ಕ್ವಚಿತ್ಸುರಾನ್ ಶಾಸ್ತಿ ಸುರಾಂಗನಾಃ ಕ್ವಚಿತ್ ಕ್ವಚಿಚ್ಚ ಗಂಧರ್ವಪತೀನೃಷೀನ್ ಕ್ವಚಿತ್ |
ಕ್ವಚಿತ್ಪಿತೃನ್ ಕ್ವಾಪಿ ನೃಪಾನ್ನರಾನ್ ಕ್ವಚಿತ್ಚುಭಾನಯಂ ಮಧ್ವಮುನಿ: ಪ್ರತಾಪವಾನ್ ||
ಕ್ವಚಿತ್ ಪ್ರಭುಂ ಸ್ತೌತಿ ಸಮೀಕ್ಷತೇ ಕ್ವಚಿತ್ ಕ್ವಚಿತ್ಸ್ಮರನ್ ನೃತ್ಯತಿ ಗಾಯತಿ ಕ್ವಚಿತ್ |
ಕ್ವಚಿತ್ತಮಾರಾಧಯತೀಶ್ವರಂ ಕ್ವಚಿನ್ನಮತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಕ್ವಚಿದ್ಧರೇರ್ಜೀವಜಡಾತಿಭಿನ್ನತಾಂ ಕ್ವಚಿತ್ ಪ್ರಭೋ: ಸರ್ವಗುಣೈಶ್ಚ ಪೂರ್ಣತಾಂ|
ಕ್ವಚಿಚ್ಚ ತಸ್ಯಾಖಿಲದೋಷಶೂನ್ಯತಾಂ ವದತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಕ್ವಚಿಚ್ಚ ವಿಷ್ಣೋರುರುಚಿತ್ರರೂಪತಾಂ ಕ್ವಚಿಚ್ಚ ಮುಕ್ತಾಖಿಲ ಜೀವಯಂತೃತಾಂ|
ಕ್ವಚಿಚ್ಚ ತಸ್ಯಾವ್ಯಾಯಚಿನ್ಮಯಾಕೃತಿಂ ವ್ಯನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಕ್ವಚಿತ್ ಸ್ಮೃತೀ: ಕ್ವಾಪಿ ಪುರಾಣ ಸಂಹಿತಾ: ಪ್ರವಕ್ತಿ ಸೂತ್ರಂ ಕ್ವಚಿದಾಗಮೋಕ್ತಿಭಿ:|
ಕ್ವಚಿಚ್ಚ ಧರ್ಮಂ ಚರತಿ ಕ್ವಚಿಚ್ಚ ತಂ ಬ್ರವೀತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಕ್ವಚಿಚ್ಚ ಚಾರ್ವಾಕಕಣಾದಗೌತಮ ಪ್ರಭಾಕರಾದ್ವೈತಿತಥಾಗತಾದ್ದಿಕೈ: |
ಕೃತಂ ಮತಂ ಯುಕ್ತಿ ಶತೈರ್ ವಿಖಂಡಯನ್ ವಿಭಾತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಪರನ್ಪರಾಭಾವಯತಿ ಕ್ವಚಿತ್ಕ್ವಚಿತ್ ನಿಜಾನ್ಕಥಾಯಾಂ ಕುಶಲೀಕರೋತ್ಯಯಂ |
ಕ್ವಚಿದ್ಬುಧಾನ್ವೈಷ್ಣವಮಾರ್ಗಮಾಗತಾನ್ ಪುನಾತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಕ್ವಚಿತ್ಸಮಸ್ತಾಗಮ ನಿರ್ಣಯೋದಿತಾ: ಕೃತೀ: ಕೃತೀ ವ್ಯಾಕುರತೇ ಸಭಾಂತರೇ |
ಪ್ರಹೃಷ್ಟರೋಮಾ ನೃಹರೌ ಕ್ವಚಿನ್ಮನೋ ಯುನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್ ||
ಇದಂ ಪ್ರತಾಪಾಷ್ಥಕಮಚ್ಯುತಪ್ರಿಯ ಶ್ರುತಿಪ್ರತೀತಾಮಲ ಮಧ್ವ ಯೋಗಿನ:|
ಯತಿಸ್ತದೀಯೋ ಕೃತ ವಾದಿರಾಜ: ಉದಾರಧೀಸ್ತಸ್ಯ ಕೃಪಾ ಫಲಾಪ್ತಯೇ ||
|| ಇತಿ ಭಾವೀ ಸಮೀರ ವಾದಿರಾಜತೀರ್ಥ ವಿರಚಿತಂ ಮಧ್ವಮುನಿ ಪ್ರತಾಪಾಷ್ಠಕಮ್||
ಸ್ತೋತ್ರ ರಚನೆಯ ಹಿನ್ನೆಲೆ :
ಭಾವೀ ಸಮೀರ ವಾದಿರಾಜತೀರ್ಥ ಶ್ರೀಪಾದರು ತೀರ್ಥಯಾತ್ರೆ ಮಾಡುತ್ತಾ ದ್ವಾರಕಾ ಕ್ಷೇತ್ರಕ್ಕೆ ಆಗಮಿಸಿ ಆರು ತಿಂಗಳು ಉಪವಾಸ ವ್ರುತವನ್ನು ಆಚರಿಸುತ್ತಾ ಶ್ರೀ ಕೃಷ್ಣನ ಸೇವೆಯನ್ನು ಮಾಡುತ್ತಿದ್ದಾಗ ಈ ಸ್ತೋತ್ರವನ್ನು ರಚಿಸಿದರು. ಅದೇ ಸಮಯದಲ್ಲಿ ದ್ವಾರಕೆಯಲ್ಲಿಯೇ ಶ್ರೀ ಕೃಷ್ಣ ತೀರ್ಥರೆಂಬ ಯತಿಗಳು ಶ್ರೀಕೃಷ್ಣ ಸೇವೆಯನ್ನು ಮಾಡುತ್ತಿದರು. ಅವರು ದೈವವಶಾತ್ ಜ್ವರ ಬಾಧೆಗೆ ಒಳಗಾಗಿ ನಿತ್ಯ ಕರ್ಮಾನುಷ್ಟಾನಕ್ಕೂ ಕೂಡ ತೊಂದರೆ ಆಗಿತ್ತು. ಆಗ ಒಂದು ರಾತ್ರಿ “ಶ್ರೀಮದ್ಭಾವೀಸಮೀರ ವಾದಿರಾಜತೀರ್ಥ ಶ್ರೀಪಾದರು ರಚಿಸಿದ ಮಧ್ವಮುನಿ ಪ್ರತಾಪಾಷ್ಠಕವನ್ನು ಪಠಿಸಿದರೆ ಜ್ವರ ಬಾಧೆ ಪರಿಹಾರ ಆಗುವುದೆಂದು” ಸ್ವಪ್ನ ಸೂಚನೆ ಆಯಿತು. ಮರುದಿನ ಅವರು ವಾದಿರಾಜತೀರ್ಥ ಶ್ರೀಪಾದರ ಸನ್ನಿಧಿಗೆ ಬಂದು ಸ್ವಪ್ನದ ವಿಚಾರವನ್ನು ತಿಳಿಸಿದರು ಹಾಗೂ ಆ ಸ್ತೋತ್ರವನ್ನು ಉಪದೇಶಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿಕೊಂಡರು. ಕರುಣಾಸಾಗರರಾದ ವಾದಿರಾಜ ಗುರುಸಾರ್ವಭೌಮರು ಶ್ರೀ ಕೃಷ್ಣ ಯತಿಗಳಿಗೆ ಸ್ತೋತ್ರವನ್ನು ಉಪದೇಶ ಮಾಡಿ ಅನುಗ್ರಹಿಸಿದರು. ಬಳಿಕ ಕೃಷ್ಣ ಯತಿಗಳು ಸ್ತೋತ್ರದ ಪ್ರಭಾವದಿಂದ ಜ್ವರಬಾಧೆಯನ್ನು ಶೀಘ್ರವಾಗಿ ಪರಿಹರಿಸಿಕೊಂಡರು. ಇಂದಿಗೂ ಕೂಡ ಜ್ವರ ಪೀಡಿತರಾದವರಿಗೆ ಈ ಸ್ತೋತ್ರದಿಂದ ಅಭಿಮಂತ್ರಿತವಾದ ತೀರ್ಥಪ್ರಾಶನ ಮಾಡಿಸಿದರೆ ಜ್ವರಬಾಧೆ ನಿವೃತ್ತಿ ಆಗುವುದೆಂದು ಬಹಳ ಜನರಿಗೆ ಅನುಭವವೇದ್ಯವಾಗಿದೆ.
( ಆಧಾರ: ಆ. ರಾ. ಪಂಚಮುಖಿ ಇವರಿಂದ ಸಂಪಾದಿತ ” ಶ್ರೀಮದ್ಭಾವೀಸಮೀರ ವಾದಿರಾಜಪೂಜ್ಯ ಚರಣ ವಿರಚಿತ ಸ್ತೋತ್ರಮಣಿ ಮಾಲಾ “)
– ವೇಣುಗೋಪಾಲ್ ರಾವ್
Is the lyrics available in Tamil, English?
I don’t know Kannada to read. I can speak
Is the lyrics available in Tamil or English reac