ಮುಡಿಪು ಕಟ್ಟುವುದು 

ತಿರುಪತಿ  ತಿಮ್ಮಪ್ಪ  ಜಗದ  ಸ್ವಾಮಿ.  ಕೃಷಿ ನೆಲದ ಒಡೆತನ  ಅವನಲ್ಲಿದ್ದು  ಅವನ  ಒಕ್ಕಲುದಾರರು  ನಾವು.  ನಾವು  ಪಡೆದ  ಲಾಭದಲ್ಲಿ  ಒಂದಂಶವನ್ನು  ಕಾಂಚನಬ್ರಹ್ಮ್ಮ ನೆನಿಸಿದ  ಶ್ರೀನಿವಾಸನಿಗೆ  ಸಲ್ಲಿಸಬೇಕು. ಈ  ಗೇಣಿ  ಸಲ್ಲಿಸುವ  ವಿಧಿಗೆ  ತುಳುಭಾಷೆಯಲ್ಲಿ  ಮುಡಿಪುಕಟ್ಟುವುದು  ಎನ್ನುತ್ತಾರೆ. 

ಮಣೆಯ  ಮೇಲೆ  ಕಾಣಿಕೆಪಾತ್ರೆಯನ್ನಿಟ್ಟು  ಶ್ರೀನಿವಾಸನನ್ನು  ಪೂಜಿಸಲಾಗುತ್ತದೆ. ಮನೆ  ಸದಸ್ಯರೆಲ್ಲರೂ  ದುಡ್ಡನ್ನು 

ಹಿಡಿದು  ವೆಂಕಟೇಶಸ್ತೋತ್ರವನ್ನು  ಹೇಳಿ  ಮನೆಯ  ಹಿರಿಯನ  ಕೈಯಲ್ಲಿ  ಕೊಡುತ್ತಾರೆ. ಗೋವಿಂದ  ನಾಮಕೀರ್ತನೆಯೊಂದಿಗೆ  ಕಾಣಿಕೆ  ಪಾತ್ರೆಗೆ  ಹಣವನ್ನು  ಸುರಿಯಲಾಗುತ್ತದೆ.  ಪಂಚಕಜ್ಜಾಯ, ಪಾನಕಗಳನ್ನು 

ನಿವೇದಿಸಲಾಗುತ್ತದೆ. ಕಾಣಿಕೆಯನ್ನು  ಎಂದಾದರೂ  ತಿರುಪತಿಗೆ  ಹೋಗುವಾಗ  ಅಥವಾ  ಹೋಗುವವರ  ಮೂಲಕ 

ದೇವರ  ಭಂಡಾರಕ್ಕೆ  ಸೇರಿಸಲಾಗುತ್ತದೆ. ಒಟ್ಟು ಕ್ರಮ ಹೀಗೆ-

ಸಂಕಲ್ಪ –

ಅಸ್ಮಾಕಂ  ಸಕುಟುಂಬಾನಾಂ  ಸಮಸ್ತಸನ್ಮಂ ಗಲಾವಾಪ್ಯ್ತರ್ಥಂ  ಶ್ರೀಭೂಸಹಿತ ವೇಂಕಟರಮಣಪೂಜಾಪೂರ್ವಕಂ 

ನಿಧಿಸಮರ್ಪಣಂ  ಕರಿಷ್ಯೇ |

ಇದಂ  ವಿಷ್ಣು:…ಮಂತ್ರದಿಂದ  ಅಥವಾ  ಕಲ್ಯಾಣಾದ್ಭುತಗಾತ್ರಾಯ  ಎಂಬ  ಶ್ಲೋಕದಿಂದ  ಶ್ರೀನಿವಾಸನನ್ನು 

ಆವಾಹಿಸಿ  ಪುರುಷಸೂಕ್ತದ  ಋಕ್ ಗಳಿಂದ  ಷೋಡಶೋಪಚಾರಪೂಜೆಯನ್ನು  ಸಮರ್ಪಿಸಬೇಕು.

ವೆಂಕಟೇಶಸ್ತೋತ್ರದಿಂದ  ಅರ್ಚನೆಯಾಗಿ  ಸರ್ವರೂ  ನಾಣ್ಯಗಳನ್ನು  ಹಿಡಿದುಕೊಂಡು  ಪ್ರಾರ್ಥನೆಯನ್ನು 

ಸಲ್ಲಿಸಿ  ನಾಣ್ಯಗಳನ್ನು  ಕಾಣಿಕೆಪಾತ್ರೆಗೆ  ಸುರಿಯುತ್ತಾರೆ. ಈಗ  ಎಲ್ಲರೂ ಗೋವಿಂದಾ ~~ ಹರಿ   ಗೋವಿಂದಾ ಎಂಬ  ನಾಮವನ್ನು  ಉದ್ಘೋಷಿಸುತ್ತಾರೆ

ಮುಂದೆ  ನೈವೇದ್ಯ  ನೀರಾಜನಗಳೊಂದಿಗೆ  ಪೂಜಾಸಮಾಪ್ತಿ.

ಅನಯಾ  ಪೂಜಯಾ  ಶ್ರೀಭೂಸಮೇತ:  ವೆಂಕಟರಮಣ :  ಪ್ರೀಯತಾಮ್ |

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.