Shri Panchalingeshwara Temple, Paranthi Kshetra, Mudhya

ಪಾರಂತೀಸುರಸದನಂ ವಿಶಾಲಸಂವಿತ್ ಸಂಪ್ರಾಪ್ತಃ ಖಲು ಸುಚಿರಾನ್ನಿವೇದ್ಯಹೀನಮ್ |
ಗ್ರಾಮ್ಯಾಗ್ರ್ಯಕ್ಷಿತಿಪತಿಭಿರ್ದಿನಾರ್ಧಮಾತ್ರಾತ್ ತದ್ಭೂತೀರ್ವ್ಯಧಿತ ಸಭೂತಬಲ್ಯನಲ್ಪಾಃ ||

ಭೀಮತ್ವೇ ಸಹ ಸಹಜೈಃ ಪ್ರತಿಷ್ಠಿತಃ ಪ್ರಾಕ್ ಪಂಚಾತ್ಮಾ ಮುರರಿಪುರಂಚಿತೋ ಯದತ್ರ |
ಪಾಂಚಾಲ್ಯಾ ಬಲಿಸಲಿಲಂ ಸಮಂ ದದತ್ಯಾ ಸೋಽಸ್ಮಾರ್ಷೀತ್ ತಮಿಮಮಥ ಪ್ರಪೂಜ್ಯಪೂಜ್ಯಃ ||

– ಸುಮಧ್ವವಿಜಯ (೧೬/೩೬,೩೭)

Paranthi Panchalingeshwara Temple
ದ್ರೌಪದೀಸಮೇತರಾದ ಪಂಚಪಾಂಡವರಿಂದ ಪ್ರತಿಷ್ಠಿತವಾದ ಶ್ರೀ ಹರಿಯ ಪಂಚಮೂರ್ತಿಗಳು

ದಕ್ಷಿಣ ಕನ್ನಡದ ಪವಿತ್ರಕ್ಷೇತ್ರಗಳಲ್ಲೊಂದು ಶ್ರೀ ಕ್ಷೇತ್ರ ಪಾರಂತಿ. ೫೦೦೦ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವಾದ ಕ್ಷೇತ್ರ ಇದು. ದ್ರೌಪದೀಸಮೇತರಾದ ಪಂಚಪಾಂಡವರಿಂದ ಪ್ರತಿಷ್ಠಿತವಾದ ಶ್ರೀ ಹರಿಯ ಪಂಚಮೂರ್ತಿಗಳ ಕ್ಷೇತ್ರ ಇದು. ಭೀಮರೂಪದಿಂದ ತಾವು ಪ್ರತಿಷ್ಠಿಸಿದ್ದ ಇಲ್ಲಿಯ ಶ್ರೀಹರಿಯ ಮೂರ್ತಿಯನ್ನು ಶ್ರೀಮಧ್ವರೂಪದಿಂದ ಪುನರುಜ್ಜೀವನಗೊಳಿಸಿದ್ದು ಶ್ರೀಮದಾಚಾರ್ಯರು. ಕಾಲಕ್ರಮದಲ್ಲಿ ಪೂಜೆ ಲುಪ್ತವಾಗಿದ್ದ ಈ ಕ್ಷೇತ್ರಕ್ಕೆ ಆಗಮಿಸಿ, ಅರ್ಧದಿನದೊಳಗೆ ಪೂಜೆಗೆ ಅಗತ್ಯವಾದ ಸಕಲ ವ್ಯವಸ್ಥೆಯನ್ನು ಶ್ರೀಮದಾಚಾರ್ಯರು ಮಾಡಿದ ವಿವರ ಸುಮಧ್ವವಿಜಯ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.  ಇಂದು ಪಂಚಲಿಂಗೇಶ್ವರ ದೇವಸ್ಥಾನ ಎಂದು ಪ್ರಸಿದ್ಧವಾಗಿರುವ ಇದು ವಾಸ್ತವವಾಗಿ ಪಂಚರೂಪೀ ಶ್ರೀಹರಿಯ ದೇವಸ್ಥಾನ : ಪಂಚಾತ್ಮಾ ಮುರರಿಪುರಂಚಿತೋ ಯದತ್ರ. ಲಿಂಗಾಕಾರದಲ್ಲಿ ಅನಂತಾಸನ ಎಂಬ ಹೆಸರಿನ ಪರಶುರಾಮರೂಪದ ಶ್ರೀಹರಿಯು ಉಡುಪಿಯಲ್ಲಿ ನೆಲೆಸಿರುವುದು ಸರ್ವವಿದಿತವೇ ಆಗಿದೆ. ಇದು ವಾಯುದೇವರ ಎರಡುರೂಪಗಳಿಂದ ಪೂಜಿತವಾದ ಶ್ರೀಹರಿಯ ಕ್ಷೇತ್ರ. ಧರ್ಮರಾಜ, ಅರ್ಜುನ, ನಕುಲ ಹಾಗೂ ಸಹದೇವ ರೂಪದಲ್ಲಿ ಯಮ, ಇಂದ್ರ, ಹಾಗೂ ಅಶ್ವಿನೀದೇವತೆಗಳು ಪಾಲ್ಗೊಂಡ ಕ್ಷೇತ್ರ. ಭಾವಿ ಸರಸ್ವತಿ ಎನ್ನಿಸಿದ ದ್ರೌಪದಿದೇವಿಯು ಸಹ ಪಾಲ್ಗೊಂಡಿದ್ದ  ಪವಿತ್ರಕಾರ್ಯ ಅದಾಗಿತ್ತು. ಶ್ರೀಮದಾಚಾರ್ಯರಿಂದ ಜೀರ್ಣೋದ್ಧಾರಗೊಂಡ ಈ ಕ್ಷೇತ್ರ ಕಾಲಕ್ರಮದಲ್ಲಿ ಪುನಃ ಪೂಜಾದಿಗಳು ವ್ಯತ್ಯಯಗೊಂಡಾಗ ಇದಕ್ಕೆ ಪುನಃ ಕ್ರಮಬದ್ಧ ಪೂಜಾ ವ್ಯವಸ್ಥೆಯನ್ನು ಮಾಡಿದ್ದು ಪ್ರಾತಸ್ಮರಣೀಯರಾದ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರು.  ಪೇಜಾವರಮಠಾಧೀಶರಾದ ಪರಮಪೂಜ್ಯ ಶ್ರೀವಿಶ್ವೇಶತೀರ್ಥಶ್ರೀಪಾದರ ಸಹಕಾರದಿಂದ “ಶ್ರೀ ಪಾರಂತೀ ಟೆಂಪಲ್ ಟ್ರಸ್” ರಚಿತವಾಗಿದ್ದು, ಇಲ್ಲಿ ನಿತ್ಯಪೂಜಾದಿಗಳು ಕ್ರಮಪ್ರಕಾರವಾಗಿ ನಡೆಯುತ್ತಿವೆ. ಪಲಿಮಾರುಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರು ಈ ಪ್ರತಿಷ್ಠಾನದ ಮುಖ್ಯ ರೂವಾರಿಗಳು.

Invitation-Paranthi-Temple
Brahmakalashotsava Invitation

ಕಾಲಕ್ರಮದಲ್ಲಿ ಶಿಥಿಲಗೊಂಡಿರುವ ಈ ದೇವಾಲಯದ ಜೀರ್ಣೋದ್ಧಾರಕಾರ್ಯ ಇಂದು ಅನಿವಾರ್ಯವಾಗಿದೆ. ಪಾರಂತೀ ಟೆಂಪಲ್ ಟ್ರಸ್ಟ್‌ನ ನೇತೃತ್ವದಲ್ಲಿ ಜೀರ್ಣೋದ್ಧಾರಕಾರ್ಯವು ನಡೆಯಲಿದ್ದು, ಸ್ಥಾನೀಯವಾಗಿಯೂ ಜೀರ್ಣೊದ್ಧಾರಸಮಿತಿಯು ರಚನೆಯಾಗಿರುತ್ತದೆ.  ಶಿಲಾಮಯವಾದ ಗರ್ಭಗುಡಿ, ನಮಸ್ಕಾರಮಂಟಪ, ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿ ಗೋಪುರ ನಿರ್ಮಾಣ – ಇವು ಪ್ರಸ್ತುತ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸೇರಿದ್ದು, ಭಕ್ತರಿಗೆ ಜಪ, ತಪ, ಹೋಮ ಮೊದಲಾದ ಸಕಲವಿಧದ ಆಧ್ಯಾತ್ಮಿಕ ಕಾರ್ಯಗಳ ಅನುಷ್ಠಾನಕ್ಕೆ ಯೋಗ್ಯವಾಗುವಂತೆ ಈ ಕಾರ್ಯವನ್ನು ಯೋಜಿಸಲಾಗಿದೆ.  ಶ್ರೀವಾಯುದೇವರು ಎರಡು ರೂಪಗಳಿಂದ ಆರಾಧಿಸಿದ ಇಲ್ಲಿಯ ಮೂರ್ತಿಗಳಿಗೆ ಉಡುಪಿಯ ಎರಡು ಮಠಗಳ ಅಧಿಪತಿಗಳು ನೇತೃತ್ವವಹಿಸಿರುವುದು ಆಸ್ತಿಕ ಜನತೆಯ ಭಾಗ್ಯ. ಶ್ರೀವಿದ್ಯಾಮಾನ್ಯತೀರ್ಥರ ಶತಮಾನೋತ್ಸವದ ಸ್ಮಾರಕವಾಗಿ ಈ ವರ್ಷದಲ್ಲಿಯೇ ಈ ಮಹತ್ಕಾರ್ಯವನ್ನು ಪೂರೈಸುವ ಸಂಕಲ್ಪವನ್ನು ಪರಮಪೂಜ್ಯಶ್ರೀಪಾದರು ಹಾಗು ಸಮಿತಿಯವರು ಕೈಗೊಂಡಿರುವರು. ಒಂದು ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಜೀರ್ಣೋದ್ಧಾರ ಕಾರ್ಯಕ್ಕೆ ಸಕಲಸದ್ಭಕ್ತರ ತನುಮನಧನಗಳ ಸಹಕಾರ ಅತ್ಯಗತ್ಯವಾಗಿದೆ. ಆಸಕ್ತರು ಪಾರಂತಿ ಪಂಚಲಿಂಗೇಶ್ವರ ಮಾಧ್ವ ಸೇವಾ ಸಮಿತಿ, ಕರ್ಣಾಟಕ ಬ್ಯಾಂಕ್, ಉಪ್ಪಿನಂಗಡಿ ಶಾಖೆ,ಇದರ ಉಳಿತಾಯ ಖಾತ ಸಂಖ್ಯೆ 8082500100706101 (IFSC Code: KARB0000808) ಇದಕ್ಕೆ ನೆರವಾಗಿ ಸಂದಾಯ ಮಾದಬಹುದು. ಪಾರಂತಿ ಪಂಚಲಿಂಗೇಶ್ವರ ಮಾಧ್ವ ಸೇವಾ ಸಮಿತಿ ಈ ಹೆಸರಿಗೆ ಚೆಕ್/ಡ್ರಾಫ಼್ಟ್ ರೂಪದಲ್ಲೂ ಹಣವನ್ನು ಸಂದಾಯ ಮಾಡಬಹುದು.

Route Map:

Route-Map-Paranthi-Temple

Contact Details:

Phone: 9449529215
Email: suryaudupa@gmail.com

4 thoughts on “Shri Panchalingeshwara Temple, Paranthi Kshetra, Mudhya

  1. Hello,

    A very good article about a ‘not much known’ but ‘highly divine’ temple. Sincere request to all the Shivalli Brahmins, to stand for the cause of the protecting our own temples, whichever part of the world you stay. If we don’t support enough, no one else will.

    Cheers,
    Abhijith

  2. Hello,
    I would like to make donations to this temple.
    Please let me know how this can be done.

    Thanks and regards
    Hari

  3. Dear Sri Hariprasad,

    You can donate to below mentioned account:

    Panchalingeshwara Madhwa Seva Samithi
    Acc No: 8082500100706101 (IFSC Code: KARB0000808)
    Karnataka Bank
    Uppinangadi Branch

    For any more details contact Sri Suryaprakash Udupa – 9449529215

Leave a Reply

Your email address will not be published.