ  ಇಲ್ಲೇ  ಉಷ:ಕಾಲದಲ್ಲಿ  ಪುಷ್ಕರಿಣೀತೀರ್ಥಸ್ಮರಣೆಯೊಂದಿಗೆ  ಸ್ನಾನ  ಮಾಡಿ  ಹುಗ್ಗಿಯನ್ನು  ನಿವೇದಿಸಿ  ಪೂಜಿಸಿ  ಸಂತರ್ಪಣೆ  ಮಾಡುವ  ಪದ್ಧತಿಯಿದೆ. 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.