ಬಂಟ್ವಾಳ ತಾಲೂಕು ಶಿವಳ್ಳಿ ಸಂಗಮವು ದಿನಾಂಕ ೨೬/೦೧/೧೯೯೮ ರಂದು ವಿಟ್ಲದ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಶ್ರೀ ಮಂಚಿ ನಾರಾಯಣ ಆಚಾರ್ಯರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು.
ನಮ್ಮ ತಾಲೂಕಿನಲ್ಲಿ ೨೧೧ ನಮ್ಮವರ ಮನೆಗಳಿದ್ದು ಸುಮಾರು ೧೦೫೦ ಮಂದಿ ಇರುತ್ತಾರೆ. ಇಂದು ಉದ್ಯೋಗನಿಮಿತ್ತ ದೇಶ ವಿದೇಶಗಳಲ್ಲಿ ನೆಲೆಸಿದವರು ಹಲವರು ಇದ್ದಾರೆ.
ನಮ್ಮಲ್ಲಿ ಒಟ್ಟು ೮೪ ಗ್ರಾಮಗಳಿದ್ದು ನಾವು ಅದನ್ನು ಅನುಕೂಲಕ್ಕಾಗಿ ೫ ವಲಯಗಳಾಗಿ ವಿಂಗಡಿಸಿರುತ್ತೇವೆ.
ವಲಯಗಳು :
೧. ವಾಮದಪದವು
೨. ಬಂಟ್ವಾಳ
೩. ಕಡೇಶಿವಾಲಯ
೪. ಕಾರಿಂಜ
೫. ವಿಟ್ಲ
ಉದ್ದೇಶಗಳು :
ಶಿವಳ್ಳಿ ಬ್ರಾಹ್ಮಣ ಸಮಾಜ ಬಾಂಧವರಲ್ಲಿ ಪರಸ್ಪರ ಪರಿಚಯ, ಪ್ರೀತಿ ವಿಶ್ವಾಸ ವರ್ಧನೆ, ಸಹಮತ ನಿರೂಪಣೆ, ಐಕಮತ್ಯ ಸಾಧನೆ, ಆತ್ಮಾವಲೋಕನದ ಮೂಲಕ ದೋಷ ದೌರ್ಬಲ್ಯಗಳ ದೂರಿಕರಣ, ಬ್ರಾಹ್ಮಣ್ಯದ ರಕ್ಷಣೆ ಇತ್ಯಾದಿ.
ಚಟುವಟಿಕೆಗಳು :
- ವರ್ಷದಲ್ಲಿ ಒಂದು ದಿನ ತಾಲೂಕಿನ ಯಾವುದಾದರೊಂದು ದೇವಸ್ಥಾನದಲ್ಲಿ ಸಾಮೂಹಿಕವಾಗಿ ಕಲೆತು, ಪ್ರಾರ್ಥನೆ – ನಾರಾಯಣ ಜಪ – ಹವನ – ಭಜನೆಗಳ ಮೂಲಕ ಅಂತಃಶಕ್ತಿಯನ್ನು ಬೆಳೆಸಿಕೊಳ್ಳುವುದು.
- ವರ್ಷಕ್ಕೊಮ್ಮೆ ಒಂದೆರಡು ದಿನಗಳ, ಪುಣ್ಯ ಕ್ಷೇತ್ರಗಳ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ.
- ವರ್ಷಕ್ಕೊಮ್ಮೆ ಖ್ಯಾತ ಪ್ರವಚನಕಾರರಿಂದ ಧಾರ್ಮಿಕ ಪ್ರವಚನ ಮಾಡಿಸುವುದು.
- ವಾರ್ಷಿಕೋತ್ಸವದ ದಿನ ಕ್ರೀಡೆ, ಲಲಿತ ಕಲೆಗಳು ಮತ್ತು ವಾಕ್ಪ್ರತಿಭೆಗಳ ವಿಕಾಸಕ್ಕೆ ಸ್ಪರ್ಧೆಗಳ ಮೂಲಕ ಪ್ರೋತ್ಸಾಹ ಕೊಡುವುದು.
- ಸಮಾಜದ ದುರ್ಬಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಮ್ ಒದಗಿಸುವುದು.
- ತುಳು-ಶಿವಳ್ಳಿ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ೪೦ ಲಕ್ಷ ಯೋಜನೆಯ ನೂತನ ಸಭಾಭವನವನ್ನು ನಿರ್ಮಿಸುವುದು.
ಈಗಿನ ಪದಾಧಿಕಾರಿಗಳು :
ಗೌರವಾಧ್ಯಕ್ಷರು : ಡಾ| ಶ್ಯಾಮ ಭಟ್, ಬಂಟ್ವಾಳ
: ಪ್ರೊ.ಇ. ಪುಂಡರೀಕಾಕ್ಷ ಕಲ್ಲೂರಾಯರು, ಜೋಡುಮಾರ್ಗ
ಅಧ್ಯಕ್ಷರು : ವೇ| ಮೂ| ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು, ಜೋಡುಮಾರ್ಗ
ಉಪಾಧ್ಯಕ್ಷರು : ಶ್ರೀ ಶ್ರೀನಿವಾಸ ಮರಡಿತ್ತಾಯ
ಕಾರ್ಯದರ್ಶಿಗಳು : ಶ್ರೀ ಕೆ. ರಾಮಕೃಷ್ಣ ಪುತ್ತೂರಾಯ, ಜೋಡುಮಾರ್ಗ
ಖಜಾಂಜಿ : ಶ್ರೀ ಕೆ.ಪಿ. ಬನ್ನಿಂತಾಯ, ಜೋಡುಮಾರ್ಗ
ಸಂಘಟನಾ ಕಾರ್ಯದರ್ಶಿ : ಶ್ರೀ ರಾಮಕೃಷ್ಣ ತಂತ್ರಿಗಳು, ಜೋಡುಮಾರ್ಗ
ಮಹಿಳಾ ಘಟಕ :
ಗೌರವಾಧ್ಯಕ್ಷರು : ಶ್ರೀಮತಿ ಶಾರದಾ ಎಳಚಿತ್ತಾಯ, ಜೋಡುಮಾರ್ಗ
ಅಧ್ಯಕ್ಷರು : ಶ್ರೀಮತಿ ಡಾ| ರಮ್ಯಾ ಬನ್ನಿಂತಾಯ, ಜೋಡುಮಾರ್ಗ
ಕಾರ್ಯದರ್ಶಿ : ಶ್ರೀಮತಿ ಭಾರತಿ ರಾಜಮಣಿ ರಾಮಕುಂಜ, ಜೋಡುಮಾರ್ಗ
ಖಜಾಂಜಿ : ಶ್ರೀಮತಿ ಲೀಲಾ ಮೂರ್ತಿ.
ತುಳು-ಶಿವಳ್ಳಿ ಸೇವಾ ಟ್ರಸ್ಟ್ :
ಸಮಾಜ ಬಾಂಧವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಂಗೀತ, ಸಾಹಿತ್ಯ, ಕಲಾಸೇವೆಗಳ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸಗಳ ವೃದ್ಧಿ ಸಿದ್ಧಿಗಾಗಿ ಸ್ವಂತ ನಿವೇಶನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಮಹಾದಾನಿಗಳಾದ ನಾವೂರು ಶ್ರೀಧರ ಭಟ್ ಮತ್ತು ಹರಿಶ್ಚಂದ್ರ ಭಟ್ ಸಹೋದರರಿಂದ ಜೋಡುಮಾರ್ಗದ ಹೃದಯ ಭಾಗದಲ್ಲಿರುವ ಚಂಡಿಕೇಶ್ವರೀ ದೇವಸ್ಥಾನದ ಸಮೀಪ ಸಾಮಾನ್ಯ ರುಪಾಯಿ ೧೪ ಲಕ್ಷ ಬೆಲೆ ಬಾಳುವ ೨೦ ಸೆಂಟ್ಸ್ ಭೂಮಿಯನ್ನು ದಾನ ಪಡೆಯಲಾಗಿದೆ.
ಈ ನಿವೇಶನದಲ್ಲಿ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ “ಶಿವಳ್ಳಿ ಭವನ” ಎಂಬ ಕಟ್ಟಡ ನಿರ್ಮಾಣಕ್ಕಾಗಿ ೨೬/೦೧/೨೦೦೬ ರಂದು ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸುಬ್ರಹ್ಮಣ್ಯ ಮಠ ಇವರಿಂದ ಶಿಲಾನ್ಯಾಸ ಮಾಡಲಾಗಿದೆ. ತಾಲೂಕಿನ ಒಳಗಿನ ಸಮಾಜ ಬಾಂಧವರಿಂದ ಹಣ ಸಂಗ್ರಹ ಮಾಡಿ, ಸಾಮಾನ್ಯ ರೂಪಾಯಿ ೬,೫೦,೦೦೦ ಸಂಗ್ರಹಿಸಿ, ಕಟ್ಟಡ ಕೆಲಸ ನಡೆಯುತ್ತಿದೆ. ಸಾಮಾನ್ಯ ೪೦ ಲಕ್ಷದ ಯೋಜನೆಯು ಇದಾಗಿದ್ದು, ದೇಶ ವಿದೇಶಗಳಲ್ಲಿರುವ ನಮ್ಮ ಬಾಂಧವರಿಂದ ಧನಸಂಗ್ರಹವನ್ನು ಮಾಡಲು ಯೋಜನೆಯನ್ನು ಕೈಗೊಳ್ಳಲಾಗಿದೆ.
ಟ್ರಸ್ಟ್‌ನ ಪದಾಧಿಕಾರಿಗಳು :
ಗೌರವಾಧ್ಯಕ್ಷರು : ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸುಬ್ರಹ್ಮಣ್ಯ ಮಠ
ಅಧ್ಯಕ್ಷರು : ವೇ| ಮೂ| ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು, ಜೋಡುಮಾರ್ಗ
ಕಾರ್ಯದರ್ಶಿಗಳು : ಶ್ರೀ ಕೆ.ವಿ. ಬಲ್ಲಾಳ್, ಜೋಡುಮಾರ್ಗ,
ಸ್ಥಾಪಕ ಟ್ರಸ್ಟಿಗಳು : ಶ್ರೀ ಶ್ರೀಪತಿ, ಕೈಗಾರಿಕೋದ್ಯಮಿ, ಬೆಂಗಳೂರು,
ಶ್ರೀ ಹರಿಶ್ಚಂದ್ರ ಭಟ್, ಬಂಟ್ವಾಳ
ಡಾ| ಶ್ಯಾಮ ಭಟ್, ಬಂಟ್ವಾಳ
ಪ್ರೊ.ಇ. ಪುಂಡರೀಕಾಕ್ಷ ಕಲ್ಲೂರಾಯರು, ಜೋಡುಮಾರ್ಗ
ಶ್ರೀ ಶ್ರೀನಿವಾಸ ಮರಡಿತ್ತಾಯ, ವಿಟ್ಲ
ಶ್ರೀ ಕೆ.ಪಿ. ಬನ್ನಿಂತಾಯ, ಜೋಡುಮಾರ್ಗ
ಶ್ರೀ ಶ್ರೀನಿವಾಸ ಆಚಾರ್ಯ, ಮಂಚಿ