Shri Ramanavami

ಚೈತ್ರಮಾಸದ ಶುಕ್ಲನವಮಿಯಂದು ಶ್ರೀರಾಮನವಮೀ. ಭಗವಂತ ಶ್ರೀರಾಮನಾಗಿ ಅವತರಿಸಿದ ದಿನವಿದು. ಭಗವಂತ ಅವತರಿಸುವಾಗ ಚೈತ್ರನವಮಿಯಂದು ಪುನರ್ವಸು ನಕ್ಷತ್ರವಿದ್ದು ಮೇಷಮಾಸ ನಡೆದಿತ್ತು. ಇಂದಿಗೂ ಇವೆಲ್ಲಾ ಒಟ್ಟುಸೇರಿದರೆ ಅದು ದೊಡ್ಡ ಪರ್ವಕಾಲ. ಅಂದರೆ ಚೈತ್ರಶುಕ್ಲನವಮಿಯಂದು ಪುನರ್ವಸು ನಕ್ಷತ್ರವಿದ್ದು ಸೂರ್ಯನು ಮೇಷದಲ್ಲಿದ್ದರೆ ಈ ಶ್ರೇಷ್ಠ ಯೋಗವು ಕೋಟಿಸೂರ್ಯಗ್ರಹಣಕ್ಕಿಂತ ಮಿಗಿಲಾದ ಪುಣ್ಯಕಾಲವೆಂದು ಸ್ಮೃತಿಗಳು ಹೆಳುತ್ತವೆ.

ರಾಮನವಮಿಯಂದೂ ಕೃಷ್ಣಜಯಂತಿಯಂತೆಯೇ ಉಪವಾಸವಿದ್ದು ಅರ್ಘ್ಯವಿತ್ತು ಪ್ರತಿಮಾದಾನ ಮಾಡಬೇಕೆಂದು ಸ್ಮೃತಿಗ್ರಂಥಗಳಲ್ಲಿ ಹೇಳಿದ್ದರೂ ಈ ರಾಮಾವತಾರವು ಬಹಳ ಪೂರ್ವದಲ್ಲಿ ನಡೆದಿರುವುದರಿಂದ ಯುಗಾಂತರದ ಆಚರಣೆಯಿದು. ತೌಳವದೇಶದಲ್ಲಿ ಉಪವಾಸಾದಿಗಳ ಆಚರಣೆಯಿಲ್ಲ.

ತೌಳವದೇಶದ ಆಚಾರಗಳು:

  1. ಶ್ರೀರಾಮಾಯಣವನ್ನು ಸ್ವಲ್ಪವಾದರೂ ಓದುವುದು.
  2. ನಿತ್ಯಪೂಜೆಯಲ್ಲಿ ಶ್ರೀರಾಮನಿಗೆ ವಿಶೇಷಪೂಜೆ.
  3. ಕೋಸಂಬರಿ, ಪಾನಕ, ಪಾಯಸನೈವೇದ್ಯ.
  4. ಸಾಯಂಕಾಲದಹೊತ್ತು ಶ್ರೀರಾಮಭಜನೆ.

ರಾಮನವಮಿಯ ಪ್ರಯುಕ್ತ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಮತ್ತು ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ ಇವರು ರಾಮನವಮಿಯ ಮಹತ್ವ ಹಾಗೂ ವಿಚಾರಗಳೊಂದಿಗೆ ಅಭಿಮಾನದಿಂದ ನಮ್ಮ ಸಮಾಜವನ್ನು ಉದ್ದೇಶಿಸಿ ಸಂದೇಶವನ್ನು ನೀಡಿರುತ್ತಾರೆ.

ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ

ಸಂದೇಶವನ್ನು ಪಡೆದುಕೊಂಡು ಸ್ವಾಮೀಜಿಯವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ.

ಶ್ರೀಮನ್ಮಧ್ವಕರಾರ್ಚಿತ ರಾಮಪ್ರತಿಮೆಯನ್ನು ಪೂಜಿಸುತ್ತಿರುವ ಪೇಜಾವರಮಠ, ಫಲಿಮಾರುಮಠ, ಭಂಡಾರಕೇರಿಮಠಗಳಲ್ಲಿ ಪೀಠಾಧೀಶರು ಶ್ರೀರಾಮನಿಗೆ ವಿಜೃಂಭಣೆಯ ಉತ್ಸವವನ್ನು ನಡೆಸುತ್ತಾರೆ.

Leave a Reply

Your email address will not be published.