ತುಳುನಾಡಿನ ಕೃಷಿಕರ ಹಬ್ಬವಿದು. ಅನಂತನ ಚದುರ್ದಶಿಯಿಂದ ಆರಂಭಿಸಿ ದೀಪಾವಳಿಯ ಒಳಗಾಗಿ ಒಂದು
ಶುಭದಿನದಂದು ಕೊರಳ್ಕಟ್ಟುವ ಹಬ್ಬ ನಡೆಯುತ್ತದೆ.
ಮಾವಿನ ಎಲೆ, ಪಚ್ಚೆಕೊರಳು, ಬಿದಿರುಎಲೆ, ಮುಂತಾದವುಗಳ ಜೊತೆಗೆ ದಡ್ಡಲದ ತೊಗಟೆನಾರಿನಿಂದ ಬತ್ತದ ತೆನೆಯೊಂದಿಗೆ ಕಟ್ಟಿದಾಗ ಅದು ‘ಕೊರಳ್ ‘ ಎನಿಸುತ್ತದೆ. ಮಾಂಗಲಿಕವಾದ ಈ ಕೊರಳ್ (ತೆನೆ) ಅನ್ನು ದೇವರ ಪೀಠ, ತೊಟ್ಟಿಲು, ಹಣದ ಪೆಟ್ಟಿಗೆ, ಅಟ್ಟ, ಧಾನ್ಯಕಣಜ, ಮೊಸರು ಕಡೆಯುವ ಕಂಬ, ಭಾವಿ ಕಂಭ, ಭದ್ರಕಂಬ, ವಾಸ್ತು ಕಂಭ ಮುಂತಾದೆಡೆ ಕಟ್ಟಲಾಗುತ್ತದೆ.
*. ಕೊರಳ್ ಗೆ ಬೇಕಾದ ತೆನೆ, ಹಗ್ಗ, ಮಾವಿನಎಲೆ ಮುಂತಾದ ಸಾಮಗ್ರಿಗಳನ್ನು ರೈತವರ್ಗದ ಜನ ತುಳಸಿಯ ಬೃಂದಾವನದ ಸನಿಹ ಮಣೆಯಲ್ಲಿ ತಂದಿಡುತ್ತಾರೆ. ಮನೆ ಯಜಮಾನನು ಅಲಂಕೃತನಾಗಿ ಮಣೆಯೊಂದಿಗೆ ಆ
ಪರಿಕರಗಳನ್ನು ಮನೆಗೆ ತುಂಬಿಸಿಕೊಳ್ಳುತ್ತಾನೆ. ಪತ್ನಿ ಕಾಲು ತೊಳೆದು ಬರಮಾಡಿಕೊಳ್ಳುತ್ತಾಳೆ. ಕೊರಳಿನಲ್ಲಿ ಧಾನ್ಯ ಲಕ್ಷ್ಮಿಯ ಅನುಸಂಧಾನವಿದ್ದು ಇದನ್ನು ಕಟ್ಟಿದಾಗ ಮನೆಯೆಲ್ಲಾ ಅಲಂಕೃತವಾಗುತ್ತದೆ. ಸುಮಂಗಲಿಗೆ ಕುಂಕುಮವಿದ್ದಂತೆ ತೌಳವವಿಪ್ರನ ಮನೆಯ ಕೊರಳ್.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ
Good