Devaranama
ಶರಣು ಶರಣಯ್ಯ ಶರಣು ಬೆನಕ
Sharanu Sharanayya – Lyrics in Kannada ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ ತಂದೆ ಕಾಯೋ
ಶರವು ಮಹಾ ಗಣಪತಿ
ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ | ಅನುದಿನವು ಭಕ್ತರು ನಿನ್ನ ನಂಬಿ ಇರುವರು || ಗಜಮುಖದ ದೇವನೆ ನಿನಗೆ ವಂದನೆ | ಭಕ್ತಿಯ ಸೇವೆಯಲಿ ಆರಾಧನೆ | ಕಷ್ಟ ಪರಿಹಾರಕೆ ಮಾರ್ಗದರ್ಶಕ | ಕಾಪಾಡು ಕರುಣಾಳು ವಿಘ್ನನಾಶಕ ||ಶರವು
ಗಜಮುಖನೆ ಗಣಪತಿಯೇ
ಗಜಮುಖನೆ ಗಣಪತಿಯೇ – Lyrics in Kannada ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೆ ಭಾದ್ರಪದ ಶುಕ್ಲದ ಚೌತಿಯಂದು ನೀ ಮನೆಮನೆಗೂ ದಯಮಾಡಿ ಹರಸು ಎಂದೂ ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು ಬೇಡುವಾ ಭಕ್ತರಿಗೆ
ಶರಣು ಸಿದ್ದಿ ವಿನಾಯಕ
ಶರಣು ಸಿದ್ದಿ ವಿನಾಯಕ – Kannada Lyrics ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯಮೂರುತಿ ಶರಣು ಮೂಷಿಕ ವಾಹನ ||ಪ|| ನಿಟಿಲನೇತ್ರನ ದೇವಿ ಸುತನ ನಾಗಭೂಷಣ ಪ್ರಿಯನೇ ತಟಿಲ ತಂಕಿತ ಕೋಮಲಾಂಗನೇ ಕರ್ಣ ಕುಂಡಲ ಧಾರಣೆ
ಗಜವದನ ಬೇಡುವೆ
ಗಜವದನ ಬೇಡುವೆ – Kannada Lyrics ಗಜವದನ ಬೇಡುವೆ | ಗೌರೀತನಯ ಗಜವದನ ಬೇಡುವೆ ತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರ ಮೂಷಿಕವಾಹನ ಮುನಿಜನಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋ ಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ ಶ್ರೀ ಪುರಂದರವಿಠಲನ
ವಂದಿಪೆ ನಿನಗೆ ಗಣನಾಥಾ
ವಂದಿಪೆ ನಿನಗೆ ಗಣನಾಥಾ – Kannada Lyrics ಮೊದಲೊಂದಿಪೆ ನಿನಗೆ ಗಣನಾಥಾ ದೇವಾ ವಂದಿಪೆ ನಿನಗೆ ಗಣನಾಥಾ ಬಂದ ವಿಘ್ನಗಳ ಕಳೆ ಗಣನಾಥಾ||ಪ|| ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ ಸಾಧಿಸಿದ ರಾಜ್ಯ ಗಣನಾಥಾ ||1|| ಅಂದು ರಾವಣನು ಮದದಿಂದ ನಿನ್ನ
ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ|| ಪಾಲಗಡಲೊಳು ಪವಡಿಸಿದವನೇ ಆಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ
ದಯಮಾಡೋ ರಂಗಾ
ದಯಮಾಡೋ | ರಂಗಾ | ದಯಮಾಡೋ ದಯಮಾಡೋ ನಿನ್ನ ದಾಸನು ನಾನೆಂದು || ಪ || ಹಲವು ಕಾಲದಿಂದ ನಿನ್ನ ಹಂಬಲ ಎನಗೆ | ಒಲಿದು ಪಾಲಿಸಬೇಕು ವಾರಿಜನಾಭ || ೧
ಎಲ್ಲರು ಮಾಡುವುದು ಹೊಟ್ಟೆಗಾಗಿ
ಎಲ್ಲರು ಮಾಡುವುದು ಹೊಟ್ಟೆಗಾಗಿ | ಗೇಣು ಬಟ್ಟೆಗಾಗಿ || ಪ || ಸಿರಿ | ವಲ್ಲಭನ ಭಜಿಸುವುದು ಮುಕ್ತಿಗಾಗಿ || ಅ ಪ || ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ | ಮಲ್ಲರೊಡನಾಡುವುದು ಹೊಟ್ಟೆಗಾಗಿ
ಧರ್ಮಕ್ಕೆ ಕೈ ಬಾರದೀ ಕಾಲ
ಧರ್ಮಕ್ಕೆ ಕೈ ಬಾರದೀ ಕಾಲ | ಪಾಪ ಕರ್ಮಕ್ಕೆ ಮನಸೋಲೋದೀ ಕಲಿ ಕಾಲ || ಪ || ದಂಡದ್ರೋಹಕೆ ಉಂಟು | ಪುಂಡು ಪೋಕರಿಗುಂಟು | ಹೆಂಡತಿ ಮಕ್ಕಳಿಗಿಲ್ಲವೀ ಕಾಲ
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವ ಬಂದ ನಮ್ಮ ಸ್ವಾಮಿ ಬಂದನೋ | ದೇವರ ದೇವ ಶಿಖಾಮಣಿ ಬಂದನೋ || ಪ || ಉರಗಶಯನ ಬಂದ ಗರುಡಗಮನ ಬಂದ | ನರನಿಗೊಲಿದವ ಬಂದ | ನಾರಾಯಣ ಬಂದ || ೧
ದಾಸರ ನಿಂದಿಸಬೇಡ ಮನುಜ
ದಾಸರ ನಿಂದಿಸಬೇಡ ಮನುಜ | ಹರಿ | ದಾಸರ ನಿಂದಿಸಬೇಡ || ಪ || ರಾಮನ ನಿಂದಿಸಿ ರಾವಣ ಕೆಟ್ಟ | ವಿಭೀಷಣಗಾಯಿತು ಪಟ್ಟ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ | ಕಪಟನಾಟಕ ಸೂತ್ರಧಾರಿ ನೀನೆ || ಪ || ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ | ಏನು ಮಾಡಲು ಬಲ್ಲುದು ತಾನೆ ಬೇರೆ
ಭಾಗ್ಯದ ಲಕ್ಷ್ಮೀ ಬಾರಮ್ಮಾ
ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ ಭಾಗ್ಯದ ಲಕ್ಷ್ಮೀ ಬಾರಮ್ಮಾ || ಪ || ಹೆಜ್ಜಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧