Taptamudradharane

ಮಾನಸಿಕ ಸಂಸ್ಕಾರ ಹಾಗೂ ದೈಹಿಕ ಸಂಸ್ಕಾರ ಎಂದು ಜೀವನದಲ್ಲಿ ಎರಡು ಬಗೆಯ ಸಂಸ್ಕಾರಗಳಿವೆ. ಭಗವನ್ನಾಮಸ್ಮರಣೆ ಮೊದಲಾದುವು ಮಾನಸಿಕ ಸಂಸ್ಕಾರವಾದರೆ, ತಪ್ತಮುದ್ರಾಧಾರಣ ಮೊದಲಾದುವು ದೈಹಿಕ ಸಂಸ್ಕಾರ. ಇದು ವಿಷ್ಣು ಸಂಬಂಧಿ ವ್ರತವಗಿದ್ದು ಇದನ್ನು ವೈಷ್ಣವ ದೀಕ್ಷೆ ಎನ್ನುವರು. ಈ ದೀಕ್ಷೆಯು ವಿಷ್ಣುವಿನ ದಾಸ್ಯಭಾವವನ್ನು ಒಪ್ಪಿಕೊಳ್ಳುವ ಸಂಸ್ಕಾರ.

————————————————–

“ತಪ್ತಮುದ್ರಾಧಾರಣೆ”ಯ ಪ್ರಯುಕ್ತ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ ಇವರು ಇದರ ಮಹತ್ವ ಹಾಗೂ ವಿಚಾರಗಳೊಂದಿಗೆ ಅಭಿಮಾನದಿಂದ ನಮ್ಮ ಸಮಾಜವನ್ನು ಉದ್ದೇಶಿಸಿ ಸಂದೇಶವನ್ನು ನೀಡಿರುತ್ತಾರೆ.

————————————————–

|| ಅತಪ್ತನೂರ್ನ ತದಾಮೋ ಅಶ್ಣುತೇ ಶೃತಾಸ ಇದ್ವಹಂತಸ್ತತ್ ಸಮಾಶತ ||

ಎನ್ನುವ ವೇದಮಂತ್ರವೂ ಕೂಡಾ ತಪ್ತಮುದ್ರಾಧಾರಣ ಮಾಡಿಸಿಕೊಳ್ಳದಿದ್ದರೆ ಆತ ಮೋಕ್ಷಕ್ಕೆ ಅರ್ಹನಲ್ಲ ಎಂದು ಸಾರುತ್ತದೆ.

ಈ ದೈಹಿಕ ಸಂಸ್ಕಾರವು ನಮ್ಮಲ್ಲಿರುವ ರೋಗರುಜಿನಗಳನ್ನು ದೂರಮಾಡಲು, ಮಾಡಿದ ಪಾಪಗಳನ್ನು ಪರಿಹರಿಸಿಕೊಳ್ಳಲು, ದುರ್ಗುಣಗಳನ್ನು ನಿವಾರಿಸಲು, ಅರಿಷಡ್ವರ್ಗಗಳನ್ನು ಗೆಲ್ಲಲು, ಸತ್ಕಾರ್ಯಕ್ಕೆ ಬುದ್ಧಿಯನ್ನು ಪ್ರೇರೇಪಿಸಲು ಸಹಕಾರಿ. ಇದಕ್ಕಿಂತಲೂ ಹೆಚ್ಚಾಗಿ ಜ್ಞಾನಪ್ರಾಪ್ತಿಯ ಮೂಲಕ ಐಹಿಕ ಸುಖದೊಂದಿಗೆ ಮೋಕ್ಷಪ್ರಾಪ್ತಿಗೆ ಶ್ರೇಷ್ಠ ಸಾಧನವಾಗಿದೆ.

ತೇ ನರಾಃ ಪಶವೋ ಲೋಕೇ ಕಿಂ ತೇಷಾಂ ಜೀವನೇ ಫಲಮ್ |
ಯೈರ್ನ ಲಬ್ಧಾ ಹರೇರ್ದೀಕ್ಷಾ ನಾರ್ಚಿತೋ ವಾ ಜನರ್ದನ || (ಶ್ರೀ ಕೃಷ್ಣಾಮೃತ ಮಹಾರ್ಣವ – ೯)

ವೈಷ್ಣವ ದೀಕ್ಷೆಯ ಅಳವಡಿಕೆ ಹಾಗೂ ಭಗವಂತನ ಅರ್ಚನೆ ಇವೆರಡೇ ನಮ್ಮ ಜೀವನವನ್ನು ಸಾರ್ಥಕಪಡಿಸಬಲ್ಲವು.  ಅವೆರಡನ್ನೂ ಬಿಟ್ಟಲ್ಲಿ ಆತ ಮನುಷ್ಯನಾಗಿದ್ದು ವ್ಯರ್ಥವೇ ಸರಿ ಎಂದು ಪುರಾಣದ   ಉಕ್ತಿಯನ್ನು  ಶ್ರೀಮನ್ಮಧ್ವಾಚಾರ್ಯರು ಶ್ರೀ ಕೃಷ್ಣಾಮೃತ ಮಹಾರ್ಣವದಲ್ಲಿ ನೆನಪಿಸುತ್ತಾರೆ.

ಸುದರ್ಶನ ಹೋಮವನ್ನು ಮಾಡಿ ಅದರಲ್ಲಿ ವಿಷ್ಣುವಿನ ಆಯುಧಗಳಾದ ಚಕ್ರ ಹಾಗೂ ಶಂಖಗಳನ್ನು ಬಿಸಿಮಾಡಿ ಅವುಗಳ ಮುದ್ರೆಗಳನ್ನು ಶರೀರದಲ್ಲಿ ಧರಿಸಿಕೊಳ್ಳುವುದೇ ತಪ್ತಮುದ್ರಾಧಾರಣ.  ಪುರುಷರು ಎಡ ಹಾಗೂ ಬಲ ತೋಳುಗಳು, ಎದೆಯ ಭಾಗ ಹಾಗೂ ಹೊಟ್ಟೆಯಲ್ಲಿ ಹೀಗೆ ಐದು (೫) ಕಡೆಗಳಲ್ಲಿ ಮುದ್ರೆಗಳನ್ನು ಧರಿಸುವುದು.  ಹೆಂಗಸರು ಹಾಗೂ ಮಕ್ಕಳು ಎಡ ಹಾಗೂ ಬಲ ತೋಳುಗಳಿಗೆ ಮಾತ್ರ ಎರಡು (೨) ಕಡೆಗಳಲ್ಲಿ ಮುದ್ರೆಗಳನ್ನು ಧರಿಸುವುದು.

ಆಷಾಢ ಮಾಸದ ಪ್ರಥಮೈಕಾದಶಿಯಂದು ಉಪವಾಸವಿದ್ದು ಮುದ್ರಾಧಾರಣವು ವಿಹಿತವಾದುದು. ಈ ಹರಿದಿವಸದಂದು ಮಾಧ್ವಪೀಠಾಧಿಪತಿಗಳೆಲ್ಲರೂ ಮುದ್ರಾಧಾರಣವನ್ನು ಮಾಡುತ್ತಾರೆ.
ಈ  ದಿನ ಯಾವುದೇ ಜಾತಿ ಮತ ಬೇಧವಿಲ್ಲದೇ ವೈಷ್ಣವ ದೀಕ್ಷೆಯ ಬಗ್ಗೆ ಶ್ರದ್ಧೆಯುಳ್ಳವರು ಶುಚಿರ್ಭೂತರಾಗಿ ಬಂದು ಮುದ್ರಾಧಾರಣವನ್ನು ಮಾಡಿಕೊಳ್ಳಬಹುದು.

“ತಪ್ತಮುದ್ರಾಧಾರಣೆ”ಯ ಬಗೆಗೆ ಹೇಳುವ ಮೊದಲು ಕೆಲವು ವಿಷಯಗಳ ಚಿಂತನೆ ಅವಶ್ಯ. ಶಾಶ್ವತಫಲವನ್ನು ಪಡೆದವರಷ್ಟೇ ನಮ್ಮ ಕರ್ಮ ಜನ್ಮಸಾರ್ಥಕ ಎ೦ಬುದು ಪ್ರಾಚೀನ ಸಂಸ್ಕೃತಿ. ಅದಕ್ಕೆಂದೇ ಸರ್ವದರ್ಶನಗಳೂ ತೆರೆದುಕೊಂಡಿವೆ. ಇದರ ಬಗೆಗಿನ “ಜಿಜ್ಞಾಸೆ”ಯನ್ನು ಪೂರ್ಣಪ್ರಮಾಣದಲ್ಲಿ ಪೂರ್ತಿಗೊಳಿಸಿದವರು ಶ್ರೀ ಪೂರ್ಣಪ್ರಜ್ಞರು. ಪುರಾಣ ಶ್ಲೋಕದ ಆಧಾರದಂತೆ- “ವೈಷ್ಣವದೀಕ್ಷೆಯ ಅಳವಡಿಕೆ ಹಾಗು ಭಗವಂತನ ಅರ್ಚನೆ” ಇವೆರೆಡೇ ನಮ್ಮ ಜನ್ಮವನ್ನು ಸಾರ್ಥಕಪಡಿಸಬಲ್ಲವು ಎ೦ಬುದು ಆಚಾರ್ಯ ಮಧ್ವರು ತೊರಿಸಿದ ದಾರಿ. ಅಷ್ಟೇ ಅಲ್ಲದೇ ಇವೆರೆಡನ್ನೂ ಬಿಟ್ಟಲ್ಲಿ ಆತ ಮನುಷ್ಯನಾಗಿದ್ದೂ ವ್ಯರ್ಥವೇ ಎ೦ಬ ಕಟುಮಾತನ್ನೂ ನುಡಿಯುತ್ತಾರೆ.

ಹಾಗಾದರೆ ಈಗ ಹುಟ್ಟುವ ಜಿಜ್ಞಾಸೆ ” ವೈಷ್ಣದೀಕ್ಷೆ”ಯ ಬಗೆಗಿದು. ದೀಕ್ಷೆ ಎ೦ದರೆ ವ್ರತಧಾರಣೆ. ವಿಷ್ಣುವಿನ ಸಂಬಂಧಿ ದೀಕ್ಷೆಯನ್ನು ವೈಷ್ಣವದೀಕ್ಷೆ ಎನ್ನುವರು. ನಮಗೆ ಅರಿವಿಲ್ಲದೆಯೇ ಈ “ವೈಷ್ಣವದೀಕ್ಷೆ”ಗೆ ಸಂಭಂದಪಟ್ಟ ಆಚಾರಗಳು ನಮ್ಮಲ್ಲಿ ಚಾಲ್ತಿಯಲ್ಲಿವೆ. ಇದು ನಮ್ಮ ಹಿರಿಯರ ಮುಂದಾಲೋಚನೆಯಿಂದ ಲಭಿಸಿದ್ದು. ಅಂತಹ ಆಚಾರಗಳಲ್ಲಿ “ತಪ್ತಮುದ್ರಾಧಾರಣೆ”ಯೂ ಒಂದು. ಶಾಸ್ತ್ರಗಳನ್ನು ಬಗೆದು ಕಂಡಾಗ ಆಂತರಿಕ ಹಾಗೂ ಬಾಹ್ಯದೀಕ್ಷೆಗಳೆಂಬ ಎರೆಡು ಬಗೆಯಿಂದ ಕೂಡಿವೆ ಈ “ವೈಷ್ಣವದೀಕ್ಷೆ”. ಬಾಹ್ಯದೀಕ್ಷೆಗಳನ್ನೂ ಊರ್ಧ್ವಪುಂಡ್ರಧಾರಣೆ , ವಿಷ್ಣುವಿಗೆ ಸಂಭಂದಿಸಿದ ಹೆಸರುಗಳನ್ನೂ ಇಟ್ಟುಕೊಳ್ಳುವುದು , ವಿಷ್ಣುಪರಗಳಾದ ಮಂತ್ರಗಳ ಜಪ, ಶ್ರೀ ವಿಷ್ಣುವಿನ ಪೂಜೇ ಎ೦ಬುದಾಗಿ ಐದು ಅಂಗಗಳಿಂದ ಕಾಣಬಹುದು.

“ತಾಪಃ ಪುಂಡ್ರಸ್ತಥಾ ನಾಮಮಂತ್ರೋ ಯಾಗಶ್ಚ ಪಂಚಮಃ” ||

“ವೃದ್ಧಹಾರೀತ ಸ್ಮೃತಿ”ಯ ಪ್ರಕಾರ ಐದು ವೈಷ್ಣವಸಂಸ್ಕಾರಗಳಲ್ಲಿ ಚಕ್ರಾದಿಗಳಧಾರಣೆ (ತಾಪಃ) ಮೊದಲನೆಯದು. ಗುರು ಶಿಷ್ಯನಿಗೆ ವೈಷ್ಣವದೀಕ್ಷೆಯನ್ನು ಕೊಡುವಾಗ “ತಪ್ತಮುದ್ರಾಧರಣೆ” ಮಾಡಿಸಬೇಕೆಂದು ವೃದ್ಧಹಾರೀತಸ್ಮೃತಿಯಲ್ಲಿ ತಿಳಿಸಿದರೆ ಮತ್ತೆ ಕೆಲವು ಪ್ರಮಾಣಗಳಲ್ಲಿ ಆಷಾಢಮಾಸದ ಶಯನೀ ಏಕಾದಶಿಯಂದೂ ಪ್ರಬೋಧ ಏಕಾದಶಿಯಂದೂ ತಪ್ತಮುದ್ರಾಧಾರಣೆ ನಡಿಸಬೇಕೆಂದು ವಿಧಿಸಲಾಗಿದೆ.

“ಶಯನ್ಯಾಂ ಚೈವ ಬೋಧಿನ್ಯಾಂ ಚಕ್ರತೀರ್ಥೇ ತಥೈವ ಚ |
ಶಂಖಚಕ್ರ ವಿಧಾನೇನ ವಹ್ನಿಪೂತೋ ಭವೇನ್ನರಃ ||”
(ವಿಷ್ಣುರಹಸ್ಯ- ೭-೫-೭)

ವಿಧಿವತ್ತಾಗಿ ಅಗ್ನಿಪ್ರತಿಷ್ಠೆನಡಿಸಿ ಎಳ್ಳು ಹಾಗು ತುಪ್ಪದಿಂದ ಅಥವಾ ಕೇವಲತುಪ್ಪದಿಂದ ವ್ಯಾಹೃತಿಮಂತ್ರದಿಂದ ಸಾವಿರಬಾರಿ ಹೋಮಿಸಬೇಕು. ವಷಟ್ಕಾರರೂಪದ ವಿಷ್ಣುಮಂತ್ರದಿಂದ ನೂರೆಂಟು ಬಾರಿಹೋಮಿಸಬೇಕು. ಹೋಮದ ಬಳಿಕ ಅಂತಹ ಹೋಮದ ಅಂಗವಾಗಿ ಅಗ್ನಿಯಿಂದ ಚಕ್ರ ಮತ್ತು ಶಂಖಗಳನ್ನು ಬಿಸಿಮಾಡಿ ಅವುಗಳ ಚಿಹ್ನೆಗಳನ್ನು ದೇಹದಲ್ಲಿ ಧರಿಸಬೇಕು. ಹಿರಿಯರಾದ ತಂದೆಯಾಗಲೀ ಗುರುಗಳಾಗಲೀ ಅಥವಾ ಯಾವುದೇ ಮಹಾತ್ಮರನ್ನು ಸಾಷ್ಟಾಂಗ ನಮಿಸಿ ಅವರಿಂದ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು. ಶರಣಾಗತಿ ಹಾಗೂ ವಿಷ್ಣುಭಕ್ತಿ ಇಲ್ಲಿ ಶಿಷ್ಯನಲ್ಲಿರುವ ಮೂಲಗುಣಗಳಾಗಿರಬೇಕು. ಅಂತಹವನಿಗೆ ಬಲಬಾಹುವಿನಲ್ಲಿ ಚಕ್ರಚಿಹ್ನೆಯನ್ನೂ ಅಂತೆಯೇ ಸ್ತನಗಳಮೇಲ್ಬಾಗದಲ್ಲೂ ಹೊಟ್ಟೆಯಲ್ಲೂ ಹೀಗೆ ಐದು ಮುದ್ರೆಗಳನ್ನು ಹಾಕಬಹುದು. ಬಾಲರಿಗೆ ಹೊಟ್ಟೆಯ ಮೇಲಷ್ಟೇ ಮುದ್ರೆಯನ್ನು ಹಾಕಬೇಕು. ಸ್ರೀಯರಿಗೆ ಎರಡು ಬಾಹುಗಳಲ್ಲಷ್ಟೇ ಮುದ್ರಾಧಾರಣೆ. ಶೂದ್ರಾದಿಗಳಿಗೆ ಹೋಮಾಗ್ನಿಯಿಂದ ಬಿಸಿಗೊಳಿಸಿದ ಮುದ್ರೆಗಳ ಚಿಹ್ನೆ ಹಾಕಬಾರದು.

ಸ್ಥಂಡಿಲದಲ್ಲಿ ಅಗ್ನಿಪ್ರತಿಷ್ಠಾಪನೆಮಾಡಿ ಆ ಅಗ್ನಿಯನ್ನು “ವಾಸುದೇವಾಯನಮಃ” ಇತ್ಯಾದಿ ನಾಲ್ಕು ಮಂತ್ರಗಳಿಂದ ಅಭಿಮಂತ್ರಿಸಬೇಕು. ಆ ಅಗ್ನಿಯಲ್ಲಿ ಚಕ್ರಾದಿಗಳನ್ನು ಬಿಸಿಮಾಡಿ ದ್ವಿಜರಲ್ಲದವರಿಗೆ ಮುದ್ರಾಧಾರಣೆಯನ್ನು ಮಾಡಬೇಕು.

(ವಿಷ್ಣುರಹಸ್ಯ ೭-೮೮—-೯೩)

ಈ “ತಪ್ತಮುದ್ರಾಧಾರಣೆ” ಎ೦ಬ ಸಂಸ್ಕಾರ ಬಹಳವಾದ ಪ್ರಾಶಸ್ತ್ಯವನ್ನು ಹೊಂದಿದೆ. ತಪ್ತಮುದ್ರಾಂಕಿತನಲ್ಲದ ಬ್ರಾಹ್ಮಣ ಶ್ಮಶಾನದ ಕಟ್ಟಿಗೆಯಷ್ಟು ಮೈಲಿಗೆ ಎನ್ನುವವರೆಗೂ ಅದರ ಪ್ರಾಶಸ್ತ್ಯವನ್ನು ಶಾಸ್ತ್ರಗಳು ಎತ್ತಿಹಿಡಿದಿವೆ. ಅಷ್ಟೇ‌ಅಲ್ಲದೆ ಮುದ್ರಾಂಕಿತವ್ಯಕ್ತಿಯನ್ನು ನಿಂದಿಸಿದರೆ ವಿಷ್ಣುವನ್ನೇ ನಿಂದಿಸಿದಷ್ಟು, ದ್ವೇಶಿಸಿದಷ್ಟು ಪಾಪ. ಅಲ್ಲದೇ ಮುದ್ರಾಂಕಿತನಾದ ಚಂಡಾಲನೂ ಉತ್ತಮನೇ ಎ೦ಬುದಾಗಿಯೂ ಶಾಸ್ತ್ರಕೊಂಡಾಡಿದೆ

(ವಿಷ್ಣುರಹಸ್ಯ ೭-೫೬)

ತಾಪಸಂಸಾರಕ್ಕೆ ಸಂಭಂಧಿಸಿದಂತೆ “ವಿಷ್ಣುರಹಸ್ಯ”, “ಚಕ್ರಮೀಮಾಂಸಾ”, “ಸ್ಮೃತಿಮುಕ್ತಾವಲೀ”, “ಯುಕ್ತಿಮಲ್ಲಿಕಾ”, “ಚಕ್ರಸ್ತುತಿ” ಮುಂತಾದ ಅನೇಕ ಕೃತಿಗಳಲ್ಲಿ ವಿವರಣೆ ಹಾಗೂ ಪ್ರಮಾಣಗಳು ದೊರೆಯುತ್ತವೆ. ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ ಪರ್ಯೇಷು ವಿಶ್ವತಃ| ಅತಪ್ತತನೂರ್ನ ತದಾಮೋ ಅಶ್ನುತೇ ಶೃತಾಸ ಇದ್ವಂತಸ್ತತ್ಸಮಾಶತ|| ಮೊದಲಾದ ಶುತಿಮಾತುಗಳನ್ನು ಚಕ್ರಮೀಮಾಂಸಾ ಉಲ್ಲೇಖಿಸಿದರೆ, ಶ್ರೀವಾದಿರಾಜಸ್ವಾಮಿಗಳ ಯುಕ್ತಿಮಲ್ಲಿಕಾದಲ್ಲಿ ಮತ್ತು ತಪ್ತಮುದ್ರಾಧಾರಣೆಯಲ್ಲಿ ಪವಮಾನನ ಪಾತ್ರವನ್ನು ಎತ್ತಿತೋರಿಸಿರುವರಲ್ಲದೇ ಪವಮಾನದ ಮಂತ್ರಗಳನ್ನು ತಪ್ತಮುದ್ರಾಧಾರಣೆಯ ಅನುಸಂಧಾನಕ್ಕೆ ಪೋಷಕವಾಗುವಂತೆ ಹೇಗೆ ಬಳಸಿಕೊಳ್ಳಬೇಕೆಂಬುದನ್ನೂ ಪ್ರತಿಪಾದಿಸಿರುವರು.

ಯೇನದೇವಾಃ ಪವಿತ್ರೇಣಾತ್ಮಾನಂ ಪುನತೇ ಸದಾ |
ತೇನ ಸಹಸ್ರಧಾರೇಣ ಪಾವಮಾನ್ಯಃ ಪುನಂತುಮಾಂ||
(ಛಲಸೌರಭ-೫೭ ೮)

ಬ್ರಹ್ಮಾದಿದೇವತೆಗಳು ಪವಿತ್ರವೆಂಬ ತಪ್ತಸುದರ್ಶನ ಚಕ್ರದಿಂದ ಆಷಾಢ ಏಕಾದಶೀ ಮುಂತಾದ ಪುಣ್ಯದಿನಗಳಲ್ಲಿ ತಮ್ಮ ಶರೀರವನ್ನೂ ಮನಸ್ಸನ್ನೂ ಪವಿತ್ರಗೊಳಿಸುವರು. ಗೋಪೀಚಂದನದಿಂದ ಪ್ರತಿನಿತ್ಯ ಚಕ್ರವನ್ನೂ ಧರಿಸಿಕೊಂಡು ತಮ್ಮನ್ನು ಪವಿತ್ರಗೊಳಿಸಿಕೊಳ್ಳುವರು. ಅಂತಹ “ಸಹಸ್ರಾರ” ಎನಿಸಿರುವ ಚಕ್ರದಿಂದ ಪವಮಾನನರೂಪರಾದ ಶ್ರೀಮಧ್ವರು ನನ್ನನ್ನು ಪವಿತ್ರಗೊಳಿಸಲಿ ಎ೦ಬುದಾಗಿ ಮೇಲಿನ ಶ್ಲೋಕದ ತಾತ್ಪರ್ಯ.

ಈ ಮಂತ್ರಗಳನ್ನು ವಿಶೇಷವಾಗಿ ಮುದ್ರಾಧಾರಣೆಯ ಕಾಲದಲ್ಲಿ ಸ್ಮರಿಸಬೇಕೆಂದು ಶ್ರೀವಾದಿರಾಜಸ್ವಾಮಿಗಳು ಉಲ್ಲೆಖಿಸಿರುವರು.

ಅಂದಹಾಗೆ ಈ ಮುದ್ರಧಾರಣೆಯನ್ನು ಮಾಡುವಸಮಯದಲ್ಲಿ “ಸುದರ್ಶನ ಮಹಾಜ್ವಾಲ” ಮುಂತಾದ ಮಂತ್ರಗಳನ್ನು ಪಠಿಸುವುದರ ಜೊತೆಗೆ ಯಾರನ್ನು ಸ್ಮರಿಸಬೇಕೆಂಬುದು ಪ್ರಮುಖ ವಿಚಾರ. ಕೇವಲ ನಿರ್ಜೀವ ವಸ್ತುಗಳಾದ ಚಕ್ರಾದಿಗಳು ಸ್ತುತಿಗೆ ಸ್ಪಂದಿಸಲು ಸಾಧ್ಯವೇ ಇಲ್ಲ. ಶ್ರೀಹರಿಯ ಶಕ್ತ್ಯಾತ್ಮಗಳಾಗಿದ್ದು ಅವನಸ್ವರೂಪವೇ ಆಗಿರುವ ಚಕ್ರಗಳೂ ಇವೆ. ದುರ್ಗೆಯೇ ಮುಂತಾದವರು ಅಭಿಮಾನಿಯಾಗಿ ಉಳ್ಳ ಚಕ್ರಾದಿಗಳೂ ಇವೆ. ಕಾಮನು ಸುದರ್ಶನ ಚಕ್ರಕ್ಕೆ ಅವಾಂತರ ಅಭಿಮಾನಿಯಾದರೆ ದುರ್ಗಾದೇವಿ ಮುಖ್ಯಾಭಿಮಾನಿ. ಶಂಖಕ್ಕೆ ಶ್ರೀದೇವಿ ಅಭಿಮಾನಿನಿ ಆದುದರಿಂದ ಭಗವದ್ರೂಪಗಳೇ ಆದ ಚಕ್ರಾದಿಗಳನ್ನು ಸ್ತುತಿಸಬಹುದು ಅಥವಾ ಚಕ್ರಾಭಿಮಾನಿ ದೇವತೆಗಳನ್ನೂ ನಾವು ಪ್ರಾರ್ಥಿಸಬಹುದು.

ಈ ರಿತಿಯಾಗಿ ಶಾಸ್ತ್ರಗಳಲ್ಲಿ ಬಹಳವಾದ ಪ್ರಾಶಸ್ತ್ಯವನ್ನು ಪಡೆದಿರುವ ಈ “ತಪ್ತಮುದ್ರಾಧಾರಣೆ”ಯಿಂದ ಭಗವಂತನ ದಾಸ್ಯವನ್ನು ಒಪ್ಪಿಕೊಂಡು ಅವನ ಕೈಂಕರ್ಯಕ್ಕೆ ಶರೀರವನ್ನು ಅರ್ಪಿಸಿಕೊಂಡಂತಾಗುವುದಲ್ಲದೇ ಅಭಿಮಾನಿ ದೇವತೆಗಳಾದ ದುರ್ಗಾದಿದೇವತೆಗಳ ಅನುಗ್ರಹದಿಂದ ತಮೋವಿಕಾರಾದಿಗಳನ್ನು ತಪ್ಪಿಸಿಕೊಳ್ಳಬಹುದೂಕೂಡ. ಹಾಗಾಗಿ ಅಷ್ಟೊಂದು ಪ್ರಯೋಜನ ಪ್ರಾಮುಖ್ಯತೆಗಳಿಂದ ಕೂಡಿದ ಕಾರ್ಯಗಳಲ್ಲಿ ತೊಡಗುವುದು ನಮ್ಮ ಕರ್ತವ್ಯ. ಅಲ್ಲದೇ ನಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುಲು ಮುದ್ರಾಧಾರಣೆ ಒಂದು ಉತ್ತಮ ಮಾರ್ಗವೂ ಹೌದು ಎ೦ಬುದನ್ನು ಮನಗೊಂಡು ಅದನ್ನು ಆಚರಿಸಿದಲ್ಲಿ ಅದು ನಮಗೆ ವಿಶೇಷಫಲವನ್ನು ಕೊಡುವುದು.

– ಸಗ್ರಿ ಆನಂದತೀರ್ಥ.

8 thoughts on “Taptamudradharane

  1. sorry for the arguement…u said…VAISHNAVA DEEKSHE…WHO IS VAISHNAVA…I THINK VAISHNAVA IS LORD SHIVA……..HE IS PARAMA VAISHNAVA…………WE ARE THE FOLLOWERS OF VAISHNAVA………..AFTER MADWACHARYA SHIVALLI BRAHMINS STARTED DOING POOJA TO KRISHNA………BEFORE THAT WE ARE THE VAISHNAVA’S…MEANS……….SHIVA ARADHANA.

    IF ANY COMMENTS ON THIS PLEASE DO IT.

    EVEN I WANT TO KNOW

  2. reply to harish
    you only told hara is vaishnava & is told in Bhagavatha vaishnavanam yatha shambhuhu
    THEN U HAVE TO TAKE THE VAIUSHNAVADEEKSHA

  3. though we are all madhwas why there is a diiferent pattern of taking mudras among the devotees of different madhwa mutts. which is right. please clarify

  4. Gurubhyo namaha,
    Dear Friends,
    There need not be any arguement. Guru Madhwacharya himself was meditating in Anantheshwara. Actually there is no difference in basic Madhwa cult. Do you know one secret… most of the shivalli brahmins around udupi are having SHIVA as their gramadevatha and are having shivalayas. Kota smartha brahmins have Narasimha swami as their Lord. Is it contradicting? No… not at all. I think we are too small to argue on this. Are u a real brahmin… then leave all arguements…. see your ISHTADEVATHA … in all … everywhere….. and in every god… Surrender to him whole heartedly …. leave no chance for illusions… find his grace in all … either good or bad … even sometimes bad happens for the good in future … this is true only to those who surrender to the ISHTADEVATHA completely. This is the Dwaitha paraTantra… so beautiful… Madhwa matha… Don’t make it so cheap to discriminate… Do you know one more thing… Our Acharyas have seen LAKSMINARASIMHA in everything and in every god, including SHIVA, then who are we to argue beyond that.

    HOW TO SURRENDER ONESELF….? SEE HERE…

    Maathaa Raajaa mathpithaa Vaadirajo Bhraathaa Raaja mathsakhaa Vadiraajaha |
    Sarvaswam Me Vaadirajo Dayaalurnaanyaddaivam naiva jaane na jaane||

    that means I am totally surrendering to Vadiraja and He is , not only god, everything for me.

  5. Very very good article, we are also doing pooja to Mahalingeshwara !!!, but we are madhwas or shivalli brahmins, our matha is Pejawara matha.

    Our shiva temple is located near Udupi the place called Kalathur ( Near Kaup )

    If any chance comes please visit the temple, that is an ancient temple ( 1000 years back )

    My father Mr. Keshava Tantry is doing pooja at the temple.

  6. Being a madhwa know taratamya of each identities especially devatas is very important,once u realize this
    Then only u can understand the Sarvottamatva of God which we are saying Hari based on shastra

    Tasmat shastram pramanam te karyakarya vinirnaye

    As Krishna says
    To decide do & dont s Shastra is only the Authentic proof .
    We have to do upasana of Guru( Ex.Vadiraja )as guru only not as god ,but we always take guru as gods main idol (prathika)We worship god in him.As in mother,father .elder etc
    Jnatva karma kartumiharhasi

  7. Dear Friends,

    The principle of Taratamya, pancha bhedas and sarvothamatva are the hard cores to understand. Common man like me struggles to please the gods or ishtadevatas. In real sense, to some extent man goes on worshiping all gods. When troubles and problems arise one after the other, immediately he loses faith in god. Why? When trouble starts — oh god help me… then again problem … oh god why are you not helping me…. problem continues… for me there is no god… he has become just statue/ stone. It shows that there is no total surrender to god. What is the solution..?
    Whether your cry is heard by all your gods or not… we do not know. When we worship more than one god.. there may be confusion among them itself. So u must and should have one media which invariably and definitely take your cry or prayer to the destiny or all destinies (all gods), perfectly and in right spirit. You give all samarpana to such media (god or guru or devata whatever it may be- here I mentioned Guru) whole heartedly and according to the strength of ur belief in that media ur prayer shall be heard and definitely be rewarded.
    We are too small persons to discuss hard core issues like Taratamya, pancha bhedas and sarvothamatva. Bhakti and samarpana are only 2 things which are within our reach.

Leave a Reply

Your email address will not be published.