|| ಕೃಷ್ಣಂ ವಂದೇ ಜಗದ್ಗುರುಂ ||
ಜಗತ್ಪ್ರಸಿದ್ಧ ಉಡುಪಿ ಶ್ರೀ ಕೃಷ್ಣಪೂಜಾ ದೀಕ್ಷೆಯ ಶಿರೂರು ಮಠದ ಪರ್ಯಾಯೋತ್ಸವವು ೨೦೧೦ರ ಜನವರಿಯಲ್ಲಿ ನಡೆಯಲಿದೆ.
ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿಯ ಅನ್ನಬ್ರಹ್ಮ ಶ್ರೀಕೃಷ್ಣನ ಪೂಜಾ ಕೈಂಕರ್ಯದಲ್ಲಿ ನಿರತರಾಗಿರುವ ಅಷ್ಠಮಠಗಳಲ್ಲೊಂದಾದ ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದಂಗಳವರು ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ಪೂಜಾದೀಕ್ಷೆ ಕೈಗೊಂಡು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ತಮ್ಮ ತೃತೀಯ ಪರ್ಯಾಯ ಪೂಜಾ ದೀಕ್ಷೆಯ ಪೀಠವೇರುವುದಕ್ಕೆ ಪೂರ್ವಭಾವಿಯಾಗಿ ದೇಶಪರ್ಯಟನೆಗಾಗಿ ಸಂಚಾರದಲ್ಲಿರುವ ಶ್ರೀಪಾದರು ವಿವಿಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಇದೇ ೧೮-೧೨-೨೦೦೯ ಶುಕ್ರವಾರದಂದು ಬೆಂಗಳೂರು ಮಹಾನಗರದ ಪುರಪ್ರವೇಶ ಮಾಡಲಿದ್ದಾರೆ.
ಅಂದು ಸಂಜೆ ೪-೩೦ ಗಂಟೆಗೆ ಎನ್. ಆರ್. ಕಾಲೋನಿ, ಶ್ರೀ ರಾಮಮಂದಿರದ ಬಳಿ ಇರುವ ಶ್ರೀ ಗುರು ರಾಘವೇಂದ್ರ ಸನ್ನಿಧಾನ (ರಾಯರ ಮಠ)ದಿಂದ ಶ್ರೀಗಳನ್ನು ಸ್ವಾಗತಿಸಲು ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿದ್ದು ಆ ಬಳಿಕ ೬-೦೦ ಗಂಟೆಗೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳಿಗೆ ಪೌರಸನ್ಮಾನ ಹಮ್ಮಿಕೊಳ್ಳಲಾಗಿದೆ.
ಸನ್ಮಾನ ಕಾರ್ಯಕ್ರಮದ ನಂತರ ಶ್ರೀಗಳಿಗೆ ತುಲಾಭಾರ ಸೇವೆಯನ್ನು ಮತ್ತು ಪಾದಪೂಜೆಯನ್ನು ಏರ್ಪಡಿಸಲಾಗಿದೆ.
ಸ್ವಾಗತ ಕಾರ್ಯಕ್ರಮದಲ್ಲಿ, ಮೆರವಣಿಗೆಯಲ್ಲಿ ಮತ್ತು ಸನ್ಮಾನ ಸಭೆಯಲ್ಲಿ ಹಾಗೂ ತುಲಾಭಾರ, ಪಾದಸೇವೆ ಕಾರ್ಯಕ್ರಮಗಳಲ್ಲಿ ಸದ್ಭಕ್ತ ಬಾಂಧವರಾದ ತಾವೆಲ್ಲರೂ ಭಾಗವಹಿಸಿ ಶ್ರೀಗಳ ಅನುಗ್ರಹ ಪೂರ್ವಕ ಫಲಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಕೋರುತ್ತೇವೆ.
– ಪೌರ ಸನ್ಮಾನ ಸಮಿತಿ