ಸ್ವರ್ಣಗೌರೀ ವ್ರತ, ಗಣೇಶ  ಚತುರ್ಥಿ

ಹೃಷಿಕೇಶನಿಂದ  ನಿಯಮ್ಯವಾದ  ಮಾಸ   ಭಾದ್ರಪದಮಾಸ . ಭಾದ್ರಪದವು  ವಿಪ್ರದೇಹದಂತೆ  ವಿಪ್ರದೇಹದಲ್ಲಿ ದೇವತೆಗಳದೂ  ಪಿತೃಗಳದೂ  ಸನ್ನಿಧಾನ. ನಾಭಿಯಿಂದ  ಮೇಲೆ  ದೇವತೆಗಳದು . ನಾಭಿಯಿಂದಡಾ । ಸತ್ಯನಾರಾಯಣ ಆಚಾರ್ಯ
ಕೆಳಗಿನ  ಅರ್ಧದಲ್ಲಿ ಪಿತೃಗಳದು . ಅಂತೆಯೇ  ಭಾದ್ರಪದದ  ಶುಕ್ಲಪಕ್ಷ  ದೇವತೆಗಳದು . ಕೃಷ್ಣಪಕ್ಷ  ಪಿತೃಗಳದು.

ಸ್ವರ್ಣಗೌರೀ ವ್ರತ

ಭಾದ್ರಪದ  ಶುಕ್ಲತೃತೀಯಾದಂದು  ಸ್ವರ್ಣಗೌರೀ ವ್ರತ  ಸ್ತ್ರೀಯರು  ನಡೆಸುವ  ವ್ರತ ವಿದು . ಸ್ವರ್ಣಗೌರಿಗೆ    ಕಲ್ಪೋಕ್ತ  ಪೊಡೆಯ  ವಿಧಿಯಿದೆ .  ‘ಸ್ವರ್ಣಗೌರೀಕಲ್ಪೋಕ್ತಪೂಜಾವಿಧಿ:’ ಎಂಬ ಪುಸ್ತಕ  ಉಡುಪಿಯಿಂದ ಪ್ರಕಟವಾಗಿದೆ . ಈ  ಕಲ್ಪೋಕ್ತಪೂಜೆಯನ್ನು   ಮಾಡುವುದರಿಂದ,  ಸೌಭಾಗ್ಯಾಭಿವೃದ್ಧಿ ,  ಪುತ್ರಪೌತ್ರಾದಿಸರ್ವಸಂಪದಭಿವೃದ್ಧಿ ಯಾಗುತ್ತದೆ . 

ಗಣೇಶ  ಚತುರ್ಥಿ

ಭಾದ್ರಪದಶುಕ್ಲ ಚತುರ್ಥಿ ದಿನ  ಗಣೇಶ ವ್ರತ

. ಹಿಂದಿನ ದಿನ  ಬಂದ ಗೌರಿ  ಪೀಠದಲ್ಲಿರುವಂತೆಯೇ  ಮೃಣ್ಮಯ  ಗಣೇಶ 

ಮೂರ್ತಿಯನ್ನು  ಅದೇ  ಪೀಠದಲ್ಲಿ  ಪ್ರತಿಷ್ಠಾಪಿಸಿ ಅಲ್ಲಿ  ಕಲ್ಪೋಕ್ತಪೂಜೆಯನ್ನು  ಮಾಡಿ  ಅಂದೇ  ಸಾಯಂಕಾಲ  ಅಥವಾ 

ಮುಂದಿನ  ದಿನಗಳಲ್ಲಿ  ಮಣ್ಣಿನಮೂರ್ತಿಗಳನ್ನು  ನೀರಿನಲ್ಲಿ  ವಿಸರ್ಜಿಸುವ  ವಿಧಿ  ಎಲ್ಲೆಡೆ  ಚಾಲ್ತಿಯಲ್ಲಿದೆ .’ಗಣೇಶ ಪೂಜಾವಿಧಿ ‘  ಪುಸ್ತಕ  ಲಭ್ಯವಿದೆ .

 ‘ಯಾಸ್ತ್ವನ್ಯದೇವತಿಥಯ: ತಾಸು  ವಿಷ್ಣುಮ್  ಪ್ರಪೂಜಯೇತ್ ‘ ಎಂಬ  ಮಾತಿನಂತೆ  ಬೇರೆ ಬೇರೆ  ದೇವತೆಗಳ  ಹಬ್ಬದ ದಿನದಂದು  ಆಯಾ  ದೇವತೆಗಳ  ಅಂತರ್ಯಾಮಿಯಾದ  ವಿಸ್ಣುವಿನ  ರೂಪವನ್ನು  ಆರಾಧಿಸಬೇಕು . ಗಣಪತಿಯ 

ಉಪಾಸ್ಯಮೂರ್ತಿ  ವಿಶ್ವಂಭರ.  ಭಗವಂತನ  ವಿಶ್ವಂಭರರೂಪಕ್ಕೆ  ಹತ್ತೊಂಬತ್ತು  ಮುಖಗಳು.  ಮಧ್ಯದ ಮುಖ  ಆನೆಯ 

ಮುಖ.  ಇವನ   ಉಪಾಸನೆಯಿಂದಲೇ  ವಿನಾಯಕನೂ  ಗಜಮುಖನೆನಿಸಿದ . ‘ವಿನಾಯಕೋ~ಪಿ  ವಿಶ್ವಸ್ಯ  ಧ್ಯಾನಾದೈತ್

ಗಜವಕ್ತ್ರತಾಂ ‘.

ಗೌರೀ -ಗಣಪತಿಪ್ರತಿಮೆಯನ್ನಿಟ್ಟು  ಪೂಜಿಸುವ  ಸಂಪ್ರದಾಯ  ಕೆಲವೆಡೆ  ಇಲ್ಲ . ಅವರೂ  ನಿತ್ಯದೇವಪೂಜೆಯಾದ ಮೇಲೆ  ಲೋಹದ  ಗಣಪತಿಪ್ರತಿಮೆಯಲ್ಲಿ  ಇಲ್ಲವೇ  ರಂಗೋಲಿಮಂಡಲದಲ್ಲಿ  ಗಣಪತಿಯನ್ನು  ಆವಾಹಿಸಿ  ಪೂಜಿಸಿ ಅಷ್ಟೋತ್ತರಾದಿಗಳಿಂದ  ಅರ್ಚಿಸಿ  ಇಪ್ಪತ್ತೊಂದು  ಗರಿಕೆಗಳನ್ನು  ಅರ್ಪಿಸಿ  ಇಪ್ಪತ್ತೊಂದಾದರೂ  ಮೋದಕವನ್ನು ,

ಪಂಚಕಜ್ಜಾಯ  ಮುಂತಾದ  ಭಕ್ಷ್ಯಗಳನ್ನು  ನಿವೇದಿಸಿ  ವಿಶ್ವಂಭರಪೂಜೆಯನ್ನು  ಮಾಡಬೇಕು . ಶಕ್ತಿ ಇದ್ದವರು ಅಷ್ಟದ್ರವ್ಯದಿಂದ 

ಗಣಹೋಮವನ್ನೂ  ಮಾಡಿಸಬಹುದು . 

ಗಣಪತಿಯ  ಸಂಕ್ಷೇಪ ಪೂಜೆ:

ಸಂಕಲ್ಪ 

ಗಣಪತ್ಯಂತರ್ಗತ   ಪ್ರಾಣಸ್ಥವಿಶ್ವಂಭರರೂಪಿಪರಮಾತ್ಮಪ್ರೀತ್ಯರ್ಥಂ  ಗಣೇಶಸ್ಯ  ಷೋಡಷೋಪಚಾರಪೂಜಾಮ್ ಕರಿಷ್ಯೇ

ಘಂಟಾನಾದ  ಮಾಡಿ, ಶಂಖಪೂಜೆ  ಮಾಡಿ . ಶಂಖದ  ನೀರನ್ನು  ಗಣೇಶಪ್ರತೀಕಕ್ಕೂ  ಪ್ರೋಕ್ಷಿಸಿ .

       ರಕ್ತಾಂಬರೋ ರಕ್ತತನೂ  ರಕ್ತಮಾಲ್ಯಾನುಲೇಪನ:|

       ಮಹೋದರೋ  ಗಜಮುಖ: ಪಾಶದಂತಾಂಕುಶಾಭಯೇ |

       ಬಿಭ್ರದ್  ಧ್ಯೇಯೋ  ವಿಘ್ನರಾಜ: ಕಾಮದಸ್ತ್ವರಯಾ   ಹ್ಯಯಂ |

       ಗಣೇಶಾಯ  ನಮ: ಧ್ಯಾಯಾಮಿ | ಧ್ಯಾನಂ  ಸಮರ್ಪಯಾಮಿ |

*ಆಗಚ್ಛ  ದೇವ  ವಿಘ್ನೇಶ  ಸ್ಥಾನೇ  ಚಾತ್ರ  ಸ್ಥಿರೋ  ಭವ |

    ಯಾವತ್ಪೂಜಾಮ್  ಕರಿಷ್ಯೆ ~ಹಂ  ತಾವತ್  ಸನ್ನಿಹಿತೋ  ಭವ ||

ಗೌರೀಪುತ್ರಾಯ  ನಮಃ | ಆವಾಹಯಾಮಿ  | ಆವಾಹನಂಸಮರ್ಪಯಾಮಿ  |

 ವಕ್ರತುಂಡಾಯ  ನಮಃ | ಸಿಂಹಾಸನಂ   ಸಮರ್ಪಯಾಮಿ |

 ಏಕದಂತಾಯ   ನಮಃ  |  ಸ್ವಾಗತಂ  ಸಮರ್ಪಯಾಮಿ  |

 ಕೃಷ್ಣಪಿಂಗಾಯ  ನಮಃ  |  ಅರ್ಘ್ಯಮ್  ಸಮರ್ಪಯಾಮಿ |

 ಗಜಕರ್ಣಾಯ  ನಮಃ | ಪಾದ್ಯಮ್  ಸಮರ್ಪಯಾಮಿ |

 ಲಂಬೋದರಾಯ ನಮಃ |  ಆಚಮನೀಯಂ  ಸಮರ್ಪಯಾಮಿ | 

 ವಿಕಟಾಯ ನಮಃ  | ಮಧುಪರ್ಕಂ  ಸಮರ್ಪಯಾಮಿ |

 ವಿಘ್ನರಾಜಾಯ  ನಮಃ | ಪುನರಾಚಮನಂ  ಸಮರ್ಪಯಾಮಿ |

 ಧೂಮ್ರವರ್ಣಾಯ  ನಮಃ |  ಸ್ನಾನಂ  ಸಮರ್ಪಯಾಮಿ |

 ಫಾಲಚಂದ್ರಾಯ  ನಮಃ | ಪಂಚಾಮೃತಾಭಿಷೇಕವನ್ನೂ  ಮಾಡಬಹುದು . 

       ರಕ್ತವಸ್ತ್ರದ್ವಯಂ  ಸಮರ್ಪಯಾಮಿ 

 ವಿನಾಯಕಾಯ  ನಮಃ | ಯಜನೋಪವೀತಂ …

 ಹಸ್ತಿರಾಜವದನಾಯ  ನಮಃ |  ದೂರ್ವಾಯುಗ್ಮಮ್  ಸಮರ್ಪಯಾಮಿ 

 ದ್ವಾದಶನಾಮಪೂಜಾಮ್  ಕರಿಷ್ಯೇ  |

(ಎರಡೆರಡು  ಗರಿಕೆಯಿಂದ ಅರ್ಚಿಸಿ)

ಸುಮುಖಾಯ  ನಮಃ | 

ಏಕದಂತಾಯ  ನಮಃ |

ಕಪಿಲಾಯ  ನಮಃ | 

ಗಜಕರ್ಣಾಯ  ನಮಃ |

ಲಂಬೋದರಾಯ  ನಮಃ | 

ವಿಕಟಾಯ  ನಮಃ |

ವಿಘ್ನರಾಜಾಯ  ನಮಃ | 

ಗಣಾಧಿಪಾಯ  ನಮಃ | 

ಧೂಮಕೇತವೇ  ನಮಃ | 

ಗಣಾಧ್ಯಕ್ಷಾಯ  ನಮಃ |

ಫಾಲಚಂದ್ರಾಯ  ನಮಃ | 

ಗಜಾನನಾಯ  ನಮಃ |

ಸಿದ್ಧಿವಿನಾಯಕಾಯ  ನಮಃ | 

ದ್ವಾದಶನಾಮಪೂಜಾಮ್  ಸಮರ್ಪಯಾಮಿ |

ವಿಶ್ವಪ್ರಿಯಾಯ  ನಮಃ  |  ಧೂಪಮಾಘ್ರಾಪಯಾಮಿ

ಆಕಾಶಾಧಿಪತಯೇ  ನಮಃ |  ದೀಪಂ  ದರ್ಶಯಾಮಿ |

ಮೋದಕಪ್ರಿಯಾಯ  ನಮಃ | ಮೋದಕಾದಿ ಭಕ್ಷ್ಯಾಣಿ   ಸಮರ್ಪಯಾಮಿ |   

ಪಾಶಾಂಕುಶಧರಾಯ   ನಮಃ | ನೀರಾಜನಂ   ಸಮರ್ಪಯಾಮಿ |

ನಮಸ್ತೇ ವಿಘ್ನರಾಜೇಂದ್ರ  ನಮಸ್ತೇ ಸಿದ್ಧಿದಾಯಕ |

ನಮಸ್ತೇ  ಪಾರ್ವತಿಪುತ್ರ  ನಮಸ್ತೇ   ಗಣನಾಯಕ ||

ಏಕವಿಂಶತಿ (೨೧) ನಮಸ್ಕಾರಾನ್  ಸಮರ್ಪಯಾಮಿ |

ವಕ್ರತುಂಡ  ಮಹಾಕಾಯ  ಕೋಟಿಸೂರ್ಯಸಮಪ್ರಭ |

   ಅವಿಘ್ನಮ್  ಕುರು ಮೇ ದೇವ ಸರ್ವಕಾರ್ಯೇಷು  ಸರ್ವದಾ ||

   ಗಣಾಧಿಪತಯೇ  ನಮಃ | ಪ್ರಾರ್ಥನಾಮ್  ಸಮರ್ಪಯಾಮಿ |

ಅನೇನ  ಗಣಪತಿಪೂಜನೇನ  ಗಣಪತ್ಯಂತರ್ಗತ  ಭಾರತೀರಮಣಮುಖ್ಯಪ್ರಾಣಾಂತರ್ಗತ  ವಿಶ್ವಂಭರ 

ರೂಪಿಪರಮಾತ್ಮಾ   ಪ್ರೀಯತಾಂ |

ಒಂದೆರಡು  ಮಾಹಿತಿಗಳು:

೧.  ಈ  ದಿನ  ರಾತ್ರಿ  ಚಂದ್ರನನ್ನು  ನೋಡಿದರೆ  ಅಪವಾದ  ತಪ್ಪದು  ಎಂಬ  ನಂಬಿಕೆ . ಅಕಸ್ಮಾತ್  ಚಂದ್ರನನ್ನು 

ಕಂಡರೆ  ಸ್ಯಮಂತಮಣಿಯ ಕಥೆಯನ್ನು  ಸ್ಮರಿಸಿಕೊಳ್ಳಿ ,  ಅದಕ್ಕಾಗಿ  ಈ  ಶ್ಲೋಕ  ಹೇಳಿ .

                    ಸಿಂಹ : ಪ್ರಸೇನಮವಧೀತ್  ಸಿಂಹೋ  ಜಾಂಬವತಾ  ಹತಃ  |

                    ಸುಕುಮಾರಕ  ಮಾ  ರೋದೀ: ತವ  ಹ್ಯೇಷ: ಸ್ಯಮಂತಕ: ||

೨.  ಗಣೇಶನಿಗೆ  ಬೆಲ್ಲದ  ಭಕ್ಷ್ಯಗಳು  , ಕಬ್ಬು, ಗರಿಕೆ , ಕೆಂಪುಬಣ್ಣದ  ಹೂವು, ರಕ್ತವಸ್ತ್ರ , ಇವು  ಪ್ರಿಯ . 

೩ .  ಗಣೇಶನಿಗೆ  ತುಳಸಿಯಿಂದ  ಅರ್ಚನೆ  ಇಲ್ಲ .

             ‘ನಾಕ್ಷ ತೈರರ್ಚಯೇತ್   ವಿಷ್ಣುಮ್ ನ  ತುಲಸ್ಯಾ  ವಿನಾಯಕಂ ‘

೪ . ಗಣೇಶ  ನೃತ್ಯ -ಗಾನಪ್ರಿಯ . ಗಣೇಶಪೂಜೆಯಲ್ಲಿ  ಸಂಗೀತ -ನೃತ್ಯಗಳನ್ನೂ ಸೇರಿಸಿಕೊಂಡರೆ  ಸಮುಚಿತ .

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

ಗಣೇಶ ಚತುರ್ಥಿಯಂದು ತಯಾರಿಸಿ ಗಣೇಶನಿಗೆ ಸಮರ್ಪಿಸಬಹುದಾದ ಭಕ್ಷ್ಯಗಳು

ಮಾಹಿತಿ :

ಸುಧಾ ಭಟ್, ಉಡುಪಿ
ಪುಷ್ಪ ರಾವ್ , ಧಾರವಾಡ
ಅರ್ಪಿತಾ ಹತ್ವಾರ್, ಹುಬ್ಬಳ್ಳಿ

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಮೋದಕ 

ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು.ನೆನೆಸಿದ ಅಕ್ಕಿಯ ನೀರು ಬಸಿದು, ಅಕ್ಕಿಯನ್ನು ಹುರಿದು ರವೆ ಮಾಡಬೇಕು .

ಒಂದು ಬಾಣಲೆಯಲ್ಲಿ  ಮೂರು ಕಪ್ ನೀರನ್ನು ಹಾಕಿ ಒಂದು ಕಪ್ ಬೆಲ್ಲ, ಸ್ವಲ್ಪ ಉಪ್ಪು ಹಾಕಿ ತೆಂಗಿನ ಕಾಯಿತುರಿ ,  ಎರಡು ಚಮಚ ತುಪ್ಪ , ಎರಡು ಏಲಕ್ಕಿಯ ಪುಡಿ,  ಅಕ್ಕಿ ರವೆಯನ್ನು ಹಾಕಿ ಕುದಿಸಬೇಕು. ಬೆಂದು ಗಟ್ಟಿಯಾದಾಗ ಕೆಳಗಿಳಿಸಿ ಅದನ್ನು ಸಣ್ಣ ಸಣ್ಣ ಉಂಡೆ ಮಾಡಿ ಇಡ್ಲಿ ಪಾತ್ರೆಯಲ್ಲಿ ಇಡ್ಲಿಯಂತೆ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಬೇಕು.

ಉಂಡ್ಲೂಕ

ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು.ನೆನೆಸಿದ ಅಕ್ಕಿಯ ನೀರು ಬಸಿದು, ಅಕ್ಕಿ, ತುರಿದ ತೆಂಗಿನಕಾಯಿ ಒಂದು ಕಪ್, ಎರಡು ಚಿಟಿಕೆ ​ ಉಪ್ಪು ಹಾಕಿ ನೀರಿನಲ್ಲಿ ನುಣ್ಣಗೆ ರುಬ್ಬಬೇಕು.

ಒಂದು ಬಾಣಲೆಯಲ್ಲಿ  ಅರ್ಧ  ಲೀಟರ್  ನೀರು ಹಾಕಿ ಒಲೆಯಲ್ಲಿ ಇಟ್ಟು ರುಬ್ಬಿದ ಅಕ್ಕಿಯ ಹಿಟ್ಟನ್ನು ಹಾಕಿ ಮಗುಚುತ್ತಾ ಹದ ಬೆಂಕಿಯಲ್ಲಿ ಬೇಯಿಸಬೇಕು . ಗಟ್ಟಿಯಾದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಬೇಕು. ನಂತರ  ಎರಡು ಕಪ್ ತೆಂಗಿನ ಕಾಯಿ ತುರಿಯ ಜೊತೆಗೆ ಎರಡು ಕಪ್ ಬೆಲ್ಲವನ್ನು ಬೆರೆಸಿ ಈ ಉಂಡೆಗಳನ್ನು ಬೆರೆಸಬೇಕು.

ಹಾಲು ಬಾಯಿ

ಎರಡು ಕಪ್ ಅಕ್ಕಿ ಅಥವಾ ರವೆ, ಎರಡು ಕಪ್ ಬೆಲ್ಲ, ಎರಡು ಕಪ್ ತೆಂಗಿನ ಕಾಯಿ ತುರಿ

ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು.ನೆನೆಸಿದ ಅಕ್ಕಿಯ ನೀರು ಬಸಿದು, ಅಕ್ಕಿ, ಎರಡು ಕಪ್ ತುರಿದ  ತೆಂಗಿನಕಾಯಿ ,   ಎರಡು ಚಿಟಿಕೆ ​ ಉಪ್ಪು ಹಾಕಿ ನೀರಿನಲ್ಲಿ ನುಣ್ಣಗೆ ರುಬ್ಬಬೇಕು. ದೋಸೆ ಹಿಟ್ಟಿಗಿಂತಲೂ ನೀರಾಗಿರಬೇಕು. ಒಲೆಯಲ್ಲಿ ಬಾಣಲೆ ಅಥವಾ ದಪ್ಪ ಪಾತ್ರೆಯನ್ನು ಇಟ್ಟು ಎರಡು ಕಪ್ ಬೆಲ್ಲ,  ನೀರು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು, ಬೆಲ್ಲ ಕರಗಿದ ನಂತರ ರುಬ್ಬಿದ ಹಿಟ್ಟು ಹಾಕಿ ಮಗುಚಬೇಕು. ಗಟ್ಟಿಯಾಗುತ್ತಾ ಬರುವಾಗ ನಾಲ್ಕು, ಐದು ಚಮಚ ತುಪ್ಪ ಹಾಕಿ ಮತ್ತೆ ಮಗುಚಬೇಕು . ತುಪ್ಪ ತಳ ಬಿಟ್ಟಾಗ ಕೆಳಗಿಳಿಸಿ ತುಪ್ಪ ಸವರಿದ ಬಾಳೆ ಎಲೆಗೆ ಹಾಕಿ ಸಮತಟ್ಟು ಮಾಡಬೇಕು. ಆರಿದ ಮೇಲೆ ತುಂಡು ಮಾಡಿ ತೆಗೆಯಬೇಕು.

ಅಕ್ಕಿಯ ಬದಲು ರವೆಯನ್ನು ಉಪಯೋಗಿಸಬಹುದು

ಕಾಯಿ ಕಡುಬು ಅಥವಾ ಈರಡ್ಯ 

ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು.ನೆನೆಸಿದ ಅಕ್ಕಿಯ ನೀರು ಬಸಿದು, ಅಕ್ಕಿ, ತುರಿದ ತೆಂಗಿನಕಾಯಿ ಒಂದು ಕಪ್, ಎರಡು ಚಿಟಿಕೆ ಉಪ್ಪು ಹಾಕಿ ನೀರಿನಲ್ಲಿ ನುಣ್ಣಗೆ ರುಬ್ಬಬೇಕು.

 ಅರಸಿನ ಎಲೆ ಅಥವಾ ಬಾಳೆ ಎಲೆಯನ್ನು ತೊಳೆದುಒರೆಸಿಎಲೆಗೆ ಸ್ವಲ್ಪ ತುಪ್ಪ ಸವರಿಹಿಟ್ಟನ್ನು ಎಲೆಯಲ್ಲಿ ತೆಳ್ಳಗೆ ಹಚ್ಚಿಹರಡಿದ ಹಿಟ್ಟಿನ ಮೇಲೆ ತೆಂಗಿನ ಕಾಯಿ ತುರಿಬೆಲ್ಲದ ಹೂರಣವನ್ನು ತೆಳ್ಳಗೆ ಉದುರಿಸಬೇಕು.ಎಲೆಯನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಅರ್ಧ ಗಂಟೆ ಹಬೆಯಲ್ಲಿ ಬೇಯಿಸಬೇಕು.

ತೆಂಗಿನ ಕಾಯಿ ತುರಿಬೆಲ್ಲದ ಹೂರಣವನ್ನು ತಯಾರಿಸುವ ವಿಧಾನ

ಬಾಣಲೆಯಲ್ಲಿ ಹುಡಿ ಮಾಡಿದ ಎರಡು ಕಪ್ ಬೆಲ್ಲವನ್ನು ಹಾಕಿ ಒಲೆಯಲ್ಲಿ ಬಿಸಿ ಮಾಡಿ ಪಾಕ ಬರಿಸಬೇಕುಇದಕ್ಕೆ ಎರಡು ಕಪ್ ತೆಂಗಿನ ಕಾಯಿಯ ತುರಿಯನ್ನು ಹಾಕಿ ಮಗುಚಬೇಕು.

ಉದ್ದಿನ ಕಡುಬು ಅಥವಾ ಮೂಡೆ

ಇಡ್ಲಿ ಹಿಟ್ಟು ತಯಾರು ಮಾಡಿದಂತೆ ಹಿಟ್ಟನ್ನು ತಯಾರಿಸಿ. ತಯಾರಿಸಿಕೊಂಡ ಮೂಡೆಯನ್ನು ಇಡ್ಲಿ ಪಾತ್ರೆಯಲ್ಲಿ ಜೋಡಿಸಿ  ನಿಧಾನವಾಗಿ ಹಿಟ್ಟನ್ನು ಮೂಡೆಗೆ ಹಾಕುತ್ತಾ ಬನ್ನಿ. ತುಂಬಾ ಹಾಕಬೇಡಿ. ಸ್ವಲ್ಪ ಜಾಗ ಬಿಡಿ. ತುಂಬಾ ಹಾಕಿದರೆ ಬೇಯುವಾಗ ಹಿಟ್ಟು ಮೇಲೆ ಬಂದು ಉಕ್ಕಿ ಕೆಳಗೆ ಚೆಲ್ಲುಬಹುದು. ಮೂಡೆ ಇಲ್ಲದಿದ್ದಲ್ಲಿ ಉದ್ದನೆಯ ಸ್ಟೀಲ್ ಲೋಟ ಅಥವಾ ಅಲ್ಯೂಮಿನಿಯಂ ಲೋಟಾ ಉಪಯೋಗಿಸ ಬಹುದು. ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಬೇಕು.

ಉಂಡ್ಲೂಕ ತಯಾರಿಸುವ ವಿಧಾನ :

ರವ ಹಾಲು ಬಾಯಿ ತಯಾರಿಸುವ ವಿಧಾನ :

One thought on “ಸ್ವರ್ಣಗೌರೀ ವ್ರತ, ಗಣೇಶ  ಚತುರ್ಥಿ

  1. Very good information
    Vighnanivaraka Ganapati anthargath Sri Vishwabaranu. Ayurarogya Olle buddiyannu karunisali

Leave a Reply

Your email address will not be published.