ಆಚಾರ್ಯ ಮಧ್ವರ ಸಂಪರ್ಕಕ್ಕೆ ಬಂದಿರುವ ತುಳುನಾಡಿನ ಊರುಗಳು

  1. ಅವತಾರ ಭೂಮಿ ಪಾಜಕ – ಆಚಾರ್ಯರ ಜನ್ಮಸ್ಥಳ
  2. ರಜತಪೀಠಪುರ – ಉಡುಪಿ
  3. ಅನಂತಾಸನ, ಮಹೇಂದ್ರದಿಗಾಲಯ (ಚಂದ್ರೇಶ್ವರ), ಕಾನನ ದೇವತಾಸದನ (ಕೊಡವೂರು), ತಾಳಕುಡೆ (ಬನ್ನಂಜೆ) – ಈ ೪ ದೇವಾಲಯಗಳನ್ನು ಆಚಾರ್ಯರು ತಮ್ಮ ೭ ವಯಸ್ಸಿನಲ್ಲಿ ನಟ್ಟಿರುಳಿನಲ್ಲಿ ನಡೆದುಕೊಂಡು
    ಸಂದರ್ಶಿಸಿದ್ದರು
  4. ಮದ್ದ – ಈ ಗ್ರಾಮದಲ್ಲಿ ಮಧ್ವಾಚಾರ್ಯರು ಒಂದು ಶಿಲೆಯ ಮೇಲೆ ಕುಳಿತುಕೊಂಡಿದ್ದರು. ಹಾಗಾಗಿ ಈ ಊರಿಗೆ ಮಧ್ವ ಮದ್ದ ಎಂದು ಹೆಸರಾಯಿತು
  5. ಘೃತವಲ್ಲೀ – ನೈಯಂಬಳ್ಳಿ
  6. ಕಾಂತಾವರ – ಶ್ರೀ ಕಾಂತೇಶ್ವರ ಸದನ – ಆಚಾರ್ಯರು ತಮ್ಮ ಕಿರುಬೆರಳನ್ನು ನೆಲಕ್ಕೆ ಒತ್ತಿ ಅದನ್ನು ಅಲುಗಾಡಿಸಿ ಎಂದು ಜಟ್ಟಿಗಳಿಗೆ ಸವಾಲು ಹಾಕಿದ ಸ್ಥಳ.
  7. ನಾರ್ಶ್ಯ – ನರಸಿಂಹ ಗೇಹ – ಆಚಾರ್ಯರು ಒಬ್ಬ ವಟುವಿನ ಹೆಗಲ ಮೇಲೆ ಕುಳಿತು ನರಸಿಂಹನ ಗುಡಿಗೆ ಪ್ರದಕ್ಷಿಣೆ ಬಂದ ಸ್ಥಳ
  8. ಗುಹಪ್ರಿಯ ಮಹೀಧ್ರ – ಕುಮಾರಪರ್ವತ- ವಿಷ್ಣುತೀರ್ಥಾಚಾರ್ಯರು ಸಂಚರಿಸಿದ ಪರ್ವತ
  9. ಹರಿಶ್ಚಂದ್ರ ಮಹೀಧ್ರ – ವಿಷ್ಣುತೀರ್ಥಾಚಾರ್ಯರು ಗುಹಾ ಪ್ರವೇಶ ಮಾಡಿದ ಪರ್ವತ
  10. ಮಧ್ಯವಾಟ – ಆಚಾರ್ಯರು ಉಡುಪಿ ಹಾಗು ಸುಬ್ರಹ್ಮಣ್ಯಗಳ ಮಧ್ಯೆ ಸಂಚಾರಿಸುತ್ತಿದ್ದಾಗ ಇಳಿದು ಕೊಳ್ಳುತ್ತಿದ್ದ ಸ್ಥಳ. ಇಲ್ಲಿ ಒಂದು ವ್ಯಾಸಮುಷ್ಟಿಯನ್ನು ಪ್ರತಿಷ್ಠಾಪಿಸಿದ್ದಾರೆ
  11. ಎರ್ಕಿಮಠ – ಇಲ್ಲಿನ ಗೃಹಸ್ಥರಿಗೆ ಆಚಾರ್ಯರು ಚನ್ನಕೇಶವ ದೇವರ ವಿಗ್ರಹ ಮತ್ತು ಮುದ್ರೆಗಳನ್ನು ದಯಪಾಲಿಸಿದ್ದಾರೆ
  12. ಅನಂತಶಯನ – ಆಚಾರ್ಯರು ಸಹಸ್ರ ಕದಳಿ ಫಲ ಮತ್ತು ಅನೇಕ ಕೊಡ ಹಾಲನ್ನು ಸ್ವೀಕರಿಸಿ ಅಚ್ಚರಿ ಮೂಡಿಸಿದ ಸ್ಥಳ
  13. ವಿಷ್ಣುಮಂಗಲ – ಆಚಾರ್ಯರು ತ್ರಿವಿಕ್ರಮಪಂಡಿತರನ್ನು ವಾದದಲ್ಲಿ ಜಯಿಸಿದ ಸ್ಥಳ
  14. ಚಿಟ್ಪಾಡಿ ಬೀಡು – ಆಚಾರ್ಯ ಮಧ್ವರ ಮನೆಗೆ ಹಾಲನ್ನು ಒದಗಿಸುತ್ತಿದ್ದ ಮನೆತನ. ಇಲ್ಲಿ ಶ್ರೀ ಭೂ ಸಮೇತನಾದ ಶ್ರೀನಿವಾಸ ದೇವರ ದೇವಳವಿದೆ. ಆಚಾರ್ಯರು ಇವರಿಗೆ ವಿಗ್ರಹಗಳನ್ನು ದಯಪಾಲಿಸಿದ್ದಾರೆ
  15. ನಿಡಂಬೂರು ಪಕ್ಷನಾಥ ಬಲ್ಲಾಳರ ಮನೆ- ಆಚಾರ್ಯರು ಇಲ್ಲಿನ ಗೃಹಸ್ಥರಿಗೆ ಲಕ್ಷ್ಮೀನಾರಾಯಣ ವಿಗ್ರಹವನ್ನು ದಯಪಾಲಿಸಿದ್ದಾರೆ
  16. ಉಜಿರೆ – ಆಚಾರ್ಯರು ಪಂಡಿತರನ್ನು ವಾದದಲ್ಲಿ ಗೆದ್ದು ಕರ್ಮನಿರ್ಣಯ ಗ್ರಂಥವನ್ನು ರಚಿಸಿದ ಸ್ಥಳ
  17. ಪ್ರಾಗ್ರ್ಯವಾಟ – ಕೊಡಿಪಾಡಿ ಜನಾರ್ದನ ದೇವಳ
  18. ಮದನೇಶ್ವರ – ಮಧೂರು ಮದನೇಶ್ವರ ಮಹಾಗಣಪತಿ ದೇವಳ
  19. ಅಡೂರು – ಮಹಾಲಿಂಗೇಶ್ವರ ದೇವಳ. ಇಲ್ಲಿ ಒಂದು ವಿಷ್ಣು ದೇವಳವನ್ನು ಆಚಾರ್ಯರು ಪ್ರತಿಷ್ಠಾಪಿಸಿದ್ದಾರೆ
  20. ಕಾವು ಮಠ – ಆಚಾರ್ಯರು ತ್ರಿವಿಕ್ರಮ ಪಂಡಿತರನ್ನು ವಾದದಲ್ಲಿ ಗೆದ್ದ ಕುರುಹಾಗಿ ಇಲ್ಲಿ ವಿಜಯಸ್ತಂಭವನ್ನು ನೆಡಲಾಗಿದೆ. ಆಚಾರ್ಯರು ಶ್ರೀ ಲಕ್ಷ್ಮೀನಾರಾಯಣ ವಿಗ್ರಹ ಹಾಗು ಪಂಚ ಮುದ್ರೆಗಳನ್ನು ತ್ರಿವಿಕ್ರಮಪಂಡಿತರಿಗೆ ಅನುಗ್ರಹಿಸಿದ್ದಾರೆ
  21. ಸಂದೊಳಿಗೆ ಪಾಡಿ ತಾಂತ್ಯ ಮಠ ಕುಕ್ಕಿಕಟ್ಟೆ
  22. ಕಣ್ವತೀರ್ಥ – ಇಲ್ಲಿಯ ಅಶ್ವತ್ಥ ಕಟ್ಟೆಯ ಕಮಾನಿನಲ್ಲಿ ಆಚಾರ್ಯರು ದ್ವಂದ್ವ ಮಠವನ್ನು ನಿರ್ಣಯಿಸಿದರು. ಪೇಜಾವರ ಮಠದ ಪರಂಪರೆಯಲ್ಲಿ ಬಂದ ಶ್ರೀ ವಿಜಯಧ್ವಜ ತೀರ್ಥರು ಗ್ರಂಥ ರಚನೆ ಮಾಡುವಾಗ ಮರದ ಎಲೆಗಳ ಸದ್ದನ್ನು ಕೈಯೆತ್ತಿ ನಿಲ್ಲಿಸಿದ ಮಹಾತ್ಮರು
  23. ಕಾರ್ಯೂರು ಮಠ
  24. ತೆಂಕನಿಡಿಯೂರು
  25. ಕೊಕ್ಕಡ ವೈದ್ಯನಾಥೇಶ್ವರ ದೇವಾಲಯ
  26. ಮಲ್ಪೆ ಕಡಲಕಿನಾರೆ ವಡಭಾಂಡೇಶ್ವರ- ಆಚಾರ್ಯರಿಗೆ ಕೃಷ್ಣ ಪ್ರತಿಮೆ ದೊರೆತ ಸ್ಥಳ. ಇಲ್ಲಿ ಬಲರಾಮನನ್ನು ಪ್ರತಿಷ್ಠಾಪಿಸಿದ್ದಾರೆ
  27. ಪಾರಂತಿಸುರ ಸದನ – ಆಚಾರ್ಯರು ಜೀರ್ಣಾವಸ್ಥೆಯಲ್ಲಿದ್ದ ಪಂಚ ಮುರಾರಿ ಸನ್ನಿಧಾನವನ್ನು ಜೀರ್ಣೋದ್ಧಾರ ಮಾಡಿ ಬಲಿ ಉತ್ಸವ ನಡೆಸಿದ ಸ್ಥಳ
  28. ತುಂಗಾತೀರ – ಆಚಾರ್ಯರು ಬಂಡೆಯನ್ನು ಹರಿಯುವ ನೀರಿಗೆ ಅಡ್ಡವಾಗಿಟ್ಟ ಸ್ಥಳ
  29. ಸೇತುತಿಲ(ಕಟ್ಟತ್ತಿಲ) – ಆಚಾರ್ಯರು ರಚಿಸಿರುವ ಸರ್ವಮೂಲ ಗ್ರಂಥಗಳ ಮೂಲಪ್ರತಿಗಳನ್ನು ಇಲ್ಲಿ ಭೂಗತ ಮಾಡಿ ಮೇಲೊಂದು ತೀರ್ಥವನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಪುಸ್ತಕ ತೀರ್ಥವೆಂದು ಹೆಸರು. ಮುಂದೆ ಧರ್ಮ ಖಿಲವಾದಾಗ ಶ್ರೀ ವಿಷ್ಣುತೀರ್ಥಾಚಾರ್ಯರು ಕುಮಾರಪರ್ವತದಿಂದ ಬಂದು ಭೂಗತವಾಗಿರುವ ಸರ್ವಮೂಲಗ್ರಂಥಗಳನ್ನು ಹೊರತೆಗೆದು ಧರ್ಮವನ್ನು ಪುನಃ ಸ್ಥಾಪಿಸುತ್ತಾರೆ

2 thoughts on “ಆಚಾರ್ಯ ಮಧ್ವರ ಸಂಪರ್ಕಕ್ಕೆ ಬಂದಿರುವ ತುಳುನಾಡಿನ ಊರುಗಳು

  1. ಸರ್ ಇಂಥ ಅಮೂಲ್ಯ ಧಾರ್ಮಿಕ ಮಾಹಿತಿ ನೀಡಿದkke ಅನಂತ ವಂದನೆಗಳು. ಅಭಿನಂದನೆಗಳು 🙏

Leave a Reply

Your email address will not be published.