ಕಾರ್ತಿಕ  ಸ್ನಾನ 

ಆಶ್ವಿಜ   ಹುಣ್ಣಿಮೆಯಿಂದ  ಆರಂಭಿಸಿ  ಕಾರ್ತಿಕ  ಹುಣ್ಣಿಮೆಯ  ತನಕ  ಕಾರ್ತಿಕ  ಸ್ನಾನ. ಪ್ರತಿದಿನವೂ  ಅರುಣೋದಯಕಾಲದಲ್ಲಿ  ನದೀ -ಕೂಪ – ತಟಕಾದಿಗಳಲ್ಲಿ  ತಣ್ಣೀರಿನ  ಸ್ನಾನವನ್ನು  ಆಚರಿಸುವುದರಿಂದ  ಕುಟುಂಬಕ್ಕೆ 

ಕಲ್ಯಾಣವಿದೆ.  ಕಾವೇರೀ ಸ್ನಾನ  ಬಲು  ವಿಶೇಷ.  ತುಲಾಮಾಸ  ಸೇರಿದ  ಕಾರ್ತಿಕದಲ್ಲಿ  ಕಾವೇರೀಸ್ನಾನವು   ಗಂಗಾಸ್ನಾನದ  

ಫಲವನ್ನು  ನೀಡುವುದು. ಕೆಲವರ  ಪ್ರಕಾರ  ಆಶ್ವಿನಶುಕ್ಲದಶಮಿಯಿಂದ  ಕಾರ್ತಿಕ  ಶುಕ್ಲ  ದ್ವಾದಶಿಯ  ತನಕ  ಕಾರ್ತಿಕ  ಸ್ನಾನ. 

ಸಂಕಲ್ಪ  ಮಂತ್ರ

      ಕಾರ್ತಿಕೇ~ಹಂ  ಕರಿಷ್ಯಾಮಿ  ಪ್ರಾತಃ:ಸ್ನಾನಂ  ಜನಾರ್ದನ |

      ಪ್ರೀತ್ಯರ್ಥಂ  ತವ  ದೇವೇಶ  ದಾಮೋದರ  ಮಾಯಾ  ಸಹ ||

      ಧ್ಯಾತ್ವಾ  ನತ್ವಾ  ಚ  ದೇವೇಶಂ  ಜಲೇ`ಸ್ಮಿನ್  ಸ್ನಾತುಮುದ್ಯತಃ |

       ತವ  ಪ್ರಸಾದಾತ್  ಪಾಪಂ  ಮೇ  ದಾಮೋದರ  ವಿನಶ್ಯತು ||

ಅರ್ಘ್ಯ ಮಂತ್ರ 

      ನಿತ್ಯೇ  ನೈಮಿತ್ತಿಕೇ  ಕೃಷ್ಣ  ಕಾರ್ತಿಕೇ  ಪಾಪನಾಶನೇ |

       ಗೃಹಾಣಾರ್ಘ್ಯಂ  ಮಾಯಾ  ದತ್ತಂ  ದಾನವೇಂದ್ರ ನಿಷೂದನ ||

 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.