ಸ್ಥಾಪನೆ : 1995
ನೀತಿ ಸಂಹಿತೆ: ಭರತಖಂಡದ ಪರಶುರಾಮ ಕ್ಷೇತ್ರದಲ್ಲಿ ನೆಲೆಸಿರುವ ತೌಳವ ದೇಶಸ್ಥ ಬ್ರಾಹ್ಮಣರಾದ ನಾವು ನಮ್ಮ ಪರಂಪರಾಗತವಾದ ಗುರು ಪೀಠವನ್ನೂ, ಕುಲದೇವರನ್ನೂ, ಇಷ್ಟದೇವರನ್ನೂ, ಗ್ರಾಮದೇವರನ್ನೂ ವಂದಿಸುತ್ತಾ ಸ್ವಾಶ್ರಮೋಚಿತವಾದ ಶ್ರುತಿ ಸ್ಮೃತಿಗಳಲ್ಲಿ ಉಪದಿಷ್ಟವಾದ ಧರ್ಮಾನುಷ್ಠಾನವನ್ನು ಮಾಡಲು ಬದ್ಧಸಂಕಲ್ಪರಾಗಿದ್ದೇವೆ. ವೇದಾಧ್ಯಯನ, ವೇದೋಕ್ತ ಕರ್ಮಾನುಷ್ಠಾನ, ನಿತ್ಯಕರ್ಮ, ಸಂಧ್ಯಾವಂದನ, ಔಪಾಸನ, ದೇವತಾರ್ಚನ, ವೈಶ್ವದೇವ, ಪುರಾಣೋಕ್ತ ವ್ರತ ಪೂಜಾದಿಗಳು, ಪರ್ವದಿನಾಚರಣೆಗಳು ಇವನ್ನು ಯಥಾಶಕ್ತಿಯಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಶಿಷ್ಟಾಚಾರ, ಕುಲದೇವತಾರಾಧನೆ, ಶಾಸ್ತ್ರ, ಆಗಮ, ಪುರಾಣ, ತಂತ್ರಜ್ಞಾನ, ಜ್ಯೋತಿಷ್ಯ, ಆಯುರ್ವೇದ, ಸಂಸ್ಕೃತ ಭಾಷಾಧ್ಯಯನ ತೌಳವ ವೈಷ್ಣವ ಸಂಪ್ರದಾಯಗಳು ಇವುಗಳಿಗೆ ನಮ್ಮ ಸಮಾಜದಲ್ಲಿ ವಿಶೇಷ ಪ್ರೋತ್ಸಾಹ ನೀಡುತ್ತೇವೆ. ಸನಾತನವೂ, ವ್ಯಕ್ತಿ ಹಾಗೂ ಸಮಾಜದ ಉನ್ನತಿಗೆ ಪೂರಕವೂ ಆದ ಹಿಂದೂ ಧರ್ಮದ ಹಾಗೂ ಹಿಂದೂ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇವೆ. “ಸರ್ವೇಷಾಮಪ್ಯಽವಿರೋಧೇಣ” ಇತರ ಬ್ರಾಹ್ಮಣ್ಯ ಸಮಾಜಗಳ ಜೊತೆ ಸಮನ್ವಯ ರೀತಿಯಿಂದ ಬಾಳುತ್ತಾ ಬ್ರಾಹ್ಮಣ್ಯದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಶಿವಳ್ಳಿ ಬ್ರಾಹ್ಮಣರ ಅಭಿವೃದ್ಧಿಗೆ ಬೇಕಾಗುವ ಸಮಸ್ತ ಕಾರ್ಯಕ್ರಮಗಳನ್ನು ಸಂಯೋಜಿಸುತ್ತೇವೆ.
|| ಓಂ ಭದ್ರಂ ಶುಭಂ ಮಂಗಳಮ್ ||
1995ರಲ್ಲಿ ಶಿವಳ್ಳಿ ಸಂಪದ ಎಂಬ ನಮ್ಮ ಶಿವಳ್ಳಿ ಬ್ರಾಹ್ಮಣರ ಸಂಘಟನೆಯು ಆರಂಭಗೊಂಡಿತು. ಆರಂಭದಲ್ಲಿ ಶ್ರೀ ಜಿ. ಎಲ್. ಆಚಾರ್ಯ ಇವರು ಅಧ್ಯಕ್ಷರಾಗಿಯೂ ಹಾಗೂ ಶ್ರೀ ಪಿ.ಕೆ. ಬಾಲಕೃಷ್ಣ ಮುಡಂಬಡಿತ್ತಾಯ ಇವರು ಕಾರ್ಯದರ್ಶಿಯಾಗಿಯೂ ನಮ್ಮ ಈ ಸಂಘಟನೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿರುತ್ತಾರೆ. ನಮ್ಮ ಪುತ್ತೂರು ತಾಲೂಕಿನಲ್ಲಿ ೬೮ ಗ್ರಾಮಗಳಿದ್ದು ಸಂಪದದ ಅನುಕೂಲಕ್ಕಾಗಿ ಇದನ್ನು ೯ ವಲಯಗಳನ್ನಾಗಿ ವಿಭಜಿಸಲಾಗಿದೆ. ತಾಲೂಕಿನಲ್ಲಿ 726 ಶಿವಳ್ಳಿ ಬ್ರಾಹ್ಮಣ ಕುಟುಂಬಗಳು ನೆಲೆಸಿವೆ. ಪ್ರತೀ ವಲಯದಲ್ಲೂ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಸದಸ್ಯರನ್ನೊಳಗೊಂಡ ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು ಪ್ರತೀ ವಲಯದಿಂದ ಆರಿಸಲ್ಪಟ್ಟ ತಾಲೂಕು ಪ್ರತಿನಿಧಿಗಳು ಒಟ್ಟು ಸೇರಿ ತಾಲೂಕು ಕಾರ್ಯಕಾರಿ ಸಮಿತಿ ರಚನೆಯಾಗುತ್ತದೆ. ಈ ಸಮಿತಿಗಳು ಪ್ರತೀ ಎರಡು ವರ್ಷಗಳಿಗೊಮ್ಮೆ ಬದಲಾವಣೆಯಾಗುತ್ತದೆ. 1995ರಲ್ಲಿ ಸ್ಥಾಪನೆಗೊಂಡ ಸಂಪದದ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಸದಸ್ಯರೆಲ್ಲರ ಪೂರ್ಣ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದೆ.
ಸದಸ್ಯತನ :-
ರೂ.5000/- ನೀಡಿ ಮಹಾಪೋಷಕ, 1000/- ನೀಡಿ ಪೋಷಕ, ರೂ.250/- ನೀಡಿ ಅಜೀವ ಸದಸ್ಯ ರೂ.10 ನೀಡಿ ವಾರ್ಷಿಕ ಸದಸ್ಯರಾಗಿ ನೋಂದಣಿಗೊಳ್ಳಲು ಅವಕಾಶವಿರುವ ಈ ಸಂಸ್ಥೆಯಲ್ಲಿ ಪ್ರಕೃತ ೭ ಮಹಾಪೋಷಕರು, ೪೧ ಪೋಷಕರು, ೪೯೫ ಅಜೀವ ಸದಸ್ಯರು ಹಾಗೂ ೨೦೦೦ ಕ್ಕೂ ಮೇಲ್ಪಟ್ಟು ಸದಸ್ಯರು ನೋಂದಣಿಯಾಗಿರುತ್ತಾರೆ.
ವಲಯಗಳು | ಸಂಬಂಧಿಸಿದ ಗ್ರಾಮಗಳು
|
ಪಾಣಾಜೆ | ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ |
ಕಾವು | ಪಡುವನ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಮಾಡ್ನೂರು, ಕೊಳ್ತಿಗೆ, ಅರಿಯಡ್ಕ, ಒಳಮೊಗ್ರು |
ಬೆಳಂದೂರು | ಕಾಣಿಯೂರು, ದೋಳ್ಪಾಡಿ, ಬೆಳಂದೂರು, ಕ್ಯಾಮಣ, ಚಾರ್ವಾಕ, ಕುದ್ಮಾರು, ಪುಣ್ಚಪ್ಪಾಡಿ, ಸವಣೂರು, ಪಾಲ್ತಾಡಿ |
ನರಿಮೊಗ್ರು | ಕೆಯ್ಯೂರು, ಕೆದಂಬಾಡಿ, ಸರ್ವೆ, ಮುಂಡೂರು, ಕುರಿಯ, ಕೆಮ್ಮಿಂಜೆ, ನರಿಮೊಗ್ರು, ಶಾಂತಿಗೋಡು |
ದರ್ಭೆ | ಆರ್ಯಾಪು, ಪುತ್ತೂರು ಅರ್ಧ |
ರಾಮಕುಂಜ | ೩೪ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೆಬಂಡಾಡಿ, ಬಜತ್ತೂರು, ಕೊಯಿಲ, ರಾಮಕುಂಜ, ಹಳೇನೇರೆಂಕಿ, ಆಲಂಕಾರು, ಪೆರಾಬೆ, ಕುಂತೂರು |
ಕಡಬ | ಕುಟ್ರುಪ್ಪಾಡಿ, ಕಡಬ, ಬಂಟ್ರ, ಕೋಡಿಂಬಳ, ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ಕೋಣಾಜೆ, ರಂಜಿಲಾಡಿ, ನೂಜಿಬಾಳ್ತಿಲ |
ನೆಲ್ಯಾಡಿ | ನೆಲ್ಯಾಡಿ, ಆಲಂತಾಯ, ಬಲ್ಯ, ಗೋಳಿತೊಟ್ಟು, ಕೊಣಾಲು, ಕೌಕ್ರಾಡಿ, ಇಚ್ಲಂಪಾಡಿ, ಶಿರಡಿ, ಸಿರಿಬಾಗಿಲು |
ಬೊಳುವಾರು | ಪುತ್ತೂರು ಅರ್ಧ, ಕಬಕ, ಪಡ್ನೂರು, ಬನ್ನೂರು, ಕೊಡಿಪ್ಪಾಡಿ, ಚಿಕ್ಕಮೂಡ್ನೂರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಬಲ್ನಾಡು |
ಪ್ರಕೃತ ಕಾರ್ಯಕಾರಿ ಸಮಿತಿ :-
೨೦೦೬-೦೭ ಮತ್ತು ೨೦೦೭-೦೮ ನೇ ಸಾಲಿಗೆ ಈ ಕೆಳಗಿನಂತೆ ತಾಲೂಕು ಕಾರ್ಯಕಾರಿ ಸಮಿತಿ ರಚನೆಗೊಂಡಿರುತ್ತದೆ.
ಗೌರವಾಧ್ಯಕ್ಷರು | ಶ್ರೀ ಜಿ. ಎಲ್. ಆಚಾರ್ಯ, ಪುತ್ತೂರು |
ಅಧ್ಯಕ್ಷರು | ಶ್ರೀ ಕೆ.ಪಿ. ರಾಘವೇಂದ್ರ ಕಲ್ಲೂರಾಯ, ಕುಂಜೂರುಪಂಜ |
ಕಾರ್ಯದರ್ಶಿ | ಶ್ರೀ ಎಂ. ಶರತ್‌ಕುಮಾರ ಶಿಬರೂರಾಯ, ಸಾಲ್ಮರ |
ಕೋಶಾಧಿಕಾರಿ | ಶ್ರೀ ಟಿ. ರಂಗನಾಥ ಉಂಗ್ರುಪುಳಿತ್ತಾಯ, ಬೊಳುವಾರು |
ಸಂಘಟನಾ ಕಾರ್ಯದರ್ಶಿ | ಶ್ರೀ ಎಸ್. ಕೃಷ್ಣ ಪ್ರಸಾದ ಕೆದಿಲಾಯ, ಶಿಬರ |
ಉಪಾಧ್ಯಕ್ಷರು | ಶ್ರೀ ಎ. ವಿ. ನರಸಿಂಹ ಕೇಕುಣ್ಣಾಯ, ಎಕ್ಕಡ್ಕ ಶ್ರೀ ಶಂಕರನಾರಾಯಣ ಬೈಪಾಡಿತ್ತಾಯ, ಬೈಪಾಡಿಬೀಡು ಶ್ರೀ ಬಿ.ಎಸ್. ನಾರಾಯಣ ನಡ್ವಂತಿಲ್ಲಾಯ, ಬರೆಪ್ಪಾಡಿ |
ಜತೆ ಕಾರ್ಯದರ್ಶಿಗಳು | ಶ್ರೀ ಎ.ಎಂ. ಸುಬ್ರಹ್ಮಣ್ಯ ಮುಡಂಬಡಿತ್ತಾಯ, ಕೂವೆಚ್ಚಾರು ಶ್ರೀ ಬಾಲಚಂದ್ರ ಜೋಗಿತ್ತಾಯ, ನೆಲ್ಯಾಡಿ ಶ್ರೀ ನಾರಾಯಣ ಮನೋಳೀತ್ತಾಯ, ಕಾಜಿಮೂಲೆ |
ಸಂಚಾಲಕ | ಶ್ರೀ ಪಿ.ಕೆ. ಬಾಲಕೃಷ್ಣ ಮೂಡಂಬಡಿತ್ತಾಯ, ಮುಕ್ರುಂಪಾಡಿ |
ಶಿವಳ್ಳಿ ಸಂಪದದ ಅಂಗಸಂಸ್ಥೆಗಳ ಪದಾಧಿಕಾರಿಗಳು :-
ಶಿವಳ್ಳಿ ಮಹಿಳಾ ಸಂಪದ :
ಗೌರವಾಧ್ಯಕ್ಷೆ | ಡಾ| ರಮಾದೇವಿ, ದರ್ಬೆ ವಲಯ |
ಅಧ್ಯಕ್ಷೆ | ಶ್ರೀಮತಿ ವತ್ಸಲಾರಾಜ್ಞಿ, ಬೊಳುವಾರು ವಲಯ |
ಕಾರ್ಯದರ್ಶಿ | ಶ್ರೀಮತಿ ಟಿ. ಪ್ರೇಮಲತಾ ಉಂಗ್ರುಪುಳಿತ್ತಾಯ, ಬೊಳುವಾರು ವಲಯ |
ಶಿವಳ್ಳಿ ಯುವ ಸಂಪದ :
ಗೌರವಾಧ್ಯಕ್ಷ | ಶ್ರೀ ಕೆ. ದಿವಾಕರ ನಿಡ್ವಣ್ಣಾಯ, ದರ್ಬೆ ವಲಯ |
ಅಧ್ಯಕ್ಷ | ಶ್ರೀ ಉದಯ ರಾವ್, ನರಿಮೊಗ್ರು ವಲಯ |
ಕಾರ್ಯದರ್ಶಿ | ಶ್ರೀ ಶಶಿಧರ ಬಳ್ಳಕ್ಕುರಾಯ, ದರ್ಬೆ ವಲಯ |
ಕೋಶಾಧಿಕಾರಿ | ಶ್ರೀ ಎಂ. ಸತೀಶ ಕೆದಿಲಾಯ, ಬೊಳುವಾರು ವಲಯ |
ಸಂಪದದ ವಲಯ ಸಮಿತಿಗಳು ಪ್ರತೀ ೨ ತಿಂಗಳಿಗೊಮ್ಮೆ ಸಭೆಯನ್ನು ನಡೆಸುತ್ತದೆ. ಈ ಸಭೆಯಲ್ಲಿ ವಲಯದ ಕಾರ್ಯಯೋಜನೆಗಳನ್ನು ಮಾಡುತ್ತಾ ವಿಚಾರ ವಿನಿಮಯಗಳನ್ನು ನಡೆಸುತ್ತದೆ. ಹಾಗೂ ತಾಲೂಕು ಸಮಿತಿಗೆ ಯಾವುದಾದರೂ ಸಲಹೆ ಸೂಚನೆಗಳನ್ನು ಅಭಿಪ್ರಾಯಗಳನ್ನು ನೀಡುವರೇ ನಿರ್ಣೈಸಲಾಗುತ್ತದೆ. ತಾಲೂಕು ಸಮಿತಿಯೂ ೨ ತಿಂಗಳಿಗೊಮ್ಮೆ ಸಭೆಯನ್ನು ಸೇರುತ್ತದೆ. ಈ ಸಭೆಯಲ್ಲಿ ವಲಯದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ವಲಯ ಪ್ರತಿನಿಧಿಗಳೂ ಭಾಗವಹಿಸುತ್ತಾರೆ. ಪ್ರತೀ ೨ ವರ್ಷಗಳಿಗೊಮ್ಮೆ ವಲಯ ಹಾಗೂ ತಾಲೂಕು ಸಮಿತಿಗಳು ಸರ್ವಾನುಮತದ ಮೇರೆಗೆ ನೂತನವಾಗಿ ಪುನಾರಚಿತವಾಗುತ್ತದೆ. ಈ ಸಂದರ್ಭದಲ್ಲಿ ಮಹಾಸಭೆಯು ನಡೆಯುತ್ತದೆ.
ನಡೆಸುವ ಸಾಮಾನ್ಯ ಕಾರ್ಯಕ್ರಮಗಳು :-
೧. ಪ್ರತೀವರ್ಷ ಮಹಾಸಭೆ, ಗಾಯತ್ರೀ ಯಜ್ಞ, ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ.
೨. ಪ್ರಥಮ ಏಕಾದಶಿಯಂದು ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರೀ ಶ್ರೀ ಸುಬ್ರಹ್ಮಣ್ಯ ಮಠಾಧೀಶರಿಂದ ತಪ್ತಮುದ್ರಾಧಾರಣ ಕಾರ್ಯಕ್ರಮ.
೩. ಧಾರ್ಮಿಕ ಪ್ರವಾಸ.
೪. ಚಿಣ್ಣರ ಮೇಳ (ಚಿಕ್ಕ ಮಕ್ಕಳಿಂದ ಹಿಡಿದು ಪಿ.ಯು.ಸಿ. ತನಕದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು)
೫. ತ್ರೈಮಾಸಿಕ ಪತ್ರಿಕೆ “ಶ್ರುತಿ ಸಂಪದ” ದ ಪ್ರಕಾಶನ
೬. ಸಂಪದದ ಸದಸ್ಯರಿಗಾಗಿ ಕ್ರಿಕೆಟ್ ಪಂದ್ಯಾಟ.
೭. ಯುವ ಸಂಪದದ ವತಿಯಿಂದ ಕ್ರೀಡಾಕೂಟ.
ಇದಲ್ಲದೆ ತಾಲೂಕಿನ ದೇವಾಲಯಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ.
ಮಹಿಳಾ ಸಂಪದ :-
ಮಹಿಳಾ ಸಂಪದವು ೨೬-೦೭- ೧೯೯೮ ರಂದು ಆರಂಭವಾಯಿತು.
ಗೌರವಾಧ್ಯಕ್ಷರು | ಡಾ| ರಮಾದೇವೀ |
ಅಧ್ಯಕ್ಷರು | ಪ್ರೊ| ವತ್ಸಲಾ ರಾಜ್ಞೀ |
ಕಾರ್ಯದರ್ಶಿ | ಶ್ರೀಮತಿ ಟಿ. ಪ್ರೇಮಲತಾ ರಾವ್ |
ವಲಯ ಸಮಿತಿ :-
ವಲಯ | ಅಧ್ಯಕ್ಷರು | ಕಾರ್ಯದರ್ಶಿ |
ಬೆಳಂದೂರು | ಶ್ರೀಮತಿ ಸುಗುಣಾ ಅನಂತ ಕೃಷ್ಣ ಭಟ್, ಬರೆಪ್ಪಾಡಿ | ಶ್ರೀಮತಿ ಮಮತಾ ಜಿ. ಭಟ್ |
ಬೊಳ್ವಾರು | ಶ್ರೀಮತಿ ಅಹಲ್ಯಾ ವಿಷ್ಣುಮೂರ್ತಿ ಕೇಕುಣ್ಣಾಯ, ನೆಲ್ಲಿಕಟ್ಟೆ | ಶ್ರೀಮತಿ ವನಿತಾ ಶರತ್‌ಕುಮಾರ್, ಸಾಲ್ಮರ |
ದರ್ಬೆ | ಶ್ರೀಮತಿ ಲಕ್ಷ್ಮೀರಾಘವೇಂದ್ರ ಕಲ್ಲೂರಾಯ, ಕುಂಜೂರುಪಂಜ | ಶ್ರೀಮತಿ ವೀಣಾಬಾಲಕೃಷ್ಣ ಕೊಳತ್ತಾಯ |
ಕಾವು | ಶ್ರೀಮತಿ ಲಲಿತಾ ರವಿಶಂಕರ ಕಲ್ಲೂರಾಯ, ಪೆರ್ನಾಜೆ | ಶ್ರೀಮತಿ ವರಲಕ್ಷ್ಮೀ ಉಂಗ್ರುಪುಳಿತ್ತಾಯ |
ನರಿಮೊಗರು | ಶ್ರೀಮತಿ ಶಾರದಾ, ಕೊಡಂಕಿರಿ | ಶ್ರೀಮತಿ ಸರಸ್ವತಿ ಸುಬ್ರಹ್ಮಣ್ಯ ತಂತ್ರಿ |
ನೆಲ್ಯಾಡಿ | ಶ್ರೀಮತಿ ಆಶಾ ಜೋಗಿತ್ತಾಯ | ಶ್ರೀಮತಿ ವೀಣಾ ಕಡಂಬಳಿತ್ತಾಯ |
ರಾಮಕುಂಜ | ಶ್ರೀಮತಿ ಸುಭದ್ರಾ ಭಟ್, ಉಪ್ಪಿನಂಗಡಿ | ಶ್ರೀಮತಿ ಗೀತಾ ಅಸ್ರಣ್ಣ, ಆಲಂಕಾರು |
ಪಾಣಾಜೆ | ಶ್ರೀಮತಿ ಜಯಂತಿ ಬಾಲಕೃಷ್ಣ ಭಾಗವತ | ಶ್ರೀಮತಿ ಲತಾ ರಾಮಚಂದ್ರ, ಕಾಜಿಮೂಲೆ |
ಕಡಬ | ಶ್ರೀಮತಿ ಪಿ.ಜಿ.ಕವಿತಾ ವಿಷ್ಣುಮೂರ್ತಿ ಉಪಾಧ್ಯಾಯ | ಶ್ರೀಮತಿ ನಳಿನಿ ಮೋಹನ ರಾವ್ |
ಶಿವಳ್ಳಿ ಬ್ರಾಹ್ಮಣ ಮಹಿಳೆಯರನ್ನು ಸಂಘಟಿಸುವಲ್ಲಿ ಮಹಿಳಾ ಸಂಪದವು ಮಹತ್ತರ ಪಾತ್ರವನ್ನು ವಹಿಸುತ್ತಿದೆ.
ಇವರು ಪ್ರತೀ ವರ್ಷ ಹಲವು ಪಾರಾಯಣಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
೧. ಪ್ರತೀ ೩ ತಿಂಗಳಿಗೊಮ್ಮೆ ಸಭೆಯು ಮಹಿಳಾ ಸದಸ್ಯರ ಮನೆಯಲ್ಲಿ ನಡೆಯುತ್ತದೆ.
೨. ಪ್ರತೀ ತಿಂಗಳ ೨ನೇ ಶುಕ್ರವಾರ ಮಹಿಳಾ ಸದಸ್ಯರ ಮನೆಯಲ್ಲಿ “ಲಕ್ಷ್ಮೀ ಶೋಭಾನೆ” ಯನ್ನು ಓದುವುದು.
೩. ಪ್ರತೀ ಸೋಮವಾರ ಶಾರದಾ ಭಜನ ಮಂದಿರದಲ್ಲಿ “ಲಲಿತಾ ಸಹಸ್ರನಾಮ” ಪಾರಾಯಣವನ್ನು ಮಾಡುವುದು.
೪. ಪ್ರತೀ ಗುರುವಾರ “ಶ್ರೀ ರಾಘವೇಂದ್ರ ಮಠದಲ್ಲಿ “ಶ್ರೀ ವಿಷ್ಣುಸಹಸ್ರನಾಮ” ಪಾರಾಯಣ ಮತ್ತು ಭಗವದ್ಗೀತೆಯ ೧ ಅಧ್ಯಾ೦iವನ್ನು ಓದುವುದು.
೫. ಪ್ರತೀ ತಿಂಗಳ ಮೊದಲ ಮಂಗಳವಾರ ಮಹಿಳಾ ಸದಸ್ಯರ ಮನೆಯಲ್ಲಿ ಭಜನ ಕಾರ್ಯಕ್ರಮ.
೬. ಪ್ರತೀ ಏಕಾದಶೀಯಂದು ಸಂಜೆ ೫ ಕ್ಕೆ ಶ್ರೀ ರಾಘವೇಂದ್ರ ಮಠದಲ್ಲಿ ಭಗವದ್ಗೀತೆಯ ೯ ಅಧ್ಯಾಯ ಪಠನ.
೭. ಪ್ರತೀ ವರ್ಷ ಶ್ರೀ ರಾಘವೇಂದ್ರ ಮಠದಲ್ಲಿ ಗೀತಾಜಯಂತೀ ಕಾರ್ಯಕ್ರಮ.
ಇದಲ್ಲದೇ ಸಂಪದದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇದರ ಜೊತೆಗೆ ಮಹಿಳಾ ಸಂಪದದ ಹಲವು ಸದಸ್ಯರು ಯಕ್ಷಗಾನ ತಾಳಮದ್ದಳೆಯಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದು ಅನ್ಯರನ್ನೂ ಸೇರಿಸಿಕೊಂಡು ಉತ್ತಮ ರೀತಿಯಲ್ಲಿ ಯಕ್ಷಾಗಾನ ತಾಳಮದ್ದಳೆಯನ್ನು ನಡೆಸಿಕೊಡುತ್ತಿದ್ದಾರೆ.
its too good and this is very helpfull sight to our pepule
thanks
I would like to know whether the union is still active. Please respond
I am a sr.citizen,presently heriditory trustee of Sri DurgaParameshwari temple,Thangai,UJIRE.Our ancestors were the original “Stapaka Vamsha” or Prathistapanacharyas ofSri.Janardana Temple,Ujire.My father was Moktesara in that temple till his demise.After that as a duty to continue my fathers sthanamana,I requested the Adalitha moktesara to appoint me as one of the “Naalweekaru” in the place of my father.But he rejected and avoiding to give suitable reply to me.You respected people of our Brahmin union may surprise why this issue is put in Puttur Union?Because,in Ujire shivalli union,all the dicisions are taken by the same Adalitha moktesara,Mr.Paduvetnaya and there is no hope of getting justice.I request all eminent personalities to enquire this issue and retain/continue the tradition of our temples and Nalweeka sampradaya.In temples,traditions are to be followed,and brahmins are to be in the frontline to follow tradition.Thanking you..
Let all know what is the reply for Prasad Oppanthaya’s letter as above. This also required to see if any active and useful participation of such unions take place.
Rajgopal
@Sri.M.Rajgopal sir,we can see that no reply or opinion is coming foth since my letter dated 26th october 2012.This shows in brahmin community unity and cooperation is not visible to the required extent whereas in others except brahmins,they unite and strugle for the cause till the stone turned.Thisis why brahmin community is attacked by all others and till selfishness and jelousy are not discouraged we have no right to guide others or claim supremsy over ‘ajnanis’-