ಕನ್ನಡ ಕರಾವಳಿಯ ಮುತ್ತುಬೆಳೆದ ಊರಾದ ಪುತ್ತೂರು ತಾಲೂಕಿನ ದೇವಾಲಯಗಳ ಊರಾದ ರಾಮಕುಂಜದ ನೆಲ ಆಚಾರ್ಯಮಧ್ವರು ನಡೆದಾಡಿದ ಪುಣ್ಯಭೂಮಿ ಅಂತೆಯೇ ಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ತವರೂರು ಇಂತಹಾ ಗ್ರಾಮೀಣ ಪ್ರದೇಶದ ಬಾಲ ಪ್ರತಿಭೆ ಕುಮಾರಿ ಅಭಿಜ್ಞಾ ಕಲ್ಲೂರಾಯ. ಜನನ ೧೬.೨.೧೯೯೨, ತಂದೆ – ಶ್ರೀ ಕೃಷ್ಣಮೂರ್ತಿ, ತಾಯಿ – ಶ್ರೀಮತಿ ಸುಮನಾ. ಇವರ ಪ್ರೋತ್ಸಾಹವೇ ಇವಳ ಪ್ರತಿಭಾ ವಿಕಾಸಕ್ಕೆ ಆಧಾರವಾಗಿರುತ್ತದೆ.
ಪೂಜ್ಯ ಪೇಜಾವರ ಶ್ರೀಗಳು ಕಲಿತ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಪ್ರಸ್ತುತ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಅಧ್ಯಯನ.
ಚಿತ್ರಕಲೆ, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಪೇಪರ್ ಕ್ರಾಪ್ಟ್ ಮೊದಲಾದುವಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ಈಕೆ ಸೆರಾಮಿಕ್ ವರ್ಕ್ಸ್, ಪೈಂಟಿಂಗ್, ಗೊಂಬೆ ತಯಾರಿಕೆ, ಕೃತಕ ಮುಖವಾಡ ತಯಾರಿ, ಗ್ರೀಟಿಂಗ್ ಕಾರ್ಡ್ ತಯಾರಿ, ಕೃತಕ ಹೂ ತಯಾರಿಕೆ, ಕ್ರೀಡೆ, ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ ಇವುಗಳಲ್ಲೂ ಮುಂದಿದ್ದಾಳೆ. ಪ್ರಾಥಮಿಕ ತರಗತಿಗಳಿಂದಲೇ ಎಲ್ಲಾ ಶಾಲಾ ಪರೀಕ್ಷೆಗಳಲ್ಲೂ ವಿಶಿಷ್ಟ ಶ್ರೇಣಿಯಲ್ಲೇ ಉತ್ತೀರ್ಣಳಾಗುತ್ತಿದ್ದು, ಪ್ರಸ್ತುತ ವರ್ಷ ಶಾಲೆಯಲ್ಲಿ “ಉತ್ತಮ ವಿದ್ಯಾರ್ಥಿ” ಪ್ರಶಸ್ತಿಯನ್ನು ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ಪಡೆದಿರುತ್ತಾಳೆ.
ಚಿತ್ರಕಲೆಯನ್ನು ನೆರೆಯ ಶ್ರೀಮತಿ ಅಂಬಿಕಾ ಪ್ರಸಾದ ಇವರ ಮಾರ್ಗದರ್ಶನದೊಂದಿಗೆ ಅಭ್ಯಾಸ ಮಡುತ್ತಿದ್ದು ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಪೂರ್ಣಗೊಳಿಸಿರುತ್ತಾಳೆ.
ಚಿತ್ರಕಲೆಯಲ್ಲಿ ಸಾಧನೆಗಳು (ಪ್ರಶಸ್ತಿಗಳು) –
- ಪುತ್ತೂರು ತಾಲೂಕಿನ ದಿನಪತ್ರಿಕೆ ಸುದ್ಧಿ ಬಿಡುಗಡೆ ಇವರು ನಡೆಸುವ ಅಂಚೆ ಕಾರ್ಡ್ನಲ್ಲಿ ಸ್ವಾತಂತ್ರ್ಯಯೋಧರ ಚಿತ್ರ ರಚನೆ ಸ್ಪರ್ಧೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಥಮ ಸ್ಥಾನ,
- ಪುತ್ತೂರು ತಾಲೂಕಿನ “ಸಾಂಸ್ಕೃತಿಕ ಕಲಾಕೇಂದ್ರ” ಪುತ್ತೂರು ಇವರ ಆಶ್ರಯದಲ್ಲಿ ನಡೆಯುವ ಅಂಚೆ ಕಾರ್ಡ್ನಲ್ಲಿ ಕನ್ನಡ ಕವಿಗಳ ಚಿತ್ರರಚನಾ ಸ್ಪರ್ಧೆಯಲ್ಲಿ ಸತತ ಎರಡು ವರ್ಷಗಳಿಂದ ಪ್ರಥಮ ಸ್ಥಾನ,
- ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಮೆ| ಮುಳಿಯ ಕೇಶವ ಭಟ್ ಇವರು ನಡೆಸಿದ ಆಭರನ ಡಿಸೈನ್ ರಚನಾ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ,
- ಸುದ್ಧಿ ಬಿಡುಗಡೆ ಪುತ್ತೂರು ಇವರು ೨೦೦೭ ರಲ್ಲಿ ಇವಳ ಬಾಲಪ್ರತಿಭೆಯನ್ನು ಗುರುತಿಸಿ “ಪ್ರತಿಭಾ ದೀಪ” ಪುರಸ್ಕಾರವನ್ನು ನೀಡಿಸುತ್ತಾರೆ.
- ಇದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇವರು ಇವಳನ್ನು ಗುರುತಿಸಿ “ಇಂದ್ರಪ್ರಸ್ಥ ಕಲಾಕುಸುಮ” ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
- ಇವಿಷ್ಟೇ ಅಲ್ಲದೆ ಮಂಗಳೂರು ಮೊದಲಾದ ಹಲವು ಕಡೆ ಸ್ಪರ್ಧೆಯಲ್ಲಿ ಭಾಗವಹಿಸಿ ಪಾರಿತೋಷಕಗಳನ್ನು ಗಳಿಸಿಕೊಂಡಿರುತ್ತಾಳೆ.
ಭಾರತೀಯ ನೃತ್ಯ ಪರಂಪರೆಯಲ್ಲಿ ಒಂದಾದ ಭರತನಾಟ್ಯವನ್ನು ತನ್ನ ಏಳನೆಯ ವಯಸ್ಸಿನಲ್ಲಿ ವಿದುಷಿ ಕಾವ್ಯಾ ಭಟ್ರವರಲ್ಲಿ ಅಭ್ಯಾಸ ಮಾಡಿರುತ್ತಾಳೆ. ಪ್ರಸ್ತುತ ಪುತ್ತೂರಿನ ಶ್ರೀ ಬಿ. ದೀಪಕ್ ಕುಮಾರ್ ರವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಈಗ ವಿದ್ವತ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ.
ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ. ಧರ್ಮಸ್ಥಳದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ವಜ್ರಮಹೋತ್ಸವ ಸಭಾಭವನದ ಉದ್ಘಾಟನಾ ಸಮಾರಂಭದಂದು ಗಣ್ಯರೆದುರು ಪೂಜಾನೃತ್ಯ ಕಾರ್ಯಕ್ರಮವನ್ನು ತನ್ನ ಸಮೂಹದೊಂದಿಗೆ ನೀಡಿರುತ್ತಾಳೆ. ದ.ಕನ್ನಡ ಹಾಗೂ ಇತರ ಜಿಲ್ಲೆಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಭರತನಾಟ್ಯ ನೀಡಿರುವ ಹೆಗ್ಗಳಿಕೆ ಇವಳದು.
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಈಕೆ ತಾಲೂಕಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾಳೆ. ಹಲವಾರು ಕಡೆಗಳಲ್ಲಿ ಬಹುಮಾನಗಳನ್ನೂ ಗಿಟ್ಟಿಸಿಕೊಂಡಿರುತ್ತಾಳೆ. ಜಿಲ್ಲಾ ಮಟ್ಟದ ಪೇಪರ್ ಕ್ರಾಪ್ಟ್ ಸ್ಪರ್ಧೆಯಲ್ಲಿ ಮೂರು ಬಾರಿ ಭಾಗವಹಿಸಿದರೆ ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಮಟ್ಟದಲ್ಲೂ ಭಾಗವಹಿಸಿರುತ್ತಾಳೆ. ಇದೇ ರೀತಿ ರಂಗೋಲಿ, ಕ್ಲೇ ಮಾಡೆಲಿಂಗ್ ಗಳಲ್ಲೂ ಕೂಡ ಹಲವು ಬಹುಮಾನಗಳನ್ನು ಪಡೆದುಕೊಂಡಿರುತ್ತಾಳೆ.
ಇದೆಲ್ಲಕ್ಕಿಂತಲೂ ಹೆಚ್ಚಾಗಿ ಪುತ್ತೂರು ತಾಲೂಕಿನ ಶಿವಳ್ಳಿ ಬ್ರ್ರಾಹ್ಮಣರ ಸಂಘಟನೆಯಾದ “ಶಿವಳ್ಳಿ ಸಂಪದ ಪುತ್ತೂರು” ಇದರ ಆಶ್ರಯದಲ್ಲಿ ಪ್ರತೀವರ್ಷ ನಡೆಸುತ್ತಿರುವ “ಚಿಣ್ಣರಮೇಳ” ದಲ್ಲಿ ಗೀತಾ ಕಂಠಪಾಠ, ವಿಷ್ಣುಸಹಸ್ರನಾಮ, ರಂಗೋಲಿ, ಭಕ್ತಿಗೀತೆ, ಲಲಿತಾಸಹಸ್ರನಾಮ ಮೊದಲಾದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾಳೆ. ಇವಳ ಪ್ರತಿಭೆಯನ್ನು ಗುರುತಿಸಿ ೨೦೦೭ ನೇ ಸಾಲಿನಲ್ಲಿ ನಡೆದ “ಚಿಣ್ಣರಮೇಳ”ದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಇವಳಲ್ಲಿ ಮಾಡಿಸಿರುತ್ತಾರೆ. ಇದು ಇವಳ ಪ್ರತಿಭೆಗೆ ಸಂದ ಗೌರವ.
ಎಲ್ಲಾ ಪುಟಾಣಿಗಳಲ್ಲೂ ಪ್ರತಿಭೆಯಿದೆ, ಅದನ್ನು ಒರೆಗೆ ಹಚ್ಚುವ ಕಾಯಕ ಹೆತ್ತವರು, ಗುರುಗಳು , ಸಮಜದಿಂದಾದರೆ ಮುಂದಿನ ದಿನಗಳಲ್ಲಿ ಅಭಿಜ್ಞಾಳಂತ ಹಲವಾರು ಪ್ರತಿಭೆಗಳು ಬೆಳಗಬಹುದು.
ವಿಳಾಸ –
ಕೆ. ಅಭಿಜ್ಞಾ ಕಲ್ಲೂರಾಯ
D/O ಕೃಷ್ಣಮೂರ್ತಿ ಕಲ್ಲೂರಾಯ,
ಕೆರೆಕರೆ ಮನೆ,
ರಾಮಕುಂಜ ಅಂಚೆ ಮತ್ತು ಗ್ರಾಮ,
ಪುತ್ತೂರು ತಾಲೂಕು, ದ.ಕ.
ದೂರವಾಣೀ- 08251-258380
I wish u good luck
good job… keep it up :0