ರಾಯರ ಪಾದಕ್ಕೆ ಮಂತ್ರಾಲಯ ಶ್ರೀ

Mantralaya Swamijiಮಂತ್ರಾಲಯ ಮಠಾಶರಾದ ಶ್ರೀ ಸುಶಮೀಂದ್ರ ತೀರ್ಥರು (೮೩) ಶನಿವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಪರಂಧಾಮವನ್ನೈದರು. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ವಾಮೀಜಿಯವರ ಬೃಂದಾವನ ಪ್ರವೇಶ (ಅಂತ್ಯಸಂಸ್ಕಾರ) ಭಾನುವಾರ ಬೆಳಗ್ಗೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಮಂಡಿ ನೋವು ಮತ್ತು ಉಸಿರಾಟದ ತೊಂದರೆಯಿಂದಾಗಿ ಫೆ.೪ರಂದು ಸ್ವಾಮೀಜಿಯ ವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಶನಿವಾರ ಸಂಜೆ ಮಂತ್ರಾಲಯಕ್ಕೆ ಕೊಂಡೊಯ್ಯಲಾಯಿತು. ೧೯೨೬ರಲ್ಲಿ ನಂಜನಗೂಡಿನಲ್ಲಿ ಹುಟ್ಟಿದ ಶ್ರೀ ಸುಶಮೀಂದ್ರ ತೀರ್ಥರ ಪೂರ್ವಾಶ್ರಮದ ಹೆಸರು ಸುಪ್ರಜ್ಞೇಂದ್ರಾಚಾರ್. ಮೈಸೂರಿನಲ್ಲಿ ವಿದ್ಯಾಭ್ಯಾಸ ನಡೆಸಿದ ಶ್ರೀಗಳು, ೧೯೮೪ರಲ್ಲಿ ಶ್ರೀ ಸುಜಯೀಂದ್ರ ತೀರ್ಥರಿಂದ ಸನ್ಯಾಸ ಸ್ವೀಕರಿಸಿದರು.
ಮಾಧ್ವ ಮಠಾಶರಲ್ಲಿ ಹಿರಿಯರಾಗಿದ್ದ ಸ್ವಾಮೀಜಿ, ಮಂತ್ರಾಲಯ ಮಠ ಮತ್ತು ಕ್ಷೇತ್ರದ ಅಭಿವೃದಿಟಛಿಗೆ ಸಾಕಷ್ಟು ಶ್ರಮಿಸಿದ್ದರು. ಅಧ್ಯಾತ್ಮಿಕ ಕಾರ್ಯಕ್ರಮಗಳ ಜತೆಗೆ, ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬಂದಿದ್ದರು.

ಮಾನವೀಯ ಸೆಲೆ, ಮೇಲ್ಪಂಕ್ತಿಗೆ ನೆಲೆ

ಶ್ರೀ ಸುಶಮೀಂದ್ರ ತೀರ್ಥರದು ಸಮಾಧಾನ ಚಿತ್ತ, ಮುಗಟಛಿತೆ ಹಾಗೂ ಬಿಡುವಿಲ್ಲದ ದುಡಿಮೆ. ಶ್ರೀಗಳು ಸನ್ಯಾಸ ಸ್ವೀಕರಿಸಿ ೨೫ ವರ್ಷಗಳಾಗಿವೆ. ಪೀಠ ಅಲಂಕರಿಸಿ ೨೩ ವರ್ಷಗಳಾಗಿದ್ದವು. ಶ್ರೀಮಠದ ಪರಂಪರೆಯಲ್ಲಿ ೨೧ನೇ, ರಾಯರ ನಂತರ ೧೨ನೇ
ಪೀಠಾಪತಿಗಳಾಗಿದ್ದರು. ಶ್ರೀಮಠದ ಹಿಂದಿನ ಪೀಠಾಪತಿ ಸುಜಯೀಂದ್ರ ತೀರ್ಥರು ರಾಯಚೂರು ತಾಲೂಕು ಬಿಚ್ಚಾಲಿ ಗ್ರಾಮದ ರಾಯರ ಅಂತರಂಗದ ಶಿಷ್ಯ ಅಪ್ಪಣ್ಣಾಚಾರ್ಯ ಕಟ್ಟೆ (ತುಂಗಭದ್ರಾ ನದಿ ತೀರ) ಬಳಿ ೧೯೮೪ರಲ್ಲಿ ಸುಪ್ರಜ್ಞೇಂದ್ರಾಚಾರ್ಯರಿಗೆ ಗುರು ಬೋಧೆ ನೀಡಿ ‘ಸುಶಮೀಂದ್ರ ತೀರ್ಥರು’ ಎಂದು ಪುನರ್ ನಾಮಕರಣ ಮಾಡಿದರು.

ರಾಯಚೂರು ತಾಲೂಕು ಬಿಟ್ಟಾಲಿ ಬಳಿ ತೊಂಗಭದ್ರಾ ನದಿ ತೀರದಲ್ಲಿ ಸನ್ಯಾಸ ಸ್ವೀಕರಿಸಿದ ಸುಶಮೀಂದ್ರ ತೀರ್ಥರು.
ರಾಯಚೂರು ತಾಲೂಕು ಬಿಟ್ಟಾಲಿ ಬಳಿ ತೊಂಗಭದ್ರಾ ನದಿ ತೀರದಲ್ಲಿ ಸನ್ಯಾಸ ಸ್ವೀಕರಿಸಿದ ಸುಶಮೀಂದ್ರ ತೀರ್ಥರು.

ನಚಿಜನಗೂಡು ತವರೂರು
ನಂಜನಗೂಡಿನ ‘ಬೀಗ ಮುದ್ರೆ’ ಮನೆತನದ ದೊಡ್ಡ ಮನೆಯಲ್ಲಿ ೧೯೨೬ರಲ್ಲಿ ಸುಪ್ರಜ್ಞೇಂದ್ರಾಚಾರ್ಯ ಜನನ. ರಾಜಗೋಪಾಲಾಚಾರ್ಯ ಹಾಗೂ ಪದ್ಮಾವತಿ ಬಾಯಿ ದಂಪತಿಗಳ ಜೇಷ್ಠಪುತ್ರ. ಬಾಲಕನಿದ್ದಾಗಲೇ ಉಪನಯನ, ವಿದ್ವಾನ್ ದುರ್ಗಮ್ ಭೀಮಾ ಚಾರ್ಯ, ವಿದ್ವಾನ್ ಗುಂಡಾಚಾರ್ಯ ಬಳಿ ಸಂಸ್ಕೃತ, ನಂಜನಗೂಡಿನ ದಕ್ಷಿಣಾಮೂರ್ತಿ ನಾರಾಯಣಶಾಸ್ತ್ರಿ ಬಳಿ ಯಜುರ್ವೇದ ಅಧ್ಯಯನ ಮಾಡಿದರು. ಮೈಸೂರಿನ ಸುಬ್ಬರಾಯನಕೆರೆ ರಾಯರ ಶಾಖಾ ಮಠದ ಧರ್ಮಕರ್ತರಾಗಿ ಪದಾರ್ಪಣೆ. ಶ್ರೀಮಠದ ವ್ಯವಸ್ಥಾಪಕ ಹಾಗೂ ಸೋದರ ಮಾವ ವಿದ್ವಾನ್ ಹುಲಿ ಕೆ.ಶ್ರೀನಿವಾಸಾಚಾರ್ಯ ಬಳಿ ಶ್ರೀಮಠದ ಸಂಪ್ರದಾಯ ಮತ್ತು ಪರಂಪರೆ ತಿಳಿದುಕೊಂಡರು. ಮಾನ್ವಿ ಪಟ್ಟಣದ ಧೀರೇಂದ್ರಾಚಾರ್ಯರ ಪುತ್ರಿ ಶಾಂತಾಬಾಯಿ ಅವರನ್ನು
ಮದುವೆಯಾದರು.

ಸಮಾಧಾನ ಚಿತ್ತ
ಸಮಾಧಾನ ಚಿತ್ತ, ಮುಗಟಛಿತೆ ಹಾಗೂ ಬಿಡುವಿಲ್ಲದೇ ದುಡಿಯುತ್ತಿದ್ದ ಸುಪ್ರಜ್ಞೇಂದ್ರಾಚಾರ್ಯ ಬಹು ಬೇಗನೆ ಆಗಿನ ಪೀಠಾಪತಿ ಸುಜಯೀಂದ್ರ ತೀರ್ಥರ ಒಲವು ಗಳಿಸಿಕೊಂಡರು. ಧರ್ಮ ಪ್ರಸಾರ, ಕಾರ್‍ಯಕ್ರಮಗಳ ನಿಮಿತ್ತ ಶ್ರೀಗಳ ಸಂಚಾರದಲ್ಲಿ ನಿತ್ಯವೂ ಭಾಗಿಯಾಗಿ ಪ್ರಿಯ ಶಿಷ್ಯರಾದರು. ಅಲ್ಲದೇ ಶ್ರೀಮಠದ ಉನ್ನತ ಮೌಲ್ಯ, ತಾತ್ವಿಕ ವಿಚಾರಗಳನ್ನು ಕರಗತ ಮಾಡಿಕೊಂಡರು. ಆಧುನಿಕ ಮಂತ್ರಾಲಯದ ಕನಸು ಕಂಡಿದ್ದ ಸುಜಯೀಂದ್ರ ತೀರ್ಥರು ಆರೋಗ್ಯ ಸಮಸ್ಯೆಗೆ ಸಿಲುಕಿದ್ದಾಗ ಸುಪ್ರಜ್ಞೇಂದ್ರಾಚಾರ್ಯರಲ್ಲಿ ಉತ್ತರಾ ಕಾರಿಯನ್ನು ಕಂಡಿದ್ದರು. ರಾಯರ ಪ್ರೇರಣೆ ಹಾಗೂ ಗುರುಗಳ ಇಚ್ಚೆಯಂತೆ ಸುಪ್ರಜ್ಞೇಂದ್ರಾಚಾರ್ಯ ಸನ್ಯಾಸ ಸ್ವೀಕರಿಸಿ ಸುಶಮೀಂದ್ರ ತೀರ್ಥರಾದರು. ೨೩ ವರ್ಷ ಗಳಿಂದ ಪೀಠಾಪತಿಗಳಾಗಿ ಜಗತ್ತಿನ ಉದ್ದಗಲಕ್ಕೂ ಮಂತ್ರಾಲಯದ ಮಹತ್ವ ಸಾರಿ, ಅಭಿವೃದಿಟಛಿ ಸಾಕಾರಗೊಳಿಸಿ ರಾಯರ ಆಶಯ ಹಾಗೂ ಗುರುಗಳ ಸಂಕಲ್ಪವನ್ನು ಪೂರ್ಣಗೊಳಿಸಿದ್ದಾರೆ.

ಕಳೆದ ಅಗಸ್ಟ್ ನಲ್ಲಿ ಜರುಗ್ದ ರಾಯರ ೩೩೭ನೇ ಆರಾಧನಾ ಮಹೋತ್ಸವ ನಿಮಿತ್ತ ರಂಗೋತ್ಸವದಲ್ಲಿ ಉತ್ತರಾಧಿಕಾರಿ ಸುಯತೀಂದ್ರ ತೀರ್ಥರ ಜತೆ ಪ್ರಜೆಸಲ್ಲಿಸಿದ ಸುಶಮೀಂದ್ರ ತೀರ್ಥರು.
ಕಳೆದ ಅಗಸ್ಟ್ ನಲ್ಲಿ ಜರುಗ್ದ ರಾಯರ ೩೩೭ನೇ ಆರಾಧನಾ ಮಹೋತ್ಸವ ನಿಮಿತ್ತ ರಂಗೋತ್ಸವದಲ್ಲಿ ಉತ್ತರಾಧಿಕಾರಿ ಸುಯತೀಂದ್ರ ತೀರ್ಥರ ಜತೆ ಪ್ರಜೆಸಲ್ಲಿಸಿದ ಸುಶಮೀಂದ್ರ ತೀರ್ಥರು.

ಕಲಿಯುಗದ ಕಾವ್ಮಧೇನು
ರಾಯರ ತತ್ತ್ವಾದರ್ಶಗಳ ಒಳನೋಟಗಳನ್ನು ಕ್ರಿಯಾತ್ಮಕವಾಗಿ ಕಟ್ಟಿಕೊಟ್ಟ ಪೀಠಾಪತಿ ಸುಶಮೀಂದ್ರ ತೀರ್ಥರು ಮಾನವೀಯ ಸೆಲೆಯಾಗಿದ್ದರು.
‘ಕಲಿಯುಗದ ಕಾಮಧೇನು, ಕಲ್ಪವೃಕ್ಷ’ವೆಂಬ ಭಾವನೆಗೆ ಇಂಬು, ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ’ ಎನ್ನುವ ಉದ್ಘೋಷಕ್ಕೆ ಹೊಳಪು ನೀಡಿದ್ದರು. ಶ್ರೀಮಠ ತನ್ನ ಇತಿ-ಮಿತಿಯೊಳಗೆ ಸಂಕಷ್ಟಕ್ಕೆ ಗುರಿಯಾದ ಕುಟುಂಬಗಳ ಸಂತೈಸುವಿಕೆಗೆ ಪೀಠಾಪತಿ ಒತ್ತಾಸೆಯೇ ಮೂಲ. ‘ಸುನಾಮಿ’ ಅಪ್ಪಳಿಸಿ ತತ್ತರಿಸಿದ ತಮಿಳುನಾಡಿನ ನಾಗಪಟ್ಟಣಂನಲ್ಲಿ ನಿರಂತರ ಒಂದು ವಾರ ಅನ್ನ ಸಂತರ್ಪಣೆ. ತಾತ್ಕಾಲಿಕ ಪುನರ್ವಸತಿ ಶಿಬಿರಗಳಲ್ಲಿ
ವೈದ್ಯಕೀಯ ನೆರವು, ವಸ್ತ್ರಗಳನ್ನು ಕೊಟ್ಟು ಮಠಗಳು ಇಂತಹ ಕೆಲಸವನ್ನು ಮಾಡಬಲ್ಲವು ಎಂದು ಆಸ್ತಿಕ ಕುಲಕ್ಕೆ ಸಾರಿ ನಾಸ್ತಿಕರು ಮೂಗಿನ ಮೇಲೆ
ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು.

’ರಾಯರ ಮನೆ ಯೋಜನೆ’ ರೂವಾರಿ
ಪೀಠಾಪತಿ ಪ್ರೋತ್ಸಾಹದಿಂದ ದಟ್ಟ-ದರಿದ್ರರು, ಬಡವರಿಗೆ ನೆರವಿನ ಹಸ್ತ ಚಾಚುವುದರಲ್ಲಿ ಶ್ರೀಮಠ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ರಘುನಂದನ ತೀರ್ಥರು,
ರಾಘವೇಂದ್ರಸ್ವಾಮಿ, ಸುಜಯೀಂದ್ರ ತೀರ್ಥರ ಆರಾಧನೆ ಸಂದರ್ಭವನ್ನು ಕೇವಲ ಪೂಜೆ-ಪುನಸ್ಕಾರ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿ ಸದೇ ಸಾಮಾಜಿಕ ಸೇವೆ ಪರಿಕಲ್ಪನೆ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಧನಸಹಾಯ, ಮಕ್ಕಳಿಗೆ ವಸತಿ ಸಹಿತ ವಿದ್ಯಾಭ್ಯಾಸಕ್ಕೆ ‘ರಾಯರ ಮನೆ’ ಯೋಜನೆಗೆ ಚಾಲನೆ ನೀಡಿದರು. ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಉತ್ತೇಜಿಸಿದರು.
ಸಂಗೀತಗಾರರು, ಕಲಾವಿದರಿಗೆ ಆಸ್ಥಾನ ವಿದ್ವಾನ್, ನಾನಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೇಷ್ಠರಿಗೆ ‘ರಾಘವೇಂದ್ರ ಅನುಗ್ರಹ’ ಪ್ರಶಸ್ತಿಗಳನ್ನು ಪ್ರತಿಷ್ಠಾಪಿಸಿ ಹೊಸ ಮೆರಗು ತಂದು ಕೊಟ್ಟಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ-ಪುರಸ್ಕಾರ,
ಕ್ರೀಡೆಗೂ ಹುರಿದುಂಬಿಸಲು ಖ್ಯಾತ ಕ್ರೀಡಾಳುಗಳನ್ನು ಆಮಂತ್ರಿಸುವ ಪದಟಛಿತಿ ರೂಢಿಸಿದ್ದಾರೆ.

ಹೊಸ ದಾಖಲೆ
ಧಾರ್ಮಿಕ-ವಿದ್ವತ್ ಪರಂಪರೆ ಪೋಷಿಸಲು ಪಂಡಿತರಿಗೆ ನೆರವು ಹಾಗೂ ಪುಸ್ತಕಗಳ ಪ್ರಕಟಣೆ, ಪ್ರಕಾಶನ ನವ ಶಕ್ತಿ ಪಡೆದುಕೊಂಡಿದೆ. ರಘುನಂದನ ತೀರ್ಥರ ೫೦೦ನೇ ಆರಾಧನೆ ಸಂದರ್ಭದಲ್ಲಿ ೧೦೧ ಗ್ರಂಥಗಳನ್ನು ಪ್ರಕಟಿಸಿ ಬಿಡುಗಡೆ ಮಾಡಿದ್ದು ಹೊಸ ದಾಖಲೆಯಾಗಿದೆ.
ರಾಯರ ಆಶೋಕ್ತಿಯಂತೆ ದಾಸ ಸಾಹಿತ್ಯ ಉಳಿಸಿ ಬೆಳೆಸಲು ರಾಯಚೂರಿನಲ್ಲಿ ನರಹರಿ ತೀರ್ಥರ ದಾಸ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆಗೂ ಪ್ರೇರಕ ಶಕ್ತಿಯಾಗಿದ್ದಾರೆ.

Leave a Reply

Your email address will not be published.