ಸ್ಥಾಪನೆ : ೧೯೯೬
ದಕ್ಷಿಣ ಕನ್ನಡದ ದ್ರಾವಿಡ ಬ್ರಾಹ್ಮಣ ಸಂಘಟನೆಯನ್ನು ಬಲಪಡಿಸಿಕೊಳ್ಳಲು, ಪರಂಪರಾಗತವಾಗಿ ಬಂದ ಆಚಾರಗಳನ್ನು ರಕ್ಷಿಸಿಕೊಳ್ಳಲು, ಸಾಮಾಜಿಕವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿ ಬೆಳೆಸಲು, ಬ್ರಾಹ್ಮಣ ಸಮಾಜದ ಆರ್ಥಿಕ, ಕೌಟುಂಬಿಕ, ಧಾರ್ಮಿಕ, ಪಾರಮಾರ್ಥಿಕ ಶ್ರೇಯೋಭಿವೃದ್ಧಿ ಮೊದಲಾದ ಘನ ಉದ್ದೇಶಗಳನ್ನಿಟ್ಟುಕೊಂಡು ದಿನಾಂಕ ೨೨.೧೦.೧೯೯೬ ರಲ್ಲಿ ಧಾರವಾಡದಲ್ಲಿ ಈ ಸಂಘಟನೆಯನ್ನು ಆರಂಭಿಸಲಾಯಿತು.
ಇವರು ಧಾರವಾಡದ ಹನುಮಂತನಗರದಲ್ಲಿ ಶ್ರೀಕೃಷ್ಣ, ಶ್ರೀ ಗಣೇಶ, ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯ ಸಮುಚ್ಚಯವನ್ನು ಸರ್ವರ ಸಹಕಾರದೊಂದಿಗೆ ನಿರ್ಮಿಸಿರುತ್ತಾರೆ. ಹಾಗೂ ತಮ್ಮೆಲ್ಲಾ ಕಾರ್ಯಕ್ರಮಗಳ ಹಾಗೂ ಸಂಘಟನೆಯ ಕೇಂದ್ರ ಈ ದೇವಾಲಯಗಳ ಸಮುಚ್ಚಯ ಆಗಿರುತ್ತದೆ.
ಈ ಪ್ರದೇಶದಲ್ಲಿ ನಮ್ಮವರ ಸುಮಾರು ೧೫೦ ರಷ್ಟು ಮನೆಗಳು ಇದ್ದು, ಎಲ್ಲರೂ ಈ ಸಭಾದ ಸದಸ್ಯರು ಆಗಿರುತ್ತಾರೆ.
ನಡೆಸುವ ಕಾರ್ಯಚಟುವಟಿಕೆಗಳು :-
ಎಲ್ಲಾ ಕಾರ್ಯಕ್ರಮಗಳು ಪ್ರತೀವರ್ಷ ದೇವಾಲಯ ಸಮುಚ್ಚಯದಲ್ಲಿಯೇ ನಡೆಯುತ್ತಿದ್ದು ಅದರ ವಿವರ ಹೀಗಿದೆ.
- ಸೌರಮಾನ ಯುಗಾದಿ (ವಿಷು):- ಭಗಿನಿಯರಿಂದ ಲಕ್ಷ್ಮೀ ಶೋಬಾನೆ, ರಂಗಪೂಜೆ, ದೀಪಾರಾಧನೆ, ಪಾಲಕಿ ಉತ್ಸವ, ಕಣಿಅಲಂಕಾರ.
- ದೇವತಾಪ್ರತಿಷ್ಠಾಪನೆಯ ವರ್ಧಂತಿ.
- ರಾಘವೇಂದ್ರ ಸ್ವಾಮಿಗಳ ಆರಾಧನೆ.
- ಗಣೇಶ ಚತುರ್ಥೀ ಆಚರಣೆ.
- ಸೌರ ಋಗುಪಾಕರ್ಮ.
- ಶ್ರೀಕೃಷ್ಣಜನ್ಮಾಷ್ಟಮಿ.
- ಸಭಾದ ವಾರ್ಷಿಕೋತ್ಸವ. ಇದರಲ್ಲಿ ಪ್ರತೀ ವರ್ಷ ಹಿರಿಯರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮ.
- ವಿಜಯದಶಮೀ ಆಚರಣೆ ಹಾಗೂ ದುರ್ಗಾಪೂಜೆ
- ಕಾರ್ತಿಕ ಹುಣ್ಣಮೆಯಂದು ಕಾರ್ತಿಕ ದೀಪೋತ್ಸವ, ತುಳಸೀ ಪೂಜೆ ಇತ್ಯಾದಿ.
- ಪುರಂದರದಾಸರ ಆರಾಧನೆ. ಅಂದು ಸಂಗೀತೋತ್ಸವ, ಎಲ್ಲರಿಗೂ ಅವಕಾಶಗಳು.
- ಮಧ್ವನವಮೀ ಕಾರ್ಯಕ್ರಮ.
- ಶ್ರೀ ವಾದಿರಾಜಸ್ವಾಮಿ ಆರಾಧನೆ, ವಾದಿರಾಜ ವಿರಚಿತ ಲಕ್ಷ್ಮೀಶೋಭಾನೆ ಹಾಗೂ ಇನ್ನಿತರ ಕೃತಿಗಳ ಭಜನಾ ಕಾರ್ಯಕ್ರಮ.
- ಶ್ರೀರಾಮನವಮಿಯಂದು ತೊಟ್ಟಿಲೋತ್ಸವ ಶ್ರೀರಾಮ ಭಜನೆ.
- “ಸೌಹಾರ್ದ” ಎನ್ನುವ ಪತ್ರಿಕೆಯ ಬಿಡುಗಡೆ.
ಇವಿಷ್ಟೇ ಅಲ್ಲದೆ,
- ಪ್ರತೀ ಹುಣ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅಂದು ಲಕ್ಷ್ಮೀಶೋಭಾನೆ ಕಾರ್ಯಕ್ರಮ.
- ಪ್ರತೀ ವಾರ ವಿಷ್ಣುಸಹಸ್ರನಾಮ ಪಾರಾಯಣ.
- ಪ್ರತೀ ಸಂಕಷ್ಟಿಯಂದು ಸಾಮೂಹಿಕ ಮಹಾಗಣಪತಿ ಹೋಮ.
ಮೊದಲಾದ ಕಾರ್ಯಕ್ರಮಗಳನ್ನು ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಪ್ರಸ್ತುತ ಕಾರ್ಯಕಾರೀ ಸಮಿತಿ :
ಅಧ್ಯಕ್ಷರು : ಶ್ರೀ ಟಿ. ಕೃಷ್ಣಯ್ಯ ಪುರಾಣಿಕ, “ಶ್ರೀ ಕೃಷ್ಣ ನಿವಾಸ”, ಸಾರಸ್ವತಪುರ, ಧಾರವಾಡ, ದೂ – ೨೭೪೭೭೧೬ (೦೮೩೬)
ಉಪಾಧ್ಯಕ್ಷರು : ಶ್ರೀ ಗೋಪೀನಾಥ ಕಿದಿಯೂರ, ನ್ಯಾಯವಾದಿ, ಗಾಂಧಿನಗರ, ಧಾರವಾಡ. ದೂ – ೨೪೬೯೬೧೩
ಗೌರವ ಕಾರ್ಯದರ್ಶಿ : ಶ್ರೀ ವೆಂಕಟರಾಜ ಉಡುಪಿ, ಶ್ರೀನಗರ, ಧಾರವಾಡ, ೫೮೦೦೩, ದೂ – ೨೭೭೨೦೯೯
ಸಹಕರ್ಯದರ್ಶಿ : ಶ್ರೀ ಏ.ಟಿ. ಆಚಾರ್ಯ, ಗಲಗಲಿ ನರ್ಸಿಂಗ್ ಹೋಮ್, ಧಾರವಾಡ, ದೂ – ೨೭೭೦೪೫೩
ಕೋಶಾಧ್ಯಕ್ಷರು : ಶ್ರೀ ಕೆ.ಎಲ್. ರಾವ್, ನಿವೃತ್ತ ಎಲ್.ಐ.ಸಿ. ಅಧಿಕಾರಿ ಧಾರವಾಡ, ದೂ – ೨೭೭೪೮೬೯
ಸಹಕೋಶಾಧ್ಯಕ್ಷರು : ಶ್ರೀ ಕೆ.ಎಸ್.ಎನ್.ಉರಾಳ, ಕೃಷ್ಣಕುಂಜ, ಕಲ್ಯಾಣನಗರ, ಧಾರವಾಡ-೭, ದೂ – ೨೭೯೬೫೪೩
ಸಮಿತಿ ಸದಸ್ಯರು :-
ಶ್ರೀ ಅನಂತ ಪದ್ಮನಾಭ ಭಟ್ಟ
ಶ್ರೀ ಎ.ಕೆ. ಭಟ್
ಶ್ರೀ ಎ.ಜಿ. ರಾವ್
ಶ್ರೀ ಎಮ್. ಸುಬ್ರಹ್ಮಣ್ಯ
ಶ್ರೀ ಕೆ. ಶ್ರೀಪತಿ ಭಟ್
ಶ್ರೀ ಎಸ್.ಎ. ಮಯ್ಯ
ಶ್ರೀ ನಾಗಭೂಷಣ ಕೃಷ್ಣ ಉಪಾಧ್ಯ
ಶ್ರೀ ಅನಂತರಾಮ ಆಚಾರ್ಯ