Raghavendra Swami Aradhane

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಾಯ ಚ |
ಭಜತಾಂ ಕಲ್ಪವೃಕ್ಷಾಯ ನವ್ಮತಾಂ ಕಾಮಧೇನವೇ ||

ಕ್ರಿ.ಶ. 1595 ನೇ ಇಸವಿ ಮನ್ಮಥ ನಾಮ ಸಂವತ್ಸರದ ಪಾಲ್ಗುಣ ಶುದ್ಧ ಸಪ್ತಮಿ ಗುರುವಾರದಂದು ಅವತರಿಸಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಎ೦ದೇ ಪ್ರಸಿದ್ಧಿ ಪಡೆದವರು. ವಿಷ್ಣು ಸರ್ವೋತ್ತಮತ್ವವನ್ನು ಸರ್ವದಾ ಪ್ರತಿಪಾದಿಸಿದ ರಾಯರು ಅನಿಶ್ಚಯತೆಯಿಂದ ತತ್ತರಿಸುತ್ತಿರುವ ಮನುಷ್ಯರ ಅಸ್ವತಂತ್ರವನ್ನು ತಮ್ಮ ವಿದ್ವತ್‌ಪೂರ್ಣ ಗ್ರಂಥಗಳ ಮೂಲಕ ಲೋಕದ ಜನಕ್ಕೆ ಅರಿವು ಮಾಡಿಕೊಟ್ಟವರು. ವೈದಿಕ ಶ್ರೇಷ್ಠರೂ ಆಗಿದ್ದ ಶ್ರೀ ರಾಘವೇಂದ್ರ ಪ್ರಭುಗಳು ಶಾಸ್ತ್ರಭಕ್ತಿ, ಸಾಹಿತ್ಯ ಸಂಗೀತಗಳ ಸಂಗಮವಾಗಿದ್ದರು.

ಉಡುಪಿ ಶ್ರೀಕೃಷ್ಣನ ಪರಮ ಭಕ್ತರಾಗಿದ್ದ ಯತಿವರ್ಯರು ಉಡುಪಿಗೆ ಬಂದು ಶ್ರೀ ಮಧ್ವಾಚಾರ್ಯ ಪ್ರತಿಷ್ಠತ ಶ್ರೀ ಕೃಷ್ಣನ ಸೊಬಗಿಗೆ ಮಾರುಹೋಗಿ ಚಿನ್ನದ ಶ್ರೀಕೃಷ್ಣನ ಪ್ರತಿಮೆಯನ್ನು ನಿರ್ಮಿಸಿ ಶ್ರೀಕೃಷ್ಣನಿಗೆ ಸಮರ್ಪಿಸಿ ಆ ಪ್ರತಿಮೆಯನ್ನು ತಮ್ಮ ಮಠದಲ್ಲಿ ನಿತ್ಯ ಪೂಜಿಸುತ್ತಿದ್ದರು. ತಮ್ಮ ಅಸದೃಶ ಮಹಿಮೆಗಳಿಂದ ಸಜ್ಜನರ ಸಂಕಷ್ಟಗಳನ್ನು ನಿವಾರಿಸಿದ ರಾಯರು 1671 ನೇ ಇಸವಿ ವಿರೋಧಿ ನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು ವೃಂದಾವನ ಪ್ರವೇಶಗೈದರು.

One thought on “Raghavendra Swami Aradhane

  1. respected my dear brothers and sisters,

    i mahesh came from the poor family background, is loving to be one in our brahims caste. As i am now vishwakarma is asking you to teach me the geethas of guru raghavendra swamy, because i am willing to know about brahims value .

    Thanking you

    Mahesh

Leave a Reply

Your email address will not be published.